ಉಡುಪಿಯಲ್ಲಿ ಕೊಂಬು, ಕಹಳೆ ವಾದ್ಯ, ಭತ್ತದ ತಿರಿ ಜನಾಕರ್ಷಣೆ


Team Udayavani, Sep 10, 2018, 1:25 AM IST

bunts-9-9.jpg

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಡುಪಿ ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ರವಿವಾರ ಏರ್ಪಡಿಸಿದ ವಿಶ್ವ ಬಂಟರ ಸಮ್ಮಿಲನಕ್ಕೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಸಮ್ಮೇಳನಾಂಗಣದ ಸುಮಾರು ಒಂದೆರಡು ಕಿ.ಮೀ. ರಸ್ತೆ ಬದಿ, ಖಾಲಿ ಜಾಗಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಕೊಂಬು, ಕಹಳೆ, ವಾದ್ಯಗಳು ಸಂಭ್ರಮದ ವಾತಾವರಣ ಸೃಷ್ಟಿಸಿದವು.

ಆಕರ್ಷಕ ವೇದಿಕೆ
ಸಮ್ಮೇಳನಕ್ಕಾಗಿಯೇ ನಿರ್ಮಿಸಿದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯನ್ನು ಬೃಹತ್‌ ಗುತ್ತು ಮನೆಯಂತೆ ನಿರ್ಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಈ ವೇದಿಕೆಯನ್ನು ಶಶಿರೇಖಾ ಮತ್ತು ಆನಂದ ಶೆಟ್ಟಿಯವರು ಉದ್ಘಾಟಿಸಿದರು. ಕೊಳ್ಕೆಬೈಲು, ಶಾನಾಡಿ, ಕಟಿನಮಕ್ಕಿ, ಅಲ್ತಡು ಮೊದಲಾದೆಡೆಗಳಿಂದ ತರಿಸಿದ ಬೃಹತ್ತಾದ ಬಾಗಿಲು, ಕಂಬ, ಮುಚ್ಚಿಗೆ, ಬೋದಿಗೆಗಳನ್ನು ಆರ್ಕಿಟೆಕ್ಟ್ ಸಿದ್ಧಾರ್ಥ ಶೆಟ್ಟಿಯವರ ನಿರ್ದೇಶನದಂತೆ ಬಳ್ಕೂರು ಗೋಪಾಲ ಆಚಾರ್ಯರ ತಂಡದವರು ನಿರ್ಮಿಸಿದ್ದರು. ‘ನಾವು 15 ವರ್ಷಗಳಿಂದ ಇಂತಹ ಪರಂಪರೆಯ ಕೊಂಡಿ ಇರುವ ಪರಿಕರಗಳನ್ನು ಸಂಗ್ರಹಿಸುತ್ತಿದ್ದೇವೆ. ಈಗಿನ ಯುವಜನರಿಗೆ ಇಂತಹ ಸಾಂಸ್ಕೃತಿಕ ಹಿರಿಮೆಗಳಿರುವ ಪರಿಕರಗಳು ಕಾಣಸಿಗುವುದಿಲ್ಲ. ಇದನ್ನು ಯುವ ಪೀಳಿಗೆ ನೋಡಬೇಕೆಂದು ಇದನ್ನು ನಿರ್ಮಿಸಿದೆವು’ ಎಂದು ಆರ್ಕಿಟೆಕ್ಟ್ ಸಿದ್ಧಾರ್ಥ ಶೆಟ್ಟಿಯವರು ‘ಉದಯವಾಣಿ’ಗೆ ತಿಳಿಸಿದರು. 

ಹಳೆ ಕಾರು, ಕಂಬಳದ ಕೋಣ

ಉದ್ಯಮಿ ಮನೋಹರ ಶೆಟ್ಟಿಯವರ ಸಂಗ್ರಹದಲ್ಲಿರುವ ಹಳೆಯ ಎರಡು ಕಾರುಗಳನ್ನು ಸಮ್ಮೇಳನದ ಆವರಣದಲ್ಲಿ ಇರಿಸಲಾಗಿತ್ತು. ಪ್ರಾಯಃ ಇಂತಹ ಕಾರುಗಳು ಬಂದ ಸಂದರ್ಭ ಬಂಟ ಸಮುದಾಯದ ನಾಯಕರಲ್ಲಿ ಇದ್ದಿರಬಹುದು ಎಂದು ಸ್ಮರಣೆಗೆ ಬರುತ್ತದೆ. ಮೂಡಬಿದಿರೆಯ ವಿನು ವಿಶ್ವನಾಥ ಶೆಟ್ಟಿಯವರು ಸಾಕಿರುವ ಎರಡು ಕಂಬಳದ ಕೋಣಗಳು ಬಂಟ ಸಮುದಾಯ ಇಂದಿಗೂ ಕಾಪಿಟ್ಟುಕೊಂಡು ಬಂದ ಕಂಬಳದ ಸಂಸ್ಕೃತಿಯನ್ನು ಪ್ರತಿಬಂಬಿಸುತ್ತಿದ್ದವು. ಮನೋಹರ ಶೆಟ್ಟಿಯವರು ಸಾಕುತ್ತಿರುವ ಕಪಿಲೆ (ಕಬೆತಿ) ದನಗಳೂ ದನಗಳ ತಳಿಗಳಲ್ಲಿ ಶ್ರೇಷ್ಠವಾದವು ಎಂಬುದು ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳಿಗೆ ನೆನಪಿಗೆ ಬಂದಂತಾದವು.

ವಿಶಿಷ್ಟ ವೇಷಭೂಷಣ
ಪುರುಷರೆಲ್ಲ ಧೋತಿ, ಬಿಳಿ ಅಂಗಿ, ಶಾಲುಗಳನ್ನು ಧರಿಸಿದ್ದರೆ, ಬೇರೆ ಬೇರೆ ಸಂಘಟನೆಗಳ ಮಹಿಳೆಯರು ಒಂದೇ ರೀತಿಯ ಬಣ್ಣದ ಸೀರೆಗಳನ್ನು ಧರಿಸಿದ್ದರು. 

ದೈವಗಳ ಮುಖವಾಡ
ಬಂಟ ಸಮುದಾಯ ದೈವಗಳ ಆರಾಧನೆಗೆ ಆದ್ಯತೆ ಕೊಟ್ಟುಕೊಂಡು ಬಂದ ಹಿನ್ನೆಲೆಯಲ್ಲಿ ವಿವಿಧ ದೈವಗಳ ಮುಖವಾಡವನ್ನು ಶಿಲ್ಪಿ ರಾಜೇಶ ಆಚಾರ್ಯರ ಸಂಗ್ರಹದಿಂದ ತರಿಸಿ ಪ್ರದರ್ಶಿಸಲಾಯಿತು. ಬಂಟರ ಸಾಂಸ್ಕೃತಿಕ ಮೇಲ್ಮೆ ಎನಿಸಿದ ಭತ್ತದ ತಿರಿ, ಅಕ್ಕಿಮುಡಿ, ಊರಿನ ಕೋಳಿ, ತೆರೆದ ಬಾವಿ, ದೈವದ ಮನೆಗಳು ಜನಾಕರ್ಷಣೆಯಾಗಿದ್ದವು.

ಸಾಧಕರಿಗೆ ಸಮ್ಮಾನ

ಬೈಂದೂರು ಬಂಟರ ಸಂಘದ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ, ಬೆಳಗಾವಿ ಉದ್ಯಮಿ ಬಾರಕೂರು ವಿಠ್ಠಲ ಹೆಗ್ಡೆ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮಂಗಳೂರಿನ ದೇವಿ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಸದಾನಂದ ಶೆಟ್ಟಿ, ಹಿರಿಯ ಸಂಸ್ಕೃತಿತಜ್ಞ, ಸಾಹಿತಿ ಡಾ|ಏರ್ಯ ಲಕ್ಷ್ಮೀನಾರಾಯಣ ಆಳ್ವ, ಯಕ್ಷಗಾನ ವಿದ್ವಾಂಸ ಡಾ| ಶಿಮಂತೂರು ನಾರಾಯಣ ಶೆಟ್ಟಿ, ಕಾಸರಗೋಡಿನ ಸಂಘಟಕ ದಾಸಣ್ಣ ಆಳ್ವ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಕಾಪುವಿನ ಡಾ|ಪ್ರಭಾಕರ ಶೆಟ್ಟಿ, ಮುಂಬೈ ಉದ್ಯಮಿ ಮೈನಾ ಸುಬ್ಬಣ್ಣ ಶೆಟ್ಟಿ, ಯುಎಇ ಉದ್ಯಮಿ ಸರ್ವೋತ್ತಮ ಶೆಟ್ಟಿ, ಸಮಾಜ ಸೇವಕ ಕಾಪು ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸದಾನಂದ ಶೆಟ್ಟಿ ಮತ್ತು ಸರ್ವೋತ್ತಮ ಶೆಟ್ಟಿಯವರು ಸಮ್ಮಾನಿತರ ಪರವಾಗಿ ಮಾತನಾಡಿ ಸಮ್ಮೇಳನದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.

ಡೋಲು ವಾದನ
ಕೊರಗ ಸಮುದಾಯದವರು ನುಡಿಸುವ ಡೋಲಿನ ವಾದನ ನಿರಂತರವಾಗಿ ಕೇಳಿಬರುತ್ತಿತ್ತು.

ಗಡಿಪ್ರಧಾನ ಗಡಿಕಾರರಿಗೆ ಸಮ್ಮಾನ
ಗಡಿ ಪ್ರಧಾನ ಸಮ್ಮಿಲನದಲ್ಲಿ ಒಟ್ಟು 67 ಮಂದಿ ಗಡಿಪ್ರಧಾನ ಹೊಂದಿದ ಗಡಿಕಾರರನ್ನು ಗೌರವಿಸಲಾಯಿತು.

ಅಗೋಳಿ ಮಂಜಣ್ಣ
ಅಗೋಳಿ ಮಂಜಣ್ಣ ಹಿಂದಿನ ತಲೆಮಾರಿನಲ್ಲಿ ಮನೆಮಾತಾಗಿದ್ದ. ಅಗೋಳಿ ಮಂಜಣ್ಣ ಕಟ್ಟುಮಸ್ತಾದ ಶರೀರವನ್ನು ಹೊಂದಿರುವುದಕ್ಕೆ ಉದಾಹರಣೆಯಾಗಿ ಸಮ್ಮೇಳನದಲ್ಲಿ ಮೂಡಿಬಂದ. ‘ಬಂಟ ಸೌರಭ’ ಸಮುದಾಯದ ಮಾಹಿತಿ ಕೈಪಿಡಿ ಪುಸ್ತಕದ ಬಿಡುಗಡೆಗೆ ಮುನ್ನ ಈತನನ್ನು ಆಕರ್ಷಕವಾಗಿ ಚಂಡೆ, ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಆಹಾರದಲ್ಲಿ ಅಚ್ಚುಕಟ್ಟುತನ
ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು. ಮಾಂಸಾಹಾರ, ಸಸ್ಯಾಹಾರದ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಳೆ ಸಂತ್ರಸ್ತರಿಗೆ ನೆರವು
ಕೊಡಗಿನ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಪ್ರಕಾಶ್‌ ರೈಯವರಿಗೆ ತತ್‌ಕ್ಷಣ 25,000 ರೂ. ನೀಡಿ ಉಳಿದ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಲಾಯಿತು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.