ಬ್ರೆಕ್ಸಿಟ್ನಿಂದ ಭಾರತಕ್ಕೆ ಯಾವುದೇ ಪರಿಣಾಮ ಇಲ್ಲ: ಕೊಝೊಸ್ಕಿ
Team Udayavani, Dec 8, 2018, 11:46 AM IST
ಉಡುಪಿ: ಬ್ರೆಕ್ಸಿಟ್ನಿಂದ ಭಾರತ ಮತ್ತು ಐರೋಪ್ಯ ಒಕ್ಕೂಟದ ಮೇಲೆ ಪರಿಣಾಮವಾಗದು. ಭಾರತ ದೊಂದಿಗಿನ ಸಂಬಂಧ, ಒಪ್ಪಂದ, ಬದ್ಧತೆಗಳು ಎಂದಿನಂತೆ ಮುಂದುವರಿ ಯಲಿವೆ ಎಂದು ಐರೋಪ್ಯ ಒಕ್ಕೂಟದ ಭಾರತೀಯ ರಾಯಭಾರಿ ಥಾಮಸ್ ಕೊಝೊಸ್ಕಿ ಹೇಳಿದರು.
ಅವರು ಮಣಿಪಾಲದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನವೀನ ಉದ್ಯಮಗಳಿಗೆ ಬೆಂಬಲ ಭಾರತದಲ್ಲಿ ನವೀನ ಉದ್ಯಮಗಳಿಗೆ ಐರೋಪ್ಯ ಒಕ್ಕೂಟ ಸಾಕಷ್ಟು ಬೆಂಬಲ ನೀಡುತ್ತಿದೆ. ಈಗಾಗಲೇ ಇನ್ಕ್ಯೂಬೇಟರ್ ನೆಟ್ವರ್ಕ್ ಜಾರಿಯಲ್ಲಿದ್ದು ಇದರ ಮೂಲಕ ಐರೋಪ್ಯ ದೇಶಗಳ ಸಾಕಷ್ಟು ಸಣ್ಣ ಮತ್ತು ಬೃಹತ್ ಉದ್ಯಮಗಳು ಭಾರತದಲ್ಲಿವೆ. ಭಾರತ ಸರಕಾರ ಕೂಡ ಇದಕ್ಕೆ ಸಹಕರಿಸಿದೆ. ನವೀಕರಿಸಬಹುದಾದ ಇಂಧನ, ನೀರಿನ ನಿರ್ವಹಣೆ ಮತ್ತು ಪರಿಸರ ಸಹ್ಯ ಇಂಧನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾ ಇದ್ದೇವೆ. ಕರ್ನಾಟಕದಲ್ಲೂ ಐರೋಪ್ಯ ಒಕ್ಕೂಟ ಬೆಂಬಲಿತ ಉದ್ಯಮಗಳಿವೆ ಎಂದರು.
ಭಾರತದ ಮೊದಲ ಜೀನ್ ಮಾನೇಟ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಯುರೋಪಿಯನ್ ಸ್ಟಡೀಸ್ ಸೆಂಟರ್ ಡಿ. 8ರಂದು ಮಣಿಪಾಲದಲ್ಲಿ ಉದ್ಘಾಟನೆಗೊಳ್ಳುತ್ತಿದ್ದು, ಎರಡನೇ ಸೆಂಟರ್ ಜೆಎನ್ಯುನಲ್ಲಿ ಉದ್ಘಾಟನೆ ಗೊಳ್ಳಲಿದೆ. ಈ ಸೆಂಟರ್ ಮೂಲಕ ಐರೋಪ್ಯ ದೇಶಗಳಿಗೆ ಸಂಬಂಧಿಸಿದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಾಹೆ ಕೇಂದ್ರದ 13 ಯೋಜನೆಗಳಿಗೆ ನೆರವು ನೀಡಲಿದ್ದೇವೆ ಎಂದರು. ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಯುರೋಪಿಯನ್ ಯೂನಿಯನ್ನ ಫೆಡ್ರಿಕ್ ಶಾಂಪಾ, ಅನಿಲ್ ಪಾಟ್ನಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ