ಮನಸ್ಥಿತಿ ಬದಲಾಗದೇ ನಗರಗಳು ಬದಲಾಗವು!


Team Udayavani, Nov 17, 2017, 6:06 PM IST

17-6.jpg

ಲಂಡನ್‌ನಲ್ಲಿ  ಹೊಗೆಮಂಜು ದಟ್ಟವಾಗುತ್ತಾ ಸಾಗಿತು. ಸಾರ್ವಜನಿಕ ಸಾರಿಗೆ ನಿಂತು ಹೋಯಿತು. ಆ್ಯಂಬುಲೆನ್ಸ್‌   ಓಡಾಟವೂ ನಿಂತಿತು. ಸಿನೆಮಾ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ರದ್ದಾದವು. ಏಕೆಂದರೆ ಸಿನೆಮಾ ಪರದೆ/ ವೇದಿಕೆ ಕಾಣಿಸದಂತಾಗಿತ್ತು. “ಗ್ರೇಟ್‌ ಸ್ಮಾಗ್‌’ ಎಂದು ಕರೆಸಿಕೊಳ್ಳುವ ಈ ದುರಂತ ಕೊನೆಯಾಗುವ ವೇಳೆಗೆ ಸುಮಾರು 4,000 ಜನ ಮೃತಪಟ್ಟಿದ್ದರು.

ಪ್ರಳಯ ಎನ್ನುವ ಪರಿಕಲ್ಪನೆ ಇದೆಯಲ್ಲ, ಅದರಲ್ಲಿ ಹಲವಾರು ಘಟನೆಗಳ ವಿವರಣೆಯಿರುತ್ತದೆ. ಪುರಾತನ ಈಜಿಪ್ತ್ನಲ್ಲಿ, ಅಂದರೆ ಯಹೂದಿ ಕಥಾನಕಗಳಲ್ಲಿ ಇದನ್ನು ನೋಡಬಹುದು: “”ಪ್ರಳಯ ಸಮೀಪಿಸಿದಾಗ ನೈಲ್‌ ನದಿಯಲ್ಲಿ ಮೀನುಗಳೆಲ್ಲ ಸತ್ತುಹೋಗುತ್ತವೆ, ಆ ನದಿಯ ನೀರೆಲ್ಲ ಕೊಳೆತು ನಾರತೊಡಗುತ್ತದೆ. ಇದರಿಂದಾಗಿ ಈಜಿಪ್ತಿ ಯನ್ನರಿಗೆ ನೈಲ್‌ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ. ಪರಾವಲಂಬಿ ಜೀವಿಗಳು, ಕಪ್ಪೆಗಳು, ಜಿಗಣೆಗಳು ಮತ್ತು ನೊಣ ಭೂಮಿಯನ್ನು ವ್ಯಾಪಿಸಿಬಿಡುತ್ತವೆ. ಜಾನುವಾರುಗಳು ರೋಗಗ್ರಸ್ತವಾಗುತ್ತವೆ, ಜನರ ಮೈಮೇಲೆಲ್ಲ ಗುಳ್ಳೆಗಳು ತುಂಬಿತೊಳ್ಳುತ್ತವೆ. ಇದೆಲ್ಲದರ ನಡುವೆಯೇ, ಆಲಿಕಲ್ಲಿನ ಮಳೆ ಮತ್ತು ಮಿಡತೆಗಳ ದಾಳಿಗೆ ಬೆಳೆಗಳೆಲ್ಲ ನಾಶವಾಗುತ್ತವೆ. ಕೊನೆಯ ಹಂತವೆಂಬಂತೆ ಭೂಮಿ ತುಂಬಾ ಮೂರು ದಿನಗಳವರೆಗೆ ಗಾಢ ಅಂಧಕಾರ ಕವಿಯುತ್ತದೆ…ರಾತ್ರಿಯ ವೇಳೆ ಜನರ ಮೊದಲ ಮಕ್ಕಳು ಸಾವನ್ನಪ್ಪುತ್ತವೆ…” 

ಭಾರತದ ನಗರಿಗಳು ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದ ನಗರಗಳಿಗೆ ಇಂಥ ಪರಿಸ್ಥಿತಿ ಬರದಿರಲಿ ಎಂದೇ ನಾವೆಲ್ಲ ಆಶಿಸಬೇಕಿದೆ. ಭಾರತದ ನಗರ ಜೀವನವು ದಿನದಿನಕ್ಕೆ ಅಸಹನೀಯವಾಗುತ್ತಿದೆ. ಹೇಗೆ ಒಬ್ಬ ವ್ಯಕ್ತಿಯ ಆರೋಗ್ಯ ನಿರಂತರವಾಗಿ ಹಾಳಾಗುತ್ತಿದೆ ಎನ್ನುವುದನ್ನು ಲೆಕ್ಕ ಹಾಕುವ ಸಂಭಾವ್ಯತೆಯ ಆಟವಾಗಿ ಬದಲಾಗಿದೆ ನಗರದ ಬದುಕು. ಹಿಂದೆ ಭಾರತದಲ್ಲಿ ನಗರ ಆಡಳಿತವು ವಸಂತಕಾಲ, ಬೇಸಿಗೆ, ಶರತ್ಕಾಲ ಮತ್ತು ಚಳಿಗಾಲವೆಂಬ ಚಕ್ರವನ್ನು ಆಧರಿಸಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಈ ಚಕ್ರವು-ಕೊಳಕು ನದಿಗಳು, ಉಕ್ಕಿಹರಿಯುವ ರಸ್ತೆಗಳು, ಡೇಂಗ್ಯೂ- ಚಿಕನ್‌ಗೂನ್ಯಾ ಪ್ರಕರಣಗಳು ಮತ್ತು ವಾರ್ಷಿಕ ಹೊಗೆಮಂಜಾಗಿ ಬದಲಾಗಿದೆ. ನಗರದ ನೀತಿ ನಿರೂಪಕರು ಒಂದು ಸಮಸ್ಯೆಯಿಂದ ಇನ್ನೊಂದರತ್ತ ಓಡುತ್ತಲೇ ಇದ್ದಾರೆ. ತಾತ್ಕಾಲಿಕ ಪರಿಹಾರೋಪಾಯಗಳನ್ನಷ್ಟೇ (ಸಮ-ಬೆಸ, ವಾಟರ್‌ ಎಟಿಎಂ) ತಂದು ದೀರ್ಘಾವಧಿ ಪ್ಲಾನಿಂಗ್‌ ಅನ್ನೇ ಮರೆಯುತ್ತಿದ್ದಾರೆ. ಇದೆಲ್ಲದರ ನಡುವೆಯೂ ಸರಕಾರಗಳು ನಗರೀಕರಣವನ್ನು ಪ್ರೋತ್ಸಾಹಿಸುತ್ತಲೇ ಇವೆ. ಹೀಗಾಗಿ ನಾವೆಲ್ಲ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಿದೆ. ನಮ್ಮ ನಗರಗಳು(ಉದಾ:ದೆಹಲಿ) ವಾಸಯೋಗ್ಯವಾಗಿ ಉಳಿದಿವೆಯೇ? ಈ ರೀತಿಯ ಸಂಕಷ್ಟಕ್ಕೆ ಸಾಂಸ್ಥಿಕ ಉದಾಸೀನತೆ ಕಾರಣ ಎನ್ನುವುದನ್ನು ನಾವು ಪರಿಗಣಿಸಿದಾಗ, ಜಗತ್ತಿನ ಇತರೆ ರಾಷ್ಟ್ರಗಳು ಹೇಗೆ ಇಂಥ ಸಮಸ್ಯೆಗಳನ್ನು ನಿಭಾಯಿಸಿದವು ಎನ್ನುವುದನ್ನು ನೋಡಬೇಕಾಗುತ್ತದೆ. 

ಗ್ರೇಟ್‌ ಸ್ಮಾಗ್‌
ಅದು ಡಿಸೆಂಬರ್‌ 1952. ಲಂಡನ್‌ ನಗರಿ ಶೀತ ಹವೆಯಿಂದ ಆವೃತವಾಗಿತ್ತು, ಜೊತೆಗೆ ವಾಯು ಮಾಲಿನ್ಯ ಕಾರಕಗಳೂ ಸೇರಿಕೊಂಡು (ಹೆಚ್ಚಾಗಿ ಕಲ್ಲಿದ್ದಲು ಸುಡುವಿಕೆಯಿಂದ ಸೃಷ್ಟಿಯಾದದ್ದು) ಆ ನಗರಿಯೆಲ್ಲ ದಟ್ಟ ಹೊಗೆಮಂಜಿನಿಂದ ಆವೃತ ವಾಗಿಬಿಟ್ಟಿತು. ಮನೆಗಳಿಂದ, ವಾಹನಗಳಿಂದ ಹೊರಹೊಮ್ಮಿದ ಹೊಗೆ ಮತ್ತು ಸಲ#ರ್‌ ಡೈಆಕ್ಸೆ„ಡ್‌ನ‌ಂಥ ಮಾಲಿನ್ಯಕಾರಕಗಳೂ ಜೊತೆಯಾಗಿ ಉಪನಗರಗಳಲ್ಲಂತೂ ಒಂದು ಮೀಟರ್‌ ಆಚೆಗೆ ಏನಿದೆ ಎನ್ನುವುದೂ ಕಾಣಿಸದಾಯಿತು. ಈ ಮಾಲಿನ್ಯ ಯಾವ ಮಟ್ಟಕ್ಕೇರಿತ್ತೆಂದರೆ ಒಳಾಂಗ ಣಗಳಲ್ಲೂ ಏನೇನೂ ಕಾಣಿಸದಷ್ಟು ಹೊಗೆಮಂಜು ತುಂಬಿಕೊಂಡಿತು. ಮುಂಜಾನೆ, ಮಧ್ಯಾಹ್ನದ ಹೊತ್ತಲ್ಲೂ ಜನರು ಅಂಧರಂತೆ ಬದುಕಲಾರಂಭಿಸಿದರು, ಹಣವುಳ್ಳವರು ಮಾತ್ರ ಮಾಸ್ಕ್ಗಳನ್ನು ಧರಿಸಿದರು. ಮೊದ ಮೊದಲು ಎಲ್ಲರೂ ಇದನ್ನು ಪ್ರತೀವರ್ಷದ ಚಳಿಗಾಲದ ಮಂಜು ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ ಹೊಗೆಮಂಜು ದಟ್ಟವಾಗುತ್ತಾ ಸಾಗಿತು. ಸಾರ್ವಜನಿಕ ಸಾರಿಗೆಯೇ ನಿಂತು ಹೋಯಿತು. ಆ್ಯಂಬುಲೆನ್ಸ್‌ ಗಳ ಓಡಾಟವೂ ವಿರಳವಾಗಿಬಿಟ್ಟಿತು. ಸಿನೆಮಾ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮಗಳು ರದ್ದಾದವು. ಏಕೆಂದರೆ ಸಿನೆಮಾ ಪರದೆ/ ವೇದಿಕೆ ಕಾಣಿಸದಂತಾಗಿತ್ತು. “ಗ್ರೇಟ್‌ ಸ್ಮಾಗ್‌’ ಎಂದು ಕರೆಸಿಕೊಳ್ಳುವ ಈ ದುರಂತ ಕೊನೆಯಾಗುವ ವೇಳೆಗೆ ಸುಮಾರು 4,000 ಜನ ಮೃತಪಟ್ಟಿದ್ದರು, 1 ಲಕ್ಷಕ್ಕಿಂತಲೂ ಹೆಚ್ಚು ಮಂದಿಯ ಆರೋಗ್ಯದ ಮೇಲೆ ಇದು ಪರಿಣಾಮ ಬೀರಿತು. 

ಆದರೆ ಇಲ್ಲಿ ವ್ಯತ್ಯಾಸವೊಂದಿದೆ. ಗ್ರೇಟ್‌ ಸ್ಮಾಗ್‌ ಎದುರಾದಾಗ ಬ್ರಿಟಿಷ್‌ ಸರಕಾರದ ಪ್ರತಿಕ್ರಿಯೆ ಬಹಳ ಭಿನ್ನವಾಗಿತ್ತು. ಬ್ರಿಟಿಷ್‌ ಸರಕಾರ ಸ್ವತ್ಛ ಗಾಳಿ ಕಾಯ್ದೆಗಳು(1956, 1968) ಮತ್ತು ಸಿಟಿ ಆಫ್ ಲಂಡನ್‌ ಕಾಯ್ದೆ(1954) ಅನ್ನು ಜಾರಿಗೆ ತಂದು ಲಂಡನ್‌ನ ವಾಯುಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲು ಯಶಸ್ವಿಯಾಯಿತು. ಇದಷ್ಟೇ ಅಲ್ಲದೇ ಕಲ್ಲಿದ್ದಲ ಬದಲಾಗಿ ಪರ್ಯಾಯ ಇಂಧನಗಳನ್ನು ಬಳಸಲು ಕುಟುಂಬ ಗಳಿಗೆ ಪ್ರೋತ್ಸಾಹಧನ ನೀಡಿತು. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಏನಾಗುತ್ತಿದೆಯೋ ನೋಡಿ. ಇತ್ತೀಚೆಗೆ ಉತ್ತರ ಭಾರತದಲ್ಲಿ ಸ್ಮಾಗ್‌ ಮಟ್ಟ ಏರಿಕೆಯಾದಾಗ ರಾಜ್ಯ ಮತ್ತು ಸ್ಥಳೀಯ ಮಟ್ಟದ ಆಡಳಿತದಿಂದ ಎದುರಾಗಿದ್ದು ತೀವ್ರ ಉದಾಸೀನತೆಯಷ್ಟೆ! 

ಇಂಥ ವ್ಯವಸ್ಥಿತ ಉದಾಸೀನತೆಯು ಇಷ್ಟು ಪಿಡುಗುಗಳನ್ನೂ ಹುಟ್ಟು ಹಾಕಬಲ್ಲದು. 80ರ ದಶಕದ ಅಂತ್ಯದವರೆಗೂ ಶ್ರೀಲಂಕಾ ರಾಷ್ಟ್ರ, ಮಲೇರಿಯಾ ರೋಗದ ಹಾಟ್‌ಸ್ಪಾಟ್‌ ಆಗಿತ್ತು. 1970 ಮತ್ತು 1980ರ ನಡುವೆ ಅನೇಕ ಬಾರಿ ಮಲೇರಿಯಾ ಹಾವಳಿ ಆ ರಾಷ್ಟ್ರವನ್ನು ಅಪ್ಪಳಿಸಿತು. ಅಂದಿನಿಂದ ಅಲ್ಲಿನ ಆಡಳಿತವು ಹೆಚ್ಚು ರೋಗಗ್ರಸ್ತ ಪ್ರದೇಶಗಳಲ್ಲಿ ಮಲೇರಿಯಾ ಕ್ಲೀನಿಕ್‌ಗಳನ್ನು ತೆರೆದು, ಸಮುದಾಯ ಸರ್ವೇಕ್ಷಣೆಗಳನ್ನು ನಡೆಸಿ, ಸಾರ್ವಜನಿಕ ಜಾಗೃತಿ ಮೂಡಿಸಲಾರಂಭಿಸಿತು. ಪರಿಣಾಮವಾಗಿ ಏನಾಗಿದೆಯೆಂದರೆ 2012ರಿಂದೀಚೆಗೆ ಶ್ರೀಲಂಕಾದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಮಲೇರಿಯಾ ಪ್ರಕರಣಗಳು ಕಾಣಿಸಿ ಕೊಂಡಿವೆ. ಇದರಂತೆಯೇ ದಕ್ಷಿಣ ಅಮೆರಿಕನ್‌ ರಾಷ್ಟ್ರವಾದ ಬ್ರೆಜಿಲ್‌ ಕೂಡ ತನ್ನಲ್ಲಿನ ವಾರ್ಷಿಕ ವಿಷಚಕ್ರವಾಗಿದ್ದ ಕಾಮಾಲೆ ರೋಗದ ದಾಳಿಯನ್ನು ವೆಕ್ಟರ್‌ ಕಂಟ್ರೋಲ್‌ ಮತ್ತು ಲಸಿಕೆ ಕಾರ್ಯಕ್ರಮಗಳಿಂದ ನಿಯಂತ್ರಿಸಿತು. 1940ರ ಅವಧಿಯಲ್ಲಿ ರಿಯೋ ಡೆ ಜನೈರೋ ಮಳೆಗಾಲದಲ್ಲಿ ನಿರಂತರ ನೆರೆಗೆ ತುತ್ತಾಗುತ್ತಿತ್ತು. ಕಳಪೆ ಡ್ರೈನೇಜ್‌ ವ್ಯವಸ್ಥೆಯಲ್ಲಿ ನೀರು ನಿಂತು ರೋಗಗಳು ಹುಟ್ಟಿಕೊಳ್ಳುತ್ತಿದ್ದವು. ರಿಯೋ ನಗರಾಡಳಿತ ಬಹಳ ವೇಗವಾಗಿ ತಮ್ಮ ನಗರಿಯನ್ನು ಸ್ವತ್ಛಗೊಳಿಸಲು ಪಣತೊಟ್ಟಿತು. ಅನಾರೋಗ್ಯಕರ ವಸತಿಗಳನ್ನು ಕೆಡವಲಾರಂಭಿಸಿತು, ಔಷಧಿ ಸಿಂಪಡಿಸಿತು, ಮೋರಿಗಳಲ್ಲಿ ಸೇರಿಕೊಂಡಿದ್ದ ಇಲಿಗಳನ್ನೆಲ್ಲ ಕೊಂದುಹಾಕಿತು. ಕೊನೆಗೆ ಪರಿಸ್ಥಿತಿಯನ್ನು ತಹಬದಿಗೆ ತರಲು ಯಶಸ್ವಿಯಾಯಿತು. ಆದರೆ ನಮ್ಮ ದೇಶದಲ್ಲಿ? ದೆಹಲಿ(ಮಲೇರಿಯಾ ಮತ್ತು ಚಿಕೂನ್‌ಗುನ್ಯಾ) ಮತ್ತು ಗೋರಖ್‌ಪುರ(ಜಪಾನೀಸ್‌ ಎನ್ಸೆಫ‌ಲೈಟೀಸ್‌)ದಲ್ಲಿ ಸಾಂಕ್ರಾಮಿಕಗಳು ಸ್ಫೋಟಗೊಳ್ಳುವುದು ಮುಂದು ವರಿದೇ ಇದೆ. ಸಾರ್ವಜನಿಕರ ಆಕ್ರೋಶವು ನೀತಿ ನಿರೂಪಣೆಯಾಗಿ ರೂಪಪಡೆಯುತ್ತಿಲ್ಲ. ಪರಿಣಾಮವಾಗಿ ಈ ರೋಗಗಳು ಜಡದಿಂದ ನಿರ್ಮೂಲನೆಯಾಗುತ್ತಲೇ ಇಲ್ಲ. 

ಇನ್ನು ಮೆಟ್ರೊಪಾಲಿಟನ್‌ ನಗರಗಳಲ್ಲಿನ ನದಿಗಳ ಸ್ಥಿತಿಯ ಬಗ್ಗೆ ಮಾತನಾಡುವ ಮುನ್ನ ಮತ್ತೂಮ್ಮೆ ಲಂಡನ್‌ನ ಉದಾಹರಣೆಯನ್ನೇ ನೋಡೋಣ. 1858ರ ಬೇಸಿಗೆಯಲ್ಲಿ, ಥೇಮ್ಸ್‌ ನದಿ ವಿಪರೀತ ನಾರತೊಡಗಿತು. ಮಾನವ ತ್ಯಾಜ್ಯ ಮತ್ತು ಕಾರ್ಖಾನೆಗಳ ಹೊರಹಾಕಿದ ರಾಸಾಯನಿಕಗಳ ಮಿಶ್ರಣವೇ ಇದಕ್ಕೆ ಕಾರಣವಾಗಿತ್ತು. ಆ ದುರ್ಗಂಧ ಎಷ್ಟೊಂದು ಅಸಹನೀಯವಾಗಿತ್ತೆಂದರೆ ಕೂಡಲೇ ಬ್ರಿಟನ್‌ ಸರಕಾರ ದುರ್ವಾಸನೆಯನ್ನು ಕಡಿಮೆ ಮಾಡಲು ನದಿಯಲ್ಲಿ ಕ್ಲೋರೈಡ್‌ ಮತ್ತು ಕಾಬೋìಲಿಕ್‌ ಆ್ಯಸಿಡ್‌ ಸುರಿಯಬೇಕಾಯಿತು. ಈ ಘಟನೆಯ ಬಗ್ಗೆ ಇಲ್ಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌ ವರದಿ ಮಾಡಿದ್ದು ಹೀಗೆ: “”ನಾವು ಭೂಮಿಯ ತುತ್ತತುದಿಯಲ್ಲಿರುವ ಪ್ರದೇಶವನ್ನು ಕೈವಶ ಮಾಡಿ ಕೊಳ್ಳಬಲ್ಲೆವು; ಭಾರತವನ್ನು ವಶಪಡಿಸಿಕೊಳ್ಳಬಲ್ಲೆವು, ನಾವು ನಮ್ಮ 
ಹೆಸರು, ಖ್ಯಾತಿ ಮತ್ತು ಐಶ್ವರ್ಯವನ್ನು ಜಗತ್ತಿನಾದ್ಯಂತ ಹರಡ ಬಲ್ಲೆವು; ಆದರೆ ನಮ್ಮಿಂದ ಥೇಮ್ಸ್‌ ನದಿಯನ್ನು ಸ್ವತ್ಛಗೊಳಿಸಲು ಆಗುವುದಿಲ್ಲ”(ಇಲ್ಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌, 26 ಜೂನ್‌, 1858). ಜೂನ್‌ 1858ರ ವೇಳೆಗೆ ನದಿಯ ದುರ್ವಾಸನೆ ಎಷ್ಟೊಂದು ಹೆಚ್ಚಾಯಿತೆಂದರೆ ಸಂಸತ್ತನ್ನು ವೆಸ್ಟ್‌ಮಿನಿಸ್ಟರ್‌ನಿಂದ ಆಕ್ಸಫ‌ರ್ಡ್‌ ಅಥವಾ ಸೇಂಟ್‌ ಅಲಾºನ್ಸ್‌ಗೆ ಸ್ಥಳಾಂತರಿಸುವ ಪ್ರಸ್ತಾಪ ಬಂದಿತ್ತು! ಆಗ ರಚನೆಯಾಯಿತು ನೋಡಿ “ಮೆಟ್ರೋಪೋಲಿಸ್‌ ಸ್ಥಳೀಯಾಡಳಿತ ತಿದ್ದುಪಡಿ ಮಸೂದೆ’. ಒಳಚರಂಡಿಗಳ ಹೊರಮಾರ್ಗವನ್ನು ನಗರದಿಂದ ಬಹುದೂರಕ್ಕೆ ಒಯ್ಯಬೇಕು ಎನ್ನುವ ಪ್ರಸ್ತಾಪ ಈ ಮಸೂದೆಯಲ್ಲಿತ್ತು. ಇದರ ಜೊತೆಗೆ ಲಂಡನ್‌ ಮೆಟ್ರೋಪಾಲಿಟನ್‌ ಬೋರ್ಡ್‌ ಆಫ್ ವರ್ಕ್ಸ್ನ ಮುಖ್ಯ ಎಂಜಿನಿಯರ್‌ ಆಗಿದ್ದ ಜೋಸೆಫ್ ಬಾಝಗೆಟ್‌ರ “1,800 ಕಿ.ಮಿ. ಉದ್ದದ ಹೆಚ್ಚುವರಿ ಒಳಚರಂಡಿ ಮಾರ್ಗ ನಿರ್ಮಾಣ’ದ ಪ್ರಸ್ತಾಪಕ್ಕೂ ಅನುಮತಿ ಸಿಕ್ಕಿತು. ಅತ್ಯಂತ ಸಂಯೋಜಿತ ಒಳಚರಂಡಿ ವ್ಯವಸ್ಥೆಯ ನಿರ್ಮಾಣದಿಂದಾಗಿ ಆ ನಗರಿಯಲ್ಲಿ ಕಾಲರಾ ಪ್ರಕರಣಗಳು ಕಡಿಮೆಯಾದವು. ಲಂಡನ್‌ ಚಂದಗೊಂಡಿತು, ನದಿ ನೀರಿನ ದುರ್ನಾಥ ತಗ್ಗಿಹೋಯಿತು. ಇದಕ್ಕೆ ಹೋಲಿಸಿದರೆ, ನಮ್ಮ ಪವಿತ್ರ ನದಿ ಯಮುನಾದ ಸ್ಥಿತಿ ಆಡಳಿತದ ಉದಾಸೀನತೆಯಿಂದಾಗಿ ಎಷ್ಟೊಂದು ಖೇದಕರವಾಗಿ ಮುಂದುವರಿದಿದೆ. 

ಇವೆಲ್ಲದರ ಜೊತೆಗೆ ಇನ್ನೊಂದು ಸಮಸ್ಯೆಯೂ ಹೆಚ್ಚುತ್ತಾ ಹೋಗುತ್ತಿದೆ. ದೆಹಲಿಯಂಥ ನಗರಗಳು ಮತ್ತು ಅದರ ಉಪನಗರಗಳು ಬೆಳೆಯುತ್ತಾ ಸಾಗುತ್ತಿವೆಯಾದರೂ, ಪರಿಣಾಮವಾಗಿ ಜಲ ಮಟ್ಟ ತೀವ್ರವಾಗಿ ಕುಸಿಯುವುದನ್ನು ಮಾತ್ರ ಯಾರೂ ನೋಡುತ್ತಿಲ್ಲ. 2006-2015ರ ನಡುವೆ ದೆಹಲಿಯ 49 ಪ್ರತಿಶತ ಬಾವಿಗಳಲ್ಲಿ ಜಲ ಮಟ್ಟ ತೀವ್ರವಾಗಿ ಕುಸಿದಿದೆ. ದಕ್ಷಿಣ ದೆಹಲಿಯ ಸುಮಾರು 50 ಪ್ರತಿಶತ ಬಾವಿಗಳಲ್ಲಿನ ಜಲ ಮಟ್ಟವು ರಾಜಸ್ಥಾನದ ಶುಷ್ಕ ಪ್ರದೇಶಗಳಿಗೆ ಸಮನಾಗಿದೆ ಎನ್ನುತ್ತದೆ ಜಿಡಬು ಮಾನಿಟರಿಂಗ್‌ನ ವರದಿ. ಇದೆಲ್ಲದರ ನಡುವೆ ದೆಹಲಿಯ 60 ಪ್ರತಿಶತ ಅಂತರ್ಜಲ ಫ್ಲೋರೈಡ್‌ನಿಂದ ಕಲುಷಿತಗೊಂಡಿದೆ. ಈ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲು ಸಾಂಸ್ಥಿಕ ಪ್ರಯತ್ನದ ಅಗತ್ಯವಿದೆ. 

ಕೊನೆಯದಾಗಿ, ನಾವೂ ಬದಲಾಗಬೇಕಿದೆ. ಸ್ವತ್ಛ ಗಾಳಿ, ನೀರು ಮತ್ತು ಆರೋಗ್ಯಕರ ವಾತಾವರಣವನ್ನು ನಾವು ಬಯಸಲಾರಂಭಿಸಬೇಕು. ಆದರೆ ಇದೆಲ್ಲ ಬೇಕೆಂದರೆ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಪಟಾಕಿಗಳನ್ನು ಕಡಿಮೆ ಸುಡುವುದು, ಕಚೇರಿಗೆ ತಲುಪಲು ಬಸ್‌ ಮತ್ತು ಮೆಟ್ರೋದಂಥ ಸಾರಿಗೆ ವ್ಯವಸ್ಥೆಗಳನ್ನು ಬಳಸುವುದು, ಗೃಹ ತ್ಯಾಜ್ಯವನ್ನು ಕಾಂಪೋಸ್ಟ್‌ ಮಾಡುವುದು…ಇತ್ಯಾದಿ. ಭಾರತದ ನಗರಿಗಳು ಸ್ವತ್ಛವಾಗಬೇಕೆಂದರೆ, ಈ ದೇಶದ ಸರಕಾರಗಳ ಮತ್ತು ಅದರ ಜನರ ಮನಸ್ಥಿತಿ ಬದಲಾಗಬೇಕಿದೆ.

ವರುಣ್‌ ಗಾಂಧಿ ಬಿಜೆಪಿ ನಾಯಕ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.