CONNECT WITH US  

ಹೊನ್ನಾವರ:ಭೀಕರ ಅಪಘಾತಕ್ಕೆ ಬೈಕ್‌ನಲ್ಲಿದ್ದ ಒಂದೇ ಕುಟುಬದ ಮೂವರು ಬಲಿ

ಹೊನ್ನಾವರ: ತಾಲೂಕಿನ ಮಂಕಿಯ  ರಾಷ್ಟ್ರೀಯ ಹೆದ್ದಾರಿ 66 ರ ಬೈಲೂರು ಎಂಬಲ್ಲಿ  ಟೆಂಪೋವೊಂದು ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅವಘಡ ಮಂಗಳವಾರ ಮಧ್ಯಾಹ್ನ ನಡೆದಿದೆ. 

ಓರ್ವ ಯುವತಿ ಮತ್ತು ಇಬ್ಬರು ಯುವಕರು ಮೃತ ಪಟ್ಟಿದ್ದು, ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಕುಮಟಾದವರು ಎನ್ನಲಾಗಿದೆ. 

ಅಪಘಾತದ ತೀವ್ರತೆಗೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿಯಾಗಿದೆ. 

ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Trending videos

Back to Top