ಅಪ್ಸರಕೊಂಡ ಸೌಂದರ್ಯ ಬೆಳಗಿಸಲಿರುವ ನವೀಕರಣ ಮಠಮಂದಿರ

Team Udayavani, Jan 12, 2019, 11:45 AM IST

12-january-24.jpg

ಹೊನ್ನಾವರ: ಸ್ವಚ್ಛ, ನೇರ ಐದು ಕಿಮೀ ಉದ್ದದ ಸಮುದ್ರ ತೀರ, ಅದಕ್ಕೆ ಹೊಂದಿಕೊಂಡಿರುವ ಎತ್ತರದ ಮ್ಯಾಂಗನೀಸ್‌ ಗುಡ್ಡ, ಓರೆಯಲ್ಲಿ ಶ್ರೀ ಉಗ್ರನರಸಿಂಹ, ಶ್ರೀ ಉಮಾಂಬಾಗಣಪತಿ ದೇವಸ್ಥಾನ ಹಾಗೂ ಗುರುಮೂರ್ತಿಗಳು. ಇನ್ನೊಂದು ಬದಿಗೆ ವಿಶಾಲ ಹಸಿರು ಚಿಮ್ಮುವ ಗದ್ದೆ, ತೋಟಗಳು. ಇಂತಹ ಅಪೂರ್ವ ನೈಸರ್ಗಿಕ ಸೌಂದರ್ಯಕ್ಕೆ ಅರಣ್ಯ ಇಲಾಖೆ ಪ್ರವಾಸೋದ್ಯಮದ ಸೌಲಭ್ಯ ಒದಗಿಸಿಕೊಟ್ಟು ಜನಾಕರ್ಷಕ ಮಾಡಿತು.

ಈಗ ಶ್ರೀ ರಾಘವೇಶ್ವರ ಶ್ರೀಗಳ ಮಾರ್ಗದರ್ಶ ನದಲ್ಲಿ ಮಠವನ್ನು ಶಿಲಾಮಯವಾಗಿ ಶಿಲ್ಪಶಾಸ್ತ್ರದಂತೆ ನಿರ್ಮಿಸಲಾಗಿದ್ದು, ಗುರುಮೂರ್ತಿ ಗಳಿಗೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದೆ. 1954ರಲ್ಲಿ ರಾಮಚಂದ್ರಾಪುರ ಮಠದ 35ನೇ ಪೀಠಾಧಿಪತಿಗಳಾದ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ಅಪ್ಸರಕೊಂಡವನ್ನು ಶಾಖಾಮಠವಾಗಿ ಸ್ವೀಕರಿಸಿದ್ದರು. ಸ್ಥಳೀಯರು ಶಂಭು ಹೆಗಡೆ ಮುಖಂಡತ್ವದಲ್ಲಿ ಮಠವನ್ನು ಕಾಯ್ದುಕೊಂಡು ಬಂದರು. ನವೀಕರಣಮಾಡಿಸಿ ಸ್ಥಿರಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದರು. ನಂತರ ಉಂಟಾದ ದೋಷಗಳನ್ನು ಸರಿಪಡಿಸಿಕೊಂಡು ಮಠಾಯತನ ಪದ್ಧತಿಯಂತೆ ಪುನಃ ಚರಮೂರ್ತಿ ಪ್ರತಿಷ್ಠಾಪನೆಗಾಗಿ ಸಿದ್ಧತೆಯಾಗಿದೆ.

ಜ. 17ರಿಂದ 19ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಜ. 17ರಂದು ನವಚಂಡಿಹವನ, ವಾಸ್ತುಹವನ, ದೇವರ ಸಪ್ತಾದಿವಾಸ ಕಾರ್ಯಕ್ರಮಗಳಿವೆ. ಜ. 18ರಂದು ಶ್ರೀಗಳು ಸಪರಿವಾರ ಉಗ್ರ ನರಸಿಂಗ, ಉಮಾಂಬಾಗಣಪತಿ ಹಾಗೂ ಗುರುಮೂರ್ತಿಗಳ ಪ್ರತಿಷ್ಠಾಪನೆ, ಶಿಖರ ಕಲಶ ಪ್ರತಿಷ್ಠೆ, ಪ್ರಾಣಪ್ರತಿಷ್ಠೆ, ಮೊದಲಾದ ಕಾರ್ಯಕ್ರಮಗಳನ್ನು ನೆರವೇರಿಸುವರು. ಜ. 19ರಂದು ಬ್ರಹ್ಮಕಲಶಾಭಿಷೇಕ, ಪೂರ್ಣಾಹುತಿ ನಡೆಯಲಿದೆ. ಜ. 14ರಿಂದ 19ರವರೆಗೆ ಚತುರ್ವೇದ ಪಾರಾಯಣ ನಡೆಯಲಿದೆ.

ಜ. 16ರಂದು ಸಂಜೆ ಆಗಮಿಸುವ ರಾಘವೇಶ್ವರ ಶ್ರೀಗಳು ಜ. 17ರಂದು 6-8ರವರೆಗೆ ರಾಮಪದ ಕಾರ್ಯಕ್ರಮ ನಡೆಸುವರು. ಜ. 18ರಂದು 3ಕ್ಕೆ ಶ್ರೀಗಳ ಅನುಗ್ರಹ ಸಭೆ ನಡೆಯಲಿದೆ. ನಂತರ ಶ್ರೀಪಾದ ಭಟ್ ಕಡತೋಕಾ ಇವರ ಗೀತರಾಮಾಯಣ, ಜ. 19ರಂದು ರಾತ್ರಿ ಯಕ್ಷಗಾನವಿದೆ. ಹೊನ್ನಾವರ ಮಂಡಲದ ಪ್ರಧಾನ ಗುರಿಕಾರ ವೇ| ಸುಬ್ರಹ್ಮಣ್ಯ ಭಟ್ಟರ ಮಾರ್ಗದರ್ಶನದಲ್ಲಿ ಸೀಮೆಯ ಪ್ರಮುಖರಾದ ಸುಬ್ರಾಯ ಹೆಗಡೆ ಮಾನ್ಯ, ಪಿ.ಎಸ್‌. ಭಟ್ ಉಪ್ಪೋಣಿ ಮೊದಲಾದವರಿಂದ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ಶರಾವತಿ ಹುಟ್ಟಿದ ಅಂಬುತೀರ್ಥದ ಬಳಿ ರಾಮಚಂದ್ರಾಪುರ ಮಠವಿದೆ. ಶರಾವತಿ ಸಂಗಮವಾಗುವ ಅಪ್ಸರಕೊಂಡದ ಬಳಿ ಮಠದ ಶಾಖೆ ಇದೆ ಎಂದು ರಾಘವೇಶ್ವರ ಶ್ರೀಗಳು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅವರ ಬಯಕೆಯಂತೆ ಶಿಷ್ಯರು, ಭಕ್ತರು ಮಠಕ್ಕೆ ಹೊಸ ಕಳೆಬರುವಂತೆ ಮಾಡಿದ್ದಾರೆ.

ಹಲವು ಕನ್ನಡ, ತಮಿಳು ಸಿನಿಮಾ ಚಿತ್ರೀಕರಣಗೊಂಡ, ಚಿತ್ರವಿಚಿತ್ರ ಗುಹೆಗಳುಳ್ಳ, ಮಿರಿಮಿರಿ ಮಿಂಚುವ ಗುಡ್ಡಗಳನ್ನೊಳಗೊಂಡ ಅಪ್ಸರಕೊಂಡದಲ್ಲಿ ನಿಸರ್ಗ, ಆಧ್ಯಾತ್ಮ ಸಮ್ಮಿಲನಗೊಂಡು ದೈವೀ ಅನುಭೂತಿ ನೀಡುವ ಅಪರೂಪದ ಕ್ಷೇತ್ರವಾಗಿ ಪ್ರವಾಸಿಗರನ್ನು, ಭಾವುಕರನ್ನು ಸಮಾನವಾಗಿ ಸೆಳೆಯುತ್ತಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.