ಪ್ರೇಕ್ಷಕನಿಗೆ ನಟನ ಇತಿಹಾಸ ಬೇಕಿಲ್ಲ


Team Udayavani, Jan 6, 2017, 3:45 AM IST

L-3.jpg

ಈಗಿನ ಸಿನಿಮಾ ಪ್ರೇಮಿ ಬಹಳ ವಿಮರ್ಶೆ ಮಾಡುತ್ತಾನೆ. ಅವನು ನಟನೊಬ್ಬನಿಗೆ “ಕಚ್ಚಿಕೊಳ್ಳುವುದು’ ಅಪರೂಪ. ಆದರೆ, ಒಮ್ಮೆ “ಕಚ್ಚಿಕೊಂಡರೆ’ ಅವನೂ ಸ್ಟಾರ್‌ಗಳನ್ನು ಸೃಷ್ಟಿಸಬಲ್ಲ. ರಣಬೀರ್‌ ಕಪೂರ್‌ ವಿಷಯದಲ್ಲಾಗಿದ್ದು ಇದೇ. ರಣಬೀರ್‌ ಸಿನಿಮಾ ರಂಗಕ್ಕೆ ಬಂದು ಐದು ವರ್ಷವಾಯಿತು ಅಷ್ಟೆ. ಆದರೆ, ಈಗಲೇ ಆತ ಒಂದು ಸಿನಿಮಾಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿದ್ದಾನೆ.

ಬಾಲಿವುಡ್‌ನ‌ಲ್ಲಿರುವವರಿಗೆ ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳ ಜೊತೆ ಬಹಳ ಸಲುಗೆಯಿರುತ್ತದೆ ಎಂಬ ಗಾಢವಾದ ತಪ್ಪು ಕಲ್ಪನೆಯೊಂದು ಜನರಲ್ಲಿದೆ. ವಾಸ್ತವದಲ್ಲಿ ಹಾಗಿಲ್ಲ. ಕೆಲವರ ಜೊತೆಯಷ್ಟೇ ಕೆಲವರಿಗೆ ಬಹಳ ಒಡನಾಟ ಇರಬಹುದು. ಇನ್ನುಳಿದವರ ಜೊತೆ ನಮಗೂ ಹಾಯ್‌-ಬಾಯ್‌ ಗೆಳೆತನವಷ್ಟೆ.

ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರನ್ನು ನಾನು ಚಿಕ್ಕವನಿದ್ದಾಗಿನಿಂದ ನೋಡಿದ್ದೇನೆ. ನನ್ನ ತಂದೆ ಯಶ್‌ ಜೋಹರ್‌ ಹಾಗೂ ಬಚ್ಚನ್‌ ಅಂಕಲ್‌ ತುಂಬಾ ಸ್ನೇಹಿತರು. ನಾನು ಕೂಡ ನಿರ್ದೇಶಕನಾದ ಮೇಲೆ ಬಚ್ಚನ್‌ ಹೀರೋ ಆಗಿರುವ ಅನೇಕ ಸಿನಿಮಾಗಳಲ್ಲಿ ಆ್ಯಕ್ಷನ್‌, ಕಟ್‌ ಹೇಳಿದ್ದೇನೆ. ಆದರೆ ಇವತ್ತಿಗೂ ನನ್ನ ಮೊಬೈಲ್‌ ಸ್ಕ್ರೀನ್‌ನಲ್ಲಿ “ಅಮಿತ್‌ ಅಂಕಲ್‌ ಕಾಲಿಂಗ್‌’ ಅಂತ ಬಂದಾಗ ಸಡನ್ನಾಗಿ ಎದ್ದು ನಿಲ್ಲುತ್ತೇನೆ!

ಬಹಳ ಹಿಂದೆ “ಕೂಲಿ’ ಸಿನಿಮಾದ ಚಿತ್ರೀಕರಣದ ವೇಳೆ ಅಮಿತಾಭ್‌ ಬಚ್ಚನ್‌ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆಗ ನಾನಿನ್ನೂ ಹುಡುಗ. ಶಾಲೆಗೆ ಹೋಗುತ್ತಿದ್ದೆ. ನನ್ನ ಮನೆಯವರು ಸಿನಿಮಾ ಫೀಲ್ಡ್‌ನಲ್ಲಿದ್ದಾರೆ ಎಂಬುದನ್ನು ತಕ್ಕಮಟ್ಟಿಗೆ ರಹಸ್ಯವಾಗಿರಿಸಿದ್ದೆ. ಆದರೆ, ಬಚ್ಚನ್‌ ಅಂಕಲ್‌ಗೆ ನನ್ನ ಪರಿಚಯವಿತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ದೇಶದ ಮೂಲೆ ಮೂಲೆಯಿಂದ ಸಾವಿರಾರು ಪತ್ರಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಬರುತ್ತಿದ್ದವು. ನಾನು ಕೂಡ ಪತ್ರ ಬರೆದಿದ್ದೆ. ಅದಕ್ಕೆ ಖುದ್ದು ಅಮಿತ್‌ ಅಂಕಲ್‌ ಉತ್ತರ ಬರೆದಿದ್ದರು. ನಾನು ನೆಲದ ಮೇಲೇ ಇರಲಿಲ್ಲ! ಶಾಲೆಗೆಲ್ಲ ಅದನ್ನು ತೋರಿಸಿಕೊಂಡು ಓಡಾಡಿದೆ. ಯಾರೂ ನಂಬಲಿಲ್ಲ. ಕೊನೆಗೆ ಅದನ್ನು ಟೀಚರ್‌ ಕೈಗೆ ಕೊಟ್ಟು ಅವರ ಬಾಯಿಯಲ್ಲಿ ಇದು ಅಮಿತಾಭ್‌ ಬಚ್ಚನ್‌ ಅವರದೇ ಪತ್ರ ಎಂದು ಹೇಳಿಸಬೇಕಾಯಿತು. ಆನಂತರ ಶಾಲೆಯಲ್ಲಿ ನನ್ನ ಇಮೇಜೇ ಬದಲಾಗಿಹೋಯಿತು. ನಾನಾಗ ಸ್ವಲ್ಪ ಡುಮ್ಮಣ್ಣ. ಹಾಗಾಗಿ ಹುಡುಗಿಯರ ಜೊತೆ ನನಗೆ ಅಷ್ಟೇನೂ ಒಡನಾಟವಿರಲಿಲ್ಲ. ಈ ಪತ್ರದ ನಂತರ ಹುಡುಗಿಯರು ನನಗೆ ಬಹಳ ಹತ್ತಿರವಾದರು!
ಬಚ್ಚನ್‌ ಅಂಕಲ್‌, ದಿಲೀಪ್‌ ಕುಮಾರ್‌, ರಾಜೇಶ್‌ ಖನ್ನಾ ಮುಂತಾದವರು ಈ ದೇಶದ ಐತಿಹಾಸಿಕ ಸೂಪರ್‌ಸ್ಟಾರ್‌ಗಳು. 

ಅವರು ಆ ಜಾಗದಲ್ಲಿ ಬಹಳ ವರ್ಷಗಳಿಂದ ಇದ್ದಾರೆ ಮತ್ತು ಹಾಗೇ ಇರುತ್ತಾರೆ. ಅದಕ್ಕೆ ಕಾರಣ ಅವರ ಅಭಿಮಾನಿಗಳು. ಈ ನಟರ ತಲೆಮಾರಿನ ಅಭಿಮಾನಿಗಳು ಕೇವಲ ಅಭಿಮಾನಿಗಳಲ್ಲ, ಅವರು ಆರಾಧಕರು. ಹಾಗಾಗಿ ಕೊನೆಯವರೆಗೂ ಅವರು ತಮ್ಮ ಇಷ್ಟದ ನಟನನ್ನು ಸ್ಟಾರ್‌ ಆಗಿಯೇ ನೋಡುತ್ತಾರೆ. ತಮ್ಮ ನೆಚ್ಚಿನ ನಟನಿಗೆ ನೋವಾದರೆ ಅಯ್ಯೋ ಎನ್ನುತ್ತಾರೆ. ಆ ನಟ ಏನಾದರೂ ಎಡವಟ್ಟು ಮಾಡಿಕೊಂಡರೆ ತುಂಬಾ ನೊಂದುಕೊಳ್ಳುತ್ತಾರೆ. ಅವರ ಹೃದಯ ಸಿಂಹಾಸನದಲ್ಲಿ ಬಚ್ಚನ್‌, ದಿಲೀಪ್‌, ಖನ್ನಾ ಸಾಹೇಬರು ಅನಭಿಷಿಕ್ತ ದೊರೆಗಳು.

ಹೀರೋಗಳಿಗೆ ವಯಸ್ಸಿನ ಹಂಗಿಲ್ಲ
ಹೀಗೆ ಒಮ್ಮೆ ಗಳಿಸಿದ ತಾರಾಪಟ್ಟವನ್ನು ಅನಾಯಾಸವಾಗಿ ಉಳಿಸಿಕೊಂಡು ಹೋಗುವ ಭಾಗ್ಯ ನಮ್ಮ ತಲೆಮಾರಿನ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಅಮೀರ್‌ ಖಾನ್‌, ಅಕ್ಷಯ್‌ ಕುಮಾರ್‌ ಮುಂತಾದ ಸ್ಟಾರ್‌ಗಳಿಗೂ ಇದೆ. ಇವರೆಲ್ಲ ಅಸಾಧ್ಯ ಪ್ರತಿಭಾವಂತರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟೇ ಅದೃಷ್ಟವಂತರೂ ಕೂಡ. ಇವರನ್ನು ಮೆಚ್ಚಿಕೊಳ್ಳುವವರಿಗೆ ವಯಸ್ಸಿನ ಮಿತಿಯಿಲ್ಲ. ಹಾಗೆಯೇ ಇವರಿಗೂ ತಮ್ಮ ವಯಸ್ಸು ಯಾವತ್ತೂ ಅಡ್ಡಿಯಾಗಿಲ್ಲ. ಐವತ್ತಾದರೂ ಇವರು ಹೀರೋಗಳು. ಇನ್ನೂ ನಾಲ್ಕೈದು ವರ್ಷ ಇವರನ್ನು ಮಾತನಾಡಿಸುವ ಹಾಗಿಲ್ಲ. ಇವರ ಸಿನಿಮಾ ನೋಡಿಕೊಂಡು ಬೆಳೆದವನು ಹೇಗೆ ಇವರನ್ನು ಆರಾಧಿಸುತ್ತಾನೋ ಹಾಗೆಯೇ ಅವನ ಮಗ ಕೂಡ ಟೀವಿಯಲ್ಲಿ ಇವರ ಹಾಡು ಬಂದಾಗ ಡ್ಯಾನ್ಸ್‌ ಮಾಡುತ್ತಾನೆ. ಈ ಸ್ಟಾರ್‌ಗಳು ವಯಸ್ಸಿನ ಅಂತರವನ್ನು ತುಂಬಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗಲೂ ಇವರು ಹೈಸ್ಕೂಲು ಹಾಗೂ ಕಾಲೇಜು ಹುಡುಗರನ್ನು ಸೆಳೆಯುವ ಸಿನಿಮಾ ಮಾಡಬಲ್ಲರು.

ಬಾಲಿವುಡ್‌ ಅಂದರೆ ಹಾಲಿವುಡ್‌ ಅಲ್ಲ. ನಮ್ಮದು ಸ್ಟಾರ್‌ಗಳಿಂದ ನಡೆಯುತ್ತಿರುವ ಉದ್ಯಮ. ಹಾಲಿವುಡ್‌ನ‌ಲ್ಲಿ ಸ್ಟುಡಿಯೋ, ತಂತ್ರಜ್ಞಾನ ಹಾಗೂ ಕತೆಗಳು ಒಂದು ಸಿನಿಮಾದ ಯಶಸ್ಸನ್ನು ನಿರ್ಧರಿಸುತ್ತವೆ. ಅಲ್ಲಿ ಹೊಸ ಹೊಸ ಪ್ರಯೋಗಗಳು ಸಿನಿಮಾವನ್ನು ಗೆಲ್ಲಿಸುತ್ತವೆ ಅಥವಾ ಸೋಲಿಸುತ್ತವೆ. ಆದರೆ, ಬಾಲಿವುಡ್‌ನ‌ಲ್ಲಿ ಒಂದು ಸಿನಿಮಾವನ್ನು ಸಾಮಾನ್ಯವಾಗಿ ಗೆಲ್ಲಿಸುವುದು ಅದರಲ್ಲಿ ನಟಿಸಿದ ಸ್ಟಾರ್‌. ಇಲ್ಲಿ ಒಬ್ಬ ನಿರ್ಮಾಪಕ ಅಥವಾ ನಿರ್ದೇಶಕನಿಗಿರುವ ಮೊದಲ ಸವಾಲು, ಹೀಗೊಬ್ಬ ಸ್ಟಾರ್‌ನನ್ನು ರೂಪಿಸುವುದು. ನಂತರ ಅವನೇ ಇವರನ್ನು ಕಾಪಾಡುತ್ತಾನೆ.

ಹಾಲಿವುಡ್‌ ಜತೆ ಸ್ಪರ್ಧಿಸಬೇಕು
ಆದರೆ, ಕಾಲ ಬದಲಾಗುತ್ತಿದೆ. ಹಿಂದಿನ ತಾರೆಯರೇ ಅದೃಷ್ಟವಂತರು. ಈಗಿನ ಸ್ಟಾರ್‌ಗಳ ಸಿಂಹಾಸನ ನಿಜಕ್ಕೂ ಮುಳ್ಳಿನದು. ಅದರ ಮೇಲೆ ಅವರು ಹಾಯಾಗಿ ಒರಗಿ ಕುಳಿತು ಆರಾಂ ಮಾಡಲು ಸಾಧ್ಯವೇ ಇಲ್ಲ. ಸದಾಕಾಲ ತನ್ನನ್ನು ಸಾಬೀತುಪಡಿಸಿಕೊಳ್ಳಲು ಈಗಿನ ಹೀರೋ ಹೆಣಗಾಡುತ್ತಿರಬೇಕು. ಹೊಸತಾಗಿ ಸಿನಿಮಾಕ್ಕೆ ಬಂದವರು ಒಂದೇ ವರ್ಷದಲ್ಲಿ ಸ್ಟಾರ್‌ ಆಗಬಹುದು, ಮತ್ತು ಒಂದೇ ವರ್ಷದಲ್ಲಿ ಆ ಪಟ್ಟವನ್ನು ಕಳೆದುಕೊಳ್ಳಬಹುದು. ಏಕೆಂದರೆ, ಈಗಿನ ಸ್ಟಾರ್‌ಗಳ ಅಭಿಮಾನಿಗಳ ಮುಂದೆ ಆಯ್ಕೆಗಳು ದೊಡ್ಡ ಸಂಖ್ಯೆಯಲ್ಲಿವೆ. ಅವರು ಹಾಲಿವುಡ್‌ ಸಿನಿಮಾವನ್ನೂ, ಜಗತ್ತಿನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಆ ಸಿನಿಮಾಗಳ ಜೊತೆ ಬಾಲಿವುಡ್‌ನ‌ ಸಿನಿಮಾಗಳನ್ನೂ, ಹಾಲಿವುಡ್‌ನ‌ ಶ್ರೇಷ್ಠ ನಟರ ಜೊತೆ ಬಾಲಿವುಡ್‌ನ‌ ಸ್ಟಾರ್‌ಗಳನ್ನೂ ಹೋಲಿಸುತ್ತಾರೆ. ಕಾಲೇಜಿಗೆ ಹೋಗುವ ಹುಡುಗನಿಗೆ ಇವತ್ತು ರಣಬೀರ್‌ ಕಪೂರ್‌ ಇಷ್ಟವಾದರೆ ನಾಳೆ ಇಮ್ರಾನ್‌ ಖಾನ್‌ ಇಷ್ಟವಾಗಬಹುದು. ಈಗಿನ ಹೀರೋಗಳು ಹಾಲಿವುಡ್‌ ಜೊತೆ ಸ್ಪರ್ಧಿಸಬೇಕು. ಹಾಗಿದ್ದರೆ ಮಾತ್ರ ಇವರಿಗೆ ಉಳಿಗಾಲ. 
ಹೊಸ ತಲೆಮಾರಿನ ಯುವ ಫ್ಯಾನ್‌ಗಳು ಯಾರನ್ನೂ ಕುರುಡಾಗಿ ಆರಾಧಿಸುವುದಿಲ್ಲ. ಪ್ರತಿಭೆಗೆ ಮಾತ್ರ ಅವರು ಮಣೆ ಹಾಕುತ್ತಾರೆ. ಅವರನ್ನು ಮೆಚ್ಚಿಸಬೇಕು ಅಂದರೆ ಅದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ.

ಪ್ರತಿಭೆಯಿದ್ದರಷ್ಟೇ ಇಲ್ಲಿ ಬೆಲೆ
ರಾಜಕೀಯದಲ್ಲಿರುವಂತೆ ವಂಶಪಾರಂಪರ್ಯ ಜನಪ್ರಿಯತೆ ಬಾಲಿವುಡ್‌ನ‌ಲ್ಲಿ ಯಾವತ್ತೂ ಯಾರನ್ನೂ ಬೆಳೆಸಿಲ್ಲ. ಅಮಿತಾಭ್‌, ದಿಲೀಪ್‌, ರಾಜೇಶ್‌ ಖನ್ನಾ ಮುಂತಾದವರು ತಮ್ಮದೇ ಪ್ರಯತ್ನದಿಂದ ಬೆಳೆದವರು. ಈಗ ಪ್ರಸಿದ್ಧ ತಂದೆ-ತಾಯಿಯ ಮಕ್ಕಳಾದ ಕೆಲ ಹೀರೋಗಳು ಇದ್ದಾರಾದರೂ ಅವರು ಆ ತಂದೆ-ತಾಯಿಯ ಮಕ್ಕಳು ಎಂಬ ಕಾರಣಕ್ಕೆ ಪ್ರಸಿದ್ಧಿಗೆ ಬಂದವರಲ್ಲ. ಆ ಕಾರಣಕ್ಕೆ ಅವರನ್ನು ಯಾರೂ ಮೆಚ್ಚಿಕೊಳ್ಳುವುದೂ ಇಲ್ಲ. ಏಕೆಂದರೆ, ಪ್ರೇಕ್ಷಕರು ಸಿನಿಮಾ ನಟನ ಇತಿಹಾಸ ನೋಡುವುದಿಲ್ಲ. ಅವರು ತೆರೆಯ ಮೇಲೆ ಆತನ ವರ್ತಮಾನವನ್ನು ನೋಡುತ್ತಾರೆ. ನಂತರ ಅದನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ಅಳೆಯುತ್ತಾರೆ. 

ಇವತ್ತಿನ ಸ್ಟಾರ್‌ಗಳಿಗೆ ಭವಿಷ್ಯ ಬಹಳ ಕಷ್ಟದ್ದು. ಮೂರು ಸಿನಿಮಾದಲ್ಲಿ ಗೆದ್ದಮಾತ್ರಕ್ಕೆ ಅವನ ನಾಲ್ಕನೇ ಸಿನಿಮಾವನ್ನು ಜನರು ನೋಡುತ್ತಾರೆಂಬ ಯಾವುದೇ ಖಾತ್ರಿಯಿಲ್ಲ. ಹೀಗಿರುವ ಒಂದು ತಲೆಮಾರು ಶಾರುಖ್‌, ಸಲ್ಮಾನ್‌, ಅಮೀರ್‌ ಖಾನ್‌ಗಳೊಂದಿಗೇ ಮುಗಿಯುತ್ತದೆ. ನಂತರದ ತಲೆಮಾರಿನ ಪ್ರೇಕ್ಷಕರ ಪ್ರೀತಿ ಉಳಿಸಿಕೊಳ್ಳಬೇಕೆಂದರೆ ಈಗಿನ ಯುವ ನಟರು ಪ್ರತಿ ಸಿನಿಮಾದಲ್ಲೂ ತಮ್ಮ ಗರಿಷ್ಠ ಪ್ರತಿಭೆಯನ್ನು ಹೊರಹಾಕಲೇಬೇಕು. ಏಕೆಂದರೆ, ಈಗಿನ ಸಿನಿಮಾ ಪ್ರೇಮಿ ಬಹಳ ವಿಮರ್ಶೆ ಮಾಡುತ್ತಾನೆ. ಅವನು ನಟನೊಬ್ಬನಿಗೆ “ಕಚ್ಚಿಕೊಳ್ಳುವುದು’ ಅಪರೂಪ. ಆದರೆ, ಒಮ್ಮೆ “ಕಚ್ಚಿಕೊಂಡರೆ’ ಅವನೂ ಸ್ಟಾರ್‌ಗಳನ್ನು ಸೃಷ್ಟಿಸಬಲ್ಲ. ರಣಬೀರ್‌ ಕಪೂರ್‌ ವಿಷಯದಲ್ಲಾಗಿದ್ದು ಇದೇ. ರಣಬೀರ್‌ ಸಿನಿಮಾ ರಂಗಕ್ಕೆ ಬಂದು ಐದು ವರ್ಷವಾಯಿತು ಅಷ್ಟೆ. ಆದರೆ, ಈಗಲೇ ಆತ ಒಂದು ಸಿನಿಮಾಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿದ್ದಾನೆ.

ಮುಂದೆ?
ಗೊತ್ತಿಲ್ಲ. ಏಕೆಂದರೆ ಈಗಿನ ಸ್ಟಾರ್‌ಪಟ್ಟ ಬಹಳ ಅಸ್ಥಿರ. ನಟನೆಯಷ್ಟೇ ಅದನ್ನು ಉಳಿಸಬಲ್ಲುದು.

– ಕರಣ್‌ ಜೋಹರ್‌
ಪ್ರಸಿದ್ಧ ಬಾಲಿವುಡ್‌ ನಿರ್ದೇಶಕ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.