CONNECT WITH US  

ಡ್ರೈಫ್ರೂಟ್ ಕುಲ್ಫಿ

ಅತ್ತ ಬೇಸಿಗೆ ಮುಗಿತಾ ಬಂತು. ಈ ಕಡೆ ಮಳೆಗಾಲ ಇಣುಕಿಣುಕಿ ನೋಡ್ತಿದೆ. ಈ ಹೊತ್ತಲ್ಲದ ಹೊತ್ತಲ್ಲಿ ಏನ್‌ ತಿನ್ನಬಹುದು? ಮಕ್ಕಳಂತೂ ಬಾಯಿಬಿಟ್ಟರೆ ಐಸ್‌ಕ್ರೀಂ, ಕ್ಯಾಂಡಿ ಅಂತಾರೆ. ಹೊರಗೆ ಕ್ಯಾಂಡಿ, ಕುಲ್ಫಿ ಕೊಡಿಸೋಣ ಅಂದರೆ ಹೈಜಿನಿಕ್‌ ಸಮಸ್ಯೆ. ಯಾಕೆ ರಿಸ್ಕಾ. ಮನೆಯಲ್ಲೇ ಮಾಡೋಣ, ಬನ್ನಿ. 

ಡ್ರೈಫ್ರೂಟ್ ಕುಲ್ಫಿ
ಏನೇನು ಬೇಕು?: ಖರ್ಜೂರ - ಹತ್ತು, ಒಣ ಅಂಜೂರ - ಮೂರು, ಗಟ್ಟಿಹಾಲು - ಅರ್ಧ ಲೀಟರ್‌, ಕ್ರೀಂ -ಅರ್ಧ ಕಪ್‌, ಚಾಕಲೇಟ್‌ಪುಡಿ - ಒಂದು ಚಮಚ, ಸಕ್ಕರೆ - ರುಚಿಗೆ ಬೇಕಷ್ಟು, ಅಖ್ರೂಟ್‌, ಗೋಡಂಬಿ ಚೂರುಗಳು - ಆರು ಚಮಚ.

ಮಾಡೋದು ಹೇಗೆ?:
1. ಖರ್ಜೂರ ಮತ್ತು ಅಂಜೂರವನ್ನು ರಾತ್ರಿಯೇ ಬಿಸಿ ಹಾಲಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ರುಬ್ಬಿ.
2. ಹಾಲು ಕಾಯಿಸುತ್ತಿರಿ. ಇದು ಸುಮಾರು ಅರ್ಧ ಇಂಗಿದಾಗ ಇದಕ್ಕೆ ಸಕ್ಕರೆ, ಚಾಕಲೇಟ್‌ ಪುಡಿ ಹಾಗು ರುಬ್ಬಿದ
ಖರ್ಜೂರದ ಮಿಶ್ರಣ ಸೇರಿಸಿ, ಕುದಿಸಿ, ಇಳಿಸಿ.
3.ಆರಿದ ಮೇಲೆ ಇದಕ್ಕೆ ಕ್ರೀಮ್‌ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ ಗೋಡಂಬಿ ಚೂರುಗಳನ್ನು ಮಿಶ್ರಮಾಡಿ. 
4. ಕುಲ್ಫಿà ಅಚ್ಚಿಗೆ ತುಂಬಿಸಿ ಫ್ರೀಝರ್‌ನಲ್ಲಿಡಿ . 
5. ಗಟ್ಟಿಯಾದ ಮೇಲೆ ಕುಲ್ಫಿàಯನ್ನು ಅಚ್ಚಿನಿಂದ ಬೇರ್ಪಡಿಸಿ ಚಾಕಲೇಟ್‌ ಸಾಸ್‌ ಹರಡಿ ಸರ್ವ್‌ ಮಾಡಬಹುದು.
*

ಕ್ಯಾರೇಟ್‌ ಕುಲ್ಫಿ
ಏನೇನು ಬೇಕು?: ಕ್ಯಾರೆಟ್‌ ತುರಿ -ಒಂದು ಕಪ್‌, ಸಕ್ಕರೆ - ರುಚಿಗೆ ಬೇಕಷ್ಟು, ಹಾಲು -ಅರ್ಧ ಲೀಟರ್‌, ಗೋಡಂಬಿ - ಹತ್ತು, ಬಾದಾಮಿ ಚೂರುಗಳು- ನಾಲ್ಕು ಚಮಚ, ಏಲಕ್ಕಿಪುಡಿ - ಕಾಲು ಚಮಚ, ಖರ್ಜೂರ- ನಾಲ್ಕು, ಒಣದ್ರಾಕ್ಷಿ - ಹತ್ತು, ತೆಂಗಿನತುರಿ - ನಾಲ್ಕು ಚಮಚ, ಕ್ರೀಮ್‌ - ನಾಲ್ಕು ಚಮಚ.

ಮಾಡೋದು ಹೇಗೆ?:
1. ಹಾಲು ಕಾಯಲು ಇಟ್ಟು ಸ್ವಲ್ಪ ದಪ್ಪವಾಗುತ್ತಾ ಬರುವಾಗ ಇದಕ್ಕೆ ಕ್ಯಾರೇಟ್‌ ತುರಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಿಸಿ. 
2. ಕ್ಯಾರೇಟ್‌ ಬೇಯುತ್ತಾ ಬರುವಾಗ ಗೋಡಂಬಿ ಹಾಕಿ, ಒಲೆಯಿಂದ ಇಳಿಸಿ ಆರಲು ಬಿಡಿ. 
3. ಆರಿದ ಮೇಲೆ ಇದಕ್ಕೆ ಕ್ರೀಮ್‌, ಏಲಕ್ಕಿಪುಡಿ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
4. ಹೆಚ್ಚಿಟ್ಟ ಖರ್ಜೂರ, ಬಾದಾಮಿ, ತೆಂಗಿನತುರಿ, ಸ್ವಲ್ಪ ಕ್ಯಾರೆಟ್‌ ತುರಿ ಇವುಗಳನ್ನು ಸೇರಿಸಿ ಕುಲ್ಫಿ ಮೋಡ್‌ನ‌ಲ್ಲಿ ತುಂಬಿಸಿ ಫ್ರೀಝರ್‌ನಲ್ಲಿಟ್ಟು ಸೆಟ್‌ಮಾಡಿ ಗಟ್ಟಿಯಾಗಿಸಿ. 
5. ಈಗ ರುಚಿಯಾದ ಕುಲ್ಫಿà ಸವಿಯಲು ಸಿದ್ಧ.
*

ಹುಳಿ - ಸಿಹಿ ಕುಲ್ಫಿ
ಏನೇನು ಬೇಕು?:  ಬಾಳೆಹಣ್ಣು - ಒಂದು, ಆರೆಂಜ್‌ - ಒಂದು, ದ್ರಾಕ್ಷಿಹಣ್ಣು - ಹತ್ತು, ಚೆರಿಹಣ್ಣು - ಆರು, ಹಾಲು - ಎರಡು ಕಪ್‌, ಮೊಸರು - ಒಂದು ಕಪ್‌, ಸಕ್ಕರೆ - ರುಚಿಗೆ ಬೇಕಷ್ಟು, ಜೇನು - ಒಂದು ಚಮಚ.
ಮಾಡೋದು ಹೇಗೆ?:
1.  ಕುದಿಸಿ ಆರಿಸಿದ ಹಾಲಿಗೆ ಬಾಳೆಹಣ್ಣು, ಕಿತ್ತಳೆ, ಸಕ್ಕರೆ, ಮೊಸರು, ಜೇನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ.
2.  ನಂತರ, ಇದಕ್ಕೆ ಹೆಚ್ಚಿದ ಚೆರಿ, ದ್ರಾಕ್ಷಿ ಸೇರಿಸಿ ಕುಲ್ಫಿà ಮೋಡ್‌ಗೆ ತುಂಬಿಸಿ. 
3. ಫ್ರೀಜರ್‌ನಲ್ಲಿಟ್ಟು ಗಟ್ಟಿಯಾದ ನಂತರ ಸರ್ವ್‌ ಮಾಡಿ. 
*

ಮಾವಿನಹಣ್ಣಿನ ಕುಲ್ಫಿ
ಏನೇನು ಬೇಕು?: ಮಾವಿನಹಣ್ಣಿನ ಹೋಳುಗಳು - ಎರಡು ಕಪ್‌, ಸಿಹಿಮೊಸರು - ಎರಡು ಕಪ್‌, ಕ್ರೀಮ್‌ - ಅರ್ಧ ಕಪ್‌, ಕಂಡೆನ್ಸ್‌ಡ್‌ ಮಿಲ್ಕ್ - ಅರ್ಧ ಕಪ್‌, ಲಿಂಬೆರಸ - ಸ್ವಲ್ಪ, ಬಾದಾಮಿ, ಪಿಸ್ತ ಚೂರುಗಳು - ಆರು ಚಮಚ.

ಮಾಡೋದು ಹೇಗೆ?:
1.  ಮಾವಿನಹೋಳುಗಳನ್ನು, ಮೊಸರು, ಕಂಡೆನ್ಸಡ್‌ಮಿಲ್ಕ್ ಜೊತೆ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ .
2. ಇದಕ್ಕೆ ಲಿಂಬೆರಸ, ಕ್ರೀಮ್‌ ಸೇರಿಸಿ ಪುನಃ ರುಬ್ಬಿ. 
3. ಇದಕ್ಕೆ ಬಾದಾಮಿ-ಪಿಸ್ತಾ ಚೂರುಗಳನ್ನು ಸೇರಿಸಿ ಕುಲ್ಫಿà ಅಚ್ಚಿನಲ್ಲಿ ತುಂಬಿಸಿ. 
4. ಫ್ರೀಜರ್‌ನಲ್ಲಿ ಸೆಟ್‌ಮಾಡಿ. 
5. ಸರ್ವ್‌ ಮಾಡುವಾಗ ತಾಜಾ ಮಾವಿನ ಹಣ್ಣಿನ ಹೋಳುಗಳ ಜೊತೆ ಸವಿಯಲು ಕೊಡಿ.

Trending videos

Back to Top