CONNECT WITH US  

ಉಡುಪಿ ನಗರಸಭೆ ಸದಸ್ಯನಿಗೆ ಹಲ್ಲೆ: ದೂರು ದಾಖಲು

ಉಡುಪಿ: ಮೂವರು ವ್ಯಕ್ತಿಗಳು ತನಗೆ ಕೆನ್ನೆಗೆ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಉಡುಪಿ ನಗರಸಭೆಯ ಗುಂಡಿಬೈಲು ವಾರ್ಡ್‌ನ ಸದಸ್ಯ ರಮೇಶ್‌ ಪೂಜಾರಿ (52) ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಗಣೇಶ ಆಚಾರ್ಯ, ಪ್ರಾಣೇಶ್‌, ಪ್ರಭಾಕರ ಪೂಜಾರಿ ಆರೋಪಿಗಳು. 

ಗುಂಡಿಬೈಲು-ಕಲ್ಸಂಕ ಮಾರ್ಗದ ಶಾಲಿನಿ ಪೆಟ್ರೋಲ್‌ ಬಂಕ್‌ ಎದುರು ಭಾಗದಲ್ಲಿ ಉಡುಪಿ ನಗರಸಭೆಯ ಅಧೀನದಲ್ಲಿ ಟೆಂಡರ್‌ ಮುಖೇನ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಪ್ರಗತಿಯನ್ನು ಫೆ. 18ರ ಬೆಳಗ್ಗೆ ವೀಕ್ಷಿಸುತ್ತಿದ್ದಾಗ ಆರೋಪಿಗಳು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈಯಿಂದ ಕೆನ್ನೆ, ಬೆನ್ನು, ಎದೆಗೆ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೂ ಆರೋಪಿಗಳು ತುಂಡರಿಸಿ   ಕೊಂಡೊಯ್ದಿದ್ದಾರೆ ಹಾಗೂ ತಡೆಯಲು ಬಂದವರಿಗೂ ಬೈದು ಜೀವಬೆದರಿಕೆ ಒಡ್ಡಿದ್ದಾರೆ ಎಂದು  ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳ  ವಿರುದ್ಧ  ಕಲಂ 341, 504, 506, 394  ಹಾಗೂ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Trending videos

Back to Top