ಜಿಲ್ಲಾ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಗೆ ಒತ್ತು : ಡಾ| ಜಯಮಾಲಾ


Team Udayavani, Sep 16, 2018, 10:31 AM IST

jaya1.png

ಮಣಿಪಾಲ: ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಘೋಷಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ, ಜಿಲ್ಲೆಯ ಬೀಚ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ಶನಿವಾರ ಸಂವಾದದಲ್ಲಿ ಪಾಲ್ಗೊಂಡು ವಿವಿಧ ಕ್ಷೇತ್ರಗಳ ಪ್ರಮುಖರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೀಚ್‌ಗಳ ಅಭಿವೃದ್ಧಿಗೆ ಈಗಾಗಲೇ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದರು. ಬಾಲಭವನಕ್ಕೆ ಎರಡು ಟಾಯ್‌ ಟ್ರೈನ್‌ಗಳು ಮಂಜೂರಾಗಿದ್ದು, ಈ ಪೈಕಿ ಒಂದನ್ನು ಉಡುಪಿಗೆ ನೀಡುವುದಾಗಿ ಘೋಷಿಸಿದರು. 

ಉದಯವಾಣಿ ಬದ್ಧತೆ 
ಅಭಿವೃದ್ಧಿ ಪತ್ರಿಕೋದ್ಯಮವನ್ನು ಬೆಂಬಲಿಸಿರುವ “ಉದಯವಾಣಿ’ ಜನರ ಸಮಸ್ಯೆಗಳಿಗೆ ದನಿಯಾಗಿ ಅದನ್ನು ಜನಪ್ರತಿನಿಧಿಗಳಿಗೆ ತಲುಪಿಸಿ ಪರಿಹಾರ ಒದಗಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಸಮಾಜದಲ್ಲಿನ ಬದಲಾವಣೆಗೆ ತಕ್ಕಂತೆ ಇಂಥ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಸಂವಾದ ಮಹತ್ವದ ಹೆಜ್ಜೆ ಎಂದು ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ. ನ ಸಿಇಒ ವಿನೋದ್‌ ಕುಮಾರ್‌ ತಿಳಿಸಿದರು.

“ಎಜುಕೇಶನ್‌’ ಏಕೆ “ವಿದ್ಯಾಭ್ಯಾಸ’ ಸಾಕು
ಅಧ್ಯಕ್ಷತೆ ವಹಿಸಿದ್ದ “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮಾತನಾಡಿ, “ಇಂದು ನಮ್ಮೆದುರು ಇರುವ ಹತ್ತಾರು ಸಮಸ್ಯೆಗಳಲ್ಲಿ ಹೊರಜಗತ್ತಿಗೆ ಕಾಣುವುದು ಸ್ವಲ್ಪ ಮಾತ್ರ. ನಮ್ಮ ದೇಶದ ಹಿಂದಿನ ಗುರುಕುಲ ಮಾದರಿ ಶಿಕ್ಷಣ, ಕೃಷಿ ವ್ಯವಸ್ಥೆಯನ್ನು ಬ್ರಿಟಿಷರು ನಾಶಪಡಿಸಿದ ಬಳಿಕ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ’ ಎಂದರು.

ಬ್ರಿಟಿಷ್‌ ಅಧಿಕಾರಿ ಮೆಕಾಲೆ ದೇಶಾದ್ಯಂತ 3 ವರ್ಷ ಅಧ್ಯಯನ ನಡೆಸಿ ಇಲ್ಲಿ ಒಬ್ಬನೇ ಒಬ್ಬ ಕಳ್ಳರಿಲ್ಲ, ಸುಳ್ಳರಿಲ್ಲ, ಹಿಂಸೆ ಮಾಡುವವರಿಲ್ಲ. ಪರಸ್ಪರ ಸಹಕಾರದಿಂದ ಎಲ್ಲರೂ ಬದುಕುತ್ತಿದ್ದಾರೆ. ಹಾಗಾಗಿ ಇಲ್ಲಿನ ಕೃಷಿ ಮತ್ತು ವಿದ್ಯಾಭ್ಯಾಸ ವ್ಯವಸ್ಥೆಯನ್ನು ಹಾಳು ಮಾಡದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದ. ಅದರಂತೆ ಮೊದಲು ಗುರುಕುಲ ವ್ಯವಸ್ಥೆಯನ್ನು ಬಂಗಾಲದಲ್ಲಿ ನಿಷೇಧಿಸಲಾಯಿತು. ಪಿಂಚಣಿ ಸಿಗುತ್ತದೆಂದು ಬ್ರಿಟಿಷ್‌ ಶಿಕ್ಷಣಕ್ಕೆ ಮಕ್ಕಳನ್ನು ಕೆಲವು ಭಾರತೀಯರು ಸೇರಿಸತೊಡಗಿದರು. ಇಡೀ ದೇಶದಲ್ಲಿ ಅದೇ ಸಂಸ್ಕೃತಿ ವ್ಯಾಪಿಸಿತು ಎಂದು ವಿಷಾದಿಸಿದರು.

ನಮ್ಮ ನೆಲ, ಸಂಸ್ಕೃತಿ, ವಿಶೇಷತೆಯ ಬಗ್ಗೆ ಇಂದಿನ ಮಕ್ಕಳಿಗೆ ಮಾಹಿತಿ ಇಲ್ಲ. ಹಂಪಿಯ ವೈಭವದ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಲು ಗೈಡ್‌ಗಳನ್ನು ನೇಮಿಸಬೇಕಾಗಿದೆ. ಬ್ರಿಟಿಷರ “ಎಜುಕೇಶನ್‌’ನ ಪರಿಣಾಮವಿದು. ನಮ್ಮ ದೇಶ, ಸಂಸ್ಕೃತಿ, ಹಿರಿಯರನ್ನು ಗೌರವಿಸುವುದನ್ನು ಈ  “ಎಜುಕೇಶನ್‌’ ಕಲಿಸದು. ಅದಕ್ಕೆ ನಮ್ಮ ಪರಂಪರೆಯ ವಿದ್ಯಾಭ್ಯಾಸವೇ ಬೇಕು. ಹಾಗಾಗಿ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಸಂಸ್ಕೃತಿ ಕುರಿತ ಸಂಗತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಆಗ ಈಗಿನ ಎಲ್ಲ ಸಮಸ್ಯೆಗಳಿಗೂ ಹತ್ತೇ ವರ್ಷದಲ್ಲಿ ಪರಿಹಾರ ಸಿಗುತ್ತದೆ. ಹಾಗಾಗಿ ಸರಕಾರ ಇದರತ್ತ ಮನಸ್ಸು ಮಾಡಬೇಕು’ ಎಂದು ಆಗ್ರಹಿಸಿದರು.

ಮಂಗಳೂರು ಬ್ಯೂರೋ ಚೀಫ್ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು. ಎಂಎಂಎನ್‌ಎಲ್‌ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಡಿಜಿಎಂ ಸತೀಶ್‌ ಶೆಣೈ ವಂದಿಸಿದರು. 

ಪತ್ರಿಕೆ ಓದಿ ಜ್ಞಾನ ಬೆಳೆಸಿ
ಮೊಬೈಲ್‌ಗ‌ಳಲ್ಲಿ ಸರಕಾರದ ಕಾರ್ಯಕ್ರಮ, ಯೋಜನೆಗಳ ಮಾಹಿತಿ ಹೆಚ್ಚು ಕೊಡಿ -ವಿಶ್ವಾಸ್‌ ಭಟ್‌,  ವಿದ್ಯಾರ್ಥಿ, ನಿಟ್ಟೆ 
ಉತ್ತರ: ಸಾಮಾಜಿಕ ಜಾಲತಾಣಗಳಿಗಿಂತಲೂ ದಿನಪತ್ರಿಕೆಗಳಲ್ಲಿ ಹೆಚ್ಚು ನಿಖರ ಮಾಹಿತಿ ಇರುತ್ತದೆ. ಸಾಮಾಜಿಕ ಜಾಲತಾಣಕ್ಕೆ ಉತ್ತರದಾ ಯಿತ್ವ  ಇರದು. ಪತ್ರಿಕೆಗಳಲ್ಲಿ ಎಲ್ಲ  ಯೋಜನೆಗಳ ಮಾಹಿತಿ ಇರುತ್ತದೆ. ಇದಕ್ಕೆ ಉತ್ತರ ದಾಯಿತ್ವವೂ ಇರುತ್ತದೆ. ಯುವ ಜನತೆ ಪತ್ರಿಕೆ ಗಳನ್ನು ಓದಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. 

2 ತಾಸು ನಿಂತೇ ಉತ್ತರಿಸಿದರು
ಯುವಜನರು, ಉದ್ಯಮಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಜಿಲ್ಲೆಗೆ ಆಗಬೇಕಾದ ಅಭಿವೃದ್ಧಿಯ ಅಗತ್ಯವನ್ನು ತಮ್ಮ ಪ್ರಶ್ನೆಗಳ ಮೂಲಕ ಸಚಿವರಿಗೆ ಮನದಟ್ಟು ಮಾಡಿಕೊಟ್ಟರು. ಸುಮಾರು ಎರಡು ತಾಸುಗಳ ಕಾಲ ನಿಂತುಕೊಂಡೇ ಪ್ರತಿ ಪ್ರಶ್ನೆಯನ್ನೂ ಸಮಾಧಾನದಿಂದ ಆಲಿಸಿದ ಸಚಿವೆ, ಸರಕಾರ ತೆಗೆದುಕೊಂಡ, ತೆಗೆದುಕೊಳ್ಳುತ್ತಿರುವ ಹಾಗೂ ತೆಗೆದುಕೊಳ್ಳಲಿರುವ ಕ್ರಮಗಳ ಕುರಿತು ವಿವರಿಸಿದರು. 

ಪ್ರವಾಸೋದ್ಯಮ ಯೋಜನೆಗೆ ಚಾಲನೆ ನೀಡಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ನೀಡಿದರೆ ಉದ್ಯೋಗ ಸೃಷ್ಟಿಯೂ ಸಾಧ್ಯ. ಜಿಂಕೆ ಪಾರ್ಕ್‌ ಸೇರಿದಂತೆ ಪ್ರವಾಸೋದ್ಯಮ ಸಂಬಂಧಿ ಹಲವು ಯೋಜನೆಗಳು ನನೆಗುದಿಯಲ್ಲಿವೆ, ಆರಂಭಿಸಿ
-ನಾಗರಾಜ ಹೆಬ್ಟಾರ್‌, ಪ್ರವಾಸೋದ್ಯಮಿ, ಮರವಂತೆ
ಉತ್ತರ : ನಮ್ಮದು ದೇವರ ನಾಡು. ನೂರಾರು ಪ್ರವಾಸಿ ತಾಣಗಳಿವೆ. ಜಿಲ್ಲೆಯ ಬೀಚ್‌ಗಳ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಜತೆ ಈಗಾಗಲೇ ಚರ್ಚಿಸಿರುವೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಏಕಗವಾಕ್ಷಿ ವ್ಯವಸ್ಥೆ (ಸಿಂಗಲ್‌ ವಿಂಡೋ ಸಿಸ್ಟಂ) ರೂಪಿಸಬೇಕಿದೆ. ಬಾಲಭವನಕ್ಕೆ ಎರಡು ಟಾಯ್‌ ಟ್ರೈನ್‌ ಮಂಜೂರಾಗಿದ್ದು ಒಂದನ್ನು ಉಡುಪಿಗೆ ನೀಡಲಾಗುವುದು.  ರಾಜ್ಯದಲ್ಲಿ ಹತ್ತು ಎಕ್ರೆ ಜಾಗದಲ್ಲಿ ಎರಡು ಕಡೆ ಮಕ್ಕಳಿಗಾಗಿ ಚಿಲ್ಡ್ರನ್‌ ಬುಕ್‌ ಪಾರ್ಕ್‌ ಆರಂಭಿಸುವ ಯೋಚನೆಯೂ ಇದೆ.

ಕೈಗಾರಿಕೆಗಳಿಗೆ ಉತ್ತೇಜನ ನೀಡಿ
ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ಕೊರತೆ ಇದೆ. ಇಲ್ಲಿನ ಪ್ರತಿಭಾವಂತರು ಉದ್ಯೋಗಕ್ಕೆ ಬೇರೆ ಕಡೆ ತೆರಳಬೇಕಾಗಿದೆ. ಖಾಸಗಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ನಿರ್ಮಾಣಕ್ಕೆ ಪ್ರೋತ್ಸಾಹ ಬೇಕು-
-ಮಟ್ಟಾರು ಗಣೇಶ್‌ ಕಿಣಿ, ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರು
ಉತ್ತರ: ಪರಿಸರ ಸಂರಕ್ಷಣೆ ತೀರಾ ಅವಶ್ಯ. ಆದರೆ ಪ್ರತಿಯೊಂದು ಯೋಜನೆಗಳಿಗೂ ವಿರೋಧ ಮಾಡಬಾರದು. ಇಡೀ ಸಮೂಹದ ಹಿತದೃಷ್ಟಿ ಮುಖ್ಯ. ಪರಿಸರ ಸಹ್ಯ ಯೋಜನೆಗಳನ್ನು ಪ್ರೋತ್ಸಾಹಿಸಲಾಗುವುದು.

ಮ್ಯೂಸಿಯಂ ಮಾಹಿತಿ ದೊರಕಬೇಕು
ಉಡುಪಿಯಲ್ಲಿ ಕಾಯಿನ್‌ ಮ್ಯೂಸಿಯಂ, ಅನಾಟಮಿ ಮ್ಯೂಸಿಯಂ, ದೇವಸ್ಥಾನ ಮೊದಲಾದ ಅನೇಕ ಪ್ರವಾಸಿ ತಾಣಗಳಿವೆ. ಆದರೆ ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವಾಗಬೇಕು

-ಅನುಷಾ, ಎಂಐಟಿ ವಿದ್ಯಾರ್ಥಿ
ಉತ್ತರ:
ವಸ್ತು ಸಂಗ್ರಹಾಲಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಅನುದಾನ ಬಂದಿಲ್ಲ. ಮುಜರಾಯಿ ಇಲಾಖೆ ವತಿಯಿಂದ ಟೂರಿಸ್ಟ್‌ ಗೈಡ್‌ಗಳನ್ನು ನೇಮಿಸಲು ಗಮನ ಹರಿಸುವೆ. ಬೇಲೂರಿನಲ್ಲಿ ಪಾಳುಬಿದ್ದಿರುವ ಶಿಲ್ಪ ಕಲೆಯನ್ನು ಮರುಜೋಡಿಸಲು ಯುವಜನರಿಗೆ ಅವಕಾಶ ನೀಡಬೇಕು ಎಂಬುದು ನನ್ನ ತೀರ್ಮಾನ. 

ಕೈಗಾರಿಕೆಗಳಿಗೆ ಉತ್ತೇಜನ ನೀಡಿ
ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ಕೊರತೆ ಇದೆ. ಇಲ್ಲಿನ ಪ್ರತಿಭಾವಂತರು ಉದ್ಯೋಗಕ್ಕೆ ಬೇರೆ ಕಡೆ ತೆರಳಬೇಕಾಗಿದೆ. ಖಾಸಗಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ನಿರ್ಮಾಣಕ್ಕೆ ಪ್ರೋತ್ಸಾಹ ಬೇಕು-
-ಮಟ್ಟಾರು ಗಣೇಶ್‌ ಕಿಣಿ, ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರು
ಉತ್ತರ: ಪರಿಸರ ಸಂರಕ್ಷಣೆ ತೀರಾ ಅವಶ್ಯ. ಆದರೆ ಪ್ರತಿಯೊಂದು ಯೋಜನೆಗಳಿಗೂ ವಿರೋಧ ಮಾಡಬಾರದು. ಇಡೀ ಸಮೂಹದ ಹಿತದೃಷ್ಟಿ ಮುಖ್ಯ. ಪರಿಸರ ಸಹ್ಯ ಯೋಜನೆಗಳನ್ನು ಪ್ರೋತ್ಸಾಹಿಸಲಾಗುವುದು.

ಕಸ್ತೂರಿ ರಂಗನ್‌ ವರದಿ : ಸ್ಪಷ್ಟ ನಿಲುವು
ಒಂದೋ ಕಸ್ತೂರಿರಂಗನ್‌ ವರದಿ ಜಾರಿಗೆ ತನ್ನಿ. ನಮ್ಮ ಭೂಮಿ ಖರೀದಿಸಿ. ಇಲ್ಲವಾದರೆ ಕೈಬಿಡಿ. ತ್ರಿಶಂಕು ಸ್ಥಿತಿಯಿಂದಾಗಿ ನಮಗೆ ಯಾವುದೇ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ-
-ಹರಿಶ್ಚಂದ್ರ ತೆಂಡೂಲ್ಕರ್‌, ಮಾಳ , ಪತ್ರಿಕಾ ವಿತರಕರು/ ಸಂಜೀವ ಶೆಟ್ಟಿ, ಹೆಬ್ರಿ
ಉತ್ತರ:
ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಲು ಸರಕಾರ ನಿರ್ಧರಿಸಿದೆ. ಈ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಈ ವಿಷಯವನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ.

ಮೀನುಗಾರರ ಕಷ್ಟವನ್ನೂ ಕೇಳಿ
ಮೀನುಗಾರರ ಸಾಲವನ್ನೂ ಮನ್ನಾ ಮಾಡಿ. ಮಲ್ಪೆ ಪಡುಕರೆಯಲ್ಲಿ ಜೆಟ್ಟಿ ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರ ವಿರೋಧವಿರುವುದರಿಂದ ಅವರು ಸೂಚಿಸಿರುವ ಸ್ಥಳದಲ್ಲಿ ಜೆಟ್ಟಿ ನಿರ್ಮಿಸಬೇಕು. ಮಲ್ಪೆ ಬಂದರಿನಲ್ಲಿ ಶೀತಲೀಕರಣ ಘಟಕ, ಒಳಚರಂಡಿ ನಿರ್ಮಿಸಬೇಕು-
-ಸತೀಶ್‌ ಕುಂದರ್‌ ಮಲ್ಪೆ, ಮೀನುಗಾರರ ಸಂಘದ ಅಧ್ಯಕ್ಷರು
ಉತ್ತರ:
ಮೀನುಗಾರ ಸಮುದಾಯದ ಕಷ್ಟ ನನ್ನ ಅರಿವಿಗಿದೆ. ನಿಮ್ಮ ಸಮಸ್ಯೆಗಳ ಕುರಿತು ಮೀನುಗಾರಿಕಾ ಸಚಿವರ ಜತೆಗೆ ಮಾತನಾಡಿ ಈಡೇರಿಸಲು ಕ್ರಮ ಜರಗಿಸುವೆ. 

ಜುವೆಲರಿ ಪಾರ್ಕ್‌ಗೆ ಅನುದಾನ ನೀಡಿ
ದೊಡ್ಡ ದೊಡ್ಡ ಆಭರಣದ ಶೋರೂಂಗಳಿಂದಾಗಿ ಸ್ಥಳೀಯ ಚಿನ್ನದ ಕೆಲಸಗಾರರ ಬದುಕಿಗೆ ತೊಂದರೆಯಾಗಿದೆ. ಇವರಿಗಾಗಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಅನುದಾನ ನೀಡಬೇಕು.
– ಅಲೆವೂರು ಯೋಗೀಶ್‌ ಆಚಾರ್ಯ, ಗೌರವಾಧ್ಯಕ್ಷರು, ವಿಶ್ವಕರ್ಮ ಒಕ್ಕೂಟ, ಉಡುಪಿ ಮತ್ತು ದ.ಕ. ಜಿಲ್ಲೆ 
ಉತ್ತರ:
ಎಷ್ಟೇ ಶೋರೂಂಗಳು ಬಂದರೂ ಇಲ್ಲಿಯೇ ತಯಾರಿಸುವ ಒಡವೆಗಳಿಗೆ ಬೇಡಿಕೆ ಇದೆ. ಒಮ್ಮೆ ಇಲ್ಲಿನ ಚಿನ್ನ ಖರೀದಿಸಿದರೆ ಮತ್ತೆ ಮತ್ತೆ ಖರೀದಿಸುವವರು ಅಧಿಕ. ಹಾಗಾಗಿ ದೊಡ್ಡ ಶೋರೂಂಗಳಿಂದ ಸಮಸ್ಯೆ ಎದುರಾಗದು. ನಿಮ್ಮ ಕೌಶಲ ವೃದ್ಧಿಗೆ ಕ್ರಮ ಕೈಗೊಳ್ಳುವುದು ಸೂಕ್ತ. 

ನಮಗೆ ಅನುದಾನ ನೀಡಿ
ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ಕೊಡುತ್ತೀರಿ. ಆದರೆ ಅವರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮಾರಾಟಕ್ಕೆ ನೆರವಾಗಿ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ನಮಗೆ ಅನುದಾನ ನೀಡಿ.
-ಡಾ| ಗಾಯತ್ರಿ, ಮಣಿಪಾಲ, “ಪವರ್‌’ ಸಂಸ್ಥೆಯ ಅಧ್ಯಕ್ಷರು 
ಉತ್ತರ:
ಹೆಣ್ಮಕ್ಕಳಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಗುಂಪಿನ ಮೂಲಕ ಪ್ರತೀ ವರ್ಷ ಪ್ರದರ್ಶನ ಆಯೋಜಿಸಲಾಗುತ್ತಿದೆ. 3 ಲ.ರೂ.ವರೆಗೆ ಸಬ್ಸಿಡಿ ಸಹಿತವಾದ ಸಾಲ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಗುಂಪುಗಳಿಗೆ ಸವಿರುಚಿ ಕ್ಯಾಂಟೀನ್‌ನ್ನು ಸದ್ಯ ಜಿಲ್ಲೆಗೊಂದು ನೀಡಲಾಗಿದ್ದು,  ತಾಲೂಕಿಗೆ ಒಂದು ನೀಡಲು ಸರಕಾರ ಸಿದ್ಧವಿದೆ. 

ಡ್ರಗ್ಸ್‌  ವಿರುದ್ಧ ಕ್ರಮ ಕೈಗೊಳ್ಳಿ
ಡ್ರಗ್ಸ್‌ ಪ್ರಕರಣಗಳಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು
– ಸುರೇಂದ್ರ ನಾಯಕ್‌, ಸಿಎ ಇಂಡಿಯಾ ಜಿಲ್ಲಾ ಅಧ್ಯಕ್ಷರು
ಉತ್ತರ:
ಮದ್ಯ ವ್ಯಸನ, ಡ್ರಗ್ಸ್‌ನಂತಹ ಚಟಗಳು ದೂರವಾಗ ಬೇಕಾದರೆ ಜನರ ಸ್ಪಂದನೆ ಅತ್ಯಗತ್ಯ. ಡ್ರಗ್ಸ್‌ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಮಕ್ಕಳು ದಾರಿತಪ್ಪಿದ್ದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು. 

ಸಾಲಮನ್ನಾ: ಷರತ್ತು ಸೂಕ್ತವಲ್ಲ
ಸಾಲಮನ್ನಾ ಸೌಲಭ್ಯ ದೊರೆಯಬೇಕಾದರೆ ಈ ಹಿಂದಿನ ಬಡ್ಡಿ ಪಾವತಿ ಮಾಡಬೇಕೆಂಬ ಷರತ್ತಿನಿಂದ ಅನುಕೂಲವಾಗುತ್ತಿಲ್ಲ.
-ಸತೀಶ್‌ ಕುಮಾರ್‌ ಶೆಟ್ಟಿ, ಯಡ್ತಾಡಿ
ಉತ್ತರ:
ಚಕ್ರಬಡ್ಡಿ ವಸೂಲಿ ಮಾಡಿ ಕಿರುಕಳು ನೀಡಲಾಗುತ್ತಿತ್ತು. ಇದನ್ನೆಲ್ಲ ನಿಯಂತ್ರಿಸಲು ಸರಕಾರ ಸಾಲಮನ್ನಾ ಜಾರಿಗೆ ತಂದಿದೆ. ಎಲ್ಲವನ್ನೂ ಸರಕಾರವೇ ಮಾಡಬೇಕೆಂಬುದು ಸರಿಯಲ್ಲ. 

ಇತರ ಕೈಗಾರಿಕೆಗಳಿಗೆ ಭೂಮಿ ನೀಡಿ
ನಂದಿಕೂರಿನಲ್ಲಿ ಒಂದು ಕಂಪೆನಿಗೆ 600 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ನೀಡಲಾಗಿತ್ತು. ಆದರೆ ಇಂದು ಅಲ್ಲಿ ಲ್ಯಾಂಡ್‌ ಮಾಫಿಯಾ ನಡೆಯುತ್ತಿದೆ. ಅದನ್ನು ಸರಕಾರ ವಾಪಸು ಪಡೆದು ಕೈಗಾರಿಕೆಗಳನ್ನು ಮಾಡುವ ಇತರರಿಗೆ ನೀಡಬೇಕು.
– ಶ್ರೀಕೃಷ್ಣ ರಾವ್‌ ಕೊಡಂಚ, ಉಡುಪಿ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಅಧ್ಯಕ್ಷರು
ಉತ್ತರ:
ಭೂಮಿಯನ್ನು ಸರಕಾರ ಸದುದ್ದೇಶದಿಂದ ನೀಡಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. ಇದನ್ನು ಸರಕಾರದ ಗ‌ಮನಕ್ಕೆ ತರುತ್ತೇನೆ.

ರೈತರಿಗೆ ಮಾರುಕಟ್ಟೆ ಒದಗಿಸಿ
ಉಡುಪಿಯಲ್ಲಿ ಪಶು ಆಹಾರ ಉತ್ಪಾದನಾ ಉದ್ಯಮಿಗಳಿಗೆ ಅಗತ್ಯವಾದ ಮೆಕ್ಕೆಜೋಳ ಬೆಳೆಸಲು ಪ್ರೋತ್ಸಾಹಿಸಿ, ಅಗತ್ಯವಿದ್ದವರಿಗೆ ಮಾಹಿತಿ ನೀಡಿ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ.
-ಮಹೇಶ್‌ ಉಡುಪ, ಹೈನುಗಾರಿಕೋದ್ಯಮಿ, ಮಂದಾರ್ತಿ.
ಉತ್ತರ:
ಯಾವ ಪ್ರದೇಶದಲ್ಲಿ, ಯಾವ ಹವಾಮಾನಕ್ಕೆ ಯಾವ ರೀತಿಯ ಬೆಳೆ ಬೆಳೆಯಬೇಕೆಂಬ ನಿರ್ದಿಷ್ಟ ಮಾಹಿತಿ ರೈತರಿಗಿರಬೇಕು. ಈ ಕೆಲಸವನ್ನು ಸರಕಾರ ಮಾಡುತ್ತಿದೆ. ಹೈನುಗಾರಿಕೆ ಯನ್ನೂ ಪ್ರೋತ್ಸಾಹಿಸುತ್ತಿದೆ. ರೈತರಿಗೆ ಮಾರುಕಟ್ಟೆ  ಒದಗಿಸಲೂ ಕ್ರಮ ಕೈಗೊಳ್ಳುತ್ತಿದೆ. 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.