CONNECT WITH US  

ಮೆಂತ್ಯದ ಸವಿರುಚಿ

ಹೇರಳವಾದ ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ, ಪ್ರೊಟೀನ್‌ ಹಾಗೂ ಇತರ ಹಲವಾರು ಉತ್ತಮ ಅಂಶಗಳನ್ನೊಳಗೊಂಡ ಮೆಂತ್ಯಕಾಳು ಅಥವಾ ಮೆಂತೆಸೊಪ್ಪಿನ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಸಕ್ಕರೆಯ ಅಂಶವನ್ನು ಹತೋಟಿಗೆ ತರುವ ಮತ್ತು ಕೊಲೆಸ್ಟ್ರಾಲ್‌ನ್ನು ಹೋಗಲಾಡಿಸಿ ದೇಹಕ್ಕೆ ತಂಪು ನೀಡುವ ಇದರ ನಿಯಮಿತ ಸೇವನೆ ಮಧುಮೇಹಿಗಳಿಗೆ ಮತ್ತು ಹೃದಯದ ತೊಂದರೆಯವರಿಗಂತೂ ವರದಾನ. ಇಲ್ಲಿವೆ, ಕೆಲವು ರಿಸಿಪಿಗಳು.

ಮೆಂತ್ಯ ಉಂಡೆ
ಬೇಕಾಗುವ ಸಾಮಗ್ರಿಗಳು: ಮೆಂತ್ಯಕಾಳು - ನಾಲ್ಕು ಕಪ್‌, ಬೆಲ್ಲ- ನಾಲ್ಕು ಕಪ್‌, ದ್ರಾಕ್ಷಿ-ಗೋಡಂಬಿ - ತಲಾ ನಾಲ್ಕು ಚಮಚ, ತುಪ್ಪ- ನೂರು ಗ್ರಾಮ್‌.

ತಯಾರಿಸುವ ವಿಧಾನ: ಕೆಂಪಗೆ ಹುರಿದ ಮೆಂತ್ಯಕಾಳನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಬೆಲ್ಲವನ್ನು ಸ್ವಲ್ಪ$ನೀರು ಹಾಕಿ ಪಾಕಕ್ಕಿಡಿ. ಪಾಕ ಗಟ್ಟಿಯಾಗುತ್ತಾ ಬರುವಾಗ ನೀರಿಗೆ ಪಾಕ ಹಾಕುವಾಗ ಗಟ್ಟಿಯಾಗಬೇಕು. ಮೆಂತ್ಯ ಪುಡಿ ಹಾಕಿ ಮಗುಚುತ್ತಾ ಇದ್ದು ತುಪ್ಪಸೇರಿಸಿ ಪುನಃ ಮಗುಚಿ. ಕೊನೆಗೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಇಳಿಸಿ. ಕೈಗೆ ತುಪ್ಪಸವರಿಕೊಂಡು ಉಂಡೆಕಟ್ಟಿ. ದೇಹದ ಉಷ್ಣಾಂಶವನ್ನು ಹೋಗಲಾಡಿಸುವ ಪೌಷ್ಟಿಕ ಉಂಡೆ ಇದು.

ಮೆಂತ್ಯ ತಂಬುಳಿ 
ಬೇಕಾಗುವ ಸಾಮಗ್ರಿಗಳು: ಮೆಂತ್ಯ - ಎರಡು ಚಮಚ, ತೆಂಗಿನತುರಿ - ಒಂದು ಕಪ್‌, ಬೆಲ್ಲ - ಎರಡು ಚಮಚ, ಸಿಹಿ ಮಜ್ಜಿಗೆ - ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ತುಪ್ಪದಲ್ಲಿ ಹುರಿದ ಮೆಂತ್ಯವನ್ನು ತೆಂಗಿನತುರಿ, ಬೆಲ್ಲ, ಉಪ್ಪು$ಮತ್ತು ಸ್ವಲ್ಪ$ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ, ಉಳಿದ ಮಜ್ಜಿಗೆ ಮತ್ತು ಸ್ವಲ್ಪ$ ನೀರು ಸೇರಿಸಿ ತಂಬುಳಿಯ ಹದ ಮಾಡಿಕೊಳ್ಳಿ. ತಯಾರಾದ ತಂಬುಳಿಗೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕರಿಬೇವಿನ ಜೊತೆ ನೀಡಬಹುದು.

ಮೆಂತ್ಯ ಗೊಜ್ಜು 
ಬೇಕಾಗುವ ಸಾಮಗ್ರಿಗಳು: ಮೆಂತ್ಯ - ಎರಡು ಚಮಚ, ಉದ್ದಿನಬೇಳೆ - ಒಂದು ಚಮಚ, ಒಣಮೆಣಸಿನಕಾಯಿ - ಐದು, ಬೆಲ್ಲ - ಎರಡು ಚಮಚ, ಹುಣಸೆ ರಸ - ಎರಡು ಚಮಚ, ತೆಂಗಿನತುರಿ - ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮೆಂತ್ಯ, ಮೆಣಸು, ಉದ್ದಿನಬೇಳೆ ಇವುಗಳನ್ನು ಬೇರೆಬೇರೆಯಾಗಿ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ನಂತರ, ಇವುಗಳನ್ನು ತೆಂಗಿನತುರಿಯ ಜೊತೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಕರಿಬೇವು ಜೀರಿಗೆ ಸೇರಿಸಿದ ಸಾಸಿವೆ ಒಗ್ಗರಣೆ ಸಿಡಿಸಿ ಇದಕ್ಕೆ ರುಬ್ಬಿದ ಮಿಶ್ರಣ, ಹುಣಸೆರಸ, ಬೆಲ್ಲ, ಉಪ್ಪು$ಮತ್ತು ಬೇಕಷ್ಟು ನೀರು ಸೇರಿಸಿ ಗೊಜ್ಜು ಹದ ಮಾಡಿಕೊಂಡು ಚೆನ್ನಾಗಿ ಕುದಿಸಿ, ಇಳಿಸಿ. ಈಗ ತಯಾರಾದ ಮೆಂತ್ಯಗೊಜ್ಜು ಅನ್ನ , ಚಪಾತಿ, ದೋಸೆ ಜೊತೆ ಸವಿಯಲು ಬಹಳ ಹಿತ.

ಮೊಳಕೆ ಮೆಂತ್ಯ ಸಲಾv
ಬೇಕಾಗುವ ಸಾಮಗ್ರಿಗಳು: ಮೊಳಕೆಕಟ್ಟಿದ ಮೆಂತ್ಯ - ಅರ್ಧ ಕಪ್‌, ಹೆಚ್ಚಿದ ಟೊಮೆಟೋ - ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಸೋರೆಕಾಯಿ ಮತ್ತು ಸೌತೆಕಾಯಿ - ತಲಾ ಅರ್ಧ ಕಪ್‌, ಲಿಂಬೆರಸ - ಎರಡು ಚಮಚ, ಕಾಯಿತುರಿ - ನಾಲ್ಕು ಚಮಚ, ಹಸಿಮೆಣಸು - ಒಂದು, ಮೊಳಕೆ ಹೆಸರುಕಾಳು - ನಾಲ್ಕು ಚಮಚ, ಕ್ಯಾರೆಟ್‌ತುರಿ - ನಾಲ್ಕು ಚಮಚ, ಉಪ್ಪುರುಚಿಗೆ.

ತಯಾರಿಸುವ ವಿಧಾನ: ಎರಡು ದಿವಸ ನೆನೆಸಿದ ಮೆಂತ್ಯವನ್ನು ಮೊಳಕೆ ಬರಿಸಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಕೊನೆಗೆ ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ.

- ಗೀತಸದಾ, ಮೋಂತಿಮಾರು

Trending videos

Back to Top