ಮುಂಬಯಿ ಕಿನಾರೆಯಲ್ಲಿ ಕಂಡ ಗಣಪ


Team Udayavani, Sep 22, 2017, 10:42 AM IST

22-STATE-23.jpg

ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪನ ಲೀಡ್‌ ಪೇಂಟ್‌ ಲೇಪಿತ  ಕೈಯೊಂದನ್ನು ನಾನು ಎತ್ತಿಕೊಂಡೆ. ಆ ಕೈಯನ್ನು ನೋಡುತ್ತಾ ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಕೊರೆಯತೊಡಗಿತು. “”ಜ್ಞಾನದ ಅಧಿಪತಿ ಗಣಪ ತನ್ನ ಹೆಸರಿನಲ್ಲಿ ಈ ಮನುಜರೆಲ್ಲ ಮಾಡುತ್ತಿರುವ ಹಾನಿಯನ್ನು ನೋಡಿ ಏನಂದು ಕೊಳ್ಳುತ್ತಿರಬಹುದು?” 

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ನಿಘ್ನಂ ಕುರು ಮೇ ದೇವ ಸರ್ವ ಕಾಯೇìಷು ಸರ್ವದಾ’
ಪ್ರಚಂಡ ಶರೀರವಿರುವ, ಕೋಟಿ ಸೂರ್ಯರುಗಳ ತೇಜವಿರುವ ಹೇ ಗಣಪತಿ ದೇವನೇ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ಯಾವಾಗಲೂ ದೂರಗೊಳಿಸು, ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ. ಗಜವದನ, ವಿಘ್ನನಿವಾರಕ, ಸಾಧನೆ ಮತ್ತು ಸಂತೋಷದ ದೇವರೆನಿಸಿಕೊಳ್ಳುವ ಗಣಪತಿಯು ನನ್ನ ಅಮ್ಮನ ಅಚ್ಚುಮೆಚ್ಚಿನ ದೈವ. ಆಕೆ ತನ್ನ ಜೀವನ ಪರ್ಯಂತ ಗಣೇಶ ಮೂರ್ತಿಗಳನ್ನು ಸಂಗ್ರಹಿಸುತ್ತಾ ಬಂದಿದ್ದಾಳೆ. ನಾನೂ ಅಷ್ಟೇ ಎಲ್ಲೇ ಹೋಗಲಿ, ಅಲ್ಲಿ ಕರಕುಶಲ ಗಣಪತಿಯ ವಿಗ್ರಹಗಳೇನಾದರೂ ಕಣ್ಣಿಗೆ ಬಿದ್ದರೆ ಅದನ್ನು ಮನೆಗೆ ತಂದು ಅಮ್ಮನ ಸಂಗ್ರಹವನ್ನು ಹೆಚ್ಚಿಸುತ್ತಿದ್ದೇನೆ. “”ಗಣಪತಿಯನ್ನು ನೋಡಿದಾಗಲೆಲ್ಲ ನನಗೆ  ಸಂತೋಷವಾಗುತ್ತದೆ” ಎಂದು ಯಾವಾಗಲೂ ಹೇಳುತ್ತಾಳೆ ಅಮ್ಮ. ನನಗೂ ಅಷ್ಟೆ. ಗಣಪನ ಕಂಡರೆ ಮನ ಮುದಗೊಳ್ಳುತ್ತದೆ. 

ಸಮಯ ಬೆಳಗಿನ 5 ಗಂಟೆ. ನಾನು ಮುಂಬಯಿಯ ಪ್ರಖ್ಯಾತ ಜುಹೂ ಬೀಚ್‌ನಲ್ಲಿ ಸ್ನೇಹಿತರೊಡನೆ ನಿಂತಿದ್ದೆ. ಹಿಂದಿನ ರಾತ್ರಿಯೇ ಗಣೇಶ ವಿಸರ್ಜನೆ ಮುಗಿದಿತ್ತು. ಹೀಗಾಗಿ ಬೀಚ್‌ ಅನ್ನು ಸ್ವಚ್ಛಗೊಳಿಸಲು ಬಂದಿದ್ದ ಮುಂಬಯಿ ಮಹಾನಗರಪಾಲಿಕೆಯ ಕೆಲಸಗಾರರಿಗೆ ಸಹಾಯ ಮಾಡಲು ಅಲ್ಲಿ ನೂರಾರು ಯುವ ಜನರು ಬಂದಿದ್ದರು. ಮುಂಬಯಿ ಪ್ರಪಂಚದ ಅತ್ಯಂತ ವೈವಿಧ್ಯಮಯ ಜೀವ ಸಂಕುಲಗಳನ್ನು ಹೊಂದಿರುವ ಕರಾವಳಿಗಳಲ್ಲಿ ಒಂದು. ಈ ಜಲ ಜೀವವೈವಿಧ್ಯವನ್ನು ಸಂರಕ್ಷಿಸುವ ಮಹೋನ್ನತ ಜವಾಬ್ದಾªರಿ ಕೇವಲ ಸಂರಕ್ಷಣಾವಾದಿಗಳ ಮೇಲಷ್ಟೇ ಬೀಳಬಾರದು, ಬದಲಾಗಿ ಮುಂಬಯಿ ನಗರಿಯ 2 ಕೋಟಿ ಜನರ ಹೆಗಲ ಮೇಲೂ ಈ ಜವಾಬ್ದಾರಿಯಿದೆ ಎನ್ನುವುದು ನನ್ನ ಅಭಿಪ್ರಾಯ. ಈಗ ಸಾಗರದಲ್ಲಿ ಪ್ಲಾಸ್ಟಿಕ್‌ ಸೇರಿಕೊಳ್ಳುತ್ತಿದೆ, ಫಿಲ್ಟರ್‌ ಮಾಡದ ವಿಷಕಾರಿ ತ್ಯಾಜ್ಯಗಳ ಪ್ರಮಾಣವೂ ಅಧಿಕವಾಗಿದೆ. ಇದರ ಜತೆಗೆ ಗಣೇಶ ಮೂರ್ತಿಗಳ ನಿರ್ಮಾಣಕ್ಕೆ ಬಳಸಲಾಗುವ ಕೆಮಿಕಲ್‌ಗ‌ಳು ನಮ್ಮ ನೀರು ಮತ್ತು ಆಹಾರ ಸರಪಳಿಗೆ ವಿಷವಿಕ್ಕುತ್ತಿದೆ ಎನ್ನುವುದನ್ನು ನಾವು ಅವಗಣಿಸುವಂತಿಲ್ಲ. 

ಜುಹೂ ಬೀಚ್‌ ಕ್ಲೀನ್‌ ಮಾಡಲು ಸುಮಾರು 1,200 ಜನ ಸೇರಿದ್ದೆವು. “ಸಮಸ್ಯೆಗೆ ಪರಿಹಾರ ಹುಡುಕುವ ಹಾದಿಯಲ್ಲಿ ನಾವೂ ನಿಮ್ಮ ಜತೆಗಿದ್ದೇವೆ’ ಎಂದು ಮುಂಬಯಿ ಮುನ್ಸಿಪಾಲಿಟಿಗೆ ಅರ್ಥಮಾಡಿಸುವುದು ಎಲ್ಲರ ಉದ್ದೇಶವಾಗಿತ್ತು. ಮುಂಬಯಿ ನಗರಿ ವಿಷಕಾರಿಯಾಗಿ ಏಕೆ ಬದಲಾಗುತ್ತಿದೆ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣವೆಂದರೆ “ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸೋಣ’ ಎನ್ನುವ ಮನಸ್ಥಿತಿಗಳ ಕೊರತೆ ಢಾಳಾಗಿರುವುದು.  ಅಂದರೆ ಮೂಲದಲ್ಲೇ ವಿಂಗಡಣೆಯಾಗದ ಕಸದಿಂದಾಗಿ ನಮ್ಮ ಗಾಳಿ, ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತಿವೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಪೂರಕವಾಗಿ ವರ್ತಿಸಲು ನಾವೆಲ್ಲ ಸೋಲುತ್ತಿರುವುದರಿಂದಲೇ ಇಂದು ಕಸದ/ತ್ಯಾಜ್ಯದ ಕೆಟ್ಟ ಪರಿಣಾಮಗಳನ್ನು ನಾವೆಲ್ಲ ಎದುರಿಸುವಂತಾಗಿದೆ. ಯಾವ ವಸ್ತು ಜೈವಿಕ ವಿಘಟನೆಗೆ ಒಳಗಾಗುವುದಿಲ್ಲವೋ/ ಕೊಳೆಯುವುದಿಲ್ಲವೋ ಅದು ಎಲ್ಲೂ ಹೋಗುವುದಿಲ್ಲ, ಇಲ್ಲೇ ಜಮೆಯಾಗುತ್ತಾ ಅಪಾಯಕಾರಿ ಮಟ್ಟ ತಲುಪುತ್ತದೆ ಎನ್ನುವ ವಾಸ್ತವವನ್ನು ನಾವು ಮೊದಲಿನಿಂದಲೂ ಕಡೆಗಣಿಸುತ್ತಲೇ ಬಂದಿದ್ದೇವೆ. ಹೀಗಾಗೇ ವಿಷಕಾರಿ ತ್ಯಾಜ್ಯವು ಪರಿಸರವನ್ನಷ್ಟೇ ಅಲ್ಲದೆ ನಮ್ಮ ಆರೋಗ್ಯಕ್ಕೂ ಹಾನಿ ಮಾಡಲಾರಂಭಿಸಿದೆ. ಇಂದು ನಮ್ಮ ಕನ್ಸಂಪ್ಶನ್‌ ಪ್ರಮಾಣ ಹೆಚ್ಚಾಗುತ್ತಿದೆ. ತತ್ಪರಿಣಾಮ ಕಸದ ಪ್ರಮಾಣವೂ ಅಧಿಕವಾಗುತ್ತಾ ಹೊರಟಿದೆ. ಇದು ಸಾಲದೆಂಬಂತೆ ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳಿಲ್ಲದಿರುವುದರಿಂದ ತುಂಬಿ ಹರಿಯುವ ಗುಂಡಿಗಳೇ ಆವಿರ್ಭವಿಸುತ್ತಿವೆ. ಸಾಗರದ ಅಲೆಗಳು ನಾವು ಸೃಷ್ಟಿಸಿ ಎಸೆದ ಹೊಲಸನ್ನು ನಮ್ಮತ್ತಲೇ ಎಸೆಯಲಾರಂಭಿಸಿವೆ. ಕಸಕ್ಕೆಲ್ಲ ಬೆಂಕಿ ಹಚ್ಚಿಬಿಟ್ಟರೆ ಸಮಸ್ಯೆ ಪರಿಹಾರವಾಗುವ ಬದಲು ವಾಯು ಮಾಲಿನ್ಯ ಹೆಚ್ಚಾಗುತ್ತದಷ್ಟೆ. ಅದರ ದುಷ್ಪರಿಣಾಮವನ್ನು ಎದುರಿಸುವ ದುರ್ದೈವ ದೇಶದ/ ಪ್ರಪಂಚದ ಯಾವ ವ್ಯಕ್ತಿಗೂ ಬರದಿರಲಿ.

ನಮ್ಮ ನಿರ್ವಹಣಾ ನೀತಿಗಳಲ್ಲಿ ಬದಲಾವಣೆ ತಂದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆಗ ಮಾತ್ರ ನಮ್ಮ ಸರಕಾರಗಳು ತಾಜ್ಯದ ಈ ಬೃಹತ್‌ ತೊಂದರೆಯನ್ನು ಸರಿಪಡಿಸಬಲ್ಲವು. ಈ ನಿಟ್ಟಿನಲ್ಲಿ ತರಬಹುದಾದ ಒಂದು ಸುಧಾರಣೆ ಎಂದರೆ, ಎಲ್ಲ ರೀತಿಯ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ಗಳ ಬಳಕೆಯ ಮೇಲೆ ನಿಷೇಧ ಹೇರುವುದು. ಇದರಿಂದ ಮೊದ ಮೊದಲಿಗೆ ಉಂಟಾಗುವ ಅಸೌಖ್ಯವನ್ನು ಎಲ್ಲರೂ ತಡೆದುಕೊಳ್ಳಲೇಬೇಕು. ಇನ್ನು ದೇಶಾದ್ಯಂತ ಅನುಷ್ಠಾನಕ್ಕೆ ತರಲೇಬೇಕಾದ ಮತ್ತೂಂದು ನೀತಿಯೆಂದರೆ ಮನೆಮನೆಗಳಲ್ಲಿ, ಸೊಸೈಟಿಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯಗೊಳಿಸು ವುದು. ತ್ಯಾಜ್ಯ ವಿಂಗಡನೆಯಿಂದ ತ್ಯಾಜ್ಯ ವಿಲೇವಾರಿಯೂ ಸುಲಭವಾಗುತ್ತದೆ. 

ನಾವು ಜುಹೂ ಬೀಚ್‌ ಸ್ವಚ್ಛ ಮಾಡಲು ಆರಂಭಿಸಿದ್ದೇ, ನನ್ನ ಫೇವರೆಟ್‌ ದೇವರು ಗಣೇಶ ಮೂರ್ತಿಯ ಅವಶೇಷಗಳು ಹರಿದುಬರಲಾರಂಭಿಸಿದವು. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪನ ಲೀಡ್‌ ಪೇಂಟ್‌ ಲೇಪಿತ  ಕೈಯೊಂದನ್ನು ನಾನು ಎತ್ತಿಕೊಂಡೆ. ಆ ಕೈಯನ್ನು ನೋಡುತ್ತಾ ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಕೊರೆಯತೊಡಗಿತು. “”ಜ್ಞಾನದ ಅಧಿಪತಿ ಗಣಪ ತನ್ನ ಹೆಸರಿನಲ್ಲಿ ಈ ಮನುಜರೆಲ್ಲ ಮಾಡುತ್ತಿರುವ ಹಾನಿಯನ್ನು ನೋಡಿ  ಏನಂದುಕೊಳ್ಳುತ್ತಿರಬಹುದು?” 

ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿ ಕಸಿವಿಸಿ ಉಂಟು ಮಾಡಿದ್ದೇನೆಂದರೆ, ವಿಸರ್ಜಿಸಲಾದ ಗಣೇಶನ ಮೂರ್ತಿಗಳನ್ನೆಲ್ಲ ಕೊನಗೆ ಬೀಚ್‌ನಲ್ಲಿ ನಿಂತ ಬುಲ್ಡೋಜರ್‌ಗಳಿಂದ ಹೊಸಕಿ ಹಾಕುತ್ತಾರೆ ಮತ್ತು ಇನ್ಯಾವುದೋ ಜಾಗದಲ್ಲಿ ಎಸೆದುಹೋಗುತ್ತಾರೆ ಎನ್ನುವ ವಾಸ್ತವ. ಹೌದು ಕೆಲವೇ ಸಮಯದ ಹಿಂದೆ ಯಾರೋ ಭಕ್ತಿಯಿಂದ ಪೂಜಿಸಿದ್ದ ಗಣೇಶನ ಮೂರ್ತಿಗಳು ವಿಸರ್ಜನೆಯ ನಂತರ ಯಾವುದೋ ಕಸದ ತೊಟ್ಟಿ ಸೇರುತ್ತವೆ ಎನ್ನುವ ಕಟು ಸತ್ಯ ನಮ್ಮನ್ನು ಕಲಕಿಹಾಕಿತು. ಆ ಕ್ಷಣದವರೆಗೂ ನನಗೆ ಈ ಸಂಗತಿ ತಿಳಿದಿರಲೇ ಇಲ್ಲ. 

ಈ ರೀತಿಯ ಸುಧಾರಣೆ ಬರಬೇಕು ಎಂದರೆ ಅದಕ್ಕೆ ಸಾಮೂಹಿಕ ಇಚ್ಛೆಯ ಅಗತ್ಯವಿರುತ್ತದೆ. ಇಂಥ ಇಚ್ಛೆಯನ್ನು ನಾನು ಜುಹೂ ಕಿನಾರೆಯಲ್ಲಿ ತ್ಯಾಜ್ಯವೆತ್ತುತ್ತಾ ನಿಂತವರಲ್ಲಿ ನೋಡಿದೆ. ಬರೀ ಬೆರಳು ತೋರಿಸುತ್ತಲೋ ಅಥವಾ ಗೊಣಗಾಡುತ್ತಲೋ ಕೂಡುವ ಬದಲು ಪರಿಹಾರ ಪ್ರಕ್ರಿಯೆಯ ಭಾಗವಾಗುತ್ತೇವೆ ಎಂದು ನಾವೆಲ್ಲ ಅಂದು ರುಜುವಾತು ಮಾಡಿದೆವು. 

ಆ ಒಂದೇ ದಿನದಂದು ಜುಹೂ ಬೀಚ್‌ನಿಂದ ನೂರಾರು ಟನ್‌ನಷ್ಟು ವಸ್ತುಗಳನ್ನು ಸ್ವತ್ಛಗೊಳಿಸಲಾಯಿತು. ಇದನ್ನೆಲ್ಲ ಡಂಪಿಂಗ್‌ ಗ್ರೌಂಡ್‌ನ‌ತ್ತ ಹೊತ್ತೂಯ್ಯಲಾಯಿತು. ಮುಂದಿನ ವರ್ಷದಿಂದಾದರೂ ಪರಿಸರ ಸ್ನೇಹಿ ಗಣೇಶನನ್ನು ಬಳಸುವಂತೆ ಸಮಾಜವನ್ನು ಹೇಗೆ ಬಡಿದೆಬ್ಬಿಸಬೇಕು ಎನ್ನುವ ಯೋಚನೆ ಕಿನಾರೆಯ ಸ್ವತ್ಛತೆಯಲ್ಲಿ ತೊಡಗಿದ್ದ ನಮಗೆಲ್ಲ ಕಾಡಿತು. ಪ್ರತಿಬಾರಿಯೂ ಒಂದೊಂದು ಮೂರ್ತಿಯನ್ನು ಎತ್ತಿಕೊಂಡು ಅದನ್ನು ಗೌರವಯುತವಾಗಿ ನಿಗದಿತ ಸ್ಥಳದಲ್ಲಿ ಜೋಡಿಸುತ್ತಾ ಹೋದಾಗ “ಸಮಸ್ಯೆಯ ಬದಲು ಪರಿಹಾರದಲ್ಲಿ ಭಾಗಿಯಾಗಬೇಕು’ ಎನ್ನುವ ಸಂಕಲ್ಪ ದೃಢವಾಗುತ್ತಾ ಹೋಯಿತು, ಈ ಕೆಲಸ ಎಲ್ಲೆಡೆಯೂ ಆಗಲೇಬೇಕಿದೆ. ನಮ್ಮ ನಂಬಿಕೆಯ ಪಾವಿತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ, ದೇವರ ಮೇಲಿನ ನಮ್ಮ ಪ್ರೀತಿಗಾಗಿ, ನಮ್ಮ ಮತ್ತು ನಮ್ಮ ಕುಟುಂಬದವರ ಆರೋಗ್ಯಕ್ಕಾಗಿ “ಮನಸ್ಥಿತಿ’ಯನ್ನು ಬದಲಿಸುವ ಹಾದಿ ಹುಡುಕಲೇಬೇಕಿದೆ.  ಇದು ಸಾಧ್ಯವಾಗುತ್ತದೆ. ಏಕೆಂದರೆ ಗಣಪತಿಯ ಆಶೀರ್ವಾದ ನಮ್ಮ ಮೇಲಿದೆ!

ದಿಯಾ ಮಿರ್ಜಾ ನಟಿ, ಪರಿಸರವಾದಿ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.