ಯೂಟ್ಯೂಬ್‍ ಸ್ಟಾರ್ ಚಂದನ್: ಸ್ಯಾಂಡಲ್‍ವುಡ್‍ನಲ್ಲಿ “ರ‍್ಯಾಪ್’ ರೋಪು!


ಲಕ್ಷ್ಮಿ ಗೋವಿಂದ್ ರಾಜ್, Jun 26, 2018, 12:32 PM IST

c1.jpg

ಹಾಲಿವುಡ್, ಬಾಲಿವುಡ್ ಮತ್ತು ಇತರೆ ಭಾಷೆಗಳಿಗೆ ಸೀಮಿತವಾಗಿದ್ದ “ರ‍್ಯಾಪ್’ ಸಾಂಗ್‍ಗಳು ಇದೀಗ ಸ್ಯಾಂಡಲ್‍ವುಡ್‍ನಲ್ಲೂ ಸದ್ದು ಮಾಡಿ, ಟ್ರೆಂಡ್ ಸೃಷ್ಟಿಸುತ್ತಿವೆ. ಅಲ್ಲದೆ, ಈ “ರ‍್ಯಾಪ್’ ಸಾಂಗ್‍ಗೆ ಫಿದಾ ಆದವರು ಮೈಚಳಿ ಬಿಟ್ಟು ವಯಸ್ಸಿನ ಅಂತರವಿಲ್ಲದೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ “ರ‍್ಯಾಪ್’ ಪ್ರಯೋಗ ಮಾಡಿ ಯಶಸ್ಸು ಗಳಿಸಿದವರಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿರುವವರು “ಚಂದನ್‍ಶೆಟ್ಟಿ’.

ಹೌದು!  ಚಂದನ್‍ಶೆಟ್ಟಿ ಕನ್ನಡಕ್ಕೆ  “ರ‍್ಯಾಪ್’  ಶೈಲಿಯ ಹಾಡನ್ನು ಕುಡಿಸಿದ್ದೆ ತಡ ಪಡ್ಡೆ ಹೈಕ್ಳಿಂದ ಹಿಡಿದು ವಯೋವೃದ್ಧರವರೆಗೂ ಸಂಗೀತಕ್ಕೆ ದನಿಗೂಡಿಸಿದರು. ಅದರಲ್ಲಿ ಪ್ರಮುಖವಾಗಿ “ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರಗಿರಗಿರ ಅಂದಿದೆ’ ಎಂಬ ರ‍್ಯಾಪ್ ಸಾಂಗ್ ಸ್ಯಾಂಡಲ್‍ವುಡ್‍ನಲ್ಲಿ ಒಂದು ಸಂಚಲವನ್ನೇ ಸೃಷ್ಟಿಸಿ, ಚಂದನ್‍ಶೆಟ್ಟಿಗೆ ಬಹುದೊಡ್ಡ ಹೆಸರನ್ನು ತಂದುಕೊಟ್ಟಿತ್ತು. “ಇವಳು ಪಕ್ಕಾ ಚಾಕಲೇಟ್ ಗರ್ಲ್’ ಎನ್ನುವ ಮೂಲಕ ಹೆಣ್ಮಕ್ಳ ಹೃದಯನ್ನು ಕದಿಯುವ ಜೊತೆಗೆ “ರ‍್ಯಾಪ್’ ಪ್ರಿಯರಿಗೆ “ಟಕೀಲ’ ಕುಡಿಸಿದವರು.

ರ‍್ಯಾಪ್ ಸ್ಟಾರ್ ಮಿಂಚಿಂಗ್: ಚಂದನ್ ಶೆಟ್ಟಿ ಒಬ್ಬ ಪ್ರತಿಭಾವಂತ “ರ‍್ಯಾಪರ್’. ಯೂಟ್ಯೂಬ್‍ನಲ್ಲಿ ಅವರ ಎಲ್ಲ ಸಾಂಗ್‍ಗಳು ಮಿಲಿಯನ್‍ಗಟ್ಟಲೇ ವೀಕ್ಷಣೆಯಾಗಿದ್ದು, ಯೂಟ್ಯೂಬ್ “ರ‍್ಯಾಪ್’ ಸ್ಟಾರ್ ಅಂದರೂ ತಪ್ಪಿಲ್ಲ. ಇನ್ನು ಚಂದನ್ ತನ್ನ ಹಾಡುಗಳ ಮೂಲಕ ಯುವ ಜನತೆಯ ಹಾಟ್ ಫೇವರೆಟ್ ಆಗಿ, ತಮ್ಮ ರ‍್ಯಾಪ್ ಹಾಡುಗಳಿಗೆ ಅವರೇ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ ಕನ್ನಡದ “ರ‍್ಯಾಪ್’ ಸ್ಟಾರ್ ಅಲ್ಲದೇ ಕನ್ನಡದ “ಬಿಗ್‍ಬಾಸ್’ ಸೀಸನ್ 5ರ ವಿನ್ನರ್ ಆಗಿದ್ದು, ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಮಾಸ್ಟರ್ ಡ್ಯಾನ್ಸರ್’ ಶೋಗೆ ತೀರ್ಪುಗಾರರಾಗಿದ್ದಾರೆ. ಅಲ್ಲದೇ ಇದೀಗ ಕಲರ್ ಸೂಪರ್‌ ವಾಹಿನಿಯಲ್ಲಿ “ಕನ್ನಡದ ಕೋಗಿಲೆ’ ಎಂಬ ಹೊಚ್ಚ ಹೊಸ ಸಂಗೀತ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.

3ಪೆಗ್‍ನಿಂದ ಟ್ರೆಂಡ್ ಸೃಷ್ಟಿಸಿದ “ಟಕಿಲ…’: ಇನ್ನು ಚಂದನ್ ಮೂಲತಃ ಮಂಗಳೂರಿನವರಾದರೂ ಹುಟ್ಟಿಬೆಳೆದಿದ್ದು ಹಾಸನದಲ್ಲಿ. ಉದ್ಯಮಿ ಪರಮೇಶ್‌ ಹಾಗೂ ತಾಯಿ ಪ್ರೇಮಾ ದಂಪತಿಯ ಪುತ್ರನಾಗಿ ಸೆಪ್ಟೆಂಬರ್ 17, 1989ರಂದು ಹಾಸನದ ಶಾಂತಿಗ್ರಾಮದಲ್ಲಿ ಜನನ.  ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಕಲೇಶಪುರದ ರೋಟರಿ ಸ್ಕೂಲ್‌ನಲ್ಲಿ ಮುಗಿಸಿ, ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸೇಂಟ್‌ಫಿಲೋಮಿನಾ ಕಾಲೇಜಿನಲ್ಲಿ ಮುಗಿಸಿ, ಅನಂತರ ಬಿ.ಕಾಂ. ಪದವಿಯನ್ನು ಮೈಸೂರಿನ ವಿದ್ಯಾ ವಿಕಾಸ್‌ ಕಾಲೇಜಿನಲ್ಲಿ ಪಡೆದಿದ್ದರು.

ಸಂಗೀತದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ, ಚಂದನ್ ಶೆಟ್ಟಿ ಪ್ರಾರಂಭದ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ಬದುಕು ಅರಿಸಿ ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟ ಅನುಭವಿಸಿದರು. ಅಲ್ಲದೇ ಎಷ್ಟೇ ಕಷ್ಟ ಅನುಭವಿಸಬೇಕಾಗಿ ಬಂದರೂ ತಮ್ಮ ಗುರಿ ಬಿಡದೆ, ಗುರಿಯ ಬೆನ್ನತ್ತಿ ಇಂದು ಪ್ರಸಿದ್ಧ “ರ‍್ಯಾಪ್’ ಸ್ಟಾರ್ ಆಗಿದ್ದಾರೆ. ಹಾಗೂ ಹಲವಾರು ಚಿತ್ರಗಳಿಗೆ ಸಾಹಿತ್ಯ ಬರೆದು, ಧ್ವನಿ ನೀಡಿರುವ ಚಂದನ್‍ಶೆಟ್ಟಿ ಇಂದು ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದು ತಮ್ಮ “3 ಪೆಗ್ಗು’ ಆಲ್ಬಂ ಹಾಡಿನ ಮೂಲಕ. ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಬಿಡುಗಡೆಯಾದ “ಟಕೀಲ’ ಹಾಡು ಕೂಡ ಸಾಕಷ್ಟು ಸದ್ದು ಮಾಡಿ ಟ್ರೆಂಡ್ ಹುಟ್ಟುಹಾಕಿದೆ.

ಅಲೆಮಾರಿಯಿಂದ ಆರಂಭ: ಮೊದಲಿಗೆ ಚಂದನ್‍ ತಮ್ಮ ಸಿನಿಮಾ ಜರ್ನಿಯನ್ನು “ಆಲೆಮಾರಿ’ ಚಿತ್ರದಿಂದ ಆರಂಭಿಸಿ, ಮ್ಯಾಜಿಕಲ್ ಕಂಪೋಸರ್ ಎಂದೇ ಪ್ರಖ್ಯಾತರಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಸಾಹಿತ್ಯ ಬರೆಯುವುದರ ಜೊತೆಗೆ, ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಶುರು ಮಾಡಿದರು. ಆ ವೇಳೆಯಲ್ಲಿ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಪುನೀತ್ ರಾಜಕುಮಾರ್ ಚಿತ್ರದ “ಧಮ್ ಪವರೇ..’ ಸಾಂಗ್. ಈ ಹಾಡನ್ನು ಸ್ವತಃ ಚಂದನ್‍ಶೆಟ್ಟಿ ಬರೆದಿದ್ದಾರೆ.

ಅಲ್ಲದೇ ವರದನಾಯಕ, ಚಕ್ರವ್ಯೂಹ, ಭಜರಂಗಿಯಂತಹ ಭರ್ಜರಿ ಹಿಟ್ ಚಿತ್ರಗಳೂ ಸೇರಿದಂತೆ, 50ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಹಿನ್ನೆಲೆ ಗಾಯಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ “ಸೀಜರ್’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದಾರೆ.

ಹಾಡು ಕಟ್ಟುವ ಕಲೆ ಕಲಿತದ್ದು ಅಪ್ಪನಿಂದ: ಹೌದು! ಚಂದನ್‍ಶೆಟ್ಟಿ “ಬಿಗ್‍ಬಾಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ನಾನು ಒಂದು ಮರದ ಪೆಟ್ಟಿಗೆ ಸಿಕ್ಕಿದರೆ ಸಾಕು, ಅದನ್ನು ಬಡಿಯುತ್ತಾ ಹಾಡುತ್ತಿದ್ದೆ, ಈ ಕಲೆಯನ್ನು ನಾನು ನನ್ನ ಅಪ್ಪನ ಬಳಿ ಕಲಿತದ್ದು. ನನ್ನ ತಂದೆಗೆ ಒಂದು ಜನರಲ್‌ ಸ್ಟೋರ್‌ ಅಂಗಡಿ ಇತ್ತು. ಆಗ ನಾನು ಪ್ರತಿದಿನ ಅಲ್ಲಿಗೆ ಹೋಗಿ ಗುಡಿಸುವುದು, ಒರೆಸುವುದು ಮಾಡುತ್ತಿದ್ದೆ, ಕೆಲಸದ ಬಿಡುವಿನ ವೇಳೆಯಲ್ಲಿ ನನ್ನ ಅಪ್ಪ ಹಾಡುತ್ತಿದ್ದರು ಅಲ್ಲದೇ ಆ ಸಮಯದಲ್ಲಿ ನನಗೆ ಯಾವುದಾದರೂ ಡಬ್ಬ ತಂದು ಬಾರಿಸು ಎಂದು ಹೇಳುತ್ತಿದ್ದರು. ಇಲ್ಲಿಂದಲೇ ಹಾಡನ್ನು ಸೃಷ್ಟಿಸಿ ಹಾಡುವ ಕಲೆಯನ್ನು ನಾನು ಕಲಿತೆ ಎನ್ನುತ್ತಾರೆ ಚಂದನ್‍ಶೆಟ್ಟಿ.

ಚಂದನ್‍ “ಹಾವಳಿ’: ಚಂದನ್‍ಶೆಟ್ಟಿ ಬಿಗ್‍ಬಾಸ್‍ನಿಂದ ಹೊರ ಬಂದ ನಂತರ ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಅಭಿನಯದ “ಪಡ್ಡೆಹುಲಿ’ ಚಿತ್ರದ ಪ್ರೋಮೋ ಸಾಂಗ್ ಹಾಡಿರುವುದು ವಿಶೇಷ. ಅಲ್ಲದೇ “ಹಾವಳಿ’ ಎಂಬ ಸಂಗೀತ ಕಾರ್ಯಕ್ರಮವನ್ನು (ಕಾನ್ಸೆರ್ಟ್) ಕನ್ನಡದಲ್ಲಿ ರ‍್ಯಾಪ್‍ಪ್ರಿಯರಿಗಾಗಿ ಆಯೋಜಿಸಿ, ಅದರಲ್ಲಿಯೂ ಯಶಸ್ವಿ ಆಗಿದ್ದಾರೆ ಚಂದನ್‍ಶೆಟ್ಟಿ. ಈ ಕಾರ್ಯಕ್ರಮಕ್ಕೆ ಟಗರು ಶಿವರಾಜಕುಮಾರ್, ಡಾಲಿ ಧನಂಜಯ್, ಕಿರಿಕ್ ಕೀರ್ತಿ ಸೇರಿದಂತೆ ಹಲವು “ರ‍್ಯಾಪರ್’ಗಳು ಭಾಗವಹಿಸಿದ್ದರು.

ಯೂಟ್ಯೂಬ್‍ನಲ್ಲಿ ಚಂದನ್‍ಶೆಟ್ಟಿ ಹವಾ: ಶಬ್ಬಾಸ್!
ಹೌದು ಇಂದು ಚಂದನ್‍ಶೆಟ್ಟಿ ಕನ್ನಡ ರ‍್ಯಾಪರ್ ಜೊತೆಗೆ ಯೂಟ್ಯೂಬ್‍ನ ಸ್ಟಾರ್ ಕೂಡಾ. ಅವರ ರಚಿಸಿ ಬಿಡುಗಡೆ ಮಾಡಿರುವ ಎಲ್ಲ “ರ‍್ಯಾಪ್’ ಸಾಂಗ್‍ಗಳೂ ಮಿಲಿಯನ್‍ಗಟ್ಟಲೇ ವೀಕ್ಷಣೆಗೊಳಗಾಗಿವೆ.
1. ಹಾಳಾಗೋದೇ ಸಾಂಗ್ 91ಲಕ್ಷಕ್ಕೂ ಹೆಚ್ಚು
2. 3ಪೆಗ್ ಸಾಂಗ್ 3.5ಕೋಟಿಗೂ ಹೆಚ್ಚು
3. ಚಾಕಲೇಟ್ ಗರ್ಲ್ ಸಾಂಗ್ 1.8ಕೋಟಿಗೂ ಹೆಚ್ಚು
4. ಟಕಿಲ ಸಾಂಗ್ 3.3ಕೋಟಿಗೂ ಹೆಚ್ಚು
5. ಟಾಪ್ ಟು ಬಾಟಮ್ ಗಾಂಚಾಲಿ 1.1ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

“3 ಪೆಗ್‌’ನ ವಿವಾದ: “ಮೂರೇ ಮೂರು ಪೆಗ್‌ಗೆ ತಲೆ ಗಿರಗಿರ ಗಿರಗಿರ ಅಂದಿದೆ…’ “3 ಪೆಗ್‌’ ಆಲ್ಬಂನ ಅತ್ಯಂತ ಜನಪ್ರಿಯವಾದ ಈ ರ‍್ಯಾಪ್ ಸಾಂಗ್‌ ಸೂಪರ್‌ಹಿಟ್‌ ಆಗೋಕೆ ಕಾರಣ ಚಂದನ್‌ಶೆಟ್ಟಿ ಒಬ್ಬರೇ ಕಾರಣವಲ್ಲ, ತಾವೂ ಕಾರಣ ಅಂತ ಯುವ ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ವಿವಾದ ಹುಟ್ಟು ಹಾಕಿದರು. ಅಲ್ಲದೇ ಈ ವಿವಾದಕ್ಕೆ ಚಂದನ್‍ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಅನಂತರ “ಸೀಜರ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ “ನಾನೆಲ್ಲೂ ಆ ಹಾಡು ಮಾಡಿದ್ದು ನಾನು ಅಂತ ಹೇಳಿಕೊಂಡಿಲ್ಲ. ಆ ಹಾಡು ಮಾಡಿದ್ದು ವಿಜೇತ್‌. ನಾನು ಹಾಡಿದ್ದೇನೆ ಅಷ್ಟೇ. ಹಲವು ವರ್ಷಗಳ ಹಿಂದೆ ನಮ್ಮಿಬ್ಬರ ಭೇಟಿಯಾದಾಗ, ವಿಜೇತ್‌ ಒಂದು ಟ್ಯೂನ್‌ ಮಾಡಿಕೊಂಡಿದ್ದರು. ಕೇಳಿ ಖುಷಿಯಾಯಿತು. ಅದಕ್ಕೆ ಸಾಹಿತ್ಯ ಬರೆದು ಹಾಡಿದ್ದೆ. ಆದರೆ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಕೊನೆಗೆ ಬಿಡುಗಡೆಯಾಗಿ ಜನಪ್ರಿಯವಾಯಿತು.

ಆ ಹಾಡಿನ ಕೊನೆಯಲ್ಲಿ ಬರುವುದು ಮೂರೇ ಹೆಸರು. ಒಂದು ನಂದು, ಇನ್ನೊಂದು ಐಂದ್ರಿತಾದು, ಮತ್ತೊಂದು ವಿಜೇತ್‌ದು. ನಾನೆಲ್ಲೂ ಇದು ನನ್ನ ಹಾಡು ಅಂತ ಹೇಳಿಕೊಂಡಿಲ್ಲ. ಅಷ್ಟಕ್ಕೂ ಆ ಅಲ್ಬಂನ ನಿರ್ಮಾಪಕ ನಾನಲ್ಲ. ನಾನೊಬ್ಬ ಗಾಯಕ ಅಷ್ಟೇ. ವಿಜೇತ್‌ಗೆ ಏನು ಸಿಗಬೇಕು ಎನ್ನುವುದು ತೀರ್ಮಾನಿಸಬೇಕಾಗಿದ್ದು ನಿರ್ಮಾಪಕರು’ ಎನ್ನುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದರು ಚಂದನ್‍ಶೆಟ್ಟಿ.

* ಲಕ್ಷ್ಮಿಗೋವಿಂದರಾಜು ಎಸ್.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.