CONNECT WITH US  

ಕ್ರಮಬದ್ಧ ಉಳಿತಾಯ,ತೆರಿಗೆ ಲಾಭ,ಗರಿಷ್ಠ ಸಂಪತ್ತು: ಇದ್ಯಾವ ಮ್ಯಾಜಿಕ್‌?

ಕ್ರಮಬದ್ದ ತಿಂಗಳ ಉಳಿತಾಯದಿಂದ ವರ್ಷಂಪ್ರತಿ ಗರಿಷ್ಠ  ತೆರಿಗೆ ವಿನಾಯಿತಿ ಲಾಭವನ್ನು ಪಡೆಯುತ್ತಾ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಸಂಪತ್ತನ್ನು ಕಲೆ ಹಾಕುವ ಮ್ಯಾಜಿಕ್ ಯಾವುದು ಗೊತ್ತಾ ?

ಆ ಮ್ಯಾಜಿಕ್ ಎಂದರೆ ELSS ಮ್ಯೂಚುವಲ್ ಫಂಡ್ ಸ್ಕೀಮ್. ಇಎಲ್ಎಸ್ಎಸ್ ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್. ತಿಂಗಳ ಆದಾಯದ ಮಧ್ಯಮ ವರ್ಗದವರು ತಮ್ಮ ಸಂಬಳದ ಸ್ವಲ್ಪಾಂಶವನ್ನು ಕ್ರಮಬದ್ಧವಾಗಿ ಉಳಿತಾಯ ಮಾಡುವ ಪ್ರವೃತ್ತಿ ಹೊಂದಿರುವ ಮಧ್ಯಮ ವರ್ಗದವರಿಗೆ  ಈ ಸ್ಕೀಮ್ ಹೇಳಿ ಮಾಡಿಸಿದಂತಿದೆ ಎಂದರೆ ಅತಿಶಯವಲ್ಲ. 

ತಿಂಗಳ ಕಂತಿನಲ್ಲಿ  ಉಳಿತಾಯ ಮಾಡುವ ಹಣವನ್ನು ಯಾವ ಮಾಧ್ಯಮದಲ್ಲಿ ತೊಡಗಿಸಿದರೆ ಹೆಚ್ಚು ಲಾಭ ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಬ್ಯಾಂಕ್, ಪೋಸ್ಟಲ್ ಆರ್ ಡಿ ಮೂಲಕ ಹಣ ಉಳಿತಾಯ ಮಾಡುವವರೇ ಹೆಚ್ಚು. ಆದರೆ ಹೀಗೆ ಉಳಿತಾಯ ಮಾಡುವ ಹಣಕ್ಕೆ ನಿರ್ದಿಷ್ಟ ಬಡ್ಡಿ ದರ ಬಿಟ್ಟರೆ ಬೇರೆ ಯಾವುದೇ ಆಕರ್ಷಣೆ ಇರುವುದಿಲ್ಲ ಎನ್ನುವುದು ಗಮನಾರ್ಹ.

ಮಾತ್ರವಲ್ಲ ಹೀಗೆ ಉಳಿತಾಯ ಮಾಡುವ ಹಣದ ಮೇಲೆ ನಾವು ಗಳಿಸುವ ಬಡ್ಡಿಯು ನಮ್ಮ ಆದಾಯಕ್ಕೆ ಸೇರ್ಪಡೆಗೊಂಡು ಅದು ಆದಾಯ ತೆರಿಗೆಗೆ ಒಳಪಡುತ್ತದೆ ಎನ್ನುವುದು ಕೂಡ ಗಮನಾರ್ಹ. ಹಣಕಾಸು ವರ್ಷವೊಂದರಲ್ಲಿ 10,000 ರೂ. ಮೀರುವ ಬಡ್ಡಿ ಆದಾಯವು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. 

ಹೀಗಿರುವಾಗ ನಮಗೆ ತೆರಿಗೆ ಹೊರೆ ಉಂಟು ಮಾಡದೆಯೇ ತೆರಿಗೆ ವಿನಾಯಿತಿ ಲಾಭವನ್ನು ತಂದುಕೊಡುವ ಮಾಸಿಕ ಉಳಿತಾಯ ಕಂತು ಪಾವತಿ ಆಧಾರದ ಯೋಜನೆ ಇರುವುದಾದರೆ ಅದು ಇಎಲ್ಎಸ್ಎಸ್ - ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ! 

ಈ ಯೋಜನೆ ಆದಾಯ ತೆರಿಗೆ ಕಾಯಿದೆಯ ಸೆ.80ಕ್ಕೆ ಒಳಪಡುವುದರಿಂದ ಈ ಅವಕಾಶದಡಿ ನಮಗೆ ವರ್ಷಕ್ಕೆ 1.50 ಲಕ್ಷ ರೂ. ಹಣವನ್ನು ತಿಂಗಳ ಕಂತು ಕಂತಿನ ರೂಪದಲ್ಲಿ ಉಳಿತಾಯ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ಅದು ಹೇಗೆ ಎಂದರೆ ಎಸ್ ಐ ಪಿ ಮೂಲಕ - ಎಸ್ ಐ ಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. 

ಇಎಲ್ಎಲ್ಎಸ್ ಯೋಜನೆಯಡಿ ನಾವು ಒಂದು ವರ್ಷದ ಅವಧಿಯಲ್ಲಿ ಹೂಡಬಹುದಾದ ಗರಿಷ್ಠ 1.50 ಲಕ್ಷ ರೂ. ಮೊತ್ತವನ್ನು ನಾವು 12 ತಿಂಗಳ ಕಂತಿನಲಿ ವಿಭಜಸಿ ಅದನ್ನು ಸಿಪ್ ಮೂಲಕ ಈ ಬಗೆಯ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ತೊಡಗಿಸಬಹುದು. ಹಾಗೆ ಮಾಡುವ  ಮೂಲಕ ನಮಗೆ ಸಿಗುವ ಪ್ರಯೋಜನಗಳನ್ನು ಈ ರೀತಿಯಾಗಿ ಪಟ್ಟಿ ಮಾಡಬಹುದು : 

1. ಸುಲಭ ಮಾಸಿಕ ಕಂತುಗಳಲ್ಲಿ ಉಳಿತಾಯ. 

2. ಸಿಪ್ ನಲ್ಲಿ ಹೂಡಿದ ಹಣಕ್ಕೆ ನಮ್ಮ ಟ್ರೇಡಿಂಗ್ ಅಕೌಂಟ್ ಖಾತೆಗೆ ಜಮೆಯಾಗುವ ಯೂನಿಟ್ಗಳ ಎನ್ಎವಿ (ನೆಟ್ ಅಸೆಟ್ ವ್ಯಾಲ್ಯೂ) ನಿಂದಾಗಿ ಅತ್ಯುತ್ತಮ ಇಳುವರಿ (ಈಲ್ಡ್).

3. ತೆರಿಗೆ ವಿನಾಯಿತಿಯ ಲಾಭ.

4. ತೆರಿಗೆ ವಿನಾಯಿತಿ ಉದ್ದೇಶದ ಇತರೆಲ್ಲ ಯೋಜನೆಗಳಿಗಿಂತಲೂ (ಉದಾ : ಎನ್ಎಸ್ಸಿ, ಬ್ಯಾಂಕ್ ಟ್ಯಾಕ್ಸ್ ಬಾಂಡ್, ಪಿಪಿಎಫ್ ಇತ್ಯಾದಿ) ಕಡಿಮೆ ಲಾಕ್ ಇನ್ ಪೀರಿಯಡ್, ಎಂದರೆ ಕೇವಲ 3 ವರ್ಷಗಳ ಲಾಕ್ ಇನ್ ಪೀರಿಯಡ್. 

5. ದೀರ್ಘಾವಧಿಯಲ್ಲಿ ಬೇರೆ ಯಾವುದೇ ಉಳಿತಾಯ ಯೋಜನೆಗಳಿಗಿಂತಲೂ ಅತ್ಯಧಿಕ ಲಾಭ. 

6. ಅಂತೆಯೇ ಬೇರೆಲ್ಲ ಯೋಜನೆಗಳಿಗಿಂತ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಯೋಜನೆಯಲ್ಲಿನ ಹೂಡಿಕೆಯು ಹಣದುಬ್ಬರದಿಂದ ಕೊರೆದು ಹೋಗುವ ಉಳಿತಾಯದ ಮೌಲ್ಯಗಳನ್ನು ತಾಳಿಕೊಳ್ಳುವ ಸಾಮರ್ಥ್ಯದೊಂದಿಗೆ  ದೊಡ್ಡ ಮೊತ್ತದ ಸಂಪತ್ತನ್ನು  ದೀರ್ಘಾವಧಿಯಲ್ಲಿ  ಕಲೆಹಾಕಬಲ್ಲುದು. 

ಇಷ್ಟೆಲ್ಲ ಸೌಕರ್ಯಗಳಿರುವುದರಿಂದ ತಿಂಗಳ ಸಂಬಳ ಪಡೆಯುವ ಯಾವುದೇ ವರ್ಗದವರಿಗೆ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಯೋಜನೆ ಅತ್ಯಾಕರ್ಷಕವಾಗಿ ಕಾಣುವುದು ಸಹಜವೇ. ಹಾಗಿರುವ ವಿವಿಧ ಕಂಪೆನಿಗಳ ವಿವಿಧ ಬಗೆಯ, ವಿವಿಧ ಕ್ರಮಾಂಕ, ವಿವಿಧ ಬಗೆಯ ಆಕರ್ಷಣೆಯ ಮ್ಯೂಚುವಲ್ ಫಂಡ್ಗಳ ಪಟ್ಟಿಯತ್ತ ನಾವೊಮ್ಮೆ ಕಣ್ಣಾಡಿಸಿದರೆ ನಮಗೆ ಗೊಂದಲ ಉಂಟಾಗುವುದು ಖಚಿತ. 

ಯಾವ ಕಂಪೆನಿಯ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೆಚ್ಚು ಆಕರ್ಷಕ, ಹೆಚ್ಚು ವಿಶ್ವಸನೀಯ,  ಶೇರು ಮಾರುಕಟ್ಟೆಯ ಏರಿಳಿತಗಳ ವೇಳೆಯೂ ಹೆಚ್ಚು ಸಮರ್ಥ ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇಂತಹ ಸಂದರ್ಭಗಳಲ್ಲಿ ನಮಗೆ ಮ್ಯೂಚುವಲ್ ಫಂಡ್ ವಿಶ್ಲೇಷಕರು, ಸಲಹೆಗಾರರ ಅಭಿಪ್ರಾಯಗಳು ಹೆಚ್ಚು ಮಾರ್ಗದರ್ಶಕವಾಗಿರುತ್ತವೆ. ಅವುಗಳನ್ನು ಕ್ರಮಾಂಕದ ಆಧಾರದಲ್ಲಿ ಈ ಕೆಳಗಿನಂತೆ ಗುರುತಿಸಬಹುದು :

ಮೊದಲನೇ ಕ್ರಮಾಂಕದ ಸ್ಕೀಮುಗಳು:

1. ಮೋತಿಲಾಲ್ ಓಸ್ವಾಲ್ ಲಾಂಗ್ ಟರ್ಮ್ ಈಕ್ವಿಟಿ ಡೈರೆಕ್ಟ್  (ಎನ್ಎವಿ ಅಥವಾ ನೆಟ್ ಅಸೆಟ್ ವ್ಯಾಲ್ಯೂ : 18.9013)

2. ಎಲ್ ಆ್ಯಂಡ್ ಟಿ ಅಡ್ವಾನ್ಸ್ ಡೈರೆಕ್ಟ್ - ಜಿ (ಎನ್ಎವಿ 57.3030)

3. ಟಾಟಾ ಇಂಡಿಯಾ ಟ್ಯಾಕ್ಸ್ ಸೇವಿಂಗ್ ಡೈರೆಕ್ಟ್ ಜಿ (ಎನ್ಎವಿ : 17.8372)

4. ಐಡಿಎಫ್ಸಿ ಟ್ಯಾಕ್ಸ್ ಅಡ್ವಾಂಟೇಜ್ (ಇಎಲ್ಎಸ್ಎಸ್) ಡೈರೆಕ್ಟ್ ಜಿ (ಎನ್ಎವಿ : 58.3900)

5. ಆದಿತ್ಯ ಬಿರ್ಲಾ ಎಸ್ಎಲ್ ಟ್ಯಾಕ್ಸ್ ರಿಲೀಫ್ 96 ಡೈರೆಕ್ಟ್ ಜಿ  (ಎನ್ಎವಿ : 58.3900)

6. ಪ್ರಿನ್ಸಿಪಾಲ್ ಟ್ಯಾಕ್ಸ್ ಸೇವಿಂಗ್ ಫಂಡ್ ಡೈರೆಕ್ಟ್ (ಎನ್ಎವಿ : 2029.1700)

7. ಡಿಎಸ್ಪಿ ಬ್ಲ್ಯಾಕ್ ರಾಕ್ ಟ್ಯಾಕ್ಸ್ ಸೇವರ್ ಡೈರೆಕ್ಟ್ ಪ್ಲಾನ್ (ಎನ್ಎವಿ 47.2560)

ಎರಡನೇ ಕ್ರಮಾಂಕದ ಸ್ಕೀಮುಗಳು : 

1. ಎಚ್ ಡಿ ಎಫ್ ಸಿ ಅಡ್ವಾಂಟೇಜ್ ಡೈರೆಕ್ಟ್ ಜಿ (ಎನ್ಎವಿ : 351.4440)

2. ಆದಿತ್ಯ ಬಿರ್ಲಾ ಎಸ್ಎಲ್ ಟ್ಯಾಕ್ಸ್ ಪ್ಲಾನ್ ಡೈರೆಕ್ಟ್ ಜಿ (ಎನ್ಎವಿ  41.4600)

3. ಬಿಓಐ ಅಕ್ಸಾ ಟ್ಯಾಕ್ಸ್ ಅಡ್ವಾಂಟೇಜ್ ಡೈರೆಕ್ಟ್ ಜಿ (ಎನ್ಎವಿ : 58.6300)

4. ಇನ್ವೆಸ್ಕೋ ಇಂಡಿಯಾ ಟ್ಯಾಕ್ಸ್ ಪ್ಲಾನ್ ಡೈರೆಕ್ಟ್ ಜಿ (ಎನ್ಎವಿ : 55,2300)

5. ಆ್ಯಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಡೈರೆಕ್ಟ್ ಜಿ (ಎನ್ಎವಿ 47,8292).

6.ಸುಂದರಂ ಡೈವಿರ್ಸಿಫೈಡ್ ಈಕ್ವಿಟಿ ಡೈರೆಕ್ಟ್  ಜಿ (ಎನ್ಎವಿ : 103.5884)

7. ಎಚ್ ಎಸ್ ಬಿ ಸಿ ಟ್ಯಾಕ್ಸ್ ಸೇವರ್ ಈಕ್ವಿಟಿ ಡೈರೆಕ್ಟ್ ಜಿ (ಎನ್ಎವಿ : 37,6665)

ಮೂರನೇ ಕ್ರಮಾಂಕದ ಸ್ಕೀಮುಗಳು :

1. ಐಸಿಐಸಿಐ ಪ್ರು ಲಾಂಗ್ ಟರ್ಮ್ ಈಕ್ವಿಟಿ (ಟ್ಯಾಕ್ಸ್ ಸೇವಿಂಗ್) ಡೈರೆಕ್ಟ್ ಜಿ (ಎನ್ಎವಿ : 380.7000)

2. ಎಚ್ ಡಿ ಎಫ್ ಸಿ ಟ್ಯಾಕ್ಸ್ ಸೇವರ್ ಡೈರೆಕ್ಟ್ ಜಿ (ಎನ್ಎವಿ : 518.0400).

3. ಕೋಟಕ್ ಟ್ಯಾಕ್ಸ್ ಸೇವರ ಡೈರೆಕ್ಟ್ ಜಿ (ಎನ್ಎವಿ 44,4730)

4. ಯುಟಿಐ ಲಾಂಗ್ ಟರ್ಮ್ ಈಕ್ವಿಟಿ ಡೈರೆಕ್ಟ್ ಜಿ (ಎನ್ಎವಿ : 88.5889)

5. ಐಡಿಬಿಐ ಈಕ್ವಿಟಿ ಅಡ್ವಾಂಟೇಜ್ ಡೈರೆಕ್ಟ್ ಜಿ (ಎನ್ಎವಿ : 28.1200)

6. ಫ್ರಾಂಕ್ಲಿನ್ ಇಂಡಿಯಾ ಟ್ಯಾಕ್ಸ್ ಶೀಲ್ಡ್ ಡೈರೆಕ್ಟ್ ಜಿ (ಎನ್ಎವಿ : 577.1966)

7. ರಿಲಯನ್ಸ್ ಟ್ಯಾಕ್ಸ್ ಸೇವರ್ (ಇಎಲ್ಎಸ್ಎಸ್) ಡೈರೆಕ್ಟ್ ಜಿ  (ಎನ್ಎವಿ : 56.3238)

ನಾಲ್ಕನೇ ಕ್ರಮಾಂಕದ ಸ್ಕೀಮುಗಳು : 

1. ಎಲ್ಐಸಿ ಎಂಎಫ್ ಟ್ಯಾಕ್ಸ್ ಪ್ಲಾನ್ ಡೈರೆಕ್ಟ್ ಜಿ (ಎನ್ಎವಿ: 67.9112)

2. ಪ್ರಿನ್ಸಿಪಾಲ್ ಪರ್ಸನಲ್ ಟ್ಯಾಕ್ಸ್ ಸೇವರ್ ಡೈರೆಕ್ಟ್ (ಎನ್ಎವಿ : 197.4100)

3. ಕೆನರಾ ರೊಬೆಕೋ ಈಕ್ವಿಟಿ ಟ್ಯಾಕ್ಸ್ ಸೇವರ್ ಡೈರೆಕ್ಟ್ ಜಿ (ಎನ್ಎವಿ 64.0100)

4. ಎಸ್ಬಿಐ  ಮ್ಯಾಗ್ನಂ ಟ್ಯಾಕ್ಸ್ ಗೇನ್ ಡೈರೆಕ್ಟ್ ಜಿ (ಎನ್ಎವಿ : 139.7367)

5. ಬರೋಡಾ ಪಯನೀರ್ ಇಎಲ್ಎಸ್ಎಸ್ 96 ಡೈರೆಕ್ಟ್ ಜಿ (ಎನ್ಎವಿ : 48.5000)

6. ಬಿಎನ್ಪಿ ಪಾರಿಬಾಸ್ ಲಾಂಗ್ ಟರ್ಮ್ ಈಕ್ವಿಟಿ ಡೈರೆಕ್ಟ್ ಜಿ (ಎನ್ಎವಿ : 38.0350)

7. ಯೂನಿಯನ್ ಟ್ಯಾಕ್ಸ್ ಸೇವರ್ ಡೈರೆಕ್ಟ್ ಜಿ (ಎನ್ಎವಿ 24.8400).

Trending videos

Back to Top