CONNECT WITH US  

ತೊಂಡೆಕಾಯಿ ವ್ಯಂಜನಗಳು

ಆರೋಗ್ಯಕರ, ರುಚಿಕರ ಬಳ್ಳಿ ತರಕಾರಿಗಳಲ್ಲಿ ತೊಂಡೆಕಾಯಿಗೆ ಪ್ರಮುಖ ಸ್ಥಾನ. ಯಾವುದೇ ಕಾಳು-ಬೇಳೆಯೊಂದಿಗೆ ಹೊಂದಿಕೊಳ್ಳುವ ತೊಂಡೆಯ ವಿವಿಧ ಪಾಕಪ್ರಕಾರಗಳು ನಿಮಗಾಗಿ.

ಬಾಳ್ಕ
ಬೇಕಾಗುವ ಸಾಮಗ್ರಿಗಳು: ತೊಂಡೆ‌ಕಾಯಿ ½ ಕೆ.ಜಿ., ಖಾರದಪುಡಿ 1 ಚಿ.ಚ., ಉಪ್ಪು ರುಚಿಗೆ. 
ವಿಧಾನ: ತೊಂಡೆಕಾಯಿಯನ್ನು ನಾಲ್ಕು ಭಾಗಗಳನ್ನಾಗಿ ಸೀಳಿ. ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ.
-ಅನಂತರ ತೆಗೆದು ಶುಭ್ರ ಬಟ್ಟೆಯ ಮೇಲೆ ಹರಡಿ. ನೀರು ಆರಿಸಿ.
-ಬಳಿಕ ಉಪ್ಪು ಹಾಗೂ ಖಾರದಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಒಂದು ವಾರ ಕಾಲ ಬಿಸಿಲಲ್ಲಿಟ್ಟು ಒಣಗಿಸಿಕೊಳ್ಳಿ. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.
-ಬೇಕೆಂದಾಗ ಎಣ್ಣೆಯಲ್ಲಿ ಕರಿದು ಊಟದೊಂದಿಗೆ ಸವಿಯಿರಿ.

ಗರಗರ ಪಲ್ಯ
ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ತೊಂಡೆಕಾಯಿ ಹೋಳುಗಳು 1 ಕಪ್‌, ಖಾರದಪುಡಿ 1 ಚಿ.ಚ., ಕಾಯಿತುರಿ ಭಿ ಕಪ್‌, ಕೊತ್ತಂಬರಿ ಪುಡಿ ½ ಚಿ.ಚ., ಉಪ್ಪು ರುಚಿಗೆ.
ಒಗ್ಗರಣೆಗೆ : ಸಾಸಿವೆ ½ ಚಿ.ಚ., ಉದ್ದಿನಬೇಳೆ, ಕಡಲೆಬೇಳೆ ತಲಾ 1 ಚಿ.ಚ., ಕೆಂಪುಮೆಣಸಿನಕಾಯಿ 1, ಕರಿಬೇವಿನ ಸೊಪ್ಪು.
ವಿಧಾನ : 
-ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ. ಬಳಿಕ ಉದ್ದಿನಬೇಳೆ, ಕಡಲೆಬೇಳೆ, ಕೆಂಪುಮೆಣಸಿನಕಾಯಿ, ಕರಿಬೇವಿನಸೊಪ್ಪು ಹಾಕಿ ಒಗ್ಗರಣೆ ಸಿದ್ಧಪಡಿಸಿ.
-ಹೆಚ್ಚಿದ ತೊಂಡೆ ಹೋಳುಗಳನ್ನು ಹಾಕಿ ತುಸು ನೀರು ಸೇರಿಸಿ. ಉಪ್ಪು, ಖಾರದಪುಡಿ, ಕೊತ್ತಂಬರಿ ಪುಡಿ ಹಾಕಿ ಮುಚ್ಚಿ, ಬೇಯಿಸಿ.
-ಹೋಳುಗಳು ಬೆಂದು ಮೆತ್ತಗಾಗಬಾರದು. ಬಾಯಿಗಿಟ್ಟು ಜಗಿಯುವಾಗ ಗರಗರ ಸದ್ದು  ಬರುವಂತಿರಬೇಕು. ಕಾಯಿತುರಿ ಹಾಕಿ ಚೆನ್ನಾಗಿ ಬೆರೆಸಿ, ಇಳಿಸಿ.
-ಬಿಸಿ ಅನ್ನ ಹಾಗೂ ತುಪ್ಪದೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ.

ಕಾಯಿರಸ
ಬೇಕಾಗುವ ಸಾಮಗ್ರಿಗಳು: ತೊಂಡೆಕಾಯಿ  ಭಿ ಕೆ.ಜಿ., ಹೆಸರುಕಾಳು  ½ ಕಪ್‌,ಕೆಂಪುಮೆಣಸಿನಕಾಯಿ 6, ಎಳ್ಳು  ½ ಚಿ.ಚ., ಉದ್ದಿನಬೇಳೆ 1 ಚಿ.ಚ., ಕಾಯಿತುರಿ 1 ಕಪ್‌,  ಉಪ್ಪು ರುಚಿಗೆ.
ಒಗ್ಗರಣೆಗೆ: ಸಾಸಿವೆ, ಕೆಂಪುಮೆಣಸಿನಕಾಯಿ,  ಕರಿಬೇವಿನ ಸೊಪ್ಪು. 
ವಿಧಾನ: 
-ತೊಂಡೆಕಾಯಿಯನ್ನು ನಾಲ್ಕಾಗಿ ಸೀಳಿ ನೀರಿನಲ್ಲಿ ನೆನೆಸಿಡಿ.
-ಹೆಸರುಕಾಳನ್ನು ಆರು ಗಂಟೆ ಕಾಲ ನೆನೆಸಿ ತೊಂಡೆಕಾಯಿ ಹೋಳುಗಳೊಂದಿಗೆ ಉಪ್ಪು ಹಾಕಿ ಬೇಯಿಸಿಕೊಳ್ಳಿ.
-ಎಳ್ಳು, ಕೆಂಪುಮೆಣಸಿನಕಾಯಿ ಹಾಗೂ ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ ಹುರಿಯಿರಿ. ಕಾಯಿತುರಿಯೊಂದಿಗೆ ಸೇರಿಸಿ, ನುಣ್ಣಗೆ ರುಬ್ಬಿ.
-ಬೇಯಿಸಿದ ತೊಂಡೆಕಾಯಿ ಹೋಳುಗಳೊಂದಿಗೆ ಸೇರಿಸಿ ಕುದಿಸಿ.
-ಸಾಸಿವೆ, ಕೆಂಪುಮೆಣಸಿನಕಾಯಿ ಹಾಗೂ ಕರಿಬೇವಿನಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಂಡರೆ ತೊಂಡೆಕಾಯಿ ಕಾಯಿರಸ ಸವಿಯಲು ಸಿದ್ಧ.

ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು: ತೊಂಡೆ‌ಕಾಯಿ ಭಿ ಕೆ.ಜಿ., ಕಾಯಿತುರಿ 2 ಕಪ್‌, ಹಸುರುಮೆಣಸಿನಕಾಯಿ 4, ಮೊಸರು 1½ ಕಪ್‌, ಅರಸಿನಪುಡಿ ಚಿಟಿಕೆ, ಉಪ್ಪು ರುಚಿಗೆ.
ಒಗ್ಗರಣೆಗೆ : ಸಾಸಿವೆ, ಕೆಂಪುಮೆಣಸಿನಕಾಯಿ, ಕರಿಬೇವಿನ ಸೊಪ್ಪು. 
ವಿಧಾನ:
-ತೊಂಡೆಕಾಯಿಯನ್ನು ನಾಲ್ಕು ಭಾಗ ಮಾಡಿ ನೀರಿನಲ್ಲಿ ನೆನೆಸಿಡಿ. ಬಳಿಕ ಉಪ್ಪು ಹಾಕಿ ಬೇಯಿಸಿಕೊಳ್ಳಿ.
-ಕಾಯಿತುರಿಗೆ ಹಸುರುಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿಕೊಂಡ ಹೋಳಿಗೆ ಬೆರೆಸಿ.
-ಮೊಸರು ಹಾಗೂ ಅರಸಿನಪುಡಿ ಸೇರಿಸಿ ಕುದಿಸಿ ಕೊನೆಯಲ್ಲಿ ಒಗ್ಗರಣೆ ಮಾಡಿಕೊಂಡರೆ ತೊಂಡೆಕಾಯಿ ಮಜ್ಜಿಗೆ ಹುಳಿ ಸವಿಯಲು ಸಿದ್ಧ.

-ಗೀತಾ ಬರ್ಲ

ಸಂಗ್ರಹ: ತರಂಗ

Trending videos

Back to Top