ಶಾಲೆ ಸ್ಥಾಪಿಸಿದವರನ್ನು ಸದಾ ಸ್ಮರಿಸಿ


Team Udayavani, Jan 7, 2019, 11:49 AM IST

7-january-21.jpg

ಜೋಯಿಡಾ: ವಿದ್ಯಾರ್ಥಿ ಶಿಕ್ಷಕರನ್ನು ಸ್ಮರಿಸುತ್ತಾನೋ ಅವನು ಉನ್ನತ ಮಟ್ಟದಲ್ಲಿ ಬೆಳೆಯುತ್ತಾನೆ. ಶಿಕ್ಷಕರನ್ನು ನೆನೆಸುವುದು, ಗೌರವಿಸಕೊಂಡು ಹೋಗುವುದು ಉತ್ತಮ ಸಮಾಜದ ಲಕ್ಷಣ. ಇದನ್ನು ಸದಾಕಾಲ ಮುಂದುವರೆಸಿಕೊಂಡು ಹೋಗಬೇಕೆಂದು ಎಂಎಲ್‌ಸಿ ಎಸ್‌.ಎಲ್‌. ಘೋಕ್ಲೃಕರ್‌ ಹೇಳಿದರು.

ಅವರು ಕುಂಬಾರವಾಡಾ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು. 111 ವರ್ಷಗಳ ಹಿಂದೆ ಕುಂಬಾರವಾಡಾ ಶಾಲೆಯನ್ನು ಯಾರು ಕಟ್ಟಿ ಬೆಳೆಸಿದ್ದಾರೋ ಅವರನ್ನು ಸ್ಮರಿಸುವುದು ಬಹುಮುಖ್ಯ. ಅವರನ್ನು ನಾನು ಗೌರವಿಸುತ್ತೇನೆ. ಕುಂಬಾರವಾಡಾ ಹಬ್ಬ ಈ ವರ್ಷದಿಂದ ಆರಂಭಗೊಂಡಿದೆ. ಇದನ್ನು ಪ್ರತಿವರ್ಷ ನಡೆಸಿಕೊಂಡು ಹೋಗಬೇಕು. ಇದಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಪುರುಷೋತ್ತಮ ಕಾಮತ್‌, ಹಿಂದಿನ ಶಿಕ್ಷಣ ವ್ಯವಸ್ಥೆಯಷ್ಟು ಉತ್ತಮ ಈಗಿನ ದಿನಮಾನದಲ್ಲಿಲ್ಲ. ಹಿಂದೆ ನಮ್ಮ ಗುರುಗಳು ನೀಡಿದ ಕಠಿಣ ಶಿಕ್ಷಣ ಪದ್ಧತಿಯಿಂದಾಗಿ ಇಂದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದೇವೆ. ಶಿಕ್ಷಕರನ್ನು ಗೌರವಿಸಿ ಅವರ ಮಾರ್ಗದಲ್ಲಿ ನಡೆದು ಸಾಧನೆ ಮಾಡಿ. ಎಲ್ಲರೂ ಎತ್ತರಕ್ಕೆ ಏರಿ ಯಶಸ್ಸಿನ ಗುರಿ ಸಾಧಿಸಿ ಎಂದರು.

ಮುಖ್ಯ ಅತಿಥಿ ಡಾ| ಜಯಾನಂದ ಡೇರೆಕರ್‌ ಮಾತನಾಡಿ, ತಾಲೂಕು ಜೀವ ವೈವಿದ್ಯದಲ್ಲಿ ಜಗತ್ತಿನಲ್ಲಿ 7ನೇ ಸ್ಥಾನದಲ್ಲಿದೆ. ಇದು ಪ್ರವಾಸೋದ್ಯಮದ ಸ್ವರ್ಗ. ಕಾಳಿ ನದಿ ನಾಡಿಗೆಲ್ಲ ಬೆಳಕುನೀಡಿದ್ದು, ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಇಲ್ಲಿನ ಪ್ರಕೃತಿ ದೇವರ ಕೊಡುಗೆ. ಹಾಗಾಗಿ ದೇವರು ನಮ್ಮೆಲ್ಲರಿಗೂ ಶಕ್ತಿ ಸಾಮರ್ಥ್ಯ ನೀಡಿದ್ದು, ಬೇರೆ ಎಲ್ಲಿಯೂ ಹೋಗದೆ ನಾವು ಇಲ್ಲಿಯೇ ಪ್ರಕೃತಿಯಡಿ ಬೆಳೆದು ಅಭಿವೃದ್ಧಿ ಹೊಂದುವ ಮೂಲಕ ತಾಲೂಕಿನ ಹೆಸರನ್ನು ಮುನ್ನಡೆಸೋಣ ಎಂದರು. ಬಿಇಒ ಹಿರೇಮಠ ಮಾತನಾಡಿ, ತಾಲೂಕು ಶಿಕ್ಷಣದಲ್ಲಿ ಸದಾ ಅಭಿವೃದ್ಧಿಯತ್ತ ಸಾಗುತ್ತಿದ್ದು, ಇದಕ್ಕೆ ಕುಂಬಾರವಾಡಾದಂತ ಶಾಲೆಗಳ ಕೊಡುಗೆ ಅಪಾರವಾಗಿದೆ. ಇಲ್ಲಿನ ಮುಂದಿನ ಪೀಳೆಗೆ ಶಿಕ್ಷಣ ಅಭಿವೃದ್ಧಿ ಪಥದತ್ತ ಸಾಗಲಿದೆ. ಇದಕ್ಕೆ ನಮ್ಮ ಇಲಾಖೆಯ ಸಹಕಾರ ಸದಾ ಇರಲಿದೆ ಎಂದರು. ಜಿ.ಪಂ ಸದಸ್ಯ ರಮೇಶ ನಾಯ್ಕ, ತಾಪಂ ಅಧ್ಯಕ್ಷೆ ನೈಮದಾ ಪಾಕ್ಲೃಕರ್‌, ತಾಪಂ ಸದಸ್ಯ ಸುರೇಶ ಬಂಗಾರೆ, ತಾಪಂ ಇಒ ತಾಲಾಜಿ ವಾಡಿಕರ್‌ ಮುಂತಾದವರು ಪಾಲ್ಗೊಂಡಿದ್ದರು.

ಕರ್ನಾಟಕ ಸರಕಾರ ಹೊಸ ಶಿಕ್ಷಣ ನೀತಿಯಡಿ ಈಗಾಗಲೇ ಘೋಷಿಸಿರುವ (ಸಂಯುಕ್ತ ಪ್ರೌಢಶಾಲೆ)
ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ತಾಲೂಕಿನ ಕುಂಬಾರವಾಡಾದಲ್ಲಿ ನಡೆಯಲಿದೆ. ಇದರ ಅಭಿವೃದ್ಧಿಗಾಗಿ 3 ಕೋಟಿ ರೂ. ಸರಕಾರ ನೀಡಲಿದ್ದು, ಕುಂಬಾರವಾಡಾ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಲಿದೆ.
 ಎಸ್‌.ಎಲ್‌. ಘೋಕ್ಲೃಕರ್‌, ಎಂಎಲ್‌ಸಿ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.