ನಮ್ಮ ಮಕ್ಕಳಿಗೆ ಏನು ಕಲಿಸಬೇಕು?


Team Udayavani, Mar 24, 2017, 4:36 PM IST

Narayana-Murthy.jpg

ಪ್ರಾಥಮಿಕ, ಮಾಧ್ಯಮಿಕ, ಉನ್ನತ- ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಏನಾಗಿರಬೇಕು? – ನಮ್ಮ ಮಕ್ಕಳಿಗೆ, ಯುವ ಸಮುದಾಯಕ್ಕೆ ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದು! ಸಮಸ್ಯೆ ಬಿಡಿಸುವುದನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ಸಾಕು. ತರಗತಿಯಲ್ಲಿ ತಮಗೆ ಲಭಿಸಿದ ಶಿಕ್ಷಣವನ್ನು ಉಪಯೋಗಿಸಿಕೊಂಡು ಸುತ್ತಮುತ್ತಲಿನ ಸವಾಲುಗಳನ್ನು ಬಗೆಹರಿಸಲು ನಮ್ಮ ಮಕ್ಕಳು ಶಕ್ತರಿದ್ದಾರೆಯೇ -ಇದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.

ಸ್ವಲ್ಪ ಸಮಯದ ಹಿಂದೆ, ಒಂದು ಪ್ರೌಢಶಾಲೆಗೆ ಭೇಟಿ ನೀಡಿದ್ದಾಗ “ನೀನೆಷ್ಟು ಭಾರ ಎತ್ತಬಲ್ಲೆ?’ ಎಂದು ವಿದ್ಯಾರ್ಥಿಯೊಬ್ಬನನ್ನು ಪ್ರಶ್ನಿಸಿದೆ. ಹತ್ತು ಕೆಜಿ ಎತ್ತಬಲ್ಲೆ ಎಂದು ಆತ ಉತ್ತರಿಸಿದ. “ಹಾಗಾದರೆ ನಿನ್ನ ಸಾಮರ್ಥ್ಯದ ಹತ್ತು ಪಟ್ಟು, 60 ಕೆಜಿ ಭಾರವನ್ನು ನೀನು ಎತ್ತಬಹುದಾದ ಸ್ಥಳದ ಬಗ್ಗೆ ನಿನಗೆ ಗೊತ್ತಾ?’ ಎಂಬ ನನ್ನ ಮರುಪ್ರಶ್ನೆಗೆ ಆತ ಇಲ್ಲವೆಂದು ತಲೆಯಾಡಿಸಿದ. ಚಂದ್ರನ ಗುರುತ್ವಾಕರ್ಷಣೆಯ ಶಕ್ತಿ ಭೂಮಿಯ ಆರನೇ ಒಂದಂಶವಷ್ಟೇ ಇರುವುದರಿಂದ, ಚಂದ್ರನ ಮೇಲೆ ನಿಂತಾಗ ಭೂಮಿಯಲ್ಲಿ ಎತ್ತುವ ಭಾರಕ್ಕಿಂತ ಆರು ಪಟ್ಟು ಹೆಚ್ಚು ಭಾರವನ್ನು ಹೊರಬಲ್ಲ ಸಾಮರ್ಥ್ಯ ನಿನಗೊದಗುತ್ತದೆ ಎಂದು ವಿವರಿಸಿ ಹೇಳಿದೆ.
 
ಸಂಜೆ ಅಸ್ತಮಿಸುವಾಗ ಸೂರ್ಯ ಯಾಕೆ ಕೆಂಬಣ್ಣ ತಾಳುತ್ತಾನೆ, ಬಾನು ಯಾಕೆ ನೀಲಿ ಬಣ್ಣದ್ದಾಗಿದೆ, ಬಾಹ್ಯಾಕಾಶದಲ್ಲಿ ಬೆಳಕಿದೆಯೇ ಅಥವಾ ಅಂಧಕಾರವಿದೆಯೇ – ಹೀಗೆ ನಿಸರ್ಗಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಅವನ ಸಹಪಾಠಿಗಳಿಗೂ ಕೇಳಿದೆ. ಪಠ್ಯಪುಸ್ತಕದಲ್ಲಿ ಒದಗಿಸಲಾದ ಪ್ರಶ್ನೆಗಳಿಗೆ ರೂಢಿಯಂತೆ ಕಂಠಪಾಠ ಮಾಡಿ, ನೆನಪಿಟ್ಟುಕೊಂಡು ಸುಲಭವಾಗಿ ಉತ್ತರಿಸಬಲ್ಲ ಆ ವಿದ್ಯಾರ್ಥಿಗಳಿಗೆ ನನ್ನ ಯಾವುದೇ ಪ್ರಶ್ನೆಗಳಿಗೆ ಜವಾಬು ನೀಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ತರಗತಿಯಲ್ಲಿ ಕಲಿತ ಥಿಯರಿಯನ್ನು ನಿಜ ಬದುಕಿನಲ್ಲಿ ಅನ್ವಯಿಸುವುದು ಅವರಿಗೆ ತಿಳಿದಿಲ್ಲ!
ಭಾರತದಲ್ಲಿ ನಾವು ನಮ್ಮ ವಿದ್ಯಾರ್ಥಿಗಳನ್ನು, ಮಕ್ಕಳನ್ನು ಕಂಠಪಾಠ ಮಾಡಲು, ಉರು ಹೊಡೆಯಲು ಪ್ರೋತ್ಸಾಹಿಸುತ್ತೇವೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಅತಿದೊಡ್ಡ ದುರಂತ. ನಮ್ಮ ಗಣಿತ ಮತ್ತು ವಿಜ್ಞಾನ ಶಿಕ್ಷಣದ ಮೊತ್ತಮೊದಲ ಹೆಜ್ಜೆಯೇ ನೈಸರ್ಗಿಕ ವಿದ್ಯಮಾನಗಳನ್ನು ಸಿದ್ಧಾಂತಗಳನ್ನು ಅನ್ವಯಿಸಿ ಅರ್ಥ ಮಾಡಿಕೊಳ್ಳುವುದಾಗಬೇಕು. 

ಇಂತಹ ಉದ್ದೇಶ ಸಾಧನೆಗೆ, ತಮ್ಮ ಸುತ್ತಮುತ್ತಲಿನ ಪ್ರತಿಯೊಂದನ್ನೂ ಕುತೂಹಲದಿಂದ ಗಮನಿಸುವುದನ್ನು ಮಕ್ಕಳಿಗೆ ಕಲಿಸುವ ಬೋಧನಾ ವಿಧಾನವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಇದು ನಮ್ಮ ಬೋಧಕ ವೃಂದವನ್ನೂ ಸತತವಾಗಿ ಕೌಶಲವೃದ್ಧಿಗೆ, ಅಪ್‌ಡೇಟ್‌ ಆಗಿರುವುದಕ್ಕೆ ಕೂಡ ಪ್ರೇರೇಪಿಸುತ್ತದೆ, ಒತ್ತಾಯಿಸುತ್ತದೆ. ನಿಸರ್ಗದ ಇತಿಮಿತಿಗಳಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪಯಣದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದಂತಹ ವಿಷಯಗಳ ಸಿದ್ಧಾಂತ, ತಣ್ತೀಗಳನ್ನು ಉಪಯೋಗಿಸಿ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು ಮೊದಲ ಹೆಜ್ಜೆ. ದೂರವಾಣಿಯಾಗಲಿ, ದೂರದರ್ಶನವಾಗಲಿ, ಮೊಟಾರು ವಾಹನಗಳಾಗಲಿ, ರಕ್ತದೊತ್ತಡ ಅಳೆಯುವ ಯಂತ್ರಗಳಾಗಲಿ -ಎಲ್ಲವೂ ಅನ್ವೇಷಣೆಗೊಂಡದ್ದು ಹೀಗೆ. 

ಮಕ್ಕಳು ನಮ್ಮ ಸಂಪತ್ತು
ಇವತ್ತು ನಮ್ಮ ಗಮನವೆಲ್ಲ ಕೇಂದ್ರೀಕೃತವಾಗಿರುವುದು ಶಾಲೆಯಲ್ಲಿ ಏನನ್ನು ಕಲಿಸಿದ್ದಾರೆಯೋ ಅದನ್ನು ನಮ್ಮ ಮಕ್ಕಳು ಆದಷ್ಟು ಚೆನ್ನಾಗಿ ನೆನಪಿನಲ್ಲಿ ಇರಿಸಿಕೊಂಡು ಪರೀಕ್ಷೆಯಲ್ಲಿ ಪಾಸಾಗುವುದರ ಮೇಲೆ. ಅದಕ್ಕೆ ನಮ್ಮೆಲ್ಲ ಪ್ರಯತ್ನಗಳನ್ನೂ ಧಾರೆಯೆರೆದು ಮಕ್ಕಳನ್ನು ಪ್ರೋತ್ಸಾಹಿಸುತ್ತೇವೆ. ಭಾರತದಲ್ಲಿ ಅತ್ಯುತ್ತಮ ಬೌದ್ಧಿಕ ಮಟ್ಟದ ಯುವ ಸಮುದಾಯ ಇದ್ದರೂ ಕಳೆದ 700 ವರ್ಷಗಳಲ್ಲಿ ಭಾರತೀಯರು ಗಮನಾರ್ಹವಾದ, ಯೋಗ್ಯವಾದ ಏನನ್ನೂ ಅನ್ವೇಷಿಸಿಲ್ಲ ಎಂಬ ಕಟು ವಾಸ್ತವಕ್ಕೆ ಇದೇ ಕಾರಣ.

ನಮ್ಮ ಅತ್ಯಂತ ಅಮೂಲ್ಯವಾದ ಸಂಪತ್ತೆಂದರೆ, ನಮ್ಮ ಮಕ್ಕಳು. ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಆಲೋಚಿಸಲು, ಮಾನಸಿಕ ಚೋದನೆಗೊಳಪಡಲು, ಎಲ್ಲವನ್ನೂ ಪ್ರಶ್ನಿಸಲು ಪ್ರೋತ್ಸಾಹಿಸಬೇಕಾಗಿದೆ. ತಮ್ಮ ಸುತ್ತಮುತ್ತಲಿನ ನಿಸರ್ಗವನ್ನು ಗಮನಿಸಿ ಅದರ ಬಗ್ಗೆ ಮನಸ್ಸಿನಲ್ಲಿ ಉದ್ಭವಿಸುವ ಕುತೂಹಲ ಮತ್ತು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದಕ್ಕೆ ನಾವು ನಮ್ಮ ಮಕ್ಕಳನ್ನು ಹುರಿದುಂಬಿಸಬೇಕಿದೆ. ಉತ್ತರಗಳನ್ನು ಕಂಡುಕೊಳ್ಳುವ ಈ ಪ್ರಕ್ರಿಯೆ ನಾಳೆ ಭಾರತದಲ್ಲಿ ಉತ್ತಮ ಸ್ವಂತಿಕೆಯ ಉತ್ತಮ ಅನ್ವೇಷಣೆಗಳಿಗೆ ಅಡಿಗಲ್ಲಾದೀತು. ಕಳೆದ 700 ವರ್ಷಗಳಲ್ಲಿ ಮೈಲಿಗಲ್ಲು ಅನ್ನಿಸುವಂತಹ ಯಾವುದೇ ಸಂಶೋಧನೆ, ಅನ್ವೇಷಣೆ ಭಾರತದಲ್ಲಿ ನಡೆಯಲಿಲ್ಲ ಅನ್ನುವುದು ಬಹಳ ಕಳವಳಕಾರಿ ಸಂಗತಿ. ಅದಕ್ಕೆ ಹಿಂದೆ ಬದುಕಿದ್ದ ನಮ್ಮ ಪೂರ್ವಸೂರಿಗಳು ವಿಜ್ಞಾನ, ಗಣಿತ, ಶಸ್ತ್ರವೈದ್ಯಕೀಯ, ಖಗೋಳ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಬಲು ಮೇಧಾವಿಗಳಾಗಿದ್ದರು. 

ಗಣಿತ ಮತ್ತು ವಿಜ್ಞಾನ ಕ್ಷೇತ್ರಗಳ ಸಾರ್ವಕಾಲಿಕ ಮಹತ್ವದ ಶೋಧಗಳಲ್ಲಿ ಒಂದಾಗಿರುವ ದಶಮಾನ ಪದ್ಧತಿ ಕಂಡುಹಿಡಿದದ್ದು ಯಾರು – ಭಾರತೀಯರೇ ತಾನೆ!

ಸಾಮಾನ್ಯ ಜ್ಞಾನ ಬೆಳೆಸಿ
ಕಲಿಕೆ ಅನ್ನುವುದು ನಮ್ಮಲ್ಲಿ ಸಾಮಾನ್ಯ ಜ್ಞಾನವನ್ನೂ ಉಂಟುಮಾಡಬೇಕು. ಎಷ್ಟೇ ಬುದ್ಧಿವಂತರಾಗಿದ್ದರೂ, ಎಷ್ಟೆಲ್ಲ ಜ್ಞಾನವಿದ್ದರೂ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಪ್ರಯೋಜನವಿಲ್ಲ. ಹೀಗಾಗಿ ಆ ಸಾಮಾನ್ಯ ಜ್ಞಾನವನ್ನು ಉಪಯೋಗಿಸಲು, ಯಾರೂ ತುಳಿಯದ ಹೊಸ ಹಾದಿ ಹಿಡಿಯುವ ಧೈರ್ಯ ತೋರಲು, ವೈಫ‌ಲ್ಯಗಳಿಗೆ ಹೆದರಿ ಹಿಂದೆ ಸರಿಯದ ಧೃತಿಯನ್ನು ಬೆಳೆಸಿಕೊಳ್ಳಲು, ಸದಾ ಕುತೂಹಲಿಗರಾಗಲು ಹಾಗೂ ಸ್ವತಂತ್ರ ಮತ್ತು ವಿಮಶಾìತ್ಮಕ ಆಲೋಚನೆಯನ್ನು ರೂಢಿಸಿಕೊಳ್ಳಲು ನಾವು ನಮ್ಮ ಮಕ್ಕಳನ್ನು ಸಿದ್ಧಗೊಳಿಸಬೇಕಾಗಿದೆ. ಇದು ಅಸಾಮಾನ್ಯ ಅನ್ವೇಷಣೆಗಳಿಗೆ ಅವರನ್ನು ಸನ್ನದ್ಧರನ್ನಾಗಿಸುತ್ತದೆ. ಈ ಉದ್ದೇಶ ಸಾಧನೆಗಾಗಿ ನಮ್ಮ ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಪುನಾರೂಪಿಸಬೇಕು. 
  
ಇವತ್ತು ನಾವು ಮಾಡುತ್ತಿರುವುದೇನು – ತರಗತಿಯಲ್ಲಿ ಕಲಿತದ್ದನ್ನು ಉರು ಹೊಡೆದು, ಪರೀಕ್ಷೆಯಲ್ಲಿ ನೆನಪಿಸಿಕೊಂಡು ಉತ್ತರ ಬರೆದು ಒಳ್ಳೆಯ ಅಂಕ ಗಳಿಸುವುದಕ್ಕೆ ಪ್ರೋತ್ಸಾಹ ನೀಡುವುದು ಮಾತ್ರ! ಆದರೆ ಜೀವನ ಎಂದರೇನು – ದಿನವೂ ಯಾವುದೇ ಪೂರ್ವಸೂಚನೆಯಿಲ್ಲದೆ ಧುತ್ತನೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು, ಅಲ್ಲವೆ? 

ಸರಕಾರಿ ಶಾಲೆಗಳಿಂದ ಸದೂರ 
ನಾನು ಶ್ರೀನಿವಾಸಪುರ, ಮಧುಗಿರಿ, ಮಂಡ್ಯದಂತಹ ಸ್ಥಳಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದೆ. ನನ್ನ ತಂದೆ ಅಲ್ಲೆಲ್ಲ ಪ್ರೌಢಶಾಲಾ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಅತ್ಯುತ್ತಮ ಶಿಕ್ಷಕರು ನನಗೆ ಲಭಿಸಿದ್ದು ನನ್ನ ಭಾಗ್ಯವಿಶೇಷ. ಈಗಲೂ ಸರಕಾರಿ ಶಾಲೆಗಳಲ್ಲಿ ಅದೆಷ್ಟೋ ಮಂದಿ ಅತ್ಯುತ್ತಮ ಶಿಕ್ಷಕ – ಶಿಕ್ಷಕಿಯರಿದ್ದಾರೆ. ವಿಷಾದದ ಸಂಗತಿ ಎಂದರೆ, ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳು ಮತ್ತು ಶಿಕ್ಷಣದ ಗುಣಮಟ್ಟದ ಬಗೆಗಿನ ಒತ್ತು ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಹೆತ್ತವರು ಸರಕಾರಿ ಶಾಲೆಗಳಿಂದ ದೂರ ಸರಿಯುತ್ತಿದ್ದಾರೆ. ಆದರೆ, ಸಮಾಜದ ಪ್ರಮುಖ ಮೂಲಗಳು ಈ ಕಳವಳಕಾರಿ ಬೆಳವಣಿಗೆಯ ಬಗ್ಗೆ ಎತ್ತುತ್ತಿರುವ ಧ್ವನಿಯನ್ನು ನಾವ್ಯಾರೂ ಕಿವಿಗೆ ಹಾಕಿಕೊಳ್ಳುತ್ತಲೇ ಇಲ್ಲ. 

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣದ ಕತೆ ಹೀಗಾದರೆ, ಉನ್ನತ ಶಿಕ್ಷಣದ ವಿಚಾರದಲ್ಲಿಯೂ ನಾವು ಬಹಳ ಹಿಂದೆ ಉಳಿದುಬಿಟ್ಟಿದ್ದೇವೆ. ಅಮೆರಿಕದ ವಿಶ್ವವಿದ್ಯಾನಿಲಯಗಳತ್ತ ನೋಡಿದರೆ, ಅವುಗಳಿಗೆ ಅಪಾರ ಪ್ರಮಾಣದ ಅನುದಾನ ಸರಕಾರದಿಂದ, ದೇಣಿಗೆಗಳಿಂದ ಹರಿದು ಬರುತ್ತದೆ. ವಿಶ್ವವಿದ್ಯಾನಿಲಯಗಳಿಗೆ ನಿಧಿ ಒದಗಿಸುವ ನ್ಯಾಶನಲ್‌ ಸೈನ್ಸ್‌ ಫೌಂಡೇಶನ್‌ನ ಕೆಲಸಕಾರ್ಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಭಾರತದಲ್ಲಿ ಐಐಟಿ ಅಥವಾ ಐಐಎಂ ಮುಖ್ಯಸ್ಥರನ್ನು ಕೇಂದ್ರ ಸರಕಾರ ನೇಮಿಸುತ್ತದೆ. ಇಂತಹುದನ್ನು ಭಾರತವಲ್ಲದೆ ಬೇರೆಲ್ಲೂ ನಾನು ಕಂಡಿಲ್ಲ. ನಾನು ಅಮೆರಿಕದ ಹಲವಾರು ವಿಶ್ವವಿದ್ಯಾನಿಲಯಗಳ ಮಂಡಳಿಗಳಲ್ಲಿ ಕೆಲಸ ಮಾಡಿದ್ದೇನೆ, ಅಲ್ಲಿನ ವ್ಯವಸ್ಥೆ ಇಲ್ಲಿನದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿನದ್ದು ನಿಯಂತ್ರಣ ಮತ್ತು ಅದನ್ನು ವಿತ್ತೀಯ ನೆರವಿನ ಜತೆಗೆ ತಳುಕು ಹಾಕುವ ಸಂಸ್ಕೃತಿ – ಮನೋಭಾವ.
 
ಮಧ್ಯಮ ವರ್ಗದಲ್ಲಿ ನಿರಾಶೆ

ಭಾರತೀಯ ಸಮಾಜದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಭವಿಷ್ಯದ ಬಗ್ಗೆ ನೈರಾಶ್ಯ ಭಾವ ತಾಳುತ್ತ ಸರಕಾರದಿಂದ ದೂರ ಸರಿಯುತ್ತಿವೆ. ಅವರು ಶಾಲೆ, ಆಸ್ಪತ್ರೆ, ಸಾರಿಗೆ, ಪಡಿತರ ಮತ್ತು ಸಾರ್ವಜನಿಕ ವಸತಿ ವಿಷಯಗಳಲ್ಲಿ ಸರಕಾರವನ್ನು ಅವಲಂಬಿಸಿಲ್ಲ. ಹಾಗಾದರೆ ಅವರನ್ನು ಬಾಧಿಸುವ ಸಂಗತಿಯೇನು? ಯಾವುದನ್ನು ಒದಗಿಸುತ್ತಿಲ್ಲ ಎಂದು ಅವರು ಸರಕಾರವನ್ನು ಹೀಗಳೆಯುತ್ತಿದ್ದಾರೆ? ಹೀನಾಯ ಸ್ಥಿತಿಯಲ್ಲಿರುವ ನಮ್ಮ ರಸ್ತೆಗಳು ಮತ್ತು ವಾಯುಮಾಲಿನ್ಯ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳಲ್ಲಿ ಅಸಂತೋಷ, ಕಳವಳವನ್ನು ಉಂಟು ಮಾಡಿದೆ. ಮಾಲಿನ್ಯ ಮುಕ್ತ ವಾತಾವರಣ ಮತ್ತು ಟ್ರಾಫಿಕ್‌ ಮುಕ್ತ ಉತ್ತಮ ರಸ್ತೆಗಳಲ್ಲಿ ಕಚೇರಿ, ಮನೆ, ವಿಮಾನ ನಿಲ್ದಾಣ, ಶಾಲೆ ಇತ್ಯಾದಿ ಗಮ್ಯಗಳೆಡೆಗೆ ಪ್ರಯಾಣಿಸಲಾಗುತ್ತಿಲ್ಲವಲ್ಲ ಎಂಬ ನೋವು ಅವರದು. ಇದೊಂದಕ್ಕಾಗಿ ಮಾತ್ರ ಅವರು ಸರಕಾರವನ್ನು ಅವಲಂಬಿಸಿದ್ದಾರೆ. 

ಇದಕ್ಕೆ ತಮಾಷೆಯ ಒಂದು ಪರಿಹಾರ ನಿದರ್ಶನವನ್ನು ಹೇಳಬಹುದು- ಬ್ರೆಜಿಲ್‌ನಲ್ಲಿ ಅಲ್ಲಿನ ಜನರು ವಾಹನಗಳು ಇಡಿಕಿರಿದ ರಸ್ತೆಗಳಲ್ಲಿ ಓಡಾಡುವುದನ್ನು ತ್ಯಜಿಸಿ ಹೆಲಿಕಾಪ್ಟರುಗಳ ಮೂಲಕವೇ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುತ್ತಾರೆ!

– ಎನ್‌.ಆರ್‌.ನಾರಾಯಣಮೂರ್ತಿ
ಇನ್ಫೋಸಿಸ್‌ ಸ್ಥಾಪಕ

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.