ಕಾಲು ಬಲಹೀನ ಬಾಲೆಗೆ ಲಕ್ಷ ರೂ. ನೆರವು


Team Udayavani, Sep 13, 2018, 4:35 AM IST

vesha-12-9.jpg

ಕಟಪಾಡಿ: ಬಡವರು, ನೊಂದವರ ಸೇವೆಯ ಮೂಲಕ ದೇವರನ್ನು ಕಾಣುವ ಕೆಲಸ ಫ್ರೆಂಡ್ಸ್‌ ಸರ್ಕಲ್‌ ಪಳ್ಳಿಗುಡ್ಡೆ ಯುವಕರ ತಂಡದಿಂದ ನಡೆದಿದೆ. ಸರ್ವರಲ್ಲಿಯೂ ರಾಷ್ಟ್ರಧ್ವಜದಡಿ ಸಹಬಾಳ್ವೆ ನಡೆಸುವ ಪರಿಕಲ್ಪನೆಯು ಬರಬೇಕಿದ್ದು, ಮಾತೃಭಕ್ತಿ, ದೇವ ಭಕ್ತಿ, ದೇಶ ಭಕ್ತಿ ಮನಮಾಡಲಿ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು.

ಬುಧವಾರ ವಿನೋಬಾ ನಗರದಲ್ಲಿ ಫ್ರೆಂಡ್ಸ್‌ ಸರ್ಕಲ್‌ ಪಳ್ಳಿಗುಡ್ಡೆ ಯುವಕರ ತಂಡವು ಹುಟ್ಟಿನಿಂದಲೇ ತನ್ನೆರಡೂ ಕಾಲುಗಳ ಬಲ ಕಳೆದುಕೊಂಡಿರುವ ಪೊಸಾರು ಎಂಬಲ್ಲಿನ ಕಸ್ವಿ ಎಂಬ 4 ವರ್ಷದ ಬಾಲೆಯ ಶಸ್ತ್ರ ಚಿಕಿತ್ಸೆಯ ವೆಚ್ಚ ಭರಿಸಲು ಕೃಷ್ಣಾಷ್ಟಮಿಯ ಸಂದರ್ಭ ವೇಷ ಧರಿಸಿ ಸಂಗ್ರಹಗೊಂಡ‌ ಹಣದಲ್ಲಿ ಒಂದು ಲಕ್ಷ ರೂಪಾಯಿಯನ್ನು ಪೋಷಕರಿಗೆ ಹಸ್ತಾಂತರಿಸಿ ತಮ್ಮ  ಆಶೀರ್ವಚನದಲ್ಲಿ ಮಾತನಾಡಿದರು.

ಅಂಬಾಡಿ ಸಿಎಸ್‌ಐ ಚರ್ಚ್‌ನ ಧರ್ಮಗುರು ವಂ|ಎಡ್ವಿನ್‌ ಜೋಸೆಫ್‌ ಮಾತನಾಡಿ, ನೊಂದ ಮನಸ್ಸಿನ ನೋವಿಗೆ ಸ್ಪಂದಿಸುವ ಮೂಲಕ ದೇವರು ಪ್ರೀತಿಸುವ ಚಟುವಟಿಕೆಯು ಯುವತಂಡದಿಂದ ನಡೆದಿದ್ದು, ಬಾಲೆಯ ಬದುಕು ಹಸನಾಗಲಿ ಎಂದರು. ಕಟಪಾಡಿ ಜುಮ್ಮಾ ಮಸೀದಿಯ ಧರ್ಮಗುರು  ಯೂಸುಫ್‌ ಜುವಾರಿ ಮಾತನಾಡಿ, ದಾರಿ ತಪ್ಪಿದವರನ್ನು ಸರಿದಾರಿಗೆ ಕೊಂಡೊಯ್ಯುವುದೇ ಧರ್ಮಗಳ ಮೂಲ. ಕಷ್ಟಕಾಲದಲ್ಲಿ ಸಹಾಯ ಮಾಡುವ ಮಾನವೀಯತೆ ಇಲ್ಲಿ ಮೌಲ್ಯ ಪಡೆದುಕೊಂಡಿದೆ ಎಂದರು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಮಾತನಾಡಿ, ಅಮೂಲ್ಯವಾದ ದೇಶದ ಯುವ ಸಂಪತ್ತು ದುರ್ವ್ಯಸನ ಮುಕ್ತರಾಗಬೇಕು. ಜನಸಾಮಾನ್ಯರ ಸಂಕಷ್ಟದಲ್ಲಿ ಆಸರೆಯಾಗುವುದು ಶ್ರೇಷ್ಠ ಸೇವೆಯಾಗಿದೆ. ಇಂತಹ ಸಂಸ್ಥೆಯು ಉನ್ನತಿಗೇರಬಲ್ಲುದು ಎಂದರು.

ಈ ಸಂದರ್ಭ ವೈದ್ಯಕೀಯ ಶುಶ್ರೂಶೆ ಮತ್ತು ಮನೆ ರಿಪೇರಿಗೆ ಸಹಾಯಧನವನ್ನು ವಿತರಿಸಲಾಯಿತು. ವೇಷಧಾರಿ ಗೌರೀಶ್‌ ಪೂಜಾರಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಜಿಪಂ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ತಾಲೂಕು ಪಂಚಾಯತ್‌ ಸದಸ್ಯ ರಾಜೇಶ್‌ ಕುಮಾರ್‌ ಅಂಬಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಚಂದ್ರಕಲಾ, ಸಂಸ್ಥೆಯ ಪ್ರಮುಖರಾದ ಭಾಸ್ಕರ್‌ ಕಾಂಚನ್‌, ರಮೇಶ್‌ ಕೋಟ್ಯಾನ್‌, ಸುರೇಶ್‌ ಮೇಸ್ತ್ರಿ, ಪ್ರಭಾಕರ್‌ ಕೋಟ್ಯಾನ್‌, ಉದಯ ಪೂಜಾರಿ, ರಾಹುಲ್‌ ಪೂಜಾರಿ ಉಪಸ್ಥಿತರಿದ್ದರು. ಗೀತಾಂಜಲಿ ಸುವರ್ಣ ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು. ರಾಜು ಸಂತೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.