ದೀವಟಿಗೆ ಮತ್ತು ಆಧುನಿಕ ಬೆಳಕು; ಯಕ್ಷಾಭಿಮಾನಿಗಳು ಅಂದು,ಇಂದು!


Team Udayavani, Apr 15, 2018, 8:00 AM IST

144454.jpg

ವಿಶ್ವದೆಲ್ಲೆಡೆ ಆಕರ್ಷಣೆ ಹೊಂದಿರುವ ಮಹೋನ್ನತ ಕಲೆ ಯಕ್ಷಗಾನದ ಏಳಿಗೆಯಲ್ಲಿ ಕಲಾವಿದರ ಶ್ರಮದಷ್ಟೇ ಪ್ರೇಕ್ಷಕ ಪ್ರಭುಗಳ ಕೊಡುಗೆಯೂ ಗಣನೀಯ. ಕಾಲ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಕಾಣುತ್ತಾ ಬಂದಿರುವ ಯಕ್ಷಗಾನವನ್ನು ಪ್ರೇಕ್ಷಕನೂ ಪರಿಸ್ಥಿತಿಗೆ ಬದಲಾದಂತೆ ಆಸ್ವಾದಿಸುತ್ತಿದ್ದಾರೆ.

ಪ್ರೇಕ್ಷಕರನ್ನು ಹಲವು ವಿಧಗಳಲ್ಲಿ ಪರಿಗಣಿಸಬಹುದು. ದೀವಟಿಗೆ ಬೆಳಕಿನಲ್ಲಿ ಆಟ ನೋಡಿದ ಹಿರಿಯ ಪ್ರೇಕ್ಷಕರು ಈಗಿನ ಆಧುನಿಕ ಬೆಳಕಿನ ವ್ಯವಸ್ಥೆಯಲ್ಲಿ ಆಟ ನೋಡಿ ಸಂಭ್ರಮಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕಲಾಸಕ್ತಿ ಬೆಳೆಸಿಕೊಂಡು ತಿಟ್ಟುಗಳ ಬೇಧವಿಲ್ಲದೆ ಸಾಧ್ಯವಾದಾಗೆಲ್ಲಾ ಪ್ರದರ್ಶನಗಳನ್ನು ವೀಕ್ಷಿಸಿ ಸಂಭ್ರಮಿಸುವ ಅದೆಷ್ಟೋ ಮಂದಿ ಕಲಾಭಿಮಾನಿಗಳು ನಮ್ಮ ನಡುವೆ ಇದ್ದಾರೆ. 

ಇನ್ನೂ ಕೆಲ ಪ್ರೇಕ್ಷಕರು ಒಂದೇ ಮೇಳಕ್ಕೆ ಗಂಟು ಬಿದ್ದವರನ್ನೂ ನೋಡಿದ್ದೇವೆ, ಇಂತಹ ಮೇಳದ ಆಟ ಇದ್ದರೆ ಮಾತ್ರ ಅವರು ಹಾಜರಿರುತ್ತಾರೆ ಹೊರತು ಅದೆಷ್ಟೇ ಒಳ್ಳೆಯ ಬೇರೆ ಆಟವಿದ್ದರೆ ಅವರಿಗದು ವಿಶೇಷವಲ್ಲ. 

ಇನ್ನು ಕೆಲವರು ವ್ಯಕ್ತಿ ನಿಷ್ಠ ಅಭಿಮಾನಿಗಳಿದ್ದಾರೆ , ಇಂತಹ ಭಾಗವತರು ಇದ್ದಾರೆ ಅವರ ಪದ್ಯ ಕೇಳುವುದಕ್ಕಾಗಿಯೇ ಇಲ್ಲ, ಪಾತ್ರಧಾರಿಯೊಬ್ಬರ ಪಾತ್ರವನ್ನು ನೋಡಲೆಂದು  ನಾನು ಆಟಕ್ಕೆ ಬಂದವ ಎನ್ನುವವರು ಇದೀಗ ಭಾರೀ ಸಂಖ್ಯೆಯಲ್ಲಿ ಬೆಳೆದಿದ್ದಾರೆ. ಈ ವಿದ್ಯಮಾನ ಒಂದರ್ಥದಲ್ಲಿ ಕಲೆಯ ಬೆಳೆವಣಿಗೆಗೆ ಒಳ್ಳೆಯದು ಎನ್ನಬಹುದು. ಈ ಕಾರಣಕ್ಕಾದರೂ ಪ್ರೇಕ್ಷಕರು ರಂಗಸ್ಥಳದ ಮುಂದೆ ಹೆಚ್ಚು ಹೆಚ್ಚಾಗಿ ಜಮಾಯಿಸುತ್ತಾರಲ್ಲ ಎನ್ನುವುದು ಖುಷಿಯ ವಿಚಾರ. 

ಸದ್ಯ ಬಡಗಿನಲ್ಲಿ 3 ಡೇರೆ ಮೇಳಗಳು ಪ್ರದರ್ಶನಗಳನ್ನು ನೀಡುತ್ತಿದ್ದು ವಿಶೇಷವೆಂದರೆ ಮೂರೂ ಮೇಳಗಳಿಗೆ ಹೊಸ ಪ್ರೇಕ್ಷಕರನ್ನು ಸೆಳೆಯಲು ಹೊಸ ಪ್ರಸಂಗಗಳನ್ನು ಆಡಿ ತೋರಿಸುವುದು ಅನಿವಾರ್ಯವಾಗಿದೆ. ಪೌರಾಣಿಕ ಪ್ರಸಂಗಗಳಿಗೆ ಬೇಡಿಕೆ ಇಲ್ಲವೆಂದೆನಿಲ್ಲ. ಪೌರಾಣಿಕ ಪ್ರಸಂಗಗಳತ್ತವೂ ಯುವ ಪ್ರೇಕ್ಷಕರು ಆಸಕ್ತರಾಗಿರುವುದಕ್ಕೆ ಕುಂದಾಪುರದಲ್ಲಿ ಡೇರೆ ಮೇಳವೊಂದು ಪ್ರದರ್ಶಿಸಿದ ಭೀಷ್ಮ ವಿಜಯ ಪ್ರಸಂಗ ಸಾಕ್ಷಿ. ಅತಿಥಿ ಕಲಾವಿದರನ್ನೊಳಗೊಂಡು ಆಡಿ ತೋರಲಾದ ರಾತ್ರಿ ನಡೆದ ಆಟಕ್ಕೆ ಟಿಕೆಟ್‌ ಖರೀದಿಸಿ ಸಾವಿರಾರು ಯುವಕರು ಸೇರಿದ್ದರು. ಅನಿವಾರ್ಯವಾಗಿ ಕಾರ್ಯಕ್ರಮದ ಆಯೋಜಕರು ಡೇರೆಯನ್ನೇ ಬಿಡಿಸಬೇಕಾದ ಪರಿಸ್ಥಿತಿ ಬಂದಿತ್ತು. 

ಡೇರೆ ಮೇಳಗಳ ಪ್ರದರ್ಶನ ಪ್ರಸಿದ್ಧ ಕಲಾವಿದರಿರುವ ಕಾರಣಕ್ಕಾಗಿಯೇ ಅಪಾರ ನಿರೀಕ್ಷೆ  ಇರಿಸಿ ಪ್ರೇಕ್ಷಕರು ರಂಗಸ್ಥಳದ ಎದುರು ಜಮಾಯಿಸುತ್ತಾರೆ. ಕರಾವಳಿಯ ಹಲವೆಡೆ ಡೇರೆ ಮೇಳದ ಬಯಲಾಟವಿದೆ ಎಂದರೆ ಎಷ್ಟೇ ಒತ್ತಡ ಇದ್ದರೂ ಒಂದು ಗಳಿಗೆಯಾದರೂ ಆಟ ನೋಡಬೇಕೆಂದು ಬರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಿದ್ದು, ಇವರು ಎಂದೂ ಟಿಕೆಟ್‌ ಖರೀದಿ ಮಾಡಿ ಆಟಕ್ಕೆ ಹೋಗುವವ ಪ್ರೇಕ್ಷಕರಲ್ಲ. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೂ ಆ ಪ್ರೇಕ್ಷಕರ ಸಾಲಿನಲ್ಲಿ ದೊಡ್ಡದಿದೆ. 

ಕೆಲ ಪ್ರೇಕ್ಷಕರೂ ಒಳ್ಳೆಯ ಪ್ರಸಂಗ ಇದೆ ಎಂದಾದರೆ 200 ಕಿ.ಮೀ ದೂರಕ್ಕೆ ಪ್ರಯಾಣಿಸಿ ಪ್ರದರ್ಶನ ವೀಕ್ಷಿಸಲೂ ಸಿದ್ಧ , ಇದಕ್ಕೆ ಸಾಕ್ಷಿ ಎಂದೆ ದೂರದ ಶಿರಸಿಯಿಂದ ಉಡುಪಿಗೆ ಬರುವವರು ಇದ್ದಾರೆ. ಶೃಂಗೇರಿಯಿಂದ ಕುಂದಾಪುರಕ್ಕೆ ಬಂದು ಇಲ್ಲ ತೆರಳಿ ಆಟ ವೀಕ್ಷಿಸುವ ಕೆಲ ಅಭಿಮಾನಿಗಳಿದ್ದಾರೆ. 

ಈಗಿನ ದಿನಮಾನಸಗಳಲ್ಲಿ ಬಯಲಾಟ ಮೇಳಗಳಿಗೆ ಪ್ರೇಕ್ಷಕರ ಕೊರತೆ ಇರುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಮಾತು. ಆದೆ ಇದಕ್ಕೆ ಅಪವಾದ ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಸಾವಿರಾರು ಪ್ರೇಕ್ಷಕರು ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಜೋಡಾಟಗಳು,ಕೂಡಾಟಗಳು , ವಿಶೇಷ ಆಕರ್ಷಣೆ, ಅತಿಥಿ ಕಲಾವಿದರನ್ನು ಕರೆಸಿಕೊಂಡರೆ ಪ್ರೇಕ್ಷಕರ ಸಂಖ್ಯೆಗೆ ಕೊರೆತೆಯಿಲ್ಲ ಎನ್ನುವುದು ಸತ್ಯ. 

ಖಾಯಂ ಹರಕೆ ಬಯಲಾಟ ಇರುವ ಮೇಳಗಳಿಗೆ ಆಟ ಆಡಿಸುವವರ ಮನೆಯವರು ದೂರದ ಊರಿಂದ ಬರುವ ನೆಂಟರಿಷ್ಟರೇ ಪ್ರೇಕ್ಷಕರು . ಆಟದ ಮನೆಯ ಸುತ್ತ ಮುತ್ತಲಿನ ನಿವಾಸಿಗಳು ಬಂದರೂ ಮಧ್ಯ ರಾತ್ರಿ ಕಳೆದ ಬಳಿಕ ಅವರೂ ನಿಧಾನವಾಗಿ ಕುರ್ಚಿಯಿಂದ ಏಳುವುದು ಎಲ್ಲೆಡೆ ಸಾಮಾನ್ಯವಾಗಿದೆ. 

ಬಯಲಾಟ ಮೇಳದ ಹಿರಿಯ ಕಲಾವಿದರೊಬ್ಬರು ಹೇಳಿದಂತೆ, ಬೆಳಗಿನವರೆಗೆ ಆಟ ನೋಡುವ ಪ್ರೇಕ್ಷಕರು ಈಗ ಇಲ್ಲ. ಹರಕೆ ಹೊತ್ತವರ ಪೈಕಿ ಹೆಚ್ಚಿನವರು ಬೆಳಗಿನವರೆಗೆ  ಆಟ ನೋಡುವ ತಾಳ್ಮೆ ಹೊಂದಿಲ್ಲ. ಅವರಿಗೆ ಹರಕೆ ತೀರಿದರಾಯಿತು, ಪ್ರಸಂಗ, ಕಲಾವಿದ ಯಾರೆ ಇದ್ದರು ತೊಂದರೆ ಇಲ್ಲ ಅನ್ನುತ್ತಾರೆ. ಈ ಮಾತಿಗೆ ಅಪವಾದವೂ ಇದ್ದು ಕೆಲವಡೆ ಹರಕೆದಾರರು ಇಂತಹದ್ದೆ ಪ್ರಸಂಗ ಆಡಲೇಬೇಕು ಎಂದು ಮೇಳದವರಿಗೆ ಪಟ್ಟು ಹಿಡಿಯುವವರಿದ್ದಾರೆ. ಅಂತಹ ಪ್ರಸಂಗಗಳನ್ನು ನೋಡಲೆಂದು ಪ್ರಜ್ಞಾವಂತ ಪ್ರೇಕ್ಷಕರು ಆಗಮಿಸುತ್ತಾರೆ. ದುರಂತ ಎಂದರೆ ನಮ್ಮ ಯುವ ಕಲಾವಿದರಿಗೆ ಸವಾಲಿನ ಪ್ರಸಂಗಗಳಿಗೆ ಜೀವ ತುಂಬಲು ಸಾಧ್ಯವಾಗದೆ ಪ್ರೇಕ್ಷಕರು ನಿರಾಶರಾಗುತ್ತಿದ್ದಾರೆ ಎಂದರು. 

ಕಾಲಮಿತಿ ಪ್ರೇಕ್ಷಕರಿಗೆ ಅನುಕೂಲವಾಯಿತು
ಹರಕೆ ಆಟಗಳನ್ನಾಡುವ ಧರ್ಮಸ್ಥಳ ಮೇಳ ಕಾಲಮಿತಿ ಆಟಗಳನ್ನು ಆರಂಭಿಸಿದ ಮೇಲೆ ಎಂದೂ ಪ್ರೇಕ್ಷಕರ ಕೊರತೆಯಾಗಿಲ್ಲ. ಸಂಪೂರ್ಣ ಆಟವನ್ನು ಪ್ರೇಕ್ಷಕರು ಸವಿಯುತ್ತಿದ್ದಾರೆ. ಹಿಂದೆ ಬೈಕ್‌ ಕಾರು, ಆಟೋ ರಿಕ್ಷಾಗಳು ಹೊಂದಿರದ ಕಾಲದಲ್ಲಿ ಸಂಪೂರ್ಣ ಆಟವನ್ನು ಅನಿವಾರ್ಯವಾಗಿ ವೀಕ್ಷಿಸುತ್ತಿದ್ದರು. ಈಗಿನ ಜಂಜಾಟದ ನಡುವೆ ಒಂದು ಗಂಟೆಯವರೆಗೆ ಪ್ರೇಕ್ಷಕ ನಿಲ್ಲುವುದು ಕಷ್ಟ . ಹೀಗಾಗಿ ಕಾಲಮಿತಿ ವರದಾನವಾಗಿದೆ. ಇದೀಗ ತೆಂಕು  ಬಡಗಿನ ಹಲವು ಮೇಳಗಳು ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಳ್ಳುತ್ತಿವೆ. 

ಕಲೆಕ್ಷನ್‌ ಮಾಡಿ ಪೇಟೆಗಳಲ್ಲಿ ಆಟ ಮಾಡುವ ಬಯಲಾಟದ ಮೇಳಗಳಿಗೆ ಕಾಲಮಿತಿ ಅನಿವಾರ್ಯವಾಗಿದ್ದು, ಪ್ರದರ್ಶನಕ್ಕೆ ಸಾಕ್ಷಿಯಾಗುವ ಪ್ರೇಕ್ಷಕರು 12 ಗಂಟೆ ದಾಟಿದ ಬಳಿಕ ರಂಗಸ್ಥಳದ ಎದುರು ನಿಲ್ಲುವುದು ದೂರದ ಮಾತು. ಪೌರಾಣಿಕವಾಗಿರಲಿ, ನೂತನ ಪ್ರಸಂಗವಿರಲಿ ಚುಟುಕಾದ ಅಖ್ಯಾನವೊಂದನ್ನು ಕಾಲಮಿತಿಯೊಳಗೆ ಸವಿಯಲು ಮಾತ್ರ ಪ್ರೇಕ್ಷಕ ಸಿದ್ಧ. ವಿಶೇಷವೆಂದರೆ ಹೊಸ ಪ್ರಸಂಗವಾಗಿದ್ದಲ್ಲಿ , ದೈವ ಭೂತಗಳ ಅಬ್ಬರವಿದ್ದರೆ ಮಾತ್ರ ಬಯಲಾಟ ಮೇಳಗಳ ಎದುರು ಪ್ರೇಕ್ಷಕರ ಸಂಖ್ಯೆ ಹೆಚ್ಚು. ಪೌರಾಣಿಕ ಪ್ರಸಂಗ ಎಂದು ತಿಳಿದರೆ ಪ್ರೇಕ್ಷಕರು ಬೆರಳೆಣಿಕೆಯಷ್ಟು ಮಾತ್ರ!.

ಸಮಾರಂಭದಲ್ಲಿ,ಜಾತ್ರೆಗಳಲ್ಲಿ ನಡೆಯುವ ಸಂಯೋಜಿತ ಕಾರ್ಯಕ್ರಮಗಳಿಗೆ ಈಗ  ಪ್ರೇಕ್ಷಕರ ಕೊರತೆ ಇಲ್ಲ. ತಾರಾ ವರ್ಚಸ್ಸು ಇರುವ ಕಲಾವಿದರಿರುವ ಪೌರಾಣಿಕ ಆಖ್ಯಾನಗಳ ಪ್ರದರ್ಶನಗಳಿಗೆ ಭಾರೀ ಸಂಖ್ಯೆಯಲ್ಲಿ  ಪ್ರೇಕ್ಷಕರು ಸೇರುತ್ತಿರುವುದು, ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಚಾರ. 

ಕರಾವಳಿಯಲ್ಲಿ ವ್ಯಾಪಿಸಿರುವ ತೆಂಕು ಮತ್ತು ಬಡಗುತಿಟ್ಟಿನಲ್ಲಿ ಪ್ರೇಕ್ಷಕರಾಗಿ ಬಂದ ಅನೇಕರು ಕಲಾಸಕ್ತರಾಗಿ ವೃತ್ತಿ ಕಲಾವಿದರಾದವರೂ ಹಲವರಿದ್ದಾರೆ. ರಂಗದ ಎದುರು ಕುಳಿತವರ ಸಾಲಿನಲ್ಲಿ ಪಾಮರ ಎಂದು ಪರಿಗಣಿಸಲ್ಪಡುವವ ಮುಂದೊಂದು ದಿನ ಉತ್ತಮ ವಿಮರ್ಶಕರೂ ಆದವರಿದ್ದಾರೆ. 

ಕಲಾವಿದನೊಬ್ಬರ ಶ್ರಮಕ್ಕೆ ಪ್ರಚಾರವನ್ನೂ ನೀಡುವ ಮಹತ್ವದ ಕಾರ್ಯ ಮಾಡುವವರು ಪ್ರೇಕ್ಷಕರು. ಮೇಳದ ಮುಂದಿನ ಪ್ರದರ್ಶನಕ್ಕೆ ಪ್ರೇಕ್ಷಕರನ್ನು ಹೆಚ್ಚಿಸುವ, ಇಲ್ಲ ಕಡಿಮೆ ಮಾಡುವ ಎಲ್ಲಾ ಶಕ್ತಿ ಓರ್ವ ಪ್ರೇಕ್ಷಕನಲ್ಲಿದೆ. ಉತ್ತಮ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರೇಕ್ಷಕ ಖಂಡಿತ ಇನ್ನೊಬ್ಬ ಕಲಾಭಿಮಾನಿಗಳ ಬಳಿ ಕಲಾವಿದರ ಶ್ರಮದ ಕುರಿತು ಹೇಳಿಕೊಳ್ಳದೆ ಇರಲಾರ. 

ಹೀಗಾಗಿ ಕಲಾವಿದರು ಪ್ರತಿಯೊಬ್ಬ ಪ್ರೇಕ್ಷಕನ ಮೇಲೆ ಅಭಿಮಾನ ಹೊಂದಬೇಕಾಗಿರುವುದು ಅನಿವಾರ್ಯ. ಲೋಕೋ ಭಿನ್ನ ರುಚಿ ಎನ್ನುವ ಮಾತಿನಂತೆ ಒಬ್ಬೊಬ್ಬ ಪ್ರೇಕ್ಷಕನಿಗೆ ಒಂದೊಂದು ನಿರೀಕ್ಷೆಗಳು, ಅಭಿರುಚಿ ಇರುತ್ತದೆ. ಕೆಲವರು ನಾಟ್ಯ(ಹೊಡತ), ಕೆಲವರಿಗೆ ಪದ್ಯಗಳು, ಇನ್ನು ಕೆಲ ಪ್ರೇಕ್ಷಕರಿಗೆ ಹಾಸ್ಯವೇ ಬೇಕಾಗುತ್ತದೆ. ಇವುಗಳೆಲ್ಲದರ ನಡುವೆ ಹೊಸ ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಹಳೆ ತಲೆಮಾರಿನ ಪ್ರೇಕ್ಷಕರಿಗೆ ನೋವಾಗದಂತೆ ಪ್ರದರ್ಶನಗಳನ್ನು ನೀಡುವುದು ಈಗಿನ ಕಲಾವಿದರಿಗೆ ನಿಜವಾಗಿಯೂ ಒಂದು ಸವಾಲಾಗಿದೆ. 

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.