CONNECT WITH US  

ವಾಸ್ತು Tips : ಮನಮನಕೆ ಹಿಡಿವ ಕನ್ನಡಿ

ಮನೆಯೊಳಗಿನ ಮನಸ್ಸುಗಳು ಅಧೈರ್ಯ ಅನುಮಾನ, ಅಸ್ವಾಸ್ಥ್ಯಗಳೊಂದಿಗೆ ಕೂಡಿರಬಾರದು.

ಎಲ್ಲರಿಗೂ ತಿಳಿದಂತೆ ಈಶಾನ್ಯ ದಿಕ್ಕಿನಿಂದಲೇ ಮನೆಯ ಅಡಿಗಲ್ಲನ್ನು ಇಡುವ ಶುಭಕಾರ್ಯ ನೆರವೇರಬೇಕಾದುದು ಮುಖ್ಯವೆಂಬುದು ಸರಿ. ಈ ಶುಭ ವಿಚಾರವನ್ನು ಪೂರ್ಣಗೊಳಿಸುವ ವ್ಯಕ್ತಿ ಈ ಅಡಿಗಲ್ಲನ್ನು ಇಡುವ ಕ್ರಿಯೆ ಪೂರ್ವವನ್ನು ದಿಟ್ಟಿಸಿಕೊಂಡು ಪೂರೈಸಬೇಕು. ಅಡಿಗಲ್ಲನ್ನು ಜೋಡಿಸುವ ಸಂದರ್ಭದಲ್ಲಿ ನವರತ್ನಗಳನ್ನು ಭೂವಲಯದಲ್ಲಿ ಇರಿಸಬೇಕು. ಶಕ್ತ್ಯಾನುಸಾರವಾಗಿ ನವರತ್ನಗಳ ಬೆಲೆ ಇರಲಿ. ಅನಾವಶ್ಯಕವಾದ ದುಂದು ವೆಚ್ಚಗಳನ್ನು ಮಾಡಬೇಡಿ. ನವರತ್ನಗಳ ಶೋಭೆ ಮಣ್ಣ ತಳಹದಿಯಿಂದ ಉಕ್ಕುವ ಸ್ಪಂದನಗಳಿಂದಾಗಿ ಮನೆಯ ನಿವಾಸಿ, ಅತಿಥಿ, ಪ್ರತಿ ಜೀವಿಗೂ ಸಕಾರಾತ್ಮಕವಾದ ಮನೋ ಬಲವನ್ನು ಅವರವರಿಗೆ ತಕ್ಕಂತೆ ಮಾಡಿಸುತ್ತದೆ. 

ಮನೆಯೊಳಗಿನ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ. ಮಂತ್ರಗಳ ಪಠಣವೇ ಒಂದು ತೆರನಾದ ಶಬ್ದಾತೀತ ಅನುಭವವನ್ನು ನಮ್ಮೊಳಗೆ ದ್ರವಿಸುತ್ತದೆ. ಹೀಗಾಗಿ ಮನೆಯ ಒಳಾಂಗಣದ ಸರಳ ಸುಸಜ್ಜಿತ ಅಂಶಗಳು ಸಾಂದ್ರಗೊಳ್ಳುವಂತಿರಲಿ.

Trending videos

Back to Top