ಚಿನ್ನದ ಮೇಲೆ ಏಕೆ ಹಣ ಹೂಡಬೇಕು ಅಂತೀರಾ ? ಕಾರಣಗಳು ಇಲ್ಲಿವೆ !


Team Udayavani, Jul 9, 2018, 3:12 PM IST

gold-jewellery-700.jpg

ಉಳಿತಾಯದ ಹಣ ಹೂಡಿಕೆಗೆ ಅತ್ಯಂತ ಉತ್ತಮ ಮಾರ್ಗ ಯಾವುದು ಎಂಬ ಪ್ರಶ್ನೆಯನ್ನು ಸಾಂಪ್ರದಾಯಿಕ ಹೂಡಿಕೆದಾರರಿಗೆ ಕೇಳಿದರೆ ಅವರಿಂದ ಥಟ್ಟನೆ ಬರುವ ಉತ್ತರ : ಚಿನ್ನ !

ಸಾವಿರಾರು ವರ್ಷಗಳಿಂದಲೂ ಜನರಿಗೆ ಚಿನ್ನದ ಮೇಲೆ ವ್ಯಾಮೋಹ ಇರುವುದು ಕಂಡುಬರುತ್ತದೆ. ಆ ವ್ಯಾಮೋಹ ಕೇವಲ ಸಂಪತ್ತು ಕೂಡಿ ಹಾಕುವ ಉದ್ದೇಶದ್ದಲ್ಲ. ಬದಲು ಅದರಲ್ಲಿ  ಭಾವುಕತೆ, ಶ್ರದ್ಧೆ, ಧಾರ್ಮಿಕತೆ ಎಲ್ಲವೂ ಇದೆ. ಎಲ್ಲರ ದೃಷ್ಟಿಯಲ್ಲಿ ಚಿನ್ನವು ಮನೆಯ ಆಪದ್ಧನ. ಅತ್ಯಂತ ಕಷ್ಟಕಾಲ ಬಂದಾಗ ಅಂತಿಮವಾಗಿ ಮನೆ, ಮಠ ಉಳಿಸಿಕೊಳ್ಳಲು ನಿರ್ವಾಹವಿಲ್ಲದೆ ಜನರು ಚಿನ್ನವನ್ನು ಮಾರುವುದು ಕಂಡು ಬರುತ್ತದೆ. ಹಾಗಾಗಿ ಸಾಂಪ್ರದಾಯಿಕ ಜನಜೀವನದಲ್ಲಿ ಚಿನ್ನಕ್ಕಿರುವ ಮಹತ್ವ ಅಷ್ಟಿಷ್ಟಲ್ಲ. 

ಈಗಿನ ಆಧುನಿಕ್ ಡಿಜಿಟಲ್ ಯುಗದಲ್ಲಿ ಚಿನ್ನ ತನ್ನ ಹೂಡಿಕೆ ಮಹತ್ವವನ್ನು ಉಳಿಸಿಕೊಂಡಿದೆಯೇ ಎಂಬ ಜಿಜ್ಞಾಸೆ ಹೂಡಿಕೆದಾರರನ್ನು, ಹಣ ಉಳಿತಾಯ ಮಾಡುವವರನ್ನು ಕಾಡುವುದು ಸಹಜ. ಅನೇಕ ಕಾರಣಗಳಿಗಾಗಿ ಚಿನ್ನದ ಮೇಲೆ ಹಣ ಹೂಡುವವರು ಇದ್ದಾರೆ. ಪ್ರತೀ ತಿಂಗಳೂ ಸ್ವಲ್ಪ ಸ್ವಲ್ಪವೇ ಹಣ ಉಳಿತಾಯ ಮಾಡಿ ಚಿನ್ನವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ  ಖರೀದಿಸುವ ಜನಸಾಮಾನ್ಯರೂ ಅಧಿಕ ಸಂಖ್ಯೆಯಲ್ಲಿ  ಇದ್ದಾರೆ. 

ಚಿನ್ನ ಖರೀದಿಸುವರಲ್ಲಿ ಎರಡು ವರ್ಗದ ಜನರಿದ್ದಾರೆ. ಮೊದಲನೇಯವರು ಚಿನ್ನಾಭರಣ ಖರೀದಿಯಲ್ಲಿ ಆಸಕ್ತಿ ತೋರುತ್ತಾರೆ. ಈ ವರ್ಗದಲ್ಲಿ ಮಹಿಳೆಯರೇ ಅಧಿಕ. ಎರಡನೇ ವರ್ಗದವರು ನಿಜವಾದ ಅರ್ಥದಲ್ಲಿ ಹೂಡಿಕೆದಾರರು. ಇವರು ಚಿನ್ನವನ್ನು ನಾಣ್ಯ, ಬಿಸ್ಕತ್ತು, ಗಟ್ಟಿ, ಬಾರ್ ಇತ್ಯಾದಿ ರೂಪದಲ್ಲಿ ಖರೀಸುತ್ತಾರೆ. ಮೊದಲನೇ ವರ್ಗದವರು ತಮ್ಮ ಒಡವೆಗಳನ್ನು ಮಾರಲು ಹೋದರೆ ಭಾರೀ ಪ್ರಮಾಣದ ಮಜೂರಿ ಖರ್ಚನ್ನು ಅಥವಾ ತೇಮಾನನ್ನು ಕಳೆದುಕೊಳ್ಳುತ್ತಾರೆ. ಎರಡನೇ ವರ್ಗದವರಿಗೆ ಮಜೂರಿ ನಷ್ಟದ ಪ್ರಮೇಯವೇ ಇಲ್ಲ. ಆದುದರಿಂದ ಚಿನ್ನದಲ್ಲಿ ಹಣ ಹೂಡುವವರು ಈ ವಿಷಯವನ್ನು ಸರಿಯಾಗಿ ತಿಳಿದಿರುವುದು ಅಗತ್ಯ. 

ಶೇರುಗಳ ಧಾರಣೆ ಗಗನ ಮುಖೀಯಾಗುವುದು, ಪ್ರಪಾತಕ್ಕೆ ಕುಸಿಯುವುದು ಶರವೇಗದಲ್ಲಿ. ಆದರೆ ಚಿನ್ನದ ಧಾರಣೆಯಲ್ಲಿ ಈ ಧಾವಂತ ಇರುವುದಿಲ್ಲ. ಚಿನ್ನದ ಬೆಲೆ ಬಹುತೇಕ ಸ್ಥಿರವಾಗಿ ಉಳಿಯುವುದು ಖಚಿತವೇ ಹೊರತು ಇಳಿಯುವುದು ಖಚಿತವಲ್ಲ; ಇಳಿದರೂ ಅದು ಶೇರಿನ ಧಾರಣೆಯಂತೆ ಪ್ರಪಾತಕ್ಕೆ ಕುಸಿಯುವ ಪ್ರಶ್ನೆಯೇ ಇಲ್ಲ. ಆದುದರಿಂದ ಎಲ್ಲರೂ ಹೇಳುವಂತೆ ಚಿನ್ನವೂ ಗಟ್ಟಿ, ಚಿನ್ನದ ಬೆಲೆಯೂ ಗಟ್ಟಿ ! 

ಚಿನ್ನದ ಧಾರಣೆ ಈಗ ಮಧ್ಯಮ ಗತಿಯಲ್ಲಿದೆ. 22 ಕ್ಯಾರೆಟ್ (ಒಡವೆ) ಚಿನ್ನದ ಬೆಲೆ ಗ್ರಾಮಿಗೆ ಈಗ 2,850ರ ಆಸುಪಾಸಿನಲ್ಲಿದೆ. ಇದು ಬಹುತೇಕ ಸ್ಥಿರ ರೇಂಜ್ ಎನ್ನಬಹುದು. ಚಿನ್ನದ ಇಲ್ಲಿಂದ ಮುಂದೆ ಹೋದರೆ, ಅಬ್ಬಬ್ಟಾ ಎಂದರೆ ಗ್ರಾಮಿಗೆ 3,000 ರೂ. ಗಡಿ ದಾಟಬಹುದು. ಆದುದರಿಂದ ಈಗಿನ ಬೆಲೆಯಲ್ಲಿ, ಹೂಡಿಕೆಯ ಉದ್ದೇಶದಿಂದ ಚಿನ್ನ ಖರೀದಿಸುವ ಧಾವಂತ ಅಗತ್ಯವಿಲ್ಲ. ಚಿನ್ನ 2,500ಕ್ಕೆ ಕುಸಿದರೆ ಅದು ಆಕರ್ಷಕ ಹೂಡಿಕೆ ಧಾರಣೆ ಅನ್ನಿಸಬಹುದು. 

ಹಾಗಿದ್ದರೂ ಚಿನ್ನ ಖರೀದಿಯಲ್ಲಿ ಹಲವಾರು ಆರ್ಥಿಕಾನುಕೂಲಗಳಿವೆ. ಅವುಗಳನ್ನು ನಾವು ಹೀಗೆ ಮನಗಾಣಬಹುದು :

ಹಣದುಬ್ಬರ ವರ್ಸಸ್ ಚಿನ್ನ :

ನಾವು ಯಾವುದೇ ಮಾಧ್ಯಮದಲ್ಲಿ ಹಣ ಹೂಡಿದಾಗ ನಮ್ಮ ಹೂಡಿಕೆಯ ಮೌಲ್ಯ ಕೊರೆದು ಹೋಗುವುದು ಹಣದುಬ್ಬರದಿಂದ ಎನ್ನುವುದನ್ನು ನಾವು ಮರೆಯುವಂತಿಲ್ಲ. ಹಣದುಬ್ಬರದ ಲಕ್ಷಣ ವೆಂದರೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ. ಇದರಿಂದಾಗಿ ನಮ್ಮ ಕೈಯಲ್ಲಿನ ರೂಪಾಯಿಯ ಖರೀದಿ ಸಾಮರ್ಥ್ಯ ಕುಂಠಿತವಾಗುತ್ತಾ ಹೋಗುತ್ತದೆ. ಬೆಲೆ ಏರಿಕೆಯ ಪರಿಣಾಮವಾಗಿ ನಾವು ಹಿಂದಿನ ತಿಂಗಳಲ್ಲಿ ಕೊಂಡಷ್ಟೇ ಸಾಮಗ್ರಿಗಳನ್ನು ಈ ತಿಂಗಳಲ್ಲಿ ಕೊಳ್ಳಲು ಹೆಚ್ಚು ಹಣ ತೆರಬೇಕಾಗುತ್ತದೆ. ವಸ್ತುಗಳ ಬೇಡಿಕೆ ಹೆಚ್ಚುತ್ತಿರುವಂತೆಯೇ ಪೂರೈಕೆ ಕಡಿಮೆ ಇರುವ ಸ್ಥಿತಿಯಲ್ಲಿ  ಹಣದುಬ್ಬರ (ಬೆಲೆ ಏರಿಕೆ) ಕ್ರಿಯಾಶೀಲವಾಗಿರುತ್ತದೆ. 

ಹಣದುಬ್ಬರದಿಂದ ಸೊರಗುವ ರೂಪಾಯಿ ಮೌಲ್ಯದಿಂದಾಗಿ ನಮ್ಮ ಹೂಡಿಕೆ ಹಣದ ಮಾರುಕಟ್ಟೆ ಮೌಲ್ಯ ಕೂಡ ಕುಸಿಯುತ್ತ ಹೋಗುತ್ತದೆ. ನಾವು ಬ್ಯಾಂಕಿನಲ್ಲಿಡುವ ಠೇವಣಿಗೆ ಶೇ.6.50 ಬಡ್ಡಿ ಇರುವ ವೇಳೆಯೇ ಹಣದುಬ್ಬರ ಶೇ. 4 – 5 ಪ್ರಮಾಣದಲ್ಲಿದ್ದರೆ  ನಮಗೆ ಠೇವಣಿಯಿಂದ ಸಿಗುವ ಬಡ್ಡಿಯ ಮೌಲ್ಯದ ಬಹುಅಂಶ ಹಣದುಬ್ಬರದಿಂದಾಗಿಯೇ ಕೊರೆದು ಹೋಗಿರುತ್ತದೆ. ಎಂದರೆ ಹಣದುಬ್ಬರ ಹೆಚ್ಚಿದ ಹಾಗೆ ನಾವು ಭದ್ರವಾಗಿ ಇರಿಸಿರುವ ಠೇವಣಿಯ ಮೇಲಿನ ಬಡ್ಡಿ ಹಾಗಿರಲಿ; ಅಸಲಿನ ಮೌಲ್ಯ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ !

ಚಿನ್ನದ ಸಹನಶೀಲತೆ

ಬೇರೆ ಎಲ್ಲ ಬಗೆಯ ಹೂಡಿಕೆಯೊಂದಿಗೆ ಹೋಲಿಸಿದರೆ ಚಿನ್ನದ ಮೇಲಿನ ಹೂಡಿಕೆಯು ಹಣದುಬ್ಬರದ ಹೊಡೆತವನ್ನು ದೃಢವಾಗಿ ಸಹಿಸುತ್ತದೆ ಎನ್ನುವುದು ಗಮನಾರ್ಹ. ಚಿನ್ನದ ಧಾರಣೆಗೆ ಹೋಲಿಸಿದರೆ ವಿಶ್ವದ ಬಹುತೇಕ ಎಲ್ಲ ದೇಶಗಳ ಕರೆನ್ಸಿ ಮೌಲ್ಯ ಈಚಿನ ವರ್ಷಗಳಲ್ಲಿ ಬಹುವಾಗಿ ಕೊರೆದು ಹೋಗಿರುವುದೇ ಇದಕ್ಕೆ ಸಾಕ್ಷಿ. 

ಆದುದರಿಂದಲೇ ಜನರು ಚಿನ್ನದ ಹೂಡಿಕೆ, ಮೌಲ್ಯದ ದೃಷ್ಟಿಯಿಂದ ಭದ್ರ ಎಂಬದನ್ನು ಚೆನ್ನಾಗಿ ಅರಿತಿದ್ದಾರೆ. ಚಿನ್ನದ ಮೇಲೆ ಹೂಡುವ ಹಣ ಎಂದೂ ಕರಗಿ ಹೋಗುವುದಿಲ್ಲ; ಚಿನ್ನದ ಬೆಲೆ ದೊಡ್ಡ ಮಟ್ಟ ಏರಿಳಿತಗಳನ್ನು ಕಾಣುವುದಿಲ್ಲ; ಕಂಡರೂ ಶರವೇಗದಲ್ಲಿ ಅದು ತನ್ನ ಮೌಲ್ಯವನ್ನು ಪುನರಪಿ ಪಡೆಯುತ್ತದೆ ಎನ್ನುವುದು ಸರ್ವರಿಗೂ ವೇದ್ಯ.

ಆದುದರಿಂದಲೇ ಸಿರಿವಂತರಿಂತ ಹಿಡಿದು ಬಡವರ ತನಕ ಎಲ್ಲರಿಗೂ  ಚಿನ್ನವೇ ಸರ್ವಶ್ರೇಷ್ಠ ಸಾರ್ವಕಾಲಿಕ ಹೂಡಿಕೆ ಮಾಧ್ಯಮವಾಗಿ ಉಳಿದುಕೊಂಡಿದೆ. 

ಡಿಜಿಟಲ್ ಚಿನ್ನ 

ಶೇರು, ಬ್ಯಾಂಕ್ ಠೇವಣಿ ಇತ್ಯಾದಿಗಳಂತೆ ಚಿನ್ನದ ಬಾಂಡ್ ಮೂಲಕ ನಾವು ಆನ್‌ಲೈನ್‌ ನಲ್ಲಿ ಚಿನ್ನವನ್ನು ಖರೀದಿಸಬಹುದು; ಆದರೆ ಚಿನ್ನ ನಮ್ಮ ಕೈಯಲ್ಲಿರುವುದಿಲ್ಲ; ಬದಲು ಖರೀದಿ ಪ್ರಮಾಣದ ಚಿನ್ನ ನಮ್ಮ ಖಾತೆಯಲ್ಲಿ ಜಮೆಯಾಗಿರುತ್ತದೆ. ಆದರೆ ಈಗಿನ ಡಿಜಿಟಲ್ ಯುಗದಲ್ಲಿ ಈ ಸೊತ್ತು-ಸಂಪತ್ತನ್ನು ಜಗತ್ತಿನ ಎಲ್ಲೋ ಮೂಲೆಯಲ್ಲಿ ಕುಳಿತ ಹ್ಯಾಕರ್‌ ಗಳು ಆನ್ಲೈನ್ ಮೂಲಕ ಎಗರಿಸಬಹುದು ಎನ್ನುವ ಭಯ ಹಲವರಲ್ಲಿ ಇದ್ದೇ ಇದೆ. ಡಿಜಿಟಲ್ ಚಿನ್ನವೂ ಇದಕ್ಕೆ ಹೊರತಾಗಿಲ್ಲ.

ಆದರೆ ನಾವು ನೇರವಾಗಿ ಭೌತಿಕ ರೂಪದಲ್ಲಿ ಖರೀದಿಸುವ ಚಿನ್ನ ಹಾಗಲ್ಲ – ಹೂಡಿಕೆದಾರನು ತನ್ನಲ್ಲಿನ ಚಿನ್ನವನ್ನು ನಿತ್ಯ ಕಣ್ಣಿನಿಂದ ನೋಡಿ, ಕೈಯಿಂದ ಮುಟ್ಟಿ, ಅದರ ಹೊಳಪು, ಸೌಂದರ್ಯವನ್ನು ಆನಂದಿಸಬಹುದು. ನಿತ್ಯವೂ ಪ್ರಕಟವಾಗುವ ಅದರ ಮಾರುಕಟ್ಟೆ ಧಾರಣೆಯಿಂದ ತನ್ನ ಚಿನ್ನದ ಸಂಪತ್ತಿನ ಮೌಲ್ಯವನ್ನು ಲೆಕ್ಕ ಹಾಕಬಹುದು. 

ಹಾಗಿದ್ದರೂ ಮನೆಯಲ್ಲಿ ಚಿನ್ನವನ್ನು ಇರಿಸಿಕೊಳ್ಳುವುದರಲ್ಲಿ ಕಳ್ಳಕಾಕರರ, ದರೋಡೆಕೋರರ ಭಯ ಇದ್ದೇ ಇರುತ್ತದೆ. ಚಿನ್ನದ ರಕ್ಷಣೆ, ಭದ್ರತೆ ಕಷ್ಟಕರ. ಬ್ಯಾಂಕ್ ಲಾಕರ್‌ ನಲ್ಲಿ  ಇಟ್ಟ ಚಿನ್ನ ದರೋಡೆಕೋರನ ಪಾಲಾದರೂ ಬ್ಯಾಂಕಿನಿಂದ ಯಾವುದೇ ಪರಿಹಾರ ಸಿಗುವುದಿಲ್ಲ. 

ಭೌತಿಕ ರೂಪದಲ್ಲಿರುವ ಚಿನ್ನವನ್ನು ನಗದಾಗಿ ಪರಿವರ್ತಿಸುವುದು ಅತ್ಯಂತ ಸುಲಭ. ಚಿನ್ನ ಕೈಯಲ್ಲಿದ್ದರೆ ನಗದು ಹಣ ಕೈಯಲ್ಲಿದ್ದಂತೆ. ಈ ಕಾರಣಕ್ಕಾಗಿಯೂ ಜನರು ಚಿನ್ನವನ್ನು ನಾಣ್ಯದ ರೂಪದಲ್ಲಿ, ಬಿಸ್ಕೆಟ್ ರೂಪದಲ್ಲಿ, ಬಾರ್ ರೂಪದಲ್ಲಿ ಖರೀದಿಸಿಟ್ಟು ಕೊಳ್ಳುತ್ತಾರೆ. ಚಿನ್ನದಿಂದ ಆಭರಣ ಮಾಡಿಸಿಕೊಂಡ ಸಂದರ್ಭದಲ್ಲಿ ಅದನ್ನು ನಗದೀಕರಿಸಲು ಹೋದರೆ ಅದರಲ್ಲಿನ ಚಿನ್ನದ ಪ್ರಮಾಣಕ್ಕೆ ಮಾತ್ರವೇ ದುಡ್ಡು ಸಿಗುತ್ತದೆ. ಎಂದರೆ ತೇಮಾನು ಪ್ರಮಾಣ ಸಂಪೂರ್ಣ ನಷ್ಟ. ಉದಾಹರಣೆಗೆ 70,000 ರೂ. ಮೌಲ್ಯದ ಚಿನ್ನದ ನೆಕ್‌ಲೇಸ್‌ ನಲ್ಲಿ  ಚಿನ್ನದ ಮೌಲ್ಯ 45,000 ಇದ್ದರೆ ಮಜೂರಿ ಮೌಲ್ಯ 25,000 ಇರುವುದು ಸಾಮಾನ್ಯ ! 

ಚಿನ್ನದ ಬೆಲೆ ಯಾವ ಯಾವ ಸಂದರ್ಭಗಳಲ್ಲಿ ಗಗನ ಮುಖೀಯಾಗುತ್ತದೆ ಎಂಬುದರ ತಿಳಿವಳಿಕೆ ಇರುವುದು ಅಗತ್ಯ. ಯುದ್ಧ ಸ್ಫೋಟಗೊಳ್ಳುವ ಭೀತಿ ಉಂಟಾದಾಗ ಬೇರೆಲ್ಲ ಹೂಡಿಕೆ ಮಾಧ್ಯಮಗಳು ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ ಚಿನ್ನದ ಬೆಲೆ ಮಾತ್ರ ಒಂದೇ ಸಮನೆ ಏರುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಕರೆನ್ಸಿ ಮೌಲ್ಯ, ಶೇರು ಮಾರುಕಟ್ಟೆ ಕುಸಿತವೇ ಮೊದಲಾದ ಆರ್ಥಿಕ, ರಾಜಕೀಯ, ಅಂತಾರಾಷ್ಟ್ರೀಯ ಅಸ್ಥಿರತೆ, ಅರಾಜಕತೆಯೇ ಮೊದಲಾದ ಕಾರಣಗಳಿಂದಲೂ ಚಿನ್ನ ಗಗನ ಮುಖೀಯಾಗುತ್ತದೆ. 

ಈ ವರ್ಷ ಉತ್ತರ ಕೊರಿಯದಿಂದ ಉಂಟಾಗಿದ್ದ  ಅಣು ಸಮರ ನ್ಪೋಟದ ಭೀತಿ ಅಮೆರಿಕ – ಉತ್ತರ ಕೊರಿಯ ಐತಿಹಾಸಿಕ ಶೃಂಗದ ಫಲವಾಗಿ ಬಹುಮಟ್ಟಿಗೆ ನಿವಾರಣೆಗೊಂಡಿತಾದರೂ ಚಿನ್ನದ ಬೆಲೆ ಮಾತ್ರ ಇಳಿಯಲೇ ಇಲ್ಲ. ಔನ್ಸ್ ಚಿನ್ನದ ಬೆಲೆ 1,300 ರಿಂದ 1,360 ಡಾಲರ್ ನಲ್ಲೇ ಈ ದಿನಗಳಲ್ಲೂ ಮುಂದುವರಿದಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 31,000 ರೂ. ನಲ್ಲಿ ಇದೆ.

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.