“ಇಲ್ಲ’ ಎನ್ನಲೇಕೆ ಹಿಂಜರಿಕೆ?


Team Udayavani, Sep 1, 2018, 6:00 AM IST

z-2.jpg

ಯಾರಾದರೂ ಬಂದು ನನ್ನಲ್ಲಿ ಸಹಾಯ ಕೇಳಿದರೆ “ಆಗಲ್ಲ’ ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ ತಡಮಾಡದೆ “ಹೂಂ’ ಎಂದುಬಿಡುತ್ತಿದ್ದೆ. ಎಲ್ಲಿ “ನೋ’ ಎಂದುಬಿಟ್ಟರೆ ಅವರು ಬೇಜಾರಾಗುತ್ತಾರೋ ಎಂದುಕೊಂಡು ನನ್ನ ಆದ್ಯತೆಗಳನ್ನೆಲ್ಲ ಬದಿಗೊತ್ತಿ ಅವರ ಕೆಲಸವನ್ನು ಹೊತ್ತುಕೊಳ್ಳುತ್ತಿದ್ದೆ.

“ಇಲ್ಲ’. ಇದು ಅತ್ಯಂತ ಚಿಕ್ಕ ಪದವಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಶಕ್ತಿ ಇರುವುದೂ ಇದೇ ಪದಕ್ಕೆ. “ನೋ’ ಎಂದು ಹೇಳಲು ಕಲಿತವನು ಜಗತ್ತನ್ನೇ ಆಳಬಲ್ಲ ಎನ್ನುವ ಮಾತಿದೆ. ಆದರೆ ಇದುವರೆಗೂ ಯಾವೊಬ್ಬ ವ್ಯಕ್ತಿಗೂ ಇಡೀ ಜಗತ್ತನ್ನು ಆಳಲು ಸಾಧ್ಯವಾಗಿಲ್ಲವಾದ್ದರಿಂದ ಯಾರೂ “ನೋ’ ಎನ್ನುವ ಪದದ ವಿರುದ್ಧದ ಸಮರದಲ್ಲಿ ಪೂರ್ಣ ಗೆಲುವು ಸಾಧಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 

ಜಗತ್ತನ್ನು ಗೆಲ್ಲುವ ವಿಚಾರ ಒತ್ತಟ್ಟಿಗಿರಲಿ, ಮೊದಲು ನಮ್ಮನ್ನು ನಾವು ಗೆಲ್ಲೋಣ. ಆ ಗೆಲುವು ಸಾಧಿಸಬೇಕೆಂದರೆ ಈ “ನೋ/ ಇಲ್ಲ’ ಎನ್ನುವ ಪದವನ್ನು ಅಸ್ತ್ರವಾಗಿಸಿಕೊಳ್ಳುವುದು ಮುಖ್ಯ. ಬೇಡದ ಸಂಗತಿಗಳಿಗೆ ನೋ ಎನ್ನುವ ಕೌಶಲವನ್ನು ನೀವು ಬೆಳೆಸಿಕೊಂಡುಬಿಟ್ಟಿರೆಂದರೆ ನಿಮ್ಮ ಜೀವನವೇ ಬದಲಾಗಿಬಿಡುತ್ತದೆ. 

ನಾನೂ ಕೂಡ ಈ ಪದವನ್ನು ಬಳಸಲು ಕಷ್ಟಪಡುತ್ತಿದ್ದೆ, ಈಗಲೂ ಒದ್ದಾಡುತ್ತಿರುವುದರಿಂದ ಈ ಗೆಲುವು ಎಷ್ಟು ಮುಖ್ಯ ಎನ್ನುವುದನ್ನು ಹೇಳುತ್ತಿದ್ದೇನೆ. ನಾನೊಬ್ಬ ಯಶಸ್ವಿ ಲೇಖಕನಾಗಿ, ಪ್ರೇರಣಾದಾಯಕ ಭಾಷಣಕಾರನಾಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನ “ನೋ’ ಎಂಬ ಪದದ ವಿರುದ್ಧದ ಯುದ್ಧದಲ್ಲಿ ಸೋಲುತ್ತಲೇ ಇದ್ದೆ. 

ಯಾರಾದರೂ ಬಂದು ನನ್ನನ್ನು ಸಹಾಯ ಕೇಳಿದರೆ ಇಲ್ಲ ಎನ್ನುವುದಕ್ಕೆ ನನಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಮನಸ್ಸು ಬೇಡ ಎನ್ನುತ್ತಿದ್ದರೂ, ನನ್ನ ಮುಂದೆ ಹಲವು ಕೆಲಸಗಳಿದ್ದರೂ “ಹೂಂ’ ಎಂದುಬಿಡುತ್ತಿದ್ದೆ. ನೋ ಎಂದುಬಿಟ್ಟರೆ ಅವರು ಬೇಜಾರು ಮಾಡಿಕೊಳ್ಳುತ್ತಾರೆ ಎಂದುಕೊಂಡು ನನ್ನ ಆದ್ಯತೆಗಳನ್ನೆಲ್ಲ ಬದಿಗೊತ್ತಿ ಅವರ ಕೆಲಸವನ್ನು ಹೊತ್ತುಕೊಳ್ಳುತ್ತಿದ್ದೆ. ಆದರೆ ಆ ಹೊರೆ ನನ್ನನ್ನು ಕೆಳಕ್ಕೆ ತಳ್ಳುತ್ತಿತ್ತು. ನಾನು ಕುಸಿಯುತ್ತಲೇ ಹೋದೆ. ಆದರೆ ಒಂದು ದಿನ ನನಗೆ ಸ್ಪಷ್ಟವಾಗಿ ಅರ್ಥವಾಯಿತು. ಇನ್ನೊಬ್ಬರಿಗೆ ನೋ ಎಂದಾಕ್ಷಣ ನಾವೇನೂ ಕೆಟ್ಟ ವ್ಯಕ್ತಿಗಳಾಗಿಬಿಡುವುದಿಲ್ಲ…

ಇನ್ನೊಬ್ಬರು ಸಹಾಯ ಕೇಳಿದಾಗ ನಮಗೆ ಆ ಸಹಾಯ ಮಾಡಲಾಗದಿದ್ದರೂ ಒಪ್ಪಿಕೊಳ್ಳುವುದಿದೆಯಲ್ಲ ಅದು ಮಹಾಪರಾಧ. ಒಪ್ಪಿಕೊಂಡ ಮೇಲೆ ಮಾಡಬೇಕು, ಮಾಡದೇ ಇದ್ದರೆ ಪಾಪಪ್ರಜ್ಞೆ ಕಾಡುತ್ತದೆ! ಎದುರಿನ ವ್ಯಕ್ತಿಯೂ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾನೆ. ನೀವು ನೋ ಎನ್ನಲಾಗದೇ ತೊಂದರೆಯ ಮೇಲೆ ತೊಂದರೆಯಲ್ಲಿ ಸಿಲುಕುತ್ತೀರಿ ಎಂದಾದರೆ, ಈ ವಿಷ ಚಕ್ರದಿಂದ ಹೊರಬರಲು ಬಯಸುತ್ತೀರಿ ಎಂದಾದರೆ ಈ ಲೇಖನ ಓದುವುದನ್ನು ಮುಂದುವರಿಸಿ…

ಇಲ್ಲ ಎಂದರೆ ತಪ್ಪಲ್ಲ
ಇನ್ನೊಬ್ಬರ ಕೋರಿಕೆಗಳಿಗೆ ಇಲ್ಲ ಎನ್ನುವುದಕ್ಕೆ ಕಷ್ಟವಾಗುವುದು ಸಹಜವೇ. ಆದರೆ ಒಪ್ಪಿಕೊಂಡರೆ ಎದುರಾಗುವ ತೊಂದರೆಯೇನು ಕಡಿಮೆಯೇ? ನಾನು ಎಷ್ಟೋ ಜನರನ್ನು ನೋಡಿದ್ದೇನೆ. ಇಷ್ಟವಿಲ್ಲದ ಪ್ರಮೋಷನ್‌ಗಳನ್ನು ಒಪ್ಪಿಕೊಂಡು ಒದ್ದಾಡುತ್ತಿರುತ್ತಾರೆ, ಬೇಡದ ಕೆಲಸಗಳನ್ನು ಹಚ್ಚಿಕೊಂಡು, ಒಲ್ಲದ ವಲಯದಲ್ಲಿ ಇದ್ದುಕೊಂಡು, ಮನಸ್ಸಿಲ್ಲದ ಪಾರ್ಟಿಗಳಲ್ಲಿ ಭಾಗವಹಿಸಿ ಸಮಯ ಹಾಳು ಮಾಡಿಕೊಳ್ಳುತ್ತಿರುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ ನಿತ್ಯ ನರಕಯಾತನೆ ಅನುಭವಿಸುತ್ತಿರುತ್ತಾರೆ, ಪದೇ ಪದೆ ಯಾಮಾರಿಸುವ ವ್ಯಕ್ತಿಗೆ ಮತ್ತೆ ಹಣ ಕೊಟ್ಟು  ಕೈ ಕೈ ಹಿಸುಕಿಕೊಳ್ಳುತ್ತಾರೆ. 

ಆಗಲೇ ಹೇಳಿದಂತೆ, ಎಲ್ಲಿ ಎದುರಿನವ ಬೇಜಾರು ಮಾಡಿಕೊಳ್ಳುತ್ತಾನೋ ಎಂದು ನಾವು ಅವನ ಕೋರಿಕೆಯನ್ನು ಒಪ್ಪಿಕೊಂಡುಬಿಡುತ್ತೇವೆ. ಹೀಗೆ ಮಾಡುವುದು ಒಳ್ಳೆಯತನವೆನ್ನುವುದೇನೋ ಇರಲಿ. ಆದರೆ ನಿಮ್ಮ ಆನಂದವನ್ನೇ ಕಸಿಯುವ ಒಳ್ಳೆಯತನ ಕಟ್ಟಿಕೊಂಡು ಏನುಪಯೋಗ? ಸತ್ಯವೇನೆಂದರೆ ನೋ ಎನ್ನಲಾಗದವನು ಜೀವನದಲ್ಲಿ ಏನನ್ನೂ ಸಾಧಿಸಲಾರ. ಅವನು ಗಳಿಸುವುದೇನಿದ್ದರೂ ಅಸಹಾಯಕತೆಯನ್ನು, ನೋವನ್ನು, ಯಾತನೆಯನ್ನು…ಅಷ್ಟೆ!

ನಿಮ್ಮ ಮೇಲೆ ನಿಮಗೆ ಗೌರವವಿಲ್ಲವೇ?
ಹೌದು, ಬಹುತೇಕ ಬಾರಿ ನೀವು ಇನ್ನೊಬ್ಬರಿಗೆ “ಇಲ್ಲ, ನಾನು ಮಾಡಲ್ಲ, ನನ್ನಿಂದ ಆಗಲ್ಲ’ ಎಂದು ಹೇಳಿದಾಗ ಅವರ ಮನನೋಯುವುದು ಖಚಿತ. ಆ ಸಮಯದಲ್ಲಿ ಅವರು ನಿಮ್ಮನ್ನು ಮನದಲ್ಲಿ ಶಪಿಸಬಹುದು ಅಥವಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಬಹುದು. ಆದರೆ ಮುಂದೆ ನಿಮ್ಮ ಪ್ರಾಮಾಣಿಕತೆಯನ್ನು ಅವರು ಮೆಚ್ಚುವುದು ನಿಶ್ಚಿತ. ಮಾಡುತ್ತೇನೆ ಎಂದು ಹೇಳಿ ಕೈಕೊಡುವವರಿಗಿಂತ, ಮೊದಲೇ ಆಗುವುದಿಲ್ಲ ಎಂದು ಹೇಳುವ ನೀವೇ ಅವರಿಗೆ ಮೆಚ್ಚುಗೆಯಾಗುತ್ತೀರಿ. 

ಒಂದು ವಿಷಯ ತಿಳಿದುಕೊಳ್ಳಿ, ಜಗತ್ತಿನಲ್ಲಿ ನಿಮ್ಮನ್ನು ಮೇಲೆತ್ತುವ ಅಥವಾ ಕೆಳಕ್ಕೆ ಬೀಳಿಸುವ ಶಕ್ತಿ ಇರುವುದು ನಿಮಗೊಬ್ಬರಿಗೆ ಮಾತ್ರ! ನಿಮ್ಮ ಮೇಲೆ ನಿಮಗೇ ಗೌರವವಿಲ್ಲ ಎನ್ನುವುದಾದರೆ, ಇರುವ ಒಂದು ಬದುಕಲ್ಲಿ ನೀವು ಸಮಯಕ್ಕೆ ಬೆಲೆ ಕೊಡುವುದಿಲ್ಲ ಎಂದಾದರೆ ನಿಮ್ಮ ಸ್ಥಿತಿಯಂತೂ ಸುಧಾರಿಸಲಾರದು. ಕೀಳರಿಮೆಯ ಕಿರೀಟ ತಲೆ ಮೇಲೆ ಬಂದು ಕೂಡುತ್ತದಷ್ಟೆ. ಬಹುತೇಕ ಜನರು ಅನವಶ್ಯಕ ಒತ್ತಡ, ನೆಗೆಟಿವ್‌ ಸೆಲ್ಫ್ಟಾಕ್‌(ಋಣಾತ್ಮಕ ಸ್ವಯಂ ಟೀಕೆ) ಮತ್ತು ಖನ್ನತೆಯಿಂದ ಬಳಲುವುದಕ್ಕೂ, ಬೇಡದ ಕೆಲಸಕ್ಕೆ, ಒಲ್ಲದ ಆಹ್ವಾನಗಳಿಗೆ ಅವರು “ಹೂಂ’ ಎನ್ನುವುದಕ್ಕೂ ಸಂಬಂಧವಿರುತ್ತದೆ. ನಿಮಗೆ ನೀವು ಸಮಯ ಕೊಟ್ಟುಕೊಳ್ಳುವುದು “ಸ್ವಾರ್ಥ’ವಂತೂ ಅಲ್ಲ. 

ದೇಹದ ಮೇಲಿರಲಿ ಗಮನ
ನಿಮಗೆ ಯಾರಾದರೂ ಏನನ್ನಾದರೂ ಕೇಳಿದಾಗ ಆಹ್ವಾನ ಕೊಟ್ಟಾಗ ಅಥವಾ ಇನ್ಯಾವುದೋ ರೀತಿಯಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಬೇಡಿದಾಗ ನಿಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೋ ಗಮನಿಸಿ. ಆ ಬೇಡಿಕೆ ನಿಮಗೆ ಸುಸ್ತು ಉಂಟುಮಾಡುತ್ತದಾ? ಅಚಾನಕ್ಕಾಗಿ ತಲೆಭಾರವಾದಂತೆ ಅನಿಸುತ್ತದಾ ಅಥವಾ  ಮೈ ಬೆವರುತ್ತದಾ? ನಿಮಗೆ ನಿಮ್ಮ ದೇಹದಂಥ ಸ್ನೇಹಿತ ಮತ್ತೂಂದಿಲ್ಲ. ಏನೋ ಎಡವಟ್ಟಾಗುತ್ತಿದೆ, ಯಾಕೋ ಈ ಕೆಲಸ ಬೇಡವೆನಿಸುತ್ತದೆ ಎನ್ನುವ ಸನ್ನೆಯನ್ನು ಅದು ಈ ರೀತಿಯಾಗಿ ನಿಮಗೆ ಕಳುಹಿಸುತ್ತಿರುತ್ತದೆ. ಅದನ್ನು ಗುರುತಿಸಲು ನಿರಂತರ ಪ್ರಯತ್ನದ ಅಗತ್ಯವಿದೆ. ಇನ್ಮುಂದೆ ಯಾರಾದರೂ ಏನಾದರೂ ಕೇಳಿದರೆ ನಿಮ್ಮ ದೇಹ ಯಾವ ಸಿಗ್ನಲ್‌ಗ‌ಳನ್ನು ಕಳುಹಿಸುತ್ತಿದೆಯೋ ಗಮನಿಸಿ. ಅದರ ಮಾತನ್ನು ಕೇಳಿಸಿಕೊಳ್ಳಿ.

ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ
ಪ್ರಜ್ಞಾಪೂರ್ವಕವಾಗಿ ಒಂದು ಪ್ರಶ್ನೆ ಕೇಳಿಕೊಳ್ಳಿ “ನಿಜಕ್ಕೂ ನಾನು ಈ ಕೆಲಸವನ್ನು ಒಪ್ಪಿಕೊಳ್ಳಬೇಕಾ?’ ನಿಮಗೆ ಕೂಡಲೇ ಸ್ಪಷ್ಟವಾಗಿ ಉತ್ತರ ಸಿಗದಿದ್ದರೆ ಸ್ವಲ್ಪ ಸಮಯ ಕೊಡಲು ಅವರನ್ನು ಕೇಳಿ. ನನ್ನ ಸೀನಿಯರ್‌ ಸಹೋದ್ಯೋಗಿಯೊಬ್ಬರಿದ್ದರು. ಅವರಿಗೆ ನಾನು ಏನೇ ಕೇಳಿದರೂ “ನಾನು ಯೋಚಿಸಿ ಹೇಳುತ್ತೇನೆ’ ಎನ್ನುತ್ತಿದ್ದರು. ಕೆಲವೊಮ್ಮೆ ನನಗೆ ಅವರ ಈ ಗುಣದಿಂದ ಕಿರಿಕಿರಿಯಾಗುತ್ತಿತ್ತಾದರೂ, ಕೆಲವೇ ಸಮಯದಲ್ಲೇ ಅವರು ತಾವು ಸಹಾಯ ಮಾಡುವುದಾಗಿ/ಇಲ್ಲವೆಂದೋ ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು. ನನಗೂ ಸಮಯ ಉಳಿಯುತ್ತಿತ್ತು. ಇದೇ ವರ್ತನೆಯನ್ನೇ ನಾನೀಗ ಅಭ್ಯಾಸ ಮಾಡುತ್ತಿದ್ದೇನೆ. ಈಗಲೂ ಯಾರಾದರೂ ನನ್ನಿಂದ ಏನನ್ನಾದರೂ ಕೇಳಿದಾಗ “ಖಂಡಿತ ಮಾಡ್ತೇನೆ’ ಅನ್ನಲು ಬಾಯಿ ತೆರೆಯುತ್ತದೆ, ಆದರೆ ನನ್ನ ತುಡಿತವನ್ನು ಕಂಟ್ರೋಲ್‌ ಮಾಡಿಕೊಂಡು “ಯೋಚಿಸಿ ಹೇಳುತ್ತೇನೆ’ ಎನ್ನುತ್ತೇನೆ. 

ಅನಗತ್ಯ ವಿವರಣೆ ಬೇಡ
ಯಾರಾದರೂ ನಿಮಗೆ ರೆಸ್ಟಾರೆಂಟ್‌ಗೆ ಬರಲು ಆಹ್ವಾನ ಕೊಡುತ್ತಾರೆ ಎಂದುಕೊಳ್ಳಿ, ನಿಮಗೆ ಅಲ್ಲಿಗೆ ಹೋಗಲು ಮನಸ್ಸಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವರಿಗೆ “ಇಲ್ಲ’ ಎಂದು ಹೇಳಿಬಿಡಿ. ಅನವಶ್ಯಕ ವಿವರಣೆಗಳನ್ನು ಕೊಡುತ್ತಾ ಕೂಡಬೇಡಿ, ಎದುರಿನವನಿಗೆ ನೀವು ಬರುತ್ತೀರೋ ಇಲ್ಲವೋ ಎನ್ನುವುದಷ್ಟೇ ಮುಖ್ಯವಾಗಿರುತ್ತದೆಯೇ ಹೊರತು, ವಿವರಣೆಗಳಲ್ಲ. “ನನ್ನ ನಾಯಿಗೆ ಹುಷಾರಿಲ್ಲ, ಅಜ್ಜಿ ಸತ್ತುಹೋಗಿದ್ದಾಳೆ’ ಎಂಬ ಸುಳ್ಳುಗಳು ಬೇಕಿಲ್ಲ. ಈ ರೀತಿ ಸುಳ್ಳು ಹೇಳಿದ್ದಕ್ಕಾಗಿ ಆಮೇಲೆ ನಿಮಗೇ ಮನಸ್ಸು ಪಿಚ್ಚೆನಿಸುತ್ತದೆ. ನಾನು ಅಪ್ರಾಮಾಣಿಕ ಎಂಬ ಬೇಸರ ಕಾಡುತ್ತದೆ.

ಒಂದು ವಿಷಯ ಸ್ಪಷ್ಟವಿರಲಿ, ಸುಖಮಯ ಮತ್ತು ಸಮೃದ್ಧ ಜೀವನ ನಿಮ್ಮದಾಗಬೇಕೆಂದರೆ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಇರುವುದು ಮುಖ್ಯ. “ಹೂಂ’ ಎನ್ನುತ್ತೀರೆಂದರೆ ಒಪ್ಪಿಕೊಂಡ ಕೆಲಸವನ್ನು ಮಾಡಿ ಮುಗಿಸಿ, ಸುಳ್ಳು ಕಥೆ ಹೇಳುತ್ತಾ ಜನರ ಹಾಗೂ ನಿಮ್ಮ ಟೈಂ ವೇಸ್ಟ್‌ ಮಾಡಬೇಡಿ. ಪ್ರಾಮಾಣಿಕತೆ, ಸ್ಪಷ್ಟತೆ, ಬೋಲ್ಡ್‌ನೆಸ್‌ ಎನ್ನುವುದು ರಕ್ತಗತ ಸಂಗತಿಗಳಲ್ಲ. ಅವೆಲ್ಲವೂ ಪ್ರಾಕ್ಟಿಸ್‌ನಿಂದ ಬರುವಂಥವು. “ಇಲ್ಲ’ ಎನ್ನುವ ಪ್ರಾಕ್ಟೀಸ್‌ ಇಂದಿನಿಂದಲೇ ಆರಂಭಿಸಿ. ಆಗಲ್ಲ ಎಂದರೆ ಈಗಲೇ ಹೇಳಿಬಿಡಿ!

ಟೋನಿ ರಾಬಿನ್ಸ್‌, ಖ್ಯಾತ ಲೇಖಕ

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.