‘ಹಸಿರು ಭಗೀರಥ’ ಕೃಷ್ಣಪ್ಪ ಗೌಡರ ಮನೆಯೇ ‘ಕೃಷಿ ಆಲಯ’


Team Udayavani, Aug 2, 2018, 4:10 AM IST

krishnappa-2-8.jpg

ಇವರು ನಗರವಾಸಿ ಆದರೆ ಇವರ ಮನೆಗೆ ಹೋದವರಿಗೆ ಕಾಂಕ್ರೀಟ್ ಕಾಡಿನಲ್ಲಿ ಹಸಿರು ತೋಟವನ್ನು ಹೊಕ್ಕ ಅನುಭವವಾಗುತ್ತದೆ. ಮಂಗಳೂರು ನಗರದಲ್ಲಿರುವ ಇವರ ಕಾಂಕ್ರೀಟ್ ಮನೆಯ ತುಂಬೆಲ್ಲಾ ಹಸಿರ ಸಿರಿ ಮೆರೆದಾಡುತ್ತಿದೆ. ಅಂದಹಾಗೆ ಪಟ್ಟಣದ ನಡುವೆ ಹಸಿರು ಲೋಕವನ್ನು ಸಾಕ್ಷಾತ್ಕಾರಗೊಳಿಸಿರುವ ‘ಕೃಷಿ ಭಗೀರಥ’ ಪಡ್ಡಂಬೈಲು ಕೃಷ್ಣಪ್ಪ ಗೌಡರು. ಸರಕಾರಿ ಉದ್ಯೋಗಿಯಾಗಿದ್ದು ನಗರ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರೂ ಇವರ ಹಸಿರು ಪ್ರೀತಿಗೆ ಇದ್ಯಾವುದೂ ಅಡ್ಡಿಯಾಗಲಿಲ್ಲ. ಮನೆಯ ಕಾಂಪೌಂಡ್, ಒಳ ಆವರಣ, ಮಹಡಿ ಮೆಟ್ಟಿಲುಗಳು… ಹೀಗೆ ಮನೆಯ ಸುತ್ತಲೆಲ್ಲಾ ಕೃಷಿ ಲೋಕವನ್ನೇ ಕೃಷ್ಣಪ್ಪ ಗೌಡರು ಅನಾವರಣಗೊಳಿಸಿದ್ದಾರೆ. ಇನ್ನು ಇವರ ಮನೆಯ ಮಹಡಿಯಂತೂ ಇವರ ಕೃಷಿ ಲೋಕ ಸಾಕಾರಕ್ಕಾಗಿರುವ ಪ್ರಯೋಗಶಾಲೆಯೇ ಆಗಿದೆ.

ತಾರಸಿ ಕೃಷಿಯ ಯಶಸ್ವೀ ಪ್ರಯೋಗ…
ನಗರ ಪ್ರದೇಶಗಳಲ್ಲಿ ಕೃಷಿಯೋಗ್ಯ ಭೂಮಿ ಅಭಾವವಿದ್ದರೂ ಕೃಷಿಯಲ್ಲಿ ಆಸಕ್ತಿ ಇರುವ ವ್ಯಕ್ತಿಗಳಿಗೆ ವರದಾನವಾಗಿರುವುದು ತಾರಸಿ ಕೃಷಿ. ಕೃಷ್ಣಪ್ಪ ಗೌಡರೂ ಸಹ ಇದೇ ರೀತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಾರಸಿ ಕೃಷಿಯನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದು, ತರಕಾರಿ ಗಿಡಗಳು, ಮಾವು, ಸೀಬೆ, ಆಯುರ್ವೇದ ಗಿಡಗಳು, ಕಬ್ಬು, ಅಲಸಂಡೆ ಮಾತ್ರವಲ್ಲದೇ ಭತ್ತದ ಕೃಷಿಯನ್ನೂ ಮಾಡುತ್ತಿದ್ದಾರೆ.


ಹೌದು, ಇದು ಆಶ್ಚರ್ಯವಾದರೂ ನಿಜ. ಕೃಷ್ಣಪ್ಪ ಗೌಡರ ತಾರಸಿಯಲ್ಲಿ ಬೀಸುಗಾಳಿಗೆ ತಲೆದೂಗುತ್ತಾ ಗಂಧಸಾಲ ಭತ್ತದ ತೆನೆಗಳು ತಲೆಗೂಗುತ್ತಿದ್ದರೆ, ಈ ಕೃಷಿ ಸಾಧಕನ ಮೇಲಿನ ನಮ್ಮ ಅಭಿಮಾನ ಇಮ್ಮಡಿಯಾಗುತ್ತದೆ. ಕುರಲ್ ಕಟ್ಟುವ ಸಂಪ್ರದಾಯಕ್ಕೆ ಅಗತ್ಯವಿರುವ ತೆನೆಗಳನ್ನು ಸಂಗ್ರಹಿಸಲು ನಗರವಾಸಿಗಳು ಅನುಭವಿಸುವ ಸಂಕಟವನ್ನು ತಾನೇ ಸ್ವತಃ ಅನುಭವಿಸಿದ್ದೇ ಕೃಷ್ಣಪ್ಪ ಗೌಡರಿಗೆ ತಮ್ಮ ಮನೆಯ ತಾರಸಿಯಲ್ಲಿ ಭತ್ತದ ಸಸಿಗಳನ್ನು ಬೆಳೆಯಲು ಪ್ರೇರಣೆಯಾಯ್ತು. ಇದೀಗ ಇವರ ಬಳಿಯಿಂದ ಹಲವರು ತೆನೆಗಳನ್ನು ತಾವೇ ಬಂದು ಪಡೆದುಕೊಂಡು ಹೋಗುತ್ತಾರೆ. ಇಷ್ಟು ಮಾತ್ರವಲ್ಲದೇ ತನ್ನ ಬಳಿಗೆ ಪ್ರತೀ ವರ್ಷ ತೆನೆಗಾಗಿ ಬರುವವರ ಕೈಯಿಂದಲೇ ತೆನೆಗಳನ್ನು ಕೊಯ್ಯಿಸುವ ಕೃಷ್ಣಪ್ಪ ಗೌಡರು, ಆ ಮೂಲಕ ಮುಂದಿನ ವರ್ಷ ಅವರೂ ಸಹ ತಮ್ಮ ಮನೆಯಲ್ಲಿ ಭತ್ತದ ತೆನೆಗಳನ್ನು ಬೆಳೆಯುವಂತಾಗಬೇಕು ಎಂಬ ಸಕಾರಣವನ್ನೂ ಇದಕ್ಕೆ ನೀಡುತ್ತಾರೆ.

ಸಾವಯವ ಕೃಷಿ ಇವರ ಮೂಲಮಂತ್ರ

ತಾರಸಿ ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿರುವ ಇವರದ್ದು ಸಾವಯವ ಆಧಾರಿತ ಕೃಷಿ ವಿಧಾನ. ಸೊಪ್ಪುಗಳು, ಮನೆ ತ್ಯಾಜ್ಯ, ಸೆಗಣಿ ಇತ್ಯಾದಿಗಳನ್ನು ಬಳಸಿಕೊಂಡು ಸಾವಯವ ಗೊಬ್ಬರವನ್ನು ತಾರಸಿಯ ಮೇಲೆಯೇ ತಯಾರಿಸುವ ವ್ಯವಸ್ಥೆಯನ್ನು ಕೃಷ್ಣಪ್ಪ ಗೌಡರು ಮಾಡಿಕೊಂಡಿದ್ದಾರೆ. ತಮ್ಮ ಸ್ಕೂಟರ್ ನಲ್ಲಿ ದೂರದ ಪ್ರದೇಶಗಳಿಂದ ಸೊಪ್ಪುಗಳನ್ನು ಸಂಗ್ರಹಿಸಿ ತಂದು ಅವುಗಳನ್ನು ಹದವಾಗಿ ಕೊಚ್ಚಿ ತಾವೇ ಸಂಗ್ರಹಿಸಿ ತರುವ ಊರ ದನಗಳ ಸೆಗಣಿಯನ್ನು ನೀರಿನಲ್ಲಿ ಕಲಸಿ ಒಂದು ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಹಾಕಿ ಮಿಶ್ರಣಗೊಳಿಸಿ ಗೊಬ್ಬರವನ್ನು ತಯಾರಿಸುತ್ತಾರೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ರಸಾಯನಿಕ ಗೊಬ್ಬರಗಳನ್ನು ಗೌಡರು ಬಳಸುವುದೇ ಇಲ್ಲ.

ಬಹುವಿಧಬೆಳೆ ವಿಧಾನ ಇಲ್ಲಿ ಸಾಕಾರ..

ಇನ್ನು ಕೃಷ್ಣಪ್ಪ ಗೌಡರ ಮನೆಯ ತಾರಸಿಯಲ್ಲಿ ಸೊಂಪಾಗಿ ಬೆಳೆದು ನಿಂತಿರುವ ತರಕಾರಿ ಗಿಡಗಳನ್ನ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಸಾವಯವ ಗೊಬ್ಬರವನ್ನುಂಡು ನಳನಳಿಸುತ್ತರುವ ಬೆಂಡೆ, ಅಲಸಂಡೆ, ಮಾವು, ಅಂಬಡೆ ಮುಂತಾದ ಗಿಡಗಳು ನಮ್ಮನ್ನು ಸೆಳೆದರೆ, ಇನ್ನು ಸಾಧ್ಯವಿರುವ ಕಡೆಗಳಲ್ಲೆಲ್ಲಾ ಬಹುವಿಧ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷ್ಣಪ್ಪ ಗೌಡರು ತಮಗಿರುವ ಸೀಮಿತ ಸ್ಥಳಾವಕಾಶದಲ್ಲೂ ತಮ್ಮ ಮನೆಯ ಬಳಕೆಗೆ ಸಾಕಾಗುವಷ್ಟು ಫಸಲನ್ನು ಪಡೆಯುತ್ತಿರುವುದು ಕುತೂಹಲರಿಗೆ ಆಸಕ್ತಿಯ ವಿಷಯವೇ ಹೌದು.

‘ಕಸದಿಂದ ರಸ’ ಇವರ ಮೂಲಮಂತ್ರ:

ತಮ್ಮ ಕೃಷಿ ಹವ್ಯಾಸವನ್ನು ಕೇವಲ ಮನೆ ತಾರಸಿಗೆ ಮಾತ್ರವೇ ಸೀಮಿತಗೊಳಿಸದೆ ಗೆರಟೆ, ತೆಂಗಿನ ಸಿಪ್ಪೆ, ಉಪಯೋಗಿಸಿದ ಚಹಾ ಕಪ್, ಹೆಲ್ಮೆಟ್, ನಿರುಪಯೋಗಿ ಪಾತ್ರಗಳು… ಹೀಗೆ ಈ ಎಲ್ಲಾ ವಸ್ತುಗಳನ್ನೂ ಕೃಷ್ಣಪ್ಪ ಗೌಡರು ತನ್ನ ಕೃಷಿ ಪ್ರಯೋಗಕ್ಕೆ ಸಮರ್ಥವಾಗಿ ಬಳಸಿಕೊಂಡಿರುವ ರೀತಿಯನ್ನು ಆಸಕ್ತರೆಲ್ಲರೂ ಒಮ್ಮೆಯಾದರೂ ಅವರ ಮನೆಗೆ ತೆರಳಿಯೇ ನೋಡಬೇಕು. ಒಟ್ಟಿನಲ್ಲಿ ಗೌಡರ ಮನೆಗೆ ಪ್ರವೇಶಿಸುವಲ್ಲಿಂದ ಹಿಡಿದು ಮೆಟ್ಟಿಲುಗಳನ್ನ ಏರಿ ತಾರಸಿ ತಲುಪವರೆಗೂ ವಿವಿಧ ರೀತಿಯ ಮತ್ತು ಜಾತಿಯ ಗಿಡ-ಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಇವುಗಳಲ್ಲಿ ಆಲಂಕಾರಿಕ ಗಿಡಗಳಿಂದ ಹಿಡಿದು ಔಷಧೀಯ ಗಿಡಗಳವರೆಗೆ, ನುಗ್ಗೆ-ಬಾಳೆಯಿಂದ ಹಿಡಿದು ತರಕಾರಿ, ವಿವಿಧ ಹಣ್ಣುಗಳ ಗಿಡಗಳವರೆಗೆ ಮತ್ತು ಇವೆಲ್ಲದಕ್ಕೂ ಕಳಶಪ್ರಾಯದಂತೆ ಭತ್ತದ ಗಿಡಗಳವರೆಗೆ… ಕೃಷಿ ಪ್ರೇಮಿಗಳ ಕಣ್ಣಿಗೆ ನಿಜ ರಸದೌತಣವೇ ಸರಿ.

ಬಂದವರಿಗೆಲ್ಲಾ ‘ಸಸಿ’ ಉಡುಗೊರೆ..

ಇನ್ನು ತಮ್ಮ ಈ ಕೃಷಿಯ ಹವ್ಯಾಸವನ್ನು ಕೃಷ್ಣಪ್ಪ ಗೌಡರು ಯಾವತ್ತೂ ವ್ಯಾವಹಾರಿಕ ಉದ್ದೇಶಕ್ಕಾಗಿ ಬಳಸಿಕೊಂಡದ್ದೇ ಇಲ್ಲ. ಇಲ್ಲಿ ಬೆಳೆಯುವ ತರಕಾರಿಗಳು ಇವರ ಮನೆಯ ಉಪಯೋಗಕ್ಕಾದರೆ, ಭತ್ತದ ತೆನೆ ಕುರಲ್ ಕಟ್ಟುವ ದಿನ ವಿತರಣೆಗಾಗಿ, ಇನ್ನು ಇವರು ತೆಂಗಿನ ಗೆರೆಟೆಯಲ್ಲಿ ಬೀಜ ಹಾಕಿ ಬೆಳೆದ ಗಿಡಗಳನ್ನು ಮತ್ತು ಇತರೇ ಗಿಡಗಳನ್ನು ತಮ್ಮ ಈ ಸಾಹಸವನ್ನು ನೋಡಲು ಬರುವ ಅತಿಥಿಗಳಿಗೆ ಸಂತೋಷದಿಂದ ಉಡುಗೊರೆಯಾಗಿ ನೀಡುವ ಹವ್ಯಾಸವನ್ನು ಕೃಷ್ಣಪ್ಪ ಗೌಡರು ಬೆಳೆಸಿಕೊಂಡಿದ್ದು ತಮ್ಮ ಈ ಕಾರ್ಯದಲ್ಲಿ ವಿಶೇಷ ಸಂತೋಷವನ್ನು ಅವರು ಕಾಣುತ್ತಿದ್ದಾರೆ.


ನಗರಪ್ರದೇಶದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ಮಾಡುವುದು ಹೇಗಪ್ಪಾ ಎಂದು ಚಿಂತಿಸುವವರಿಗೆಲ್ಲಾ ಮಾದರಿಯಾಗಿ ನಿಂತಿದೆ ಕೃಷ್ಣಪ್ಪ ಗೌಡರ ಈ ತಾರಸಿ ಕೃಷಿ ಪ್ರಯೋಗ. ಹೀಗೆ ತಮ್ಮ ಸರಕಾರಿ ಕೆಲಸ ಕಾರ್ಯಗಳ ನಿರ್ವಹಣೆಯ ಜಂಜಾಟದ ನಡುವೆಯೂ ತನ್ನ ಮನೆಯನ್ನು ‘ಕೃಷಿ ಲೋಕ’ವಾಗಿಸಿರುವ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಮತ್ತು ಕೃಷಿ ಕುರಿತಾಗಿ ಆಸಕ್ತಿ ಇರುವವರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತಾ ತನ್ನಲ್ಲಿರುವ ಕೃಷಿ ಮತ್ತು ಪರಿಸರ ಪ್ರೀತಿಯನ್ನು ಎಲ್ಲರಿಗೂ ಹಂಚುತ್ತಿರುವ ಕೃಷ್ಣಪ್ಪ ಗೌಡರ ಬದುಕು ನಮಗೆಲ್ಲರಿಗೂ ಮಾದರಿ. ಆಧುನಿಕ ಕೃಷಿ ಭಗೀರಥನ ಈ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಸಹ ಇವರನ್ನು ಅರಸಿ ಬಂದಿವೆ.

ನಿಜವಾದ ಕೃಷಿ ಆಸಕ್ತರಿಗೆ ಕೃಷ್ಣಪ್ಪ ಗೌಡರ ಸಂಪರ್ಕ ಸಂಖ್ಯೆ: 93429 90975


ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.