ವಜ್ರಾಭರಣ ನೋಡಲು ಸುಂದರ ನಿಜ, ಆದರೆ ರೀಸೇಲ್‌ ವ್ಯಾಲ್ಯೂ ?


Team Udayavani, Aug 20, 2018, 7:00 AM IST

diamond-jewellery3-600.jpg

ವಿವಾಹ ನಿಶ್ಚಿತಾರ್ಥಕ್ಕೆ  ಡೈಮಂಡ್‌ ರಿಂಗ್‌ ಕೊಡುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಏಕೆಂದರೆ ಅದು ನೋಡಲು ಅತ್ಯಾಕರ್ಷಕವೂ, ಫ‌ಳಫ‌ಳನೆ ಹೊಳೆಯುವಂಥದ್ದೂ ಆಗಿರುತ್ತದೆ. ಆದರೆ ಹೂಡಿಕೆ ದೃಷ್ಟಿಯಿಂದ ಅದರ ಮೌಲ್ಯ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ !

ಚಿನ್ನಾಭರಣಗಳಿಗೆ ಸಾವಿರಾರು ವರ್ಷಗಳಿಗೂ ಮೀರಿದ ಇತಿಹಾಸ ಇದೆ. ಆದರೆ ವಜ್ರಾಭರಣಗಳು ಈಚಿನವು. ಇತರ ಹರಳುಗಳಂತೆ ವಜ್ರ ಕೂಡ ಅತ್ಯಪರೂಪದ ವಸ್ತುವಾಗಿರುವುದರಿಂದ ಅದಕ್ಕೆ ಹಚ್ಚಿನ ಮೌಲ್ಯ ಇದೆ. ಚಿನ್ನಾಭರಣಗಳು ವಜ್ರ ಖಚಿತವಾದಾಗಲೇ ಅವುಗಳ ಆಕರ್ಷಣೆ ಹೆಚ್ಚು. 

ಆದರೆ ನಾವು ಖರೀದಿಸುವಾಗ ಇರುವ ವಜ್ರದ ಮೌಲ್ಯ ಅನಂತರದಲ್ಲಿ ಇರುವುದಿಲ್ಲ ಎನ್ನುವ ವಾಸ್ತವ ಹೂಡಿಕೆ ದೃಷ್ಟಿಯಿಂದ ವಜ್ರಾಭರಣ ಖರೀದಿಸುವವರು ನೆನಪಿನಲಿ ಇಟ್ಟುಕೊಳ್ಳಬೇಕಾಗುತ್ತದ. ಅತ್ಯಪರೂಪದಲ್ಲೇ ಅತ್ಯಪರೂಪದ, ಐತಿಹಾಸಿಕ ಮಹತ್ವದ, ವಜ್ರಗಳು ಮಾತ್ರವೇ ರೀಸೇಲ್‌ ಮೌಲ್ಯ ಹೊಂದಿರುತ್ತವೆ. ಸಾಮಾನ್ಯವಾಗಿ ನಾವು ಬಳಸುವ ಚಿನ್ನಾಭರಣಗಳಲ್ಲಿನ ವಜ್ರಗಳು ಸಾಮಾನ್ಯವೇ ಆಗಿರುವುದರಿಂದ ಅವುಗಳು ರೀಸೇಲ್‌ ವ್ಯಾಲ್ಯೂ ಹೊಂದಿರುವುದಿಲ್ಲ.

ವಿಶ್ಲೇಷಕರು ಹೇಳುವಂತೆ ವಜ್ರವನ್ನು ಖರೀದಿಸುವಾಗಿನ ಅದರ ಮೌಲ್ಯ ಅನಂತರದಲ್ಲಿ ಶೇ.50ರಷ್ಟು ಇರುವುದಿಲ್ಲ. ವಜ್ರಾಭರಣ ನೋಡಲು ಬಲು ಚಂದ ಎನ್ನುವುದೇನೋ ಸರಿ; ಆದರೆ ಹೂಡಿಕೆ ದೃಷ್ಟಿಯಿಂದ ವಿಶ್ಲೇಷಿಸಿದಾಗ ನಮಗೆ ಅದರಿಂದ ಯಾವುದೇ ಲಾಭ ಹುಟ್ಟುವುದಿಲ್ಲ; ಅಸಲೂ ಇರುವುದಿಲ್ಲ !

ಈ ಎಲ್ಲ ಕಾರಣದಿಂದಾಗಿ ನಾವು ವಜ್ರ ಖರೀದಿಸುವಾಗ, ವಜ್ರಾಭರಣ ಮಾಡಿಸುವಾಗ, ವಜ್ರದ ಕುರಿತಾಗಿ ಕೆಲವೊಂದು ಮಹತ್ವದ ಮಾಹಿತಿಗಳನ್ನು ತಿಳಿದಿರುವುದು ಅಗತ್ಯ. ಅವುಗಳನ್ನು ಈ ಕೆಳಗಿನಂತೆ ಗಮನಿಸಬಹುದು : 

ವಜ್ರಗಳ ಗುರುತಿಸುವಿಕೆ ಮತ್ತು ಗುಣ ಲಕ್ಷಣಗಳು:

1. ವಜ್ರಗಳನ್ನು ಮುಖ್ಯವಾಗಿ ನಾಲ್ಕು “ಸಿ’ಗಳಲ್ಲಿ ಗುರುತಿಸಲಾಗುತ್ತದೆ. ಅವುಗಳೆಂದರೆ ಕ್ಯಾರೆಟ್‌, ಕಟ್‌,ಕಲರ್‌ ಮತ್ತು ಕ್ಲಾರಿಟಿ.

2. ವಜ್ರ ಈ ಭೂಮಿಯಲ್ಲೇ ಅತ್ಯಂತ ಗಟ್ಟಿ ವಸ್ತು; 2 ವಜ್ರಗಳು ಯಾವತ್ತೂ ಏಕ ಪ್ರಕಾರದ ಗುಣ ಲಕ್ಷಣ ಹೊಂದಿರುವುದಿಲ್ಲ.

3. ವಜ್ರವು ಶಕ್ತಿ, ಧೈರ್ಯ, ಪರಿಶುದ್ಧತೆ ಮತ್ತು ಪ್ರೇಮದ ಸಂಕೇತವಾಗಿದೆ.

4. ನೀವು ವಜ್ರವನ್ನು ಕಂಡಾಗ ಅದು ತತ್‌ಕ್ಷಣ ಗುರುತಿಸಲ್ಪಡುವ ಹರಳಿನ ರೂಪದಲ್ಲಿರುತ್ತದೆ.

5. ವಜ್ರವು ಶಕ್ತವರ್ಧಕ ಮತ್ತು ಗುಣಪಡಿಸುವ ಅಂಶಗಳನ್ನು ಹೊಂದಿರುತ್ತದೆ.

ವಜ್ರದ ಸಾಮರ್ಥ್ಯ ಮತ್ತು ಬಳಕೆಗಳು : 

1. ವಜ್ರಗಳು ಹೆಚ್ಚಾಗಿ ದಕ್ಷಿಣ ಆಫ್ರಿಕ, ರಶ್ಯ, ಬ್ರಝಿಲ್‌, ಕೆನಡ ಮತ್ತಿತರ ದೇಶಗಳಲ್ಲಿ ಸಿಗುತ್ತವೆ.

2. ದೀರ್ಘ‌ಕಾಲ ಬಾಳುವ ಸಾಮರ್ಥ್ಯ ಮತ್ತು ಉಜ್ವಲತೆಗಾಗಿ ವಜ್ರಗಳನ್ನು ಸಾಮಾನ್ಯವಾಗಿ ಚಿನ್ನಾಭರಣಗಳಿಗಾಗಿ ಬಳಸಲಾಗುತ್ತದೆ.

3. ವಜ್ರಗಳ ಸಣ್ಣ  ಶೇಕಡಾವಾರು ಪ್ರಮಾಣವನ್ನು ಕೈಗಾರಿಕೆ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

4. ಭಾರತದಲ್ಲಿ ಹೆಚ್ಚಾಗಿ ವರ್ಣರಹಿತ ಮತ್ತು ಅತ್ಯಲ್ಪ ವರ್ಣದ ವಜ್ರಗಳನ್ನು ಬಳಸಲಾಗುತ್ತದೆ. 

ವಜ್ರಗಳ ಆಕಾರ ಮತ್ತು ಪರೀಕ್ಷೆ :

1. ವಜ್ರಗಳ ಆಕಾರ ಹಲವು : ರೌಂಡ್‌, ಹಾರ್ಟ್‌, ಪಿಯರ್‌, ಮಾಕ್ವಿìಸ್‌, ಎಮರಾಲ್ಡ್‌, ಇತ್ಯಾದಿ.

2. ನಿಜ ವಜ್ರ ಪತ್ತೆಗೆ ಧೂಮ ಪರೀಕ್ಷೆ, ಜಲ ಪರೀಕ್ಷೆ ಉತ್ತಮ ಉಪಾಯಗಳು.

3. ಶ್ವೇತ ವರ್ಣದ ವಜ್ರಗಳು ಸಾಮಾನ್ಯ; ಉಳಿದವು ನೀಲಿ, ಗುಲಾಲಿ, ಹಳದಿ, ಕೆಂಪು.
 
4. ಈ ಹಿಂದಿನ ಕೆಲವು ಹೆಸರುಗಳು ತುಂಬಾ ಪರಿಚಿತವಾಗಿವೆ; ಅವೆಂದರೆ ಬಾಂಬೆ ಫೈನ್‌, ಬೆಲ್ಜಿಯಂ ಕಟ್‌, ಇಂಡಿಯನ್‌ ಕಟ್‌, ಇತ್ಯಾದಿ.

5. ವಜ್ರದ ಸ್ಪಷ್ಟತೆ ಮತ್ತು ವರ್ಣಕ್ಕೆ ಸಂಬಂಧಿಸಿ ಈ ಮೊದಲು ಯಾವುದೇ ಏಕರೂಪತೆ ಇರಲಿಲ್ಲ. ಕಟ್‌ ಮಾಡುವುದಕ್ಕಾಗಿ ಭಾರತದಿಂದ ವಜ್ರಗಳು ಬೆಲ್ಜಿಯಂ ಗೆ ಹೋಗುತ್ತಿದ್ದವು; ಹಾಗಾಗಿ ಅವುಗಳನ್ನು ಬೆಲ್ಜಿಯಂ ವಜ್ರಗಳೆಂದು ಕರೆಯಲಾಗುತ್ತಿತ್ತು. 

6. ಆದರೆ ಭಾರತದಲ್ಲೀಗ ಮಾನ್ಯ ಮಾಡಲ್ಪಟ್ಟ  ಗ್ರೇಡಿಂಗ್‌ ಲ್ಯಾಬೋರೇಟರಿಗಳಿವೆ; ಅತ್ಯಾಧುನಿಕ ಕಟ್ಟಿಂಗ್‌ ಮಶೀನ್‌ಗಳಿವೆ. 

ವಜ್ರ ಮಾಪನ, ವರ್ಣ ಮತ್ತು ಬೆಲೆ ನಿಗದಿ

1. 1 ಕ್ಯಾರೆಟ್‌ = .200 ಮಿ.ಗ್ರಾಂ; 100 ಸೆಂಟ್ಸ್‌ = 1 ಕ್ಯಾರೆಟ್‌; 1 ಸೆಂಟ್‌ = .002 ಮಿ.ಗ್ರಾಂ.

2. ಡಿ ಯಿಂದ ಜಿ ವರೆಗಿನವುಗಳು ಶ್ರೇಷ್ಠ ವರ್ಣದವುಗಳು; ವಿವಿ2 ವರ್ಗದವುಗಳು ಶ್ರೇಷ್ಠ ಸ್ಪಷ್ಟತೆಯ ವಜ್ರಗಳು.

3. ವಜ್ರಗಳ ಬೆಲೆಯನ್ನು ಸೆಂಟ್ಸ್‌, ಶೇಪ್‌ ಮತ್ತು ಕ್ಯಾರೆಟ್‌ ನೆಲೆಯಲ್ಲಿ ನಿಗದಿ ಮಾಡುತ್ತಾರೆ; ಮಳಿಗೆಯಿಂದ ಮಳಿಗೆಗೆ ಅವುಗಳ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.

4. ಕಾಲಕ್ರಮದಲ್ಲಿನ ವರ್ಣ ಸ್ಪಷ್ಟತೆಯ ಕಾರಣಕ್ಕೆ ದರಗಳಲ್ಲಿನ ವ್ಯತ್ಯಾಸದಿಂದಾಗಿ ಸಾಮಾನ್ಯವಾಗಿ ಗ್ರಾಹಕರ ದಾರಿತಪ್ಪಿಸಲಾಗುತ್ತದೆ.

5. ಮಾರುಕಟ್ಟೆಯಲ್ಲಿ ವಜ್ರ ಬೆಲೆ ನಿಗದಿಗೆ ಯಾವುದೇ ಸ್ಟಾಂಡರ್ಡ್‌ ದರಗಳು ಇರುವುದಿಲ್ಲ. 

ವಜ್ರ ಖರೀದಿಸುವಾಗ ತಿಳಿದಿರಬೇಕಾದ ಮುಖ್ಯ ವಿಷಯಗಳು : 

1. ವಜ್ರದ ಗುಣಮಟ್ಟ, ಕಲರ್‌, ಕ್ಯಾರೆಟ್‌ ಮತ್ತು ಕಟ್‌.

2. ವಜ್ರದ ಗಾತ್ರ, ಸ್ಪಷ್ಟತೆ, ವರ್ಣ ಮತ್ತು ಆಕಾರಕ್ಕೆ ಅನುಗುಣವಾಗಿ ಬೆಲೆಗಳು ಹೆಚ್ಚುತ್ತವೆ. 

3. ಮಳಿಗೆಯಿಂದ ಮಳಿಗೆಗೆ ದರ ವ್ಯತ್ಯಾಸ ಇರುತ್ತದೆ. 

4. ವಜ್ರಗಳ ವಿನಿಯಮ ಮತ್ತು ಮಾರಾಟಕ್ಕೆ ಇರುವ “ಬೈ ಬ್ಯಾಕ್‌ ಗ್ಯಾರಂಟಿ’.

5. ವಜ್ರಾಭರಣಗಳ ನಿರ್ವಹಣೆ

6. ವಜ್ರಾಭರಣಗಳ ಖರೀದಿಗೆ ಹಳೆ ಚಿನ್ನ, ಬೆಳ್ಳಿ ವಿನಿಮಯಕ್ಕೆ ಇರುವ ಅವಕಾಶ.

ಈ ಎಲ್ಲ ವಿಷಯಗಳನ್ನು ನಾವು ಸರಿಯಾಗಿ ಮನನ ಮಾಡಿಕೊಂಡರೆ, ನಾವು ಹೂಡಿಕೆ ದೃಷ್ಟಿಯಿಂದ ವಜ್ರಾಭರಣ ಖರೀದಿಸುವದು ಸೂಕ್ತವೇ ಅಲ್ಲವೇ ಎಂಬುದನ್ನು ತೀರ್ಮಾನಿಸಬಹುದು. ವಜ್ರವನ್ನು ಸೌಂದರ್ಯಾಭರಣವಾಗಿ ಪರಿಗಣಿಸಿದರೆ ಅವುಗಳನ್ನು ಚಿತ್ತ ಸಂತೋಷಕ್ಕಾಗಿ ಖರೀದಿಸಬಹುದೇ ಹೊರತು ಹೂಡಿಕೆಯಾಗಿ ಲಾಭಗಳಿಸುವ ಉದ್ದೇಶದಿಂದ ವಜ್ರಾಭರಣ ಖರೀದಿ ಅಷ್ಟಾಗಿ ಸಮಂಜಸವೆನಿಸುವುದಿಲ್ಲ.

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.