CONNECT WITH US  

ಟೊಮೆಟೊ ತಿಳಿಸಾರು

ಏನೇನು ಬೇಕು? :1/2 ಕಪ್‌ ತೊಗರಿಬೇಳೆ , 2 ಟೊಮೆಟೊ , 1 ಹಸಿಮೆಣಸು, 1/2 ಚಮಚ ಕೆಂಪು ಮೆಣಸಿನ ಹುಡಿ, ಕಡಲೆ ಗಾತ್ರದ ಬೆಲ್ಲ,  ಚಿಟಿಕೆ ಇಂಗು , ಚಿಟಿಕೆ ಅರಸಿನ , 1/2 ಚಮಚ ಸಾಸಿವೆ , 1ಚಮಚ ಎಣ್ಣೆ, 1 ಎಸಳು ಕರಿಬೇವು , 2 ದಂಟು ಕೊತ್ತಂಬರಿಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು.

ಮಾಡೋದು ಹೇಗೆ?
ಟೊಮೆಟೊ ಹಣ್ಣನ್ನು ತೊಳೆದು ಇಡಿಯಾಗಿ ತೊಗರಿ ಬೇಳೆಯೊಂದಿಗೆ ಬೇಯಿಸಿ. ಹಸಿಮೆಣಸು ಸೇರಿಸಿ ಮೂರನ್ನೂ ರುಬ್ಬಿ. ನೀರು ಸೇರಿಸಿ ತೆಳ್ಳಗೆ ಮಾಡಿ ಉಪ್ಪು, ಖಾರ, ಬೆಲ್ಲ ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಇಂಗು, ಕರಿಬೇವು, ಕೊತ್ತಂಬರಿಸೊಪ್ಪು, ಸಾಸಿವೆ ಸೇರಿಸಿ ಒಗ್ಗರಣೆ ಕೊಡಿ. ಪರಿಮಳ ಭರಿತ ಸಾರು ಸವಿಯಲು ಸಿದ್ಧ.

Trending videos

Back to Top