CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉತ್ತರ ಕನ್ನಡದಲ್ಲಿ 2 ಭೀಕರ ಅಪಘಾತ;10 ಬಲಿ 

ಭಟ್ಕಳದಲ್ಲಿ ನಜ್ಜುಗುಜ್ಜಾದ ಲಾರಿ

ಕಾರವಾರ: ಜಿಲ್ಲೆಯಲ್ಲಿ  ಬುಧವಾರ ಬೆಳಗ್ಗೆ 2 ಭೀಕರ ಅಪಘಾತಗಳು ಸಂಭವಿಸಿದ್ದು 10 ಮಂದಿ 
ದಾರುಣವಾಗಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಕಾರು ಲಾರಿ ಢಿಕ್ಕಿ ; 9 ಸಾವು 

ಕಾರವಾರದಿಂದ  ಶಿರಸಿ ಸಂಪರ್ಕಿಸುವ ಅರೆಬೈಲ್‌ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಯೊಂದು ಮಹೀಂದ್ರಾ ಝೈಲೋ ಕಾರಿಗೆ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 9 ಮಂದಿ  ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಮೃತ ದುರ್ದೈವಿಗಳು ರಾಯಭಾಗದ ನಿಡಗುಂದಿ ನಿವಾಸಿಗಳೆಂದು ತಿಳಿದು ಬಂದಿದ್ದು, ಕುಡುಚಿ ಮಾಜಿ ಶಾಸಕ ಶ್ಯಾಂ ಘಾಟ್ಗೆ ಸಂಬಂಧಿಕರೆನ್ನಲಾಗಿದೆ.  ತಿಳಿದು ಬಂದಿದ್ದು , ಮೃತರಲ್ಲಿ ಮೂವರು ಮಕ್ಕಳು, ಮೂವರು ಮಹಿಳೆಯರು ಸೇರಿದ್ದಾರೆ. ಕಾರಿನಲ್ಲಿದ್ದ ಓರ್ವನ ಸ್ಥಿತಿ ಚಿಂತಾಜನಕರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದು , ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

ಭಟ್ಕಳ ಸರಣಿ ಅಪಘಾತ 
ಸೋಡಿಗೆದ್ದೆ ಕ್ರಾಸ್‌ ಬಳಿ ಹೆದ್ದಾರಿಯಲ್ಲಿ ಮೀನಿನ ಲಾರಿಗೆ ಖಾಸಗಿ  ಬಸ್‌ ಢಿಕ್ಕಿಯಾಗಿದ್ದು ಈ ವೇಳೆ ಹಿಂಬದಿಯಲ್ಲಿದ್ದ ಇನ್ನೊಂದು ಬಸ್‌ ಢಿಕ್ಕಿಯಾಗಿದೆ. ಅವಘಡದಲ್ಲಿ ಲಾರಿ ಚಾಲಕ  ಅಬ್ದುಲ್ಲಾ(25) ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಬಸ್‌ಗಳಲ್ಲಿದ್ದ 15 ಮಂದಿ ಪ್ರಯಾಣಿಕರು  ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Back to Top