ಹೆಜಮಾಡಿ: 7ಕಿ. ಮೀ. ವ್ಯಾಪ್ತಿಯಲ್ಲಿ ಸುಂಕ ವಿನಾಯಿತಿಗಾಗಿ ಧರಣಿ, ಮನವಿ


Team Udayavani, Jan 2, 2019, 7:35 PM IST

hejamadi-toll-2-1.jpg

ಪಡುಬಿದ್ರಿ: ಹೆಜಮಾಡಿಯ ನವಯುಗ ಟೋಲ್‌ ಪ್ಲಾಝಾ ಸುತ್ತಮುತ್ತಲ 7 ಕಿ.ಮೀ. ವ್ಯಾಪ್ತಿಯ ಹಳೆಯಂಗಡಿ, ಮೂಲ್ಕಿ, ಪಡುಬಿದ್ರಿ, ಎರ್ಮಾಳು ಪ್ರದೇಶಗಳ ಎಲ್ಲಾ ವಾಹನಗಳಿಗೆ ಟೋಲ್‌ ವಿನಾಯಿತಿಗಾಗಿ ಬುಧವಾರದಂದು ಹೆಜಮಾಡಿಯ ನವಯುಗ ಟೋಲ್‌ ಪ್ಲಾಝಾ ಬಳಿ ಮೂಲ್ಕಿಯ ಜನತೆಯೇ ಅಧಿಕವಾಗಿದ್ದು ಜತೆಗೆ ಹೆಜಮಾಡಿ ಹಾಗೂ ಪಡುಬಿದ್ರಿ ಪರಿಸರದ ಸಾರ್ವಜನಿಕರು ಸೇರಿ ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಕಾಪು ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್‌ ಧರಣಿ ನಿರತ ಮೂಲ್ಕಿ ಹಾಗೂ ಹೆಜಮಾಡಿಯ ಸಂಘಟಕರಿಂದ ಮನವಿಯನ್ನು ಸ್ವೀಕರಿಸಿ ಉಡುಪಿ ಜಿಲ್ಲಾಧಿಕಾರಿ ಅವರಿಗೆ ರವಾನಿಸುವುದಾಗಿ ತಿಳಿಸಿದ್ದಾರೆ.

ಬೆಳಗ್ಗೆ ಜಮಾಯಿಸಿದ ಹೆಜಮಾಡಿ ಟೋಲ್‌ಗೇಟ್‌ ವಿರೋಧಿ ಸಮಿತಿ ಹಾಗೂ ಮೂಲ್ಕಿಯ ನಾಗರಿಕ ಸಮಿತಿಯ ಸದಸ್ಯರು ಶಾಂತಿಯುತ ಪ್ರತಿಭಟನೆಯನ್ನು ನಡೆಸಿದರು. ತಾವು ಬಲಹೀನರೆಂದು ಜಿಲ್ಲಾಡಳಿತವು ಭಾವಿಸದಿರಲಿ. ಮುಂದಿನ ಮೂರು ದಿನಗಳಲ್ಲಿ ಸೂಕ್ತ ಉತ್ತರ ಜಿಲ್ಲಾಡಳಿತದಿಂದ ಸಿಗದಿದ್ದಲ್ಲಿ ಜ. 6ರಂದು ಮೂಲ್ಕಿಯ ಅನ್ನಪೂರ್ಣೇಶ್ವರೀ ಸಭಾಭವನದಲ್ಲಿ ಬೆಳಗ್ಗೆ 10ಗಂಟೆಗೆ ಹೋರಾಟಗಾರರ ಸಭೆ ನಡೆಯಲಿದೆ. ಅದರಲ್ಲಿ ತೀರ್ಮಾನಿಸಿ ಮೂಲ್ಕಿ ಬಂದ್‌ಗೆ ಮುಂದೆ ಕರೆ ನೀಡಲಾಗುವುದು ಎಂದು ಮೂಲ್ಕಿ ನಾಗರಿಕ ಸಮಿತಿ ಅಧ್ಯಕ್ಷ, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನಿಲ್‌ ಆಳ್ವ ಹೇಳಿದರು.

ತಲಪಾಡಿಯ ಟೋಲ್‌ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದೀಕ್‌ ತಲಪಾಡಿ ಮಾತನಾಡಿ ಜನತೆಯ ಬೇಡಿಕೆಗಳನ್ನು ಕಡೆಗಣಿಸಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವ  ಕಂಪೆನಿಗೆ ಪೊಲೀಸರು ರಕ್ಷಣೆಯನ್ನು ಒದಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಯ ಬೇಡಿಕೆಗಳನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಈಡೇರಿಸಬೇಕು. ಇಲ್ಲವೇ ಜನತೆ  ಬೀದಿಗಿಳಿದು ಹೆದ್ದಾರಿ ತಡೆ ಎಸಗಿ ಟೋಲ್‌ ಗೇಟ್‌ ಮುರಿಯುವ ಹೋರಾಟಕ್ಕೆ ಅಣಿಯಾಗಲಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸರ್‌ ಅಹಮ್ಮದ್‌ ಮಾತನಾಡಿ ನವಯುಗ ಟೋಲ್‌ ಪ್ಲಾಝಾ ಅನ್ಯಾಯಗಳ ವಿರುದ್ಧ ಜನತೆಗೆ ಸೂಕ್ತ ಸುಂಕ ವಿನಾಯಿತಿಯನ್ನು ಬಯಸಿ ಜ. 7ರಿಂದ ಪಡುಬಿದ್ರಿ ಜಂಕ್ಷನ್‌ನಲ್ಲೇ ಕರವೇ ಕಾಪು ಘಟಕದ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸುವುದಾಗಿ ಹೇಳಿದರು.

ಧರಣಿ ನಿರತರನ್ನು ಉದ್ದೇಶಿಸಿ ರಾಷ್ಟ್ರೀಯ ಹೆದ್ದಾರಿ ಟೋಲ್‌ ವಿರೋಧಿ ಸಮಿತಿಯ ಸಂಚಾಲಕ ಶೇಖರ್‌ ಹೆಜಮಾಡಿ, ಹರೀಶ್‌ ಪುತ್ರನ್‌, ಧನಂಜಯ ಅಮೀನ್‌ ಮಟ್ಟು, ರಾಮಚಂದ್ರ ನಾಯಕ್‌ ಬ್ರಹ್ಮಾವರ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ವೈ. ಸುಧೀರ್‌ಕುಮಾರ್‌, ಶರೀಫ್‌ ಮೂಲ್ಕಿ, ಜೀವನ್‌ ಶೆಟ್ಟಿ, ಸುಧಾಕರ ಕರ್ಕೇರ ಹೆಜಮಾಡಿ, ಸಾಧು ಅಂಚನ್‌, ಅಬ್ದುಲ್‌ ಅಜೀಜ್‌ ಹೆಜಮಾಡಿ ಮತ್ತಿತರರು ಮಾತನಾಡಿದರು. 

ಮೂಲ್ಕಿಯ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ ವಿರೋಧಿ ಸಮಿತಿಯ ಉಪಾಧ್ಯಕ್ಷ ಗುಲಾಂ ಮಹಮ್ಮದ್‌, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ದೇವಪ್ರಸಾದ್‌ ಪುನರೂರು, ಶೈಲೇಶ್‌, ಮುನೀರ್‌ ಕಾರ್ನಾಡ್‌, ಉದಯ ಶೆಟ್ಟಿ ಆದಿಧನ್‌, ರಾಧಿಕಾ ಕೋಟ್ಯಾನ್‌, ದೇವಣ್ಣ ನಾಯಕ್‌, ಅಬ್ದುಲ್‌ ರಜಾಕ್‌, ಗೋಪಿನಾಥ ಪಡಂಗ, ಪುತ್ತು ಬಾವ, ಹರೀಶ್‌ ಶೆಟ್ಟಿ ಪಾದೆಬೆಟ್ಟು, ಉದಯ ಕಾಂಚನ್‌ ಪಡುಬಿದ್ರಿ, ಗಣೇಶ್‌ ಕೋಟ್ಯಾನ್‌ ಪಡುಬಿದ್ರಿ, ಸುಧೀರ್‌ ಕರ್ಕೇರ ಹೆಜಮಾಡಿ, ಕಿಶೋರ್‌ ಕುಮಾರ್‌ ಎರ್ಮಾಳು ಭಾಗವಹಿಸಿದ್ದರು. 

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕುಡಿಗಳ ಸಹಿತ ಕಾರ್ಕಳ ವಿಭಾಗದ ಎಎಸ್‌ಪಿ ಕೃಷ್ಣಕಾಂತ್‌, ಡಿವೈಎಸ್ಪಿ ಸುದರ್ಶನ್‌, ಕಾಪು ಸಿಪಿಐ ಮಹೇಶ್‌ ಪ್ರಸಾದ್‌, ಪಡುಬಿದ್ರಿ ಪಿಎಸ್‌ಐ ಸತೀಶ್‌ ಎಂ.ಪಿ. ಮತ್ತಿತರ ಹಲವಾರು ಪೊಲೀಸರು ಕಾನೂನು ಸುರಕ್ಷೆಯ ಕ್ರಮಗಳಿಗಾಗಿ ಸ್ಥಳದಲ್ಲಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.