ಕಾಗೇರಿ ಮತ್ತೆ ಗೆಲುವಿನ ಸರದಾರ!

Team Udayavani, May 16, 2018, 12:49 PM IST

2541.jpg

ಶಿರಸಿ: ಮತ್ತೆ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಐದು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ಮುಂದುವರಿದಿದ್ದಾರೆ. ಕಳೆದ ಸಲಕ್ಕಿಂತ 15 ಸಾವಿರಕ್ಕೂ ಅಧಿ ಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶಿರಸಿ ಕ್ಷೇತ್ರದಲ್ಲಿ ಮೂವರೂ ಸಂಭಾವಿತ ಅಭ್ಯರ್ಥಿಗಳೇ ಆಗಿದ್ದರು. ಕಾಗೇರಿ ಬಿಜೆಪಿಯಿಂದ, ಭೀಮಣ್ಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರ ನಡುವೆ ತ್ರಿಕೋನ ಸ್ಪರ್ಧೆ ಎಂದೇ ಹೇಳಲಾಗಿತ್ತು. ಆದರೆ, ಮತದಾರರು ಚಿತ್ರಣ ಬದಲಾಯಿಸಿದ್ದಾರೆ. ಈ ಅವಧಿಯಲ್ಲಿ ಕೆಲಸ ಆಗಿಲ್ಲ ಎಂಬ ಅಸಮಾಧಾನಗಳು ಇದ್ದ ಹುಲೇಕಲ್‌ ಜಿಪಂ ಕ್ಷೇತ್ರದಲ್ಲೂ ಕಾಗೇರಿ ಅವರ ಗೆಲುವಿಗೆ ಲೀಡ್‌ ನೀಡಿದೆ. ಅಲ್ಲಿಂದ ಶುರುವಾದ ಮತ ಬೇಟೆ ಇಡೀ ಕ್ಷೇತ್ರದ 264 ಮತಗಟ್ಟಗಳಲ್ಲೂ ಮುನ್ನಡೆಗೆ ನೆರವಾಗಿದೆ. ಸಿದ್ದಾಪುರ ತಾಲೂಕಿನಲ್ಲೂ ಕಾಗೇರಿ ಲೀಡ್‌ ಹೆಚ್ಚಿಸಲು ಕಾರಣವಾಗಿದೆ.

ಸಮೀಕರಣ ಆಗಲಿಲ್ಲ!: ಜೆಡಿಎಸ್‌ ತನ್ನೊಂದಿಗೆ ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ, ಬಿಜೆಪಿ ಮೂರನೇ ಸ್ಥಾನಕ್ಕೆ ಪೈಪೋಟಿ ಎಂದಿತ್ತು. ನಾಮಧಾರಿ ಮತಗಳು ಅವರ ಸಮುದಾಯದ ಅಭ್ಯರ್ಥಿಗೆ ವಾಲುತ್ತವೆ, ಹವ್ಯಕರ ಮತಗಳು ಒಡೆಯುತ್ತವೆ ಎಂಬ ಲೆಕ್ಕಾಚಾರವೂ ಇತ್ತು. ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದೂ ಹೇಳಲಾಗುತ್ತಿತ್ತು. ಆದರೆ, ಇದ್ಯಾವುದೂ ನಡೆಯಲೇ ಇಲ್ಲ.

ಕಾಗೇರಿಗೆ ಅವರೊಂದಿಗೆ ಇರುವ ಸಜ್ಜನಿಕೆ ಪ್ಲಸ್‌ ಆದರೆ, ಅಲೆಗಳ ಓಡಾಟವೂ ನೆರವಾಯಿತು. ಭೀಮಣ್ಣರ ಸೋಲಿಗೆ ವಿಳಂಬ ಟಿಕೆಟ್‌ ನೀಡಿಕೆ, ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ಹೆಚ್ಚಿದ್ದೂ ಕಾರಣವಾಯಿತು. ಉತ್ತರ ಪ್ರದೇಶ, ಗುಜರಾತ್‌ ಜೊತೆ ಕರ್ನಾಟಕವೂ ಸೇರಿ ಉತ್ತರ ಕನ್ನಡಕ್ಕೆ ಒಂದು ಸ್ಥಾನದಿಂದ ಮೂರಕ್ಕೇರಿಸಿತು! ಶಿರಸಿಗೆ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರು ಬರದೇ ಇರುವುದು, ಬಿಜೆಪಿಗೆ ಯೋಗಿ ಆದಿತ್ಯನಾಥ, ಯಶ್‌, ಕೇಂದ್ರ ಸಚಿವ ಅನಂತಕುಮಾರ, ಅನಂತಕುಮಾರ ಹೆಗಡೆ ಅವರೂ ಬಂದಿದ್ದು ಬಲ ಹೆಚ್ಚಿಸಿತು.

ಕೈಕೊಟ್ಟ ಕರೆಂಟ್‌: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಮಳೆ ಗಾಳಿ ಜೋರಾಗಿ ಸೋಮವಾರ ನಡೆದಿತ್ತು. ಇದರ ಪರಿಣಾಮ ಎಂಬಂತೆ ಮಂಗಳವಾರ ಕರೆಂಟ್‌ ಅರ್ಧ ಗಂಟೆಯೂ ಬಂದದ್ದು ನಿಲ್ಲಲಿಲ್ಲ. ಈ ಕಾರಣದಿಂದ ಟಿವಿ ಮುಂದೆ ಕುಳಿತು ರಾಜ್ಯದ, ಜಿಲ್ಲೆಯ ಚುನಾವಣಾ ಫಲಿತಾಂಶ ಪಡೆದುಕೊಳ್ಳಲು ವಿಶೇಷವಾಗಿ ಗ್ರಾಮೀಣ ಭಾಗದ ಮತದಾರರಿಗೆ ಹಿನ್ನಡೆ ಉಂಟಾಯಿತು.

ಕೆಲವರು ಮೊಬೈಲ್‌ ಬಳಸಿ ಟಿವಿಗಳ ಲೈವ್‌ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್‌ ಪವರ್‌ ಬಳಸಿ ಗ್ರಾಮಸ್ಥರು ಟಿವಿ ನೋಡಿದರು.

ಕಾರ್ಯಕರ್ತರ ದಂಡು: ಇಲ್ಲಿನ ರಾಘವೇಂದ್ರ ಮಠದ ಬಳಿ ಇರುವ ಶಾಸಕ ವಿಶ್ವೇಶ್ವರ ಹೆಗಡೆ ಕಚೇರಿಯಲ್ಲಿ ಕಾರ್ಯಕರ್ತರು ಒಟ್ಟಾಗಿ ಕುಳಿತು ಟಿವಿ ವೀಕ್ಷಿಸಿದರು. ಮೋದಿಗೆ, ಕಾಗೇರಿಗೆ ಜೈ ಎಂದರೆ, ಬಿಜೆಪಿ ಹವಾ ಎಬ್ಬಿಸಿದ ಪ್ರಧಾನಿಗೆ ನಮೋ ಎಂದರು. ಸಹಕಾರಿ ಶಾಂತಾರಾಮ  ಹೆಗಡೆ ಅವರ ಕಚೇರಿ ಆವಾರದಲ್ಲೂ ಮತದಾರರು, ಪ್ರಮುಖರು ಟಿವಿ ನೋಡಿದರು.

ಏನಾದೀತು?: ಕಾಗೇರಿ ಗೆಲುವಿಗೆ ಡಬಲ್‌ ಧಮಾಕ ಆಗಬಹುದೇ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಹಿನ್ನೆಲೆಯಲ್ಲಿ ಏನಾಗಬಹುದು ಎಂಬ ಗೊಂದಲ ಉಂಟಾಯಿತು. ಬಿಜೆಪಿ ನೇತೃತ್ವದ ಸರಕಾರ ಆದರೆ ಮಾತ್ರ ಶಿರಸಿಗೆ ಮಂತ್ರಿ ಸ್ಥಾನ ಬಹುತೇಕ ಖಚಿತವಿತ್ತು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜೊತೆ ರಾಜ್ಯ ಸರಕಾರದಲ್ಲಿ ಕೂಡ ಹಿರಿಯ ಸಚಿವರಾಗಿ ಕಾಗೇರಿ ಅ ಧಿಕಾರ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ರಾಜ್ಯ, ರಾಷ್ಟ್ರ ರಾಜಕಾರಣದ ಚರ್ಚೆ ಆರಂಭಿಸಿದರು. ಕಾಂಗ್ರೆಸ್‌ ಜೆಡಿಎಸ್‌ ಅಧಿಕಾರ ಹಂಚಿಕೊಂಡರೆ ಕಾಗೇರಿಗೆ ಮಂತ್ರಿಸ್ಥಾನ ದೂರವಾಗಲಿದೆ ಎಂದೂ ಚರ್ಚೆಯಲ್ಲಿ ಮಾತನಾಡಿಕೊಂಡರು.

ಮತ ಮಾಹಿತಿ

ಕೆಲವರು ಮೊಬೈಲ್‌ ಬಳಸಿ ಟಿವಿಗಳ ಲೈವ್‌ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್‌ ಪವರ್‌ ಬಳಸಿ ಗ್ರಾಮಸ್ಥರು ಟಿವಿ ನೋಡಿದರು

ಗೆಲುವಿಗೆ ಕಾರಣವೇನು?

ಪ್ರಧಾನಿ ನರೇಂದ್ರ ಮೋದಿ ಅಲೆ
ಕಾಗೇರಿ ಸಚಿವರಾಗಿದ್ದಾಗ ಮಾಡಿದ ಶೈಕ್ಷಣಿಕ ಅಭಿವೃದ್ಧಿ
ಪ್ರಖರ ಹಿಂದುತ್ವ
ಆರ್‌ಎಸ್‌ಎಸ್‌ ಕಾರ್ಯಕರ್ತರ
ಪ್ರಯತ್ನ
ಪೇಜ್‌ ಪ್ರಮುಖ ನಡೆ ವಕೌìಟ್‌

ಸೋಲಿಗೆ ಕಾರಣವೇನು?
ವಿಳಂಬವಾಗಿ ಅಭ್ಯರ್ಥಿ ಘೋಷಣೆ
ಜಿಲ್ಲಾಧ್ಯಕ್ಷರೂ ಅಭ್ಯರ್ಥಿ, ನಿರ್ವಹಣಾ ಒತ್ತಡ ಹೆಚ್ಚಳ
ಜೆಡಿಎಸ್‌ ಕಾಂಗ್ರೆಸ್‌ಗೆ ಒಡೆದ ಬಂಗಾರಪ್ಪ ಅಭಿಮಾನಿಗಳ ಮತ
ಸಮೀಕರಣಗೊಳ್ಳದ ನಾಮಧಾರಿ ಮತಗಳು
ಕೊನೇ ದಿನಗಳಲ್ಲಿ ವೇಗ ಪಡೆಯದ ಹುರುಪು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.