CONNECT WITH US  

ನೀರುಂಡೆ ಪಾಯಸ

ಏನೇನು ಬೇಕು?: ಅಕ್ಕಿಹಿಟ್ಟು-ಒಂದು ಕಪ್‌, ಉಪ್ಪು- ಸ್ವಲ್ಪ , ಬೆಲ್ಲ-ಎರಡಚ್ಚು, ತೆಂಗಿನ ಹಾಲು-ಒಂದೂವರೆ ಕಪ್‌, ಏಲಕ್ಕಿ ಪುಡಿ-ಸ್ವಲ್ಪ , ಗೋಡಂಬಿ, ದ್ರಾಕ್ಷಿ-ಸ್ವಲ್ಪ.

ಮಾಡೋದು ಹೇಗೆ? : 
1.  ಬಾಣಲೆ ಒಲೆ ಮೇಲಿಟ್ಟು ಎರಡು ಕಪ್‌ ನೀರು, ಉಪ್ಪು ಹಾಗೂ ಅಕ್ಕಿಹಿಟ್ಟು ಹಾಕಿ ತಿರುವುತ್ತಿರಿ. 
2. ಇದು ಗಟ್ಟಿಯಾದ ನಂತರ ಕೆಳಗಿಳಿಸಿ ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿಕೊಳ್ಳಬೇಕು. 
3. ನಂತರ ನೀರು, ಬೆಲ್ಲ, ತಯಾರಿಸಿದ ಉಂಡೆ ಹಾಕಿ ಕುದಿಸಿ. 
4. ಕೊನೆಯಲ್ಲಿ ಕಾಯಿಹಾಲು ಹಾಕಿ. 
5. ಏಲಕ್ಕಿಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿಕೊಂಡರೆ ನೀರುಂಡೆ ಪಾಯಸ ರೆಡಿ.

Trending videos

Back to Top