CONNECT WITH US  

ಹೋಟೆಲ್‌, ರೆಸ್ಟೋರೆಂಟ್‌ಗಳ ವಾಸ್ತು ಹೀಗಿರಬೇಕು...

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು ಸೂಕ್ತ. ಶುಚಿತ್ವದ ಬಗೆಗೆ ಬೆಳಕು ಹಾಗೂ ಉತ್ತಮವಾದ ಗಾಳಿ, ಫ್ಯಾನ್‌,  ಸುಂದರ ಕೆತ್ತನೆಯ ಡೈನಿಂಗ್‌ ಟೇಬಲ್‌, ಕುರ್ಚಿ ಇವುಗಳ ಹಾಸುಗಳು ಕೂಡ ರೆಸ್ಟೋರೆಂಟ್‌ ಮಾಲೀಕರ ಜನ್ಮಕುಂಡಲಿಯ ಪ್ರಮುಖ ಗ್ರಹಗಳ ಆಧಾರದಿಂದ ನಿಯೋಜಿತಗೊಂಡ ಬಣ್ಣದಲ್ಲಿ ಇರುವುದು ಹೆಚ್ಚು ಸೂಕ್ತ.

ಹೋಟೆಲ್‌, ರೆಸ್ಟೋರೆಂಟ್‌ಗಳ ವಾಸ್ತು ವಿಚಾರದಲ್ಲಿ ಅತಿ ಮುಖ್ಯವಾಗಿರುವುದು ಇವು. ಮುಖ್ಯವಾಗಿ ಊಟದ ಸ್ಥಳ, ವಿದ್ಯುತ್‌ ಉಪಕರಣಗಳು ಅಡುಗೆ ಮನೆ, ವಸ್ತು ಸಂಗ್ರಹಾರಣ ಉಗ್ರಾಣ, ಕೈ ತೊಳೆಯುವ ಪಾತ್ರೆ, ಶೌಚಾಲಯಗಳ ಬಗ್ಗೆ ಜಾಗ್ರತೆ ವಹಿಸುವುದು.

ವಸ್ತು ಸಂಗ್ರಹಣೆ: ಕಾಳುಕಡಿ, ಧಾನ್ಯ, ಕಾಫಿ ಚಹಾಪುಡಿ, ಮಸಾಲೆ ಪದಾರ್ಥಗಳು, ತರಕಾರಿಗಳು ಎಣ್ಣೆ ಖಾದ್ಯ, ಹಿಟ್ಟು ಅಥವಾ ಇನ್ನೇನೇ ಸಸ್ಯ ಸಂಬಂಧಿ ಸರಕುಗಳು ವಸ್ತು ಸಂಗ್ರಹಣಾ ಉಗ್ರಾಣದಲ್ಲಿ ಇರಬೇಕಾದರೆ, ಇದು ಮುಖ್ಯವಾಗಿ ನೈಋತ್ಯ ಭಾಗದಲ್ಲಿ ಅಥವಾ ದಕ್ಷಿಣದಲ್ಲಿ ಸಂಗ್ರಹಿಸಲ್ಪಡಬೇಕು. ಯಮಧರ್ಮ ಅಥವಾ ರಾಕ್ಷಸ ಘಟಕ ಸಂಪನ್ನವಾಗಿಬಿಡುತ್ತದೆ. ಆದ್ದರಿಂದ ಈ ಭಾಗದಲ್ಲಿ ಇಟ್ಟರೆ ಇವು ನೈಋತ್ಯ ದೇವತೆಯ ಹಿಡಿತದಲ್ಲಿ ಸುರಕ್ಷಿತ ಎಂಬುದು ಭಾವನೆ. 

ಭೋಜನ ಗೃಹ, ಹಜಾರ ವಿಸ್ತಾರ ವ್ಯಾಪ್ತಿ
ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು  ಸೂಕ್ತ. ಶುಚಿತ್ವದ ಬಗೆಗೆ ಬೆಳಕು ಹಾಗೂ ಉತ್ತಮವಾದ ಗಾಳಿ, ಫ್ಯಾನ್‌ ಸುಂದರ ಕೆತ್ತನೆಯ ಡೈನಿಂಗ್‌ ಟೇಬಲ್‌, ಕುರ್ಚಿ ಇವುಗಳ ಹಾಸುಗಳು ಕೂಡ ರೆಸ್ಟೋರೆಂಟ್‌ ಮಾಲೀಕರ ಜನ್ಮಕುಂಡಲಿಯ ಪ್ರಮುಖ ಗ್ರಹಗಳ ಆಧಾರದಿಂದ ನಿಯೋಜಿತಗೊಂಡ ಬಣ್ಣದಲ್ಲಿ ಇರುವುದು ಹೆಚ್ಚು ಸೂಕ್ತ.  ಉತ್ತರ/ ಪೂರ್ವ ಭಾಗಗಳನ್ನು ಉಪಯೋಗಿಸಿಕೊಳ್ಳಲು ಏನೂ ಅಡ್ಡಿ ಇಲ್ಲ. ಪೂರ್ವ ಭಾಗದಲ್ಲಿ ಸುಡು ಬಿಸಿಲು ನುಗ್ಗದ ಹಾಗೆ ಜಾಗ್ರತೆ ವಹಿಸಬೇಕು. ಅಂತೂ ಗಿರಾಕಿಗಳು ತಿಂಡಿ/ ಭೋಜನ ಸ್ವೀಕರಿಸುವಾಗ ಪೂರ್ವ ಪಶ್ಚಿಮ ಉತ್ತರಗಳನ್ನು ದೃಷ್ಟಿಸುವಂತೆ ಮುತುವರ್ಜಿ ವಹಿಸಬೇಕು. 

ವಿದ್ಯುತ್‌ ಉಪಕರಣಗಳು, ಫ್ರಿಡ್ಜ್ ತಂಪು ಗಾಳಿಗಾಗಿನ ವ್ಯವಸ್ಥೆ, ಯಂತ್ರಚಾಲಿತ ಬೀಸುಗಲ್ಲು ವಿದ್ಯುತ್‌ ಪೂರೈಕೆ ನಿಂತಾಗ ಬೇಕಾದ ಡೈನಮೋ ಉಪಕರಣಗಳು ಪಶ್ಚಿಮ ಭಾಗವನ್ನು ಆಕ್ರಮಿಸಿಕೊಳ್ಳಲಿ. ಸಮಸ್ಯೆ ಇಲ್ಲ.  ಇಡೀ ಕಟ್ಟಡದ ಹೊರ ಪಶ್ಚಿಮ ಸುತ್ತನ್ನು ಬಳಸಿಕೊಂಡರೂ ಸರಿಯೇ ವಿದ್ಯುತ್‌ ವಿಚಾರದಲ್ಲಿ ಶಕ್ತಿಗೆ ಧನ್ಯತೆ.  ಆಗ್ನೇಯ ಭಾಗದಲ್ಲಿ ಕಿಚನ್‌ ಇರುವುದೇ ಲೇಸು. ಇನ್ನೇನೋ ಕಾರಣದಿಂದಾಗಿ ಇದಕ್ಕೆ ತೊಂದರೆ ಇದ್ದಲ್ಲಿ ವಾಯುವ್ಯದ ಭಾಗವನ್ನು ಉಪಯೋಗಿಸಬಹುದು. 

ರೆಸ್ಟೋರೆಂಟ್‌ ಅಥವಾ ಹೋಟೆಲಿನ ಜನರೇಟರ್‌ ವಿದ್ಯುತ್‌ ಸ್ವಿಚ್‌ ಬೆಂಕಿಗೆ ಸಂಬಂಧಿಸಿದ ಸ್ಟೌವ್‌, ಸಿಲಿಂಡರಿನ ಗ್ಯಾಸ್‌ ಕಂಟೇನರ್‌ ಇತ್ಯಾದಿ ಆಗ್ನೇಯ ದಿಕ್ಕಿನಲ್ಲಿ ಇಡಲ್ಪಡಲಿ. ರೆಸ್ಟೋರೆಂಟಿನ ಮುಖ್ಯ ಪ್ರವೇಶ ದ್ವಾರವು ಆರೋಹಣವಿದ್ದಲ್ಲಿ ವಿಸ್ತೃತ ಉತ್ಛಭಾಗದಲ್ಲಿ ಸಮಾವೇಶವಾಗಿರಲಿ. ಆದರೆ ಈಶಾನ್ಯ ಕಡೆಯ ಪೂರ್ವ, ಈಶಾನ್ಯ ಕಡೆಗಿನ ಉತ್ತರ ವಾಯುವ್ಯದ ಪಶ್ಚಿಮ ಭಾಗ ಆಗ್ನೇಯದ ದಕ್ಷಿಣ ಭಾಗಗಗಳಲ್ಲಿ ಇರುವಂತೆ ಆಗಿರಲಿ. ತೀರಾ ಈಶಾನ್ಯಭಾಗದ ಸ್ವಲ್ಪ ಸ್ಥಳ ವ್ಯಾಪ್ತಿ ಮೂಲೆ ಮುಖ್ಯವಾಗಿ ಖಾಲಿ ಇರಲಿ. ಪೂರ್ತಿ ಖಾಲಿಯಾಗಿ ಅಂದವಾಗಿ ರೂಪಿಸಲ್ಪಟ್ಟಿರಲಿ. ಹೊರಗಡೆಯ ಕೆಲಭಾಗವಾದರೂ ಈಶಾನ್ಯ ಮೂಲೆ ಖಾಲಿ ಜಾಗ ಇರುವಂತಿರಲಿ. 

ಭೋಜನ ಸ್ಥಳ ತಿಂಡಿಗಾಗಿ ಕೂಡುವ ಸ್ಥಳ, ಕುರ್ಚಿ ಟೇಬಲ್ಲುಗಳು ಬಹು ವ್ಯವಸ್ಥಿತವಾಗಿ ಕಣ್ಣಿಗೆ ಅಂದವಾಗುವ ರೀತಿ ಕುಸುರಿ ಹೊಂದಿರಲಿ. ಹಸಿರು /ನಸುಹಳದಿ ಕೆಂಪು ಗಾಜಿನ ಆಸ್ವಾದನೆಗಳು ರೆಸ್ಟೋರೆಂಟಿಗೆ ಬಂದವರ ಕಣ್ಣಿಗೆ ಹಿತ ತರುವಂತಿರಲಿ. ತೆಳು ಪಾರದರ್ಶಕತೆಯ ಉಬ್ಬುಶಿಲ್ಪಗಳು ಉರಗ ಸ್ವರೂಪದ ಅಂಕುಡೊಂಕಿನೊಂದಿಗೆ ಪಾರದರ್ಶಕ ಕನ್ನಡಿಗಳಿಗೆ ಅಥವಾ ಹೊದಿಕೆಯಾದ ಕನ್ನಡಿಗಳಲ್ಲಿ ಮೂಡಿಕೊಂಡಿರಲಿ. ಹೂವುಗಳ ರೀತಿಯ ಉಬ್ಬು ಶಿಲ್ಪಗಳಿರಲಿ. ಕಣ್ಣು ಕೋರೈಸದ ಆದರೆ ಸ್ವಚ್ಛ ಬೆಳಕಿನ ಹೊನಲು, ಗಿರಾಕಿಗಳ ಮನಸೆಳೆಯುವಂತಿರಲಿ. ಉತ್ತರಕ್ಕೋ ಪೂರ್ವಕ್ಕೋ ಓಡಾಟದ ಹರವುಗಳಿರಲಿ. ಮುಖ್ಯಸ್ಥಳದ ಪಶ್ಚಿಮ ಅಥವಾ ದಕ್ಷಿಣದಲ್ಲಿ ಟೇಬಲ್‌ ಇರಲಿ. ಈ ಎಲ್ಲಾ ವಿಚಾರಗಳ ರೆಸ್ಟೋರೆಂಟಿನ ವಿಚಾರದಲ್ಲಿ ಯಶಸ್ಸಿನ ದಾರಿಗೆ ಸುಲಲಿತವಾಗುತ್ತದೆ. 

- ಅನಂತಶಾಸ್ತ್ರಿ ; ಮೊ: 8147824707


Trending videos

Back to Top