CONNECT WITH US  

ಎಲೆ ಕಡುಬು

ಏನೇನು ಬೇಕು? : ದೋಸೆ ಅಕ್ಕಿ -ಒಂದು ಕಪ್‌, ಬೆಲ್ಲ-ಒಂದಚ್ಚು , ತೆಂಗಿನತುರಿ-ಒಂದು ಕಪ್‌, ಏಲಕ್ಕಿ ಪುಡಿ-ಸ್ವಲ್ಪ, ಉಪ್ಪು -ಚಿಟಿಕೆ, ಬಾಳೆಲೆ-ಎರಡು.

ಮಾಡೋದು ಹೇಗೆ?: 
1. ಅಕ್ಕಿಯನ್ನು ತುಸು ನೀರು ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು. 
2. ನಂತರ ಬೆಲ್ಲದ ತುರಿ ಹಾಗೂ ತೆಂಗಿನ ತುರಿ, ಏಲಕ್ಕಿ ಪುಡಿ ಮಿಕ್ಸ್‌ ಮಾಡಿ .
3. ಬಾಳೆಲೆಯನ್ನು ಬೆಂಕಿಗೆ ಹಿಡಿದು ಬಾಡಿಸಿ. ಪುಟ್ಟ ಪುಟ್ಟ ತುಂಡುಗಳನ್ನಾಗಿ ಮಾಡಿ.
4.  ಪುಟ್ಟ ಎಲೆಗಳಿಗೆ ಅಕ್ಕಿಹಿಟ್ಟು ಅರ್ಧ ಸೌಟು ಹಾಕಿ ಹರಡಿ ಅದರ ನಡುವೆ ತೆಂಗಿನ ತುರಿಯ ಮಿಶ್ರಣವನ್ನಿರಿಸಿ. 
5. ಎಲೆಯನ್ನು ಮಡಚಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿಕೊಂಡರೆ ಎಲೆ ಕಡುಬು ರೆಡಿ. 

Trending videos

Back to Top