ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು


Team Udayavani, Mar 17, 2018, 1:09 PM IST

beleholige.jpg

ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟು ತೊಗರಿಬೇಳೆ ಒಬ್ಬಟ್ಟು ಮಾಡಲು ಸುಲಭ ವಿಧಾನ

ಬೇಗಾಗುವ ಸಾಮಾಗ್ರಿಗಳು:
1. ತೊಗರಿ ಬೇಳೆ – 1/2 ಕೆಜಿ
2. ಚಿರೋಟಿ ರವೆ – ಕಾಲು ಕಪ್
3. ಮೈದಾಹಿಟ್ಟು – 2 ಬಟ್ಟಲು
4. ಬೆಲ್ಲ – 1/2 ಕೆಜಿ 
5. ತೆಂಗಿನಕಾಯಿ ತುರಿ – ಒಂದು ಬಟ್ಟಲು
6. ಏಲಕ್ಕಿ ಪುಡಿ – ಸ್ವಲ್ಪ
7. ತುಪ್ಪ – ಎರಡು ಚಮಚ
8. ಎಣ್ಣೆ – 1 ಕಪ್
9. ಉಪ್ಪು – 1 ಚಿಟಿಕೆ
10. ಅರಿಸಿನ – 1 ಚಿಟಿಕೆ

ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಶಿನ, ಒಂದು ಚಿಟಿಕೆ ಉಪ್ಪು ಮತ್ತು ತುಪ್ಪ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚಪಾತಿ ಹಿಟ್ಟಿಗಿಂತ ತುಂಬಾ ಮೃದುವಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ 1/2 ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 2 ನಿಮಿಷ ನೆನೆಯಲು ಬಿಡಿ.
* ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ.
* ಒಂದು ಪಾತ್ರೆಯಲ್ಲಿ ತೊಗರಿಬೇಳೆ, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
* ಬೇಳೆ ನುಣ್ಣಗಾಗುವಂತೆ ಬೇಯಿಸಬೇಡಿ. ಸ್ವಲ್ಪ ಗಟ್ಟಿಯಿರುವಾಗಲೇ ಇದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ತುರಿ, ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
* ಈ ಮಿಶ್ರಣ ತಣ್ಣಗಾದ ನಂತರ ನೀರು ಸೇರಿಸದಂತೆ ನುಣ್ಣಗೆ ರುಬ್ಬಿಕೊಳ್ಳಬೇಕು.
* ಹೀಗೆ ನುಣ್ಣಗೆ ರುಬ್ಬಿದ ಮಿಶ್ರಣವನ್ನ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.

ಹೋಳಿಗೆ ಮಾಡುವುದು:
* ಕಲಸಿಟ್ಟ ಮೈದಾ ಮಿಶ್ರಣವನ್ನು ತೆಗೆದುಕೊಂಡು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
* ಒಂದು ಮಣೆ ಮೇಲೆ ಬಾಳೆ ಎಲೆ/ ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಮೈದಾ ಮಿಶ್ರಣವನ್ನು ತೆಗೆದುಕೊಂಡು ಅದರ ಮೇಲೆ ತಟ್ಟಿಕೊಳ್ಳಿ.

* ಇದರ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು ಎಲ್ಲಾ ಬದಿಯಿಂದ ಮೇಲ್ಮುಖವಾಗಿ ಮೈದಾ ಹಿಟ್ಟಿನಿಂದ ಹೂರಣವನ್ನು ಮುಚ್ಚಿ.
* ಹೂರಣವನ್ನು ಮುಚ್ಚಿದ ತುದಿಯನ್ನು ಕೆಳಭಾಗಕ್ಕೆ ತಿರುಗಿಸಿ ಕೈಗೆ ಎಣ್ಣೆ ಸವರಿಕೊಂಡು ಲಘುವಾಗಿ ತಟ್ಟಿಕೊಳ್ಳಿ.
* ಒಬ್ಬಟ್ಟು ತಟ್ಟುವಾಗಿ ತೀರಾ ತೆಳ್ಳಗೆ ತಟ್ಟಿದರೆ ಬೇಯಿಸುವಾಗ ಮುರಿದು ಹೋಗುತ್ತದೆ. ಆದ್ದರಿಂದ ತೀರಾ ತೆಳ್ಳಗೂ ಅಲ್ಲದೆ ದಪ್ಪವೂ ಅಲ್ಲದೆ ಮಧ್ಯಮ ಗಾತ್ರದಲ್ಲಿ ತಟ್ಟಿಕೊಳ್ಳಿ.
* ಒಲೆ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ತವಾ ಬಿಸಿಯಾದ ನಂತರ ಅದರ ಮೇಲೆ ತಟ್ಟಿಕೊಂಡ ಒಬ್ಬಟ್ಟು ಎಲೆ ಸಹಿತ ಹಾಕಿ ನಿಧಾನವಾಗಿ ಎಲೆಯನ್ನು ತೆಗೆದು ಎರಡೂ ಬದಿ ಹದವಾಗಿ ಬೇಯಿಸಿದ್ರೆ ಬೇಳೆ ಒಬ್ಬಟ್ಟು ರೆಡಿ.

* ಇದನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಹಾಲು ಅಥವಾ ಮಾವಿನಹಣ್ಣಿನ ರಸಾಯನದ ಜೊತೆ ಸವಿಯಬಹುದು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.