ಬಾಳಿಗಾ ಜಂಕ್ಷನ್‌: ಅಪಘಾತದ ಅಪಖ್ಯಾತಿಗೆ ಬೇಕು ಮುಕ್ತಿ…


Team Udayavani, Sep 8, 2018, 6:00 AM IST

0509udsb1.jpg

ದಿನೇದಿನೆ ಹೆಚ್ಚುತ್ತಿದ್ದು,ನಾಲ್ಕು ದಿನಗಳ ಹಿಂದೆ ಘಟಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇಂಥ ಅಪಘಾತಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಆದರೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಉದಯವಾಣಿ ನಡೆಸಿದೆ. ಪತ್ರಿಕೆಯ ವರದಿಗಾರ ಸಂತೋಷ್‌ ಬೊಳ್ಳೆಟ್ಟು ಅವರ ವಿಶ್ಲೇಷಣಾತ್ಮಕ ವರದಿ ಇದು. ಚಿತ್ರಗಳನ್ನು ಒದಗಿಸಿದವರು  ಗಣೇಶ್‌ ಕಲ್ಯಾಣಪುರ.

ನಿಟ್ಟೂರು ಜಂಕ್ಷನ್‌: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥಗೊಂಡ ಬಳಿಕವೂ ಈ ಜಂಕ್ಷನ್‌ ಅಪಾಯಕಾರಿಯಾಗಿಯೇ ಇದೆ. ಈ ಭಾಗದಲ್ಲಿ ಅಂಬಲಪಾಡಿ ಜಂಕ್ಷನ್‌ನ ಅನಂತರ ಹೆಚ್ಚು ಅಪಾಯಕಾರಿ ಎಂದರೆ ಇದೇ. 

ಪೂರ್ವದಲ್ಲಿ ನಿಟ್ಟೂರು ಮತ್ತು ಪಶ್ಚಿಮದಲ್ಲಿ ಕೊಡಂಕೂರಿನ ರಸ್ತೆಗಳಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನಗಳು ಪ್ರವೇಶವಾಗುವ ಮತ್ತು ನಿರ್ಗಮಿಸುವ ಸ್ಥಳ ಇದು. 

ಮಂಗಳವಾರದ ಘಟನೆ
ಮಂಗಳವಾರ ಸಂಜೆ ಅಂಬಾಗಿಲು ಕಡೆಯಿಂದ ಹೆದ್ದಾರಿಯಲ್ಲಿ ಬಂದ ಬೈಕ್‌ ಹೆದ್ದಾರಿಯಿಂದ ಬಲಕ್ಕೆ ಕೊಡಂಕೂರಿನತ್ತ ತಿರುಗು ತ್ತಿದ್ದಾಗ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ಬಂದ ಸುಮೋ ವಾಹನ ಢಿಕ್ಕಿ ಹೊಡೆ ಯಿತು. ಸುಮೋ ಭಾರೀ ವೇಗದಲ್ಲಿತ್ತು. ಇದೇ ರೀತಿಯ ಅಪಘಾತಗಳು ಇಲ್ಲಿ ನಿರಂತರ. 

ಇದಕ್ಕೆ ಮುಖ್ಯ ಕಾರಣ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು. ಅತ್ತಲಿಂದ ನಿಟ್ಟೂರು ಕಡೆಗೆ ಬರುವಾಗ ಕರಾವಳಿ ಬೈಪಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಏರು(ಅಪ್‌) ಇದೆ. ಇದರಿಂದಾಗಿ ಅಲ್ಲಿ ವೇಗ ಪಡೆದುಕೊಳ್ಳುವ ವಾಹನಗಳು ಜಂಕ್ಷನ್‌ ನತ್ತ ಮುನ್ನುಗ್ಗುತ್ತವೆ. ಆಗ ಜಂಕ್ಷನ್‌ನಲ್ಲಿ ಯಾವುದಾದರೂ ವಾಹನ ಸ್ವಲ್ಪವೇ ಅಜಾಗರೂಕತೆಯಿಂದ ಬಂದರೂ  ಈ ಜಂಕ್ಷನ್‌ನಲ್ಲಿ ವಾಹನದಟ್ಟಣೆ ಹೆಚ್ಚಿದೆ. ನಿತ್ಯವೂ ಹಲವು ಅಪಘಾತಗಳು ಘಟಿಸುತ್ತಿವೆ. ಪ್ರತಿ ಅಪಘಾತದಲ್ಲೂ ವ್ಯಕ್ತಿಗಳು ಸಾಯದಿರಬಹುದು, ಆದರೆ ನೂರಾರು ಮಂದಿಗೆ ಗಾಯಗಳಾಗುತ್ತಿವೆ. ದಿನೇದಿನೆ ಜನರ ಆತಂಕ ಹೆಚ್ಚುತ್ತಿದೆ.

ಸುತ್ತಲಿನ ಶಾಲೆಯ ಮಕ್ಕಳೂ ಮನೆಗೆ ಬರುವವರೆಗೂ ಪೋಷಕರಲ್ಲಿ ಅನಗತ್ಯ ಆತಂಕ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಸ್ಥಳೀಯಾಡಳಿತವಾದ ನಗರಸಭೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಒಂದುವೇಳೆ ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾದರೆ, ಅದರ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಬೇಕು. ಕೇಳದಿದ್ದರೆ ಸಂಸದರನ್ನೋ, ಶಾಸಕರ ಬೆಂಬಲ ಪಡೆದು ಬಿಸಿ ಮುಟ್ಟಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಸ್ಥಳೀಯರು ಇಲ್ಲೇನು ಸಾವಿರಾರು ಸೌಲಭ್ಯ ಕೇಳುತ್ತಿಲ್ಲ. ಒಂದು ಹೈಮಾಸ್ಟ್‌ ದೀಪ, ಒಂದಿಷ್ಟು ನಿಯಮಗಳ ಪಾಲನೆ, ಒಂದೆರಡು ಸಂಚಾರ ಪೊಲೀಸ್‌ ಸಿಬಂದಿಯ ನಿಯೋಜನೆ. ಇದನ್ನು ಹೊರತುಪಡಿಸಿ ಇನ್ನೇನು ಕೇಳುತ್ತಿದ್ದಾರೆ. ಇನ್ನಾದರೂ ನಗರಸಭೆ, ಶಾಸಕರು ಗಮನಹರಿಸಿ ಹೆಚ್ಚು ಪ್ರಾಣಹಾನಿಯಾಗುವುದನ್ನು ತಪ್ಪಿಸಬೇಕು. ಇದು ಪ್ರಾಥಮಿಕ ಕರ್ತವ್ಯವೂ ಸಹ. ಆದಷ್ಟು ಬೇಗ ಜನರ ಈ ಬೇಡಿಕೆಗಳು ಈಡೇರಲಿ.

ಇವಿಷ್ಟು  ಸಮಸ್ಯೆಗಳು ; ಪರಿಹಾರ ಬೇಕು
– ಅಂಬಾಗಿಲು ಕಡೆಯಿಂದ ಕರಾವಳಿ ಬೈಪಾಸ್‌ ಕಡೆಗೆ ಬರುವ ಬಸ್‌ಗಳನ್ನು ರಿಕ್ಷಾ ನಿಲ್ದಾಣ ಬಳಿ ಇರುವ “ಬಸ್‌ ಬೇ’ಗಿಂತ ಹಿಂದೆ ಹೆದ್ದಾರಿಯಲ್ಲೇ ನಿಲ್ಲಿಸಲಾಗುತ್ತದೆ.  ಇದಕ್ಕೆ ಕಡಿವಾಣ ಹಾಕಬೇಕು. 
– ಕೆಎಸ್‌ಆರ್‌ಟಿಸಿ ಡಿಪೋಗೆ ಬರುವ ಬಹುತೇಕ ಎಲ್ಲಾ ಬಸ್‌ಗಳು ಕೂಡ ಇದೇ ಜಂಕ್ಷನ್‌ನಲ್ಲಿ ತಿರುವು ಪಡೆದು ಕರಾವಳಿ ಜಂಕ್ಷನ್‌ ಕಡೆ ತೆರಳುತ್ತವೆ. ದಿನಕ್ಕೆ ನೂರಕ್ಕೂ ಅಧಿಕ ಬಸ್‌ಗಳು ಇಲ್ಲಿ ತಿರುವು ಪಡೆದುಕೊಳ್ಳುತ್ತವೆ. ಇಲ್ಲಿ ವೇಗಮಿತಿ ಫ‌ಲಕ ಬೇಕು.
– ಬಾಳಿಗಾ ಫಿಶ್‌ನೆಟ್‌ ಸೇರಿದಂತೆ ಹಲವು ಸಂಸ್ಥೆಗಳ ನೂರಾರು ಕಾರ್ಮಿಕರು, ಹನುಮಂತ ನಗರ ಶಾಲೆಯ ಮಕ್ಕಳು ಕೂಡ ಈ ಜಂಕ್ಷನ್‌ನ ಬಳಿಯೇ ಹೋಗುತ್ತಾರೆ. ಹಾಗಾಗಿ ವಾಹನ ಸವಾರರಿಗೆ ವೇಗ ಮಿತಿ, ಸಿಗ್ನಲ್‌, ಟ್ರಾಫಿಕ್‌ ಪೊಲೀಸ್‌ ವ್ಯವಸ್ಥೆ ಬೇಕು.
– ಜಂಕ್ಷನ್‌ಗಿಂತ ಸ್ವಲ್ಪ ಹಿಂದೆ ಮತ್ತು ಮುಂದೆ ಎರಡೂ ಬದಿಗಳಲ್ಲಿ ಲಾರಿ ಸೇರಿದಂತೆ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇಲ್ಲಿ ವಾಹನಗಳು ನಿಲ್ಲಿಸದಂತೆ ಆದೇಶಿಸುವುದು ಒಳಿತು.
– ಇಲ್ಲಿ ಸರ್ವೀಸ್‌ ರಸ್ತೆ ಇಲ್ಲ. ಯು ಟರ್ನ್ ಜಾಗದಲ್ಲಿ  ರಸ್ತೆ   ಕಿರಿದಾಗಿದೆ. 
– ರಾತ್ರಿ ಇಲ್ಲಿ ಕತ್ತಲು. ಹಾಗಾಗಿ ರಾತ್ರಿ ಹೊತ್ತು ಅಪಘಾತಗಳು ಹೆಚ್ಚಾಗಲು ಕಾರಣ. ಇಲ್ಲಿ ಹೈಮಾಸ್ಟ್‌ ದೀಪದ ಅಗತ್ಯವಿದೆ.
– ಉತ್ತರದಲ್ಲಿ ಅಂಬಾಗಿಲು, ದಕ್ಷಿಣದಲ್ಲಿ ಕರಾವಳಿ ಜಂಕ್ಷನ್‌ನಲ್ಲಿ ಮಾತ್ರ ತಿರುವು- ಜಂಕ್ಷನ್‌ ಇದೆ. ಹಾಗಾಗಿ ಈ ಜಂಕ್ಷನ್‌ಗಳ ನಡುವಿನ ಹೆದ್ದಾರಿಯಲ್ಲಿ ಕೆಲವರು ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಅದನ್ನು ತಡೆಯಬೇಕು.

ರಿಫ್ಲೆಕ್ಟರ್‌, ಸಿಬಂದಿಗೆ ಕ್ರಮ
ಬ್ಯಾರಿಕೇಡ್‌ಗೆ ರಿಫ್ಲೆಕ್ಟರ್‌ನ್ನು ಬುಧವಾರದಿಂದ ಅಂಟಿಸಲಿದ್ದೇವೆ. ಇಲ್ಲಿ ಖಾಯಂ ಪೊಲೀಸ್‌ ಸಿಬಂದಿಯನ್ನು ನಿಯೋಜಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
– ಉಪನಿರೀಕ್ಷಕರು,
ಸಂಚಾರಿ ಪೊಲೀಸ್‌ ಠಾಣೆ, ಉಡುಪಿ

ಬ್ಯಾರಿಕೇಡ್‌  ಕಾಣುವುದಿಲ್ಲ
ಬ್ಯಾರಿಕೇಡ್‌ಗಳು  ಹಿಂದೆಯೂ ಇತ್ತು. ಎಷ್ಟೋ ಮಂದಿ ಬ್ಯಾರಿಕೇಡ್‌ಗೆ ಬಂದು ಢಿಕ್ಕಿ ಹೊಡೆಯುತ್ತಾರೆ. ಅವುಗಳಲ್ಲಿ  ರಿಫ್ಲೆಕ್ಟರ್‌ಗಳಿಲ್ಲ. ಜಂಕ್ಷನ್‌ನಲ್ಲಿ ಲೈಟ್‌, ಸರ್ವೀಸ್‌ ರಸ್ತೆ ಇಲ್ಲ. ಬಸ್‌ಗಳನ್ನೂ ಹೆದ್ದಾರಿಯಲ್ಲೇ ನಿಲ್ಲಿಸುತ್ತಾರೆ. ಬ್ಯಾರಿಕೇಡ್‌ಗಿಂತ ಹಿಂದೆ ಝೀಬ್ರಾ ಮಾರ್ಕ್‌  ಹಾಕಿ ಚಾಲಕರ ಗಮನ ಸೆಳೆಯುವುದು ಅಗತ್ಯ.
– ಮಹೇಶ್‌, ಪ್ರಶಾಂತ್‌
ಸ್ಥಳೀಯ ಆಟೋ ಚಾಲಕರು

ಹೈಮಾಸ್ಟ್‌ ದೀಪಕ್ಕಾಗಿ  750 ಮಂದಿ ಸಹಿ!
ಇಲ್ಲಿ ಒಂದು ಹೈಮಾಸ್ಟ್‌ ದೀಪ ಅಳವಡಿಸಬೇಕು ಎಂದು ಇಲ್ಲಿನ 750 ಮಂದಿಯಿಂದ ಸಹಿ 
ಪಡೆದು ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ವರ್ಷಗಳೇ ಕಳೆದವು. ಇಂದಿಗೂ ಲೈಟ್‌ ಬಂದಿಲ್ಲ.
– ಸುಜಯ ಪೂಜಾರಿ, ವಿಜೇಶ್‌ ಸ್ಥಳೀಯರು

ಪೊಲೀಸ್‌ ಸಿಬಂದಿ  ಖಾಯಂ ಇರಲಿ
ಇಲ್ಲಿ ಅಪಘಾತ ನಡೆದ ಅನಂತರ   ಪೊಲೀಸರು ಬಂದು ಹೋಗುತ್ತಾರೆ. ಅನಂತರ ಇರುವುದಿಲ್ಲ. ಪೊಲೀಸರಿದ್ದರೆ ಸ್ವಲ್ಪವಾದರೂ ಅಪಘಾತ ಕಡಿಮೆಯಾಗಬಹುದು. ಅಂಬಾಗಿಲು ಕಡೆಯಿಂದ ಬಂದು ಕೊಡಂಕೂರಿಗೆ ತಿರುವು ಪಡೆದುಕೊಳ್ಳುವಾಗಲೇ ಹೆಚ್ಚು ಅಪಘಾತಗಳು ನಡೆಯುತ್ತಿವೆ.
ಸುರೇಂದ್ರ, ವೀಣಾ
ಸ್ಥಳೀಯ ಅಂಗಡಿಯವರು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.