CONNECT WITH US  

ಅಶಕ್ತರಿಗೆ ನೆರವಾಗಲು ಹುಲಿ ವೇಷ ಹಾಕಿದ ಯುವತಿಯರು

ಪಡುಬಿದ್ರಿ : ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಟೀಂ ಟೈಗರ್‌ ಗರ್ಲ್ಸ್‌ ಉಡುಪಿ ತಂಡದ  10 ಮಂದಿ ಯುವತಿಯರು ಇದೀಗ ಹುಲಿವೇಷ ಧರಿಸಿದ್ದಾರೆ. ಇವರ ಹುಲಿವೇಷ ತಂಡ ಮೂರು ದಿನಗಳ ಕಾಲ ಉದ್ಯಾವರ, ಕಟಪಾಡಿ, ಶಂಕರಪುರ, ಮಣಿಪಾಲ, ಉಡುಪಿ, ಮಲ್ಪೆ ಮತ್ತಿತರೆಡೆಗಳಲ್ಲಿ ಸಂಚರಿಸಲಿದೆ. ಜತೆಗೆ ಸಂಗ್ರವಾಗುವ ಹಣವನ್ನು ವಿದ್ಯಾರ್ಥಿನಿಯೋರ್ವಳ ಶಸ್ತ್ರಚಿಕಿತ್ಸೆಗೆ ಮತ್ತು ಬಡ ಕುಟುಂಬವೊಂದಕ್ಕೆ ನೀಡಲಿದ್ದಾರೆ.

ಜಿ. ಅಮೀನ್‌ ನೇತೃತ್ವದಲ್ಲಿ ಪಿಯು ವಿದ್ಯಾರ್ಥಿನಿಯರ ಈ ತಂಡ 2 ಲಕ್ಷ ರೂ.ಗಳಿಗೆ ಮಿಕ್ಕಿ ಹಣ ಸಂಗ್ರಹದ ಗುರಿ ಹಾಕಿಕೊಂಡಿದೆ. ಲಘು ಆಹಾರ ಸೇವಿಸಿ ಮೂರು ದಿನ ನಿರಂತರ, ತಂಡ ತಿರುಗಾಟ ನಡೆಸಲಿದೆ.

Trending videos

Back to Top