CONNECT WITH US  

ಫ್ರೈಡ್‌ ರೈಸ್‌

ಏನೇನು ಬೇಕು?
ಬೇಯಿಸಿದ ಅನ್ನ 3 ಕಪ್‌ , ಡಾರ್ಕ್‌ ಸೊಯಾ ಸಾಸ್‌ ಒಂದೂವರೆ ಸ್ಪೂನ್‌ , ಚಿಲ್ಲಿ ಸಾಸ್‌ 1 ಸ್ಪೂನ್‌ , ಪೆಪ್ಪರ್‌ ಪೌಡರ್‌ 1/2 ಸ್ಪೂನ್‌ , ಉರುಟಾಗಿ ತೆಳುವಾಗಿ ಹೆಚ್ಚಿರೋ ಈರುಳ್ಳಿ 5 , ಎಣ್ಣೆ, ಉಪ್ಪು

ಮಾಡೋದು ಹೇಗೆ?:
- ಬಾಣಲೆಗೆ ಎಣ್ಣೆ ಹಾಕಿ ಹೆಚ್ಚು ಉರಿಯಲ್ಲಿ ಬಿಸಿಮಾಡಿ. 
- ಎಣ್ಣೆ ಚೆನ್ನಾಗಿ ಕಾದ ಬಳಿಕ ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ. ಇದರ ಜೊತೆಗೆ ಕ್ಯಾರೆಟ್‌, ಕ್ಯಾಪ್ಸಿಕಂ, ಕ್ಯಾಬೇಜ್‌, ಹುರುಳಿಕಾಯಿ ಮೊದಲಾದ ತರಕಾರಿಗಳನ್ನೂ ಉದ್ದುದ್ದಕ್ಕೆ ಹಚ್ಚಿ ಫ್ರೈ ಮಾಡಬಹುದು. 
- ಡಾರ್ಕ್‌ ಸೋಯಾ ಸಾಸ್‌, ಚಿಲ್ಲಿ ಸಾಸ್‌, ಪೆಪ್ಪರ್‌ ಪೌಡರ್‌ ಹಾಗೂ ಉಪ್ಪುನ್ನು ಇದಕ್ಕೆ ಸೇರಿಸಿ ತಿರುವುತ್ತಿರಿ
- ಇದಕ್ಕೆ ಅನ್ನ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. 
- ಪಾಪಡ್‌, ವೆಜ್‌ ಮಂಚೂರಿಯನ್‌, ಗೋಬಿ ಮಂಜೂರಿಯನ್‌ ಜೊತೆಗೆ ಬಿಸಿ ಬಿಸಿ ತಿಂದರೇ ..ಆಹ್‌!

Trending videos

Back to Top