CONNECT WITH US  

ಮಸೀದಿ ನಿರ್ಮಾಣದ ವಿರುದ್ಧ ಪೊಲ್ಯ ನಿವಾಸಿಗಳ ಹಕ್ಕೊತ್ತಾಯ

ಪಡುಬಿದ್ರಿ: ಕಾಪು ತಾ| ಉಚ್ಚಿಲ ಬಡಾ ಗ್ರಾಮದ ಪೊಲ್ಯ 2ನೇ ವಾರ್ಡ್‌ ಸಾರ್ವಜನಿಕರು ಸೆ. 7ರಂದು ಉಚ್ಚಿಲ ಗ್ರಾ. ಪಂ. ಗೆ ಆಗಮಿಸಿ ಪೊಲ್ಯ ರಸ್ತೆಯ ಸಮೀಪ ವ್ಯಾವಹಾರಿಕ ಕಟ್ಟಡಕ್ಕೆಂದು ಪಂಚಾಯತ್‌ ಪರವಾನಿಗೆಯನ್ನು ಹೊಂದಿ ಮಸೀದಿ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಕೆಲಸ ನಿಲ್ಲಿಸುವಂತೆ ಆಗ್ರಹಿಸಿ ಮನವಿಯೊಂದನ್ನು ಗ್ರಾ. ಪಂ. ಅಧ್ಯಕ್ಷೆ ನಾಗರತ್ನಾ ಹಾಗೂ ಪಿಡಿಒ ಕುಶಾಲಿನಿ ಅವರಿಗೆ ಸಲ್ಲಿಸಿದರು.
 
ಮನವಿ ಸಲ್ಲಿಸಿ ಮಾತನಾಡಿದ ಕೇಸರಿ ಯುವರಾಜ್‌ ತಾವು ಸಂಘರ್ಷಕ್ಕೆಂದೂ ಎಡೆಮಾಡಿಕೊಡುವುದಿಲ್ಲ. ಆದರೆ ತಮ್ಮ ಬದುಕು ದುಸ್ತರವಾಗಲೂ ಬಿಡುವುದಿಲ್ಲ. ಸಾರ್ವಜನಿಕರು ಪೊಲ್ಯ ಪ್ರದೇಶದಲ್ಲಿ ಇದುವರೆಗೂ ಕೋಮು ಸಾಮರಸ್ಯ
ದೊಂದಿಗೇ ಬದುಕನ್ನು ಸಾಗಿಸಿದ್ದಾರೆ. ಹಾಗಾಗಿ ಉತ್ತಮ ಬದುಕನ್ನು ತಮಗೆ ನೀಡಿರಿ. ಕಮರ್ಷಿಯಲ್‌ ಕಟ್ಟಡ ನಿರ್ಮಾಣದ ಬದಲು ಮಸೀದಿ ನಿರ್ಮಾಣಕ್ಕೆ ಅಲ್ಲಿನ ಸ್ಥಳೀಯರು ಅವಕಾಶ ನೀಡುವುದಿಲ್ಲವೆಂದರು.  

ಉಚ್ಚಿಲ ಗ್ರಾ. ಪಂ. ನಲ್ಲಿ ಎಲ್ಲವೂ ಸರಿಯಿಲ್ಲ. ಅಧ್ಯಕ್ಷರು ಮತ್ತು ಪಿಡಿಒ ಸಮನ್ವಯತೆಯಿಂದ ಕಾರ್ಯನಿರ್ವಹಿಸ ದಿದ್ದಾಗ ಇಂತಹಾ ಮತೀಯ ಸಾಮರಸ್ಯ ಕೆಡಲೂ ಕಾರಣವಾಗುತ್ತದೆ.  ಪೊಲ್ಯದಲ್ಲಿ ಈಗಾಗಲೇ ಎರಡು ಮಸೀದಿಗಳು ಹಾಗೂ ಎರಡು ಮದ್ರಸಗಳಿದ್ದು  ಮತ್ತೂಂದು ಮಸೀದಿ ರಚನೆ ಸಾಧುವಲ್ಲ ಎಂದು ಸ್ಥಾನೀಯ ಬಿಜೆಪಿ ಅಧ್ಯಕ್ಷ ಉದಯ ಕುಮಾರ್‌ ಉಚ್ಚಿಲ ತಿಳಿಸಿದರು. ಪಿಡಿಒ ತಾನು ಈ ಕುರಿತಾಗಿ ಗ್ರಾ. ಪಂ. ಅಧ್ಯಕ್ಷರ ಅಭಿಪ್ರಾಯದಂತೆ ಅವರಲ್ಲಿ ಚರ್ಚಿಸಿ ನೊಟೀಸು ನೀಡುವುದಾಗಿ ತಿಳಿಸಿದ್ದಾರೆ.  ಗ್ರಾ. ಪಂ. ಸದಸ್ಯರಾದ ಚಂದ್ರಶೇಖರ ಕೋಟ್ಯಾನ್‌, ಶಿವಕುಮಾರ್‌, ವಸಂತ ದೇವಾಡಿಗ ಮತ್ತಿತರರಿದ್ದರು.  


Trending videos

Back to Top