ಮಾನ್ಯುಮೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಎಂಬ ಪ್ರಾಕೃತಿಕ ವಿಸ್ಮಯ!


Team Udayavani, Aug 17, 2018, 3:16 PM IST

monument.jpg

ಮನುಜನಿಗೆ ಸಡ್ಡು ಹೊಡೆದು, ಸಾವಿರ ಅಡಿ ಎತ್ತರಕ್ಕೆ ತಲೆಯೆತ್ತಿ ನಿಂತ ಈ ಪ್ರಾಕೃತಿಕ ಶಿಲ್ಪಕಲಾ ವಿಸ್ಮಯಗಳು ಅಮೆರಿಕಾದ ನೆವಾಜೋ ಟ್ರೈಬಲ್ ಪಾರ್ಕ್ ನಲ್ಲಿವೆ! ಯುರೋಪಿಗಿರುವಂತೆ ಪ್ರಾಚೀನ ಇತಿಹಾಸದ ವೈಭವ ಅಮೆರಿಕಾದ ಪಾಲಿಗೆ ಇಲ್ಲದಿದ್ದರೂ ಪ್ರಕೃತಿ ಧಾರಾಳವಾಗಿ ಸೌಂದರ್ಯದ, ಅತ್ಯದ್ಭತಗಳ ಖಜಾನೆಯನ್ನೇ ಕೊಟ್ಟುಬಿಟ್ಟಿದೆ. ಅಮೆರಿಕಾ ಇದನ್ನು ಸಮರ್ಥವಾಗಿ ಬಳಸಿಕೊಂಡು ಪ್ರವಾಸೀ ಉದ್ಯಮವನ್ನು ಬೆಳೇಸಿದೆ. ಅವುಗಳಲ್ಲೊಂದು ‘ಮಾನ್ಯುಮೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್’. ಇಲ್ಲೊಮ್ಮೆ ಭೇಟಿಯಿತ್ತರೆ, ಈ ಅದ್ಭುತಗಳು ನಮ್ಮನ್ನು ಮರುಳುಗೊಳಿಸದೇ ಹೋಗುವುದಿಲ್ಲ.

ಏನಿದು ‘ಮಾನ್ಯುಮೆಂಟ್’

ಇಲ್ಲಿ ನಾವು ಊಹಿಸಲಾರದಷ್ಟು ದೈತ್ಯಗಾತ್ರದ ಪರ್ವತದಲ್ಲಿ ಕೊರೆದ ಕಲಾಕೃತಿಗಳು ಕಾಣುತ್ತವೆ. ಇಡೀ 17 ಕಿ.ಮೀ. ವಿಸ್ತೀರ್ಣದಲ್ಲಿ ಒಂಟೊಂಟಿಯಾಗಿ ಕೆಂಬಣ್ಣದ ದೈತ್ಯ ರೂಪಿಗಳು ಅಲ್ಲಿಲ್ಲಿ ಧ್ಯಾನಸ್ಥ ತಪಸ್ವಿಗಳಂತೆ ನಿಂತು ನಮ್ಮನ್ನು ಮೂಕರಾಗಿಸುತ್ತವೆ. ಇವುಗಳು ಮಾನವನ ಕೈ ಚಳಕದಲ್ಲಿ ರಚಿತವಾದ ಆಕೃತಿಗಳಲ್ಲಿ. ಒಂದೊಮ್ಮೆ ಮಟ್ಟಸವಾಗಿರಬಹುದಾದ ನೆಲ, ಪರ್ವತಗಳಿ ಮಿಲಿಯಗಟ್ಟಲೆ ವರ್ಷಗಳ ಕಾಲನ ಹೊಡೆತಕ್ಕೆ ಸಿಕ್ಕು, ಅರಳಿದ ನಿರ್ಮಿತಿಗಳು. ನೀರಿನ ಪಾತ್ರ ಒಣಗಿದಾಗ ಅಲ್ಲಿಯ ಮಡ್ಡಿ, ಹೂಳುಗಳು, ಮರಳಶಿಲೆ, ಪದರಶಿಲೆಗಳಾಗಿ ಪರಿವರ್ತಿತವಾದಾಗ, ಕಾಲಾಂತರದಲ್ಲಿ ಬೃಹದಾಕಾರದ ಪರ್ವತಗಳಲ್ಲಿನ ಮೃದುಭಾಗ, ಹೊರಕವಚಗಳು ನದಿ-ಸಮುದ್ರದಗಳ ಪಲ್ಲಟ-ಉಕ್ಕುವಿಕೆಯ ಹೊಡೆತ, ಗಾಳಿ-ಹಿಮದ ದಾಳಿಗಳಂಥ ಪ್ರಾಕೃತಿಕ ವಿಕೋಪಕ್ಕೆ ಕಳಚಿಕೊಳ್ಳುತ್ತಾ ಗಟ್ಟಿಭಾಗ ಉಳಿಯುತ್ತಾ ಉಂಟಾದ ಪರಿವರ್ತನೆಯೇ ಈ ಕಲಾಕೃತಿಗಳು. 400ರಿಂದ ಸಾವಿರ ಅಡಿಗಳವರೆಗೂ ಆಗಸದೆಡೆಗೆ ಮೊಗ ಮಾಡಿ, ಧೀರರಂತೆ ನಿಂತಿರುವ ಈ ಸ್ವಯಂಭೂಗಳು, ನೋಡುಗರ ಕಣ್ಣಿಗೆ ಬಹುರೂಪಿಯಾಗಿ ಕಾಣುತ್ತವೆ. ಅಗಲವಾದ ಬುಡ ಹೊಂದಿದ್ದರಿಂದ ಇವುಗಳಿಗೆ ‘ಬಟ್ಸ್’ ಎನ್ನುತ್ತಾರೆ.

ಗಗನಗಾಮಿಯಾಗಿ ಎತ್ತರೆತ್ತರಕ್ಕೆ ನಿಂತಿದ್ದಕ್ಕೆ ‘ಸ್ಕೈಲೈನ್ ಮಾನ್ಯು ಮೆಂಟ್’ ಎಂದೂ, ನೇಟಿವ್ ಇಂಡಿಯನ್ನರ ನೆಲದೇವತೆ ‘ಟೋಟೆಮ್ ಪೋಲ್ಸ್’ ಎಂದೂ, ಕೈಗವಸು ಹಾಕಿದ ಅಗಲಿಸಿದ ಹಸ್ತದಂತಿರುವುದರಿಂದ ‘ಮಿಟ್ಟೆನ್ಸ್’ ಎಂದೂ ಹೀಗೆ ‘ಯದ್ಭಾವಂ ತದ್ಭವತಿ’ ಯಂತೆ ಹೆಸರು ಕೊಟ್ಟು ಪ್ರವಾಸಿಗರನ್ನು ದಂಗುಬಡಿಸುವ ಪರಿಯೂ ವಿಭಿನ್ನ.

ವಿಮಾನದಲ್ಲಿ ಇಣುಕು ನೋಟ

ಇದು ಒಂದು ‘ಟ್ರಯಾಂಗಲ್ ಟೂರ್’. ಅಂದರೆ, ‘ಪೇಜ್’ ಎನ್ನುವ ಊರಿನಲ್ಲಿ ನಾವು ಹತ್ತಿದ್ದು ಪುಟ್ಟ ವಿಮಾನ. ಇದರಲ್ಲಿ ಕೇವಲ ಎಂಟುಮಂದಿ ಪ್ರಯಾಣಿಕರು. ಇದರ ಎತ್ತರ ಒಬ್ಬ ಸಾಮಾನ್ಯ ಮನುಷ್ಯನ ಎತ್ತರ. ಮೂರು ಮೆಟ್ಟಿಲು ಹತ್ತಿ ಒಳಬಂದರೆ, ಸ್ವಲ್ಪ ಎತ್ತರವಿರುವವರು ತಲೆತಗ್ಗಿಸಿ ನಡೆದು ಸೀಟಿನಲ್ಲಿ ಕೂರಬೇಕು. ಎಂಟುಮಂದಿಗೂ ಕಿಟಕಿಯ ಬದಿ ಜಾಗ. ಇದು ನೆಲಮಟ್ಟದಿಂದ ಕೇಲವ ಏಳೆಂಟು ಸಾವಿರ ಅಡಿ ಎತ್ತರದಲ್ಲಿ ಮಾತ್ರ ಹಾರುತ್ತದೆ. ಇದರ ಉದ್ಧೇಶವೇ ಕೆಳಗಿನ ಕೊಲರಾಡೋ ನದಿ ಪಾತ್ರ ಯಾವ ರೀತಿ ‘ಗ್ರ್ಯಾಂಡ್ ಕೆನ್ಯನ್’ ಎಂಬ ಅದ್ಭುತ ಕಣಿವೆಯನ್ನು ಕೊರೆದು ನಿರ್ಮಿಸಿದೆ ಎನ್ನುವ ಪ್ರಾಕೃತಿಕ ಸೋಜಿಗವನ್ನು ಪ್ರವಾಸಿಗರಿಗೆ ತೋರಿಸುವುದು. ಒಂದು ಗಂಟೆ ಈ ವಿಮಾನದಿಂದ ನಾವು ನೋಡುವ ಸೌಂದರ್ಯದ ಎಣೆಯಿಲ್ಲದ್ದು. ಅನಂತರದಲ್ಲಿ ಇದು ನೇರ ನಮ್ಮನ್ನು ಇಳಿಸುವುದು ಈ ‘ಮಾನ್ಯು ಮೆಂಟ್ ವ್ಯಾಲಿ-ನೆವಾಜೊ ಟ್ರೈಬಲ್ ಪಾರ್ಕ್’ ನಲ್ಲಿ….

 ಇದು ಈ ಕಣಿವೆಯ ಪೂರ್ತಿ ಹೆಸರು. ಅರಿಜೋನಾ ಮತ್ತು ಊಟಾ ರಾಜ್ಯಗಳಲ್ಲಿ ಹಂಚಿಕೆಯಾಗಿರುವ ಈ ಹದಿಮೂರು ಚದರ ಕಿ.ಮೀ. ವಿಸ್ತೀರ್ಣದ ಪಾರ್ಕ್ ‘ನೇವಾಕೋ ನೇಷನ್’ ಅಂದರೆ ಇಲ್ಲಿಯ ಮೂಲಪುರುಷರಾದ ‘ಇಂಡಿಯನ್’ (ರೆಡ್ ಇಂಡಿಯನ್) ಜನಾಂಗದ ಸುಪರ್ದಿಯಲ್ಲೆ ಇದೆ. ಅಮೆರಿಕಾ ಸರಕಾರ ಪೂರ್ತಿ ಸ್ವಾಯತ್ತತೆಯನ್ನು ಇವರಿಗೇ ಬಿಟ್ಟು ಕೊಟ್ಟು ಕೆಲವು ಮೂಲಭೂತ ಕನಿಷ್ಠ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಈ ಜನಾಂಗ ತಮ್ಮ ಪುರಾತನ ಸಂಸ್ಕೃತಿಯನ್ನೇ ಉಳಿಸಿಕೊಂಡು ಆಧುನಿಕತೆಗೆ ಬೆನ್ನು ತಿರುಗಿಸಿರುವುದರಿಂದ, ಇಲ್ಲಿಯವರೆಗೆ ಕಾಂಕ್ರೀಟ್ ರಸ್ತೆಯಿದ್ದರೂ, ಒಳಗೆ ಮಾತ್ರ ಕೆಂಪುಮಣ್ಣಿನ ಉರುಟು ಹಳ್ಳದಿಬ್ಬದ ರಸ್ತೆಯೇ. ವಿಮಾನ ಇಳಿದ ಮೇಲೆ ನಾವು ಏರಬೇಕಾದ್ದು ಇವರ ತೆರೆದ ವ್ಯಾನನ್ನೇ. ಕೆಂಪುಧೂಳಿನ ರಸ್ತೆ, ಇವರು ಓಡಿಸೋ ಪರಿ, ದಿಬ್ಬ ಗುಂಡಿ, ಹದಿನೇಳು ಕಿ.ಮೀ. ಪ್ರಯಾಣ ಮಾಡುವ ಹೊತ್ತಿಗೆ ಮೈಮೂಳೆಗಳೆಲ್ಲಾ ನಜ್ಜುಗುಜ್ಜಾಗಿ ಹೋಗಿರುತ್ತದೆ.

ಕಣ್ಣು ಹಾಯಿಸಿದಷ್ಟೂ ದೂರ ರಣರಣ ಒಣನೋಟದ, ಸುಟ್ಟು ತೆಗೆವ ಬಿರುಬಿಸಿಲಿನ ಮರಳುಗಾಡು, ಹಸಿರಿನ ಸುಳಿವಿಲ್ಲ, ಆದರೇನು, ಈ ಕೆಂಪು ಬಣ್ಣದ ದೈತ್ಯರೂಪಿ ವಿಸ್ಮಯಗಳು ನೀಲಾಗಸ, ಬೆಳ್ಳಿಮೋಡಗಳ ಜೊತೆಜೊತೆಗೆ ನಿಂತು ನಮ್ಮನ್ನು ಮೈಮರೆಸಿ ಬಿಡುವುದಂತೂ ಸುಳ್ಳಲ್ಲ. ಅವುಗಳ ಎದುರು ನಿಂತಾಗ ನಮಗೆ ಮಾತೇ ಹೊರಡುವಷ್ಟು ಮನಸ್ಸು ತುಂಬಿಬರುತ್ತದೆ. ಆ ಅಗಾಧಗಾತ್ರ, ಅವುಗಳ ಅದ್ಭುತ ರಚನೆ, ಆಗಸದೊಡನೆ ಅನುಸಂಧಾನ, ನೀಲಹಿನ್ನಲೆಯಲ್ಲಿ  ಆ ಕೆಂಪುಬಣ್ಣ ನಿಜಕ್ಕೂ ಇದೊಂದು ಮಾಯೆಯಂತೆ ಅನ್ನಿಸುತ್ತದೆ.

ಇಲ್ಲಿ ರಾತ್ರಿ ಕಳೆಯುವುದು ಮತ್ತೊಂದು ಅದ್ಭುತ ಅನುಭವ ಎನ್ನುತ್ತಾರೆ-ಇಲ್ಲಿ ಸಾಹಸಿಗಳಾಗಿ ಟ್ರೆಕ್ಕಿಂಗ್ ಮಾಡಲು ಅನುಮತಿ ಪಡೆದು ಬಂದ ಮಂದಿ.ಕೇವಲ ಮೌನಕಣಿವೆ, ನಿಯಾನ್ ಝಗಮಗದ ಸುಳಿವೂ ಇಲ್ಲದ ಕತ್ತಲ ಸಾಮ್ರಾಜ್ಯ, ಇರುಳಹಾಸ ತುಂಬ ಅರಳಿ ಕೂತು ಬೆರಗು ಹುಟ್ಟಿಸಿ ಬಿಡುವ  ಸಾವಿರ ಸಂಖ್ಯೆಯ ನಕ್ಷತ್ರಗಳು, ಕತ್ತಲಲ್ಲಿ ಕತ್ತಲಪ್ರತಿಮೆಗಳಂತೆ ತಮ್ಮ ತೆಕ್ಕೆಯಲ್ಲಿ ಅವರಿಸಿಕೊಂಡು ಬುಡುವ ಈ ಪ್ರಾಕೃತಿಕ ವಿಸ್ಮಯಗಳು, ಸಂಶೋಧಕರೋ, ಭೂವಿಸ್ಮಯಗಳ ಕುರಿತ ಅತೀವ ಆಸ್ತಕರೋ ಹೀಗೆ ಬಂದು, ತಮ್ಮ ಟೆಂಟ್ ತಾವೇ ಹಾಕಿಕೊಂಡು ಕನಿಷ್ಠ ಸೌಕರ್ಯಗಳಲ್ಲಿ ಉಳಿದು ಈ ಮೌನಕಣಿವೆಯ ಮತ್ತೊಂದು ಮಗ್ಗುಲನ್ನು ಆಸ್ವಾದಿಸಿ ಹೋಗುತ್ತಾರೆ.

 ಪ್ರತಿಮೆಗಳು ವಿಶ್ವದ ಗಮನ ಸೆಳೆದಿದ್ದು 1939ರ ಅನಂತರ.ಹಾಲಿವುಡ್ ದಿಗ್ಧರ್ಶಕ ಜಾನ್ ವೇಯ್ನ್ ತನ್ನ ಇಂಗ್ಲಿಷ್ ಸಿನೆಮಾ ಒಂದರಲ್ಲಿ ಈ ತಾಣವನ್ನು ಬಳಸಿಕೊಂಡಿದ್ದರು ಪರಿಣಾಮದ ಇದು ಪ್ರವಾಸಿಗರನ್ನು ಸೆಳೆಯಲಾರಂಭಿಸಿತು. ಇಲ್ಲಿನ ಒಂದು ಪ್ರತಿಮೆಗೆ ಅವನ ಹೆಸರನ್ನೇ ಇಟ್ಟು ಅವನ ಕೊಡುಗೆಗೆ ಧನ್ಯವಾದ ಹೇಳಲಾಗಿದೆ. ಈಗ ಇಲ್ಲಿ ಒಂದು ಮ್ಯೂಸಿಯಮ್, ಸವೆನಿರ್ ಶಾಪ್, ರೆಸ್ಟೋರೆಂಟ್ ಲಾಡ್ಜ್, ವಿಸಿಟರ್ ಸೆಂಟರ್ ನಿರ್ಮಾಣವಾಗಿದೆ. ಇದರ ವಿನಾ ಇಲ್ಲಿ ಉಳಿಯಲು ಯಾವ ಸೌಲಭ್ಯವೂ ಇಲ್ಲ.

 ಇಲ್ಲಿಯ ಒಡೆಯರಾದ ‘ನೇಟಿವ್ ಇಂಡಿಯನ್’ ಗಳು ಸ್ನೇಹಪರರೇ ಆದರೂ ನಮಗೆ ಇವರು ತುಂಬ ಒರಟು ಪ್ರಕೃತಿಯವರಾಗಿ ಕಾಣುತ್ತಾರೆ. ‘ನಮ್ಮ ಸಂಸ್ಕೃತಿಯ ಆತಿಥೇಯ ಪರ. ನೀವಿಲ್ಲಿ ನಿರಾಳವಾಗಿದ್ದು ಈ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಿ’ ಎಂಬ ಫಲಕ ಅಲ್ಲಲ್ಲಿ ಕಂಡುಬರುತ್ತದೆ. ನಮಗೆ ಮಾತ್ರ ಈ ಅದ್ಬುತ ಪ್ರತಿಮೆಗಳೂ ಅದರೊಂದಿಗೆ ಬದುಕುವ ಈ ಬೆರಳೆಣಿಕೆಯಷ್ಟೇ ಮಂದಿ ಎರಡೂ ವಿಸ್ಮಯ, ಅನನ್ಯ!  

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.