ಭಾರತ್‌ ಬಂದ್‌: ಸಾರ್ವಜನಿಕರಲ್ಲಿ ಮುಂದುವರಿದ ಗೊಂದಲ


Team Udayavani, Jan 7, 2019, 8:05 PM IST

raviraj-7-1.jpg

ಕುಂದಾಪುರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶದ 12 ಕಾರ್ಮಿಕ ಸಂಘಟನೆಗಳು ಜ. 8 ಹಾಗೂ 9ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು ಯೂನಿಯನ್‌ಗಳು ಸಿದ್ಧತೆ ನಡೆಸಿವೆ. ತಾಲೂಕಿನಾದ್ಯಂತ ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಮುಷ್ಕರ ಬೆಂಬಲಿಸುವಂತೆ ಮನವಿ ನೀಡಿವೆ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ‌ ಸಾಧ್ಯತೆ
ಬಸ್‌ ಮೂಲ ಆವಶ್ಯಕತೆಯಾದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಓಡಿಸಬೇಕೆಂದು ಇದೆ. ಆದರೆ ಬಸ್ಸಿಗೆ ಕಲ್ಲು ಬಿದ್ದರೆ ಆಸ್ತಿ ಪಾಸ್ತಿ ನಷ್ಟ ಮಾಡಿಕೊಂಡು ವಾಹನ ಬಿಡುವಂತಿಲ್ಲ. ಆದ್ದರಿಂದ ಮೇಲಧಿಕಾರಿಗಳಿಂದ ಯಾವುದೇ ಸೂಚನೆ ಬರದಿದ್ದರೆ, ಬಸ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದಾದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಕುಂದಾಪುರ ಡಿಪೋ ಮ್ಯಾನೇಜರ್‌ ರಾಜೇಶ್‌ ಅವರು ತಿಳಿಸಿದ್ದಾರೆ.

ಖಾಸಗಿ ಬಸ್‌ ಇಲ್ಲ
ಈಗಾಗಲೇ ಎಲ್ಲ ಬಸ್‌ಗಳಲ್ಲಿ ಬಸ್‌ ಬಂದ್‌ ಫ‌ಲಕಗಳನ್ನು ಸಂಘಟನೆಗಳು ಹಾಕಿವೆ. ಗ್ರಾಮಾಂತರ ಪ್ರದೇಶದಿಂದ ಜನರನ್ನು ತಂದು ಪಟ್ಟಣಕ್ಕೆ ಬಿಟ್ಟ ಬಳಿಕ ಬಸ್‌ ಸಂಚಾರ ನಿಲ್ಲಿಸುವಂತಿಲ್ಲ. ಅಥವಾ ಒಮ್ಮೆ ಸಂಚಾರ ಆರಂಭಿಸಿ ನಂತರ ನಿಲ್ಲಿಸಿದರೂ ಜನರಿಗೆ ಅನನುಕೂಲವಾಗುತ್ತದೆ. ಆದ್ದರಿಂದ ಖಾಸಗಿ ಬಸ್‌ಗಳ ಓಡಾಟ ಈ ದಿನ ಇರುವುದಿಲ್ಲ ಎಂದು ಶ್ರೀ ದುರ್ಗಾಂಬಾ ಬಸ್‌ ಮಾಲಕ ಅನಿಲ್‌ ಚಾತ್ರ ತಿಳಿಸಿದ್ದಾರೆ.

ರಜೆ ಇಲ್ಲ, ಬಲವಂತವೂ ಇಲ್ಲ
ಶಾಲೆಗೆ ರಜೆ ಕೊಡುವಂತೆ ಈ ತನಕ ಯಾವುದೇ ಸುತ್ತೋಲೆ ಬಂದಿಲ್ಲ. ಆದರೆ ಬಸ್‌ ಸಂಚಾರ ಇಲ್ಲದಿದ್ದರೆ ವಿದ್ಯಾರ್ಥಿಗಳು ತೊಂದರೆ ಮಾಡಿಕೊಂಡು ಬರಬೇಕೆಂದು ಬಲವಂತವನ್ನೂ ಮಾಡಲಾಗದು. ಮೇಲಧಿಕಾರಿಗಳ ಸೂಚನೆಯಂತೆ ರಜೆ ತೀರ್ಮಾನವಾಗಲಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌ ತಿಳಿಸಿದ್ದಾರೆ. 

ಹಳ್ಳಿ ಹಳ್ಳಿಗಳಿಗೆ ತೆರಳಿ ಮುಷ್ಕರ ಯಶಸ್ವಿಗೆ ಮನವಿ ಮಾಡಿದ್ದೇವೆ. ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡಬೇಕೆಂದು ವರ್ತಕರಲ್ಲಿ ಕೇಳಿಕೊಂಡಿದ್ದೇವೆ. ರಿಕ್ಷಾ, ಗೂಡ್ಸ್‌ ವಾಹನಗಳು, ಖಾಸಗಿ ಬಸ್‌ಗಳು ಬೆಂಬಲ ನೀಡಿವೆ. ಕಾರ್ಮಿಕರು ಕೂಡಾ ಬೆಂಬಲ ನೀಡಿದ್ದಾರೆ. ಆದ್ದರಿಂದ ಮುಷ್ಕರ ಯಶಸ್ವಿಯಾಗಲಿದೆ ಎಂದು ಸಿಐಟಿಯು ಕಾರ್ಯದರ್ಶಿ ಸುರೇಶ್‌ ಕಲ್ಲಾಗರ ತಿಳಿಸಿದ್ದಾರೆ.

ಬೇಡಿಕೆಗಳು
ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು, ಬೆಲೆ ಏರಿಕೆ ತಡೆಗಟ್ಟಬೇಕು, ಹೊಸ ಉದ್ಯೋಗ ಸೃಷ್ಟಿ ಮಾಡಬೇಕು, ಕಾರ್ಮಿಕ ಕಾನೂನುಗಳು ಕಾರ್ಮಿಕರ ಪರವಾಗಿರಬೇಕು, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಂ ನೌಕರರನ್ನು ಖಾಯಂ ಉದ್ಯೋಗಿಗಳಾಗಿಸಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಸಲ್ಲದು, ಬ್ಯಾಂಕ್‌ ವಿಲೀನ ಸಲ್ಲದು, ಮೋಟಾರು ವಾಹನ ಕಾಯ್ದೆ ಮಾರಕವಾಗಿ ತಿದ್ದುಪಡಿ ಸಲ್ಲದು ಮೊದಲಾದ ಬೇಡಿಕೆಗಳಿವೆ. ಜತೆಗೆ ಸ್ಥಳೀಯ ಬೇಡಿಕೆಗಳೂ ಸೇರಿಕೊಂಡಿವೆ. ಮರಳು ಸಮಸ್ಯೆ ನಿವಾರಣೆ, ಮೀನುಗಾರರ ಕಲ್ಯಾಣ ಮಂಡಳಿ, ಕೃಷಿ ಬಿಕ್ಕಟ್ಟು ನಿವಾರಣೆ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಇತ್ಯಾದಿ.

ಅಂಗನವಾಡಿ ನೌಕರರ ಬೇಡಿಕೆಗಳಿಗೆ ರಾಜ್ಯ ಸಚಿವರು 1 ವಾರದಲ್ಲಿ ಈಡೇರಿಸುವ ಭರವಸೆ ನೀಡಿ ಗೌರವಧನ ಬಿಡುಗಡೆ ಮಾಡುವುದಾಗಿ ಹೇಳಿದ ಕಾರಣ ಅಂಗನವಾಡಿ ನೌಕರರ ಬೆಂಬಲ ಇಲ್ಲ. ಆ ದಿನಗಳಲ್ಲಿ ಅಂಗನವಾಡಿ ತೆರೆದಿರುತ್ತದೆ ಎಂದು ಕಾರ್ಯಕರ್ತೆಯರ, ಸಹಾಯಕಿಯರ ಸಂಘದ ಪ್ರಕಟನೆ ಹೇಳಿದೆ.

ಕಾರ್ಕಳದಲ್ಲಿ ಮಿಶ್ರ ಪ್ರತಿಕ್ರಿಯೆ ಸಾಧ್ಯತೆ
ಕಾರ್ಕಳ:
ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ. 8 ಹಾಗೂ 9ರಂದು ಕರೆ ನೀಡಿರುವ ಭಾರತ್‌ ಬಂದ್‌ಗೆ ಕಾರ್ಕಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ. ಖಾಸಗಿ ಬಸ್ಸುಗಳು ಹಾಗೂ ಇತರ ಬಸ್ಸುಗಳು ಓಡಾಟವಿದ್ದರೆ ಮಾತ್ರ ನಗರದಲ್ಲಿ ಜನಸಂಚಾರ ಇರುತ್ತದೆ. ಹೀಗಾಗಿ ಜನಸಂಚಾರವಿದ್ದರೆ ಮಾತ್ರ ನಮಗೆ ವ್ಯಾಪಾರ ವಹಿವಾಟು ಆಗುವ ಸಾಧ್ಯತೆಯಿದ್ದು, ಇಲ್ಲದಿದ್ದರೆ ನಾವು ಸಹಜವಾಗಿಯೇ ಬಂದ್‌ ಮಾಡಬೇಕಾಗುತ್ತದೆ ಎನ್ನುತ್ತಾರೆ ಕೆಲವು ವ್ಯಾಪಾರಸ್ಥರು.

ಕಾರ್ಕಳ ಆಟೋ ಚಾಲಕರ ಸಂಘ ಬಂದ್‌ಗೆ ಪರೋಕ್ಷವಾಗಿ ಬೆಂಬಲ ನೀಡಲಿದೆ. ಆದರೆ ಪಾರ್ಕಿಂಗ್‌ನಲ್ಲಿ ಆಟೋಗಳು ಸೇವೆಗೆ ಲಭ್ಯವಿರಲಿವೆೆ. ಸಂಘವು ಯಾವುದೇ ನಿರ್ಧಾರ ಕೈಗೊಂಡು ಪ್ರಕಟಿಸಿಲ್ಲ. ಹೀಗಾಗಿ ವೈಯಕ್ತಿವಾಗಿ ಬೆಂಬಲ ನೀಡುವವರು ಪಾರ್ಕಿಂಗ್‌ ಮಾಡದೇ ಇರಬಹುದೆಂದು ತಾ| ರಿಕ್ಷಾ ಚಾಲಕ ಮಾಲ ಕರ ಸಂಘದ ಕಾರ್ಯದರ್ಶಿ ಸಂತೋಷ್‌ ರಾವ್‌ ತಿಳಿಸಿದ್ದಾರೆ. ಆಸ್ಪತ್ರೆ, ಮೆಡಿಕಲ್‌ಗ‌ಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೇಲ್‌ಗ‌ಳು ಹೆಚ್ಚಾಗಿ ಬಂದ್‌ ದಿನದ ಪರಿಸ್ಥಿತಿ ನೋಡಿ, ನಿರ್ಣಯ ತೆಗೆದುಕೊಳ್ಳಲಿವೆ. ಬ್ಯಾಂಕ್‌ ಸೇವೆ ಲಭ್ಯವಿರಲಿದೆ. ತಾಲೂಕಿನ ಸಿಐಟಿಯು ಘಟಕ ಹಾಗೂ ಇಂಟಕ್‌ ಬಂದ್‌ಗೆ ಪೂರ್ಣ ಬೆಂಬಲ ನೀಡಲಿವೆ.

ಯಾವುದೆಲ್ಲ  ಬೆಂಬಲ
ದೇಶದ 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಗಳು, 50ಕ್ಕೂ ಹೆಚ್ಚು ಸ್ವತಂತ್ರ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಸಿಐಟಿಯು, ರಿಕ್ಷಾ ಚಾಲಕರ ಸಂಘ, ಗೂಡ್ಸ್‌ವಾಹನ ಮಾಲಕ ಚಾಲಕರ ಸಂಘ, ಖಾಸಗಿ ಬಸ್‌ಗಳ ನೌಕರರು ಬೆಂಬಲ ನೀಡಿದ್ದಾರೆ.

ಯಾವುದೆಲ್ಲ ಬಂದ್‌
ಖಾಸಗಿ ಬಸ್‌ಗಳಲ್ಲಿ ಬಸ್‌ ಬಂದ್‌ ಎಂದು ಫ‌ಲಕ ಅಳವಡಿಸಲಾಗಿದೆ. ಜತೆಗೆ ರಿಕ್ಷಾ, ಗೂಡ್ಸ್‌ ವಾಹನಗಳಲ್ಲಿ ಬಂದ್‌ ಫ‌ಲಕ ಇದೆ. ಶಾಲೆ, ಕಾಲೇಜುಗಳಿಗೆ ರಜೆ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಸರಕಾರಿ ಬಸ್‌ ನೌಕರರ ಬೆಂಬಲ ಇದ್ದರೂ ದ.ಕ. ಉಡುಪಿಯಲ್ಲಿ ಬಸ್‌ಗಳ ಓಡಾಟ ಕುರಿತು ಸ್ಪಷ್ಟ  ತೀರ್ಮಾನವಾಗಿಲ್ಲ. ಬಿಎಂಎಸ್‌ ಕಾರ್ಮಿಕ ಸಂಘಟನೆ ಮುಷ್ಕರಕ್ಕೆ ಬೆಂಬಲ ನೀಡಿಲ್ಲ.ಆದ್ದರಿಂದ ಆ ಸಂಘಟನೆಯ ರಿಕ್ಷಾಗಳು ಓಡಾಡಲಿವೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.