CONNECT WITH US  

ಕವಿತೆಯ ಬೆಳಕಿನಲ್ಲಿ ಬೆಳಗಿದ ಕಣ್ಣುಗಳು

ನಿನ್ನ ನೀನೇ ತೋರು ಎನಗೆ... ಅನ್ಯ ಉಪಾಯ ಕಾಣೆನು... ಮೊನ್ನೆ ಹೀಗೇ ಏನನ್ನೋ ಓದುವಾಗ ರಾಮಕೃಷ್ಣ ಪರಮಹಂಸರ ಈ ದಿವ್ಯವಾಣಿ ನನ್ನ ಕಣ್ಣಿಗೆ ಬಿದ್ದು ರೋಮಾಂಚನವಾಯಿತು. ನಮ್ಮೊಳಗಿನ ನಮ್ಮನ್ನು, ನಮ್ಮೊಳಗೇ ಇರುವ ಅವನನ್ನೂ ನಮಗೆ ತೋರಲು ಆ ಭಗವಂತನಿಗೆ ಮಾತ್ರ ಸಾಧ್ಯ! ಭಗವಂತ ಎಂದರೆ ಕೇವಲ ಮೂರ್ತಿಯಲ್ಲ. ಮೂರ್ತಿಯೊಳಗೆ ಅಮೂರ್ತಿಯಾಗಿರುವ ಚೈತನ.. ಶಕ್ತಿ! ಇದು ಹೊರಗಣ್ಣಿಗೆ ಅಸ್ಪಷ್ಟ... ಒಳಗಣ್ಣಿಗೆ ಸುಸ್ಪಷ್ಟ.

ನಮ್ಮೊಳಗಿನ ಈ ಚೈತನ್ಯ ಉದ್ದೀಪನಗೊಂಡಾಗ, ಅದಮ್ಯ ಮನೋಬಲ ವೃದ್ಧಿಸಿ, ಎಂಥಾ ದೊಡ್ಡ ಕಷ್ಟಗಳು ನಮಗೆರಗಿದರೂ, ಧೈರ್ಯದಿಂದ ಮುನ್ನುಗ್ಗಲು ನಮಗೆ ಸಾಧ್ಯವಾಗುತ್ತದೆ. ದಿನೇ ದಿನೇ ಹೊಸ ಹೊಸ ಸಾಧ್ಯತೆಗಳಿಗೆ ನಮ್ಮ ಬದುಕು ತೆರೆದುಕೊಳ್ಳುವ ಬೆರಗು ಅನಿರ್ವಚನೀಯ! ಜೀವನ ನಮಗೆ ಕಾಣಿಸುವುದು ನಾವು ಕಾಣುವ ಕಣYಳಿಂದ. ನಾವು ನಮಗೊದಗಿದ, ನಮಗೊಲಿದ ಬದುಕನ್ನು ಹೇಗೆ ಕಾಣಬೇಕು... ಹೇಗೆ ಕಂಡರೆ ಬದುಕು ಬವಣೆಯನ್ನು ಮೀರಿ ಸಹ್ಯ ಹಾಗೂ ಸುಂದರವಾಗುವುದು ಎಂಬುದರ ಸೂಚನೆಯನ್ನು ಹಲವು ರೀತಿಯಲ್ಲಿ ಒಳಗಿನ ಆತನು ಹೊರಗಣ ಉದಾಹರಣೆಗಳ ಮೂಲಕ ತೋರುತ್ತಿರುತ್ತಾನೆ. 

ಹುಟ್ಟುವಾಗಲೇ ನನ್ನೆರಡೂ ಕಾಲುಗಳು ಶಕ್ತಿಯನ್ನು ಕಳೆದುಕೊಂಡು, ಇದು ಕ್ರಮೇಣ ನನಗರಿವಾದಂತೇ, ಕುಸಿದು ಇನ್ನಿಲ್ಲದಂತೇ ಹತಾಶಳಾಗಿ¨ªಾಗ, ಮೊದಲು ತಾವು ಮನೋಬಲ ತುಂಬಿಕೊಂಡು ನನ್ನ ಮೇಲೆತ್ತಿದವರು ನನ್ನ ಹೆತ್ತವರು. ಬದುಕು ಯಾರ ಪಾಲಿಗೂ ಸುಲಭ, ಸರಳವಾಗಿ ದಕ್ಕದು. ಆದರೆ ಅದನ್ನು ನಮಗೆ ಬೇಕಾದಂತೇ ಪಳಗಿಸಿಕೊಳ್ಳುವ ಅವಕಾಶ, ಸಾಮರ್ಥಯ ಮಾತ್ರ ಎಲ್ಲರಲ್ಲೂ ಸುಪ್ತವಾಗಿ ಇದ್ದೇ ಇರುತ್ತದೆ. ಅದನ್ನು ಉದ್ದೀಪನಗೊಳಿಸಲು ಹಲವು ಮಾರ್ಗಗಳೂ ಇವೆ. ಕಷ್ಟ ಬಂದಾಗ ಇತರರ ನೋಡು ಎನ್ನುತ್ತಾರೆ ಹಿರಿಯರು. ಅದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಆದರೆ, ನನ್ನ ಪ್ರಕಾರ ಆನೆಯ ಕಷ್ಟ ಆನೆಗೆ ದೊಡ್ಡದಾಗಿದ್ದರೆ... ಇರುವೆಯ ಕಷ್ಟ ಇರುವೆಗೆ.

ಅವರವರ ಪಾಲಿಗೆ ಆಯಾ ತೊಂದರೆಗಳು ಒಂದು ದೊಡ್ಡ ಸವಾಲೇ ಆಗಿರುತ್ತವೆ. ಆದರೆ, ನಮ್ಮ ಸುತ್ತಲಿನ ಜಗತ್ತು ಅದೆಷ್ಟು ವಿಸ್ಮಯದಿಂದ ಕೂಡಿದೆ ಎಂದರೆ... ನಮ್ಮಂತೆ ಸಮಸ್ಯೆಗಳನ್ನು ಎದುರಿಸುತ್ತಿರುವವರ ಅಚಲ ದೃಢತೆಯನ್ನು, ಹೋರಾಟವನ್ನು ನಮಗೆ ಕಾಣಿಸುತ್ತ ಹೊಸ ಹೊಸ ದಾರಿಗಳನ್ನು, ಆಶಾಜ್ಯೋತಿಯನ್ನು ಕಾಣಿಸಿಕೊಡುತ್ತಿರುತ್ತದೆ. ಆದರೆ, ಬೆಳಕನ್ನು ಕಾಣಲು ಹಾಗೆ ನೋಡಲು ಅಂಥ ದೃಷ್ಟಿ ಬೇಕು. ಇನ್ನು ಬದುಕಲ್ಲಿ ನಾನಾ ತರಹದ ಸಮಸ್ಯೆಗಳು ಬರುತ್ತಲಿರುತ್ತವೆ. ಈ ಸಮಸ್ಯೆಗಳು ಕೇವಲ ಅಂಗವಿಹೀನರಿಗೆ ಮಾತ್ರ ಬರುವಂಥದ್ದಲ್ಲ. ಮಾನಸಿಕ ಶಕ್ತಿ ಕುಸಿದು ಸೋತು ಸೊಪ್ಪಾಗುವಿಕೆ ಎಲ್ಲರ ಬದುಕಿನ ಒಂದು ಹಂತ. ಈ ಹಂತಕ್ಕೆ ಯಾವ ಭೇದವೂ ಇಲ್ಲ. ಮುಳುಗಿಯೇ ಹೋದೆ ಎಂದುಕೊಳ್ಳುವುದು ಆ ಹೊತ್ತಿನ ಒಂದು ಘಟ್ಟ. ಅದೇ ಸಮಯದÇÉೊಂದು ಸಣ್ಣ ಭರವಸೆಯ ಬೆಳಕಿನ ಆಸರೆ ಸಿಕ್ಕರೂ ಸಾಕು, ಎಷ್ಟೋ ಸಲ ಮನಸು ತನ್ನೊಳಗೆ ಸ್ಥೆçರ್ಯ ತುಂಬಿಕೊಂಡು ಪಾರಾಗಬಲ್ಲದು. ಇದನ್ನು ನಾನು ಸ್ವಂತ ಅನುಭವದಿಂದ ಹಾಗೂ ನನ್ನ ಸುತ್ತಲಿನ ಹಲವರ ಬದುಕಿನ ಪಾಠದಿಂದ ಕಲಿತದ್ದು. ಪ್ರಸ್ತುತ ಅಂಕಣದಲ್ಲಿ ನಾನು ಬದುಕಿನುದ್ದಕ್ಕೂ ನನಗೆ ಆಸರೆಯಾಗಿ ನಿಂತು ಆಗಾಗ ಆಶಾಜ್ಯೋತಿಯ ಬೆಳಗಿ ದಾರಿ ತೋರಿದ ಅಂತಹ ಸಣ್ಣ ಪುಟ್ಟ ಘಟನೆಗಳನ್ನು, ಅವು ನೀಡಿದ ಹಿರಿದಾದ ಅನುಭವಗಳನ್ನು, ನನ್ನ ಬದುಕು ಬದಲಿಸಿದ ವ್ಯಕ್ತಿಗಳ ಕುರಿತು, ಜೀವನ ಕಲಿಸಿದ ಪಾಠಗಳ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿರುವೆ. ಕಾರಣ, ನನ್ನದೊಂದು ಪುಟ್ಟ ಬರಹ ಮತ್ತೂಬ್ಬರಿಗೆ ಸ್ಪೂರ್ತಿಯಾಗಬಹುದೇನೋ ಎಂಬ ಆಶಾಭಾವದಿಂದ. ಕತ್ತಲಿರುವುದು ಕುಡಿ ದೀಪ ಹಚ್ಚುವವರೆಗೆ ಮಾತ್ರ. ಒಂದೇ ಒಂದು ಪುಟ್ಟ ಹಣತೆಯಿಂದ ಅದೆಷ್ಟೋ ಬೆಳಕುಗಳ ಬೆಳಗಬಹುದು ಅಲ್ಲವೆ?  

ನಾನಾಗ ಬಿ.ಎಸ್ಸಿ. ಕೊನೆಯ ವರ್ಷದಲ್ಲಿ¨ªೆ. ಮಂಗಳೂರಿನಲ್ಲಿ ಸೇವಾಭಾರತಿಯವರು ನಡೆಸುತ್ತಿರುವ ಚೇತನಾ ಬುದ್ಧಿಮಾಂದ್ಯರ ಶಾಲೆಯ ಟ್ರಸ್ಟಿಗಳಲ್ಲಿ ನನ್ನ ತಂದೆಯವರೂ ಓರ್ವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚೇತನಾ ಸ್ಕೂಲಿನ ವಾರ್ಷಿಕೋತ್ಸವಕ್ಕಾಗಿ ಕವಿತೆಯೊಂದನ್ನು ಬರೆದುಕೊಡಲು ಹೇಳಿದ್ದರು, ಅಲ್ಲದೇ ತುಸು ಹೊತ್ತು ನಿರೂಪಣೆಯನ್ನೂ ಮಾಡಲು ಕೋರಿದ್ದರು. ಅಲ್ಲಿಯ ಮಕ್ಕಳ ದೃಷ್ಟಿಕೋನವನ್ನಿಟ್ಟುಕೊಂಡು ಆಶಾಜ್ಯೋತಿ ಎಂಬ ಕವಿತೆಯನ್ನು ಬರೆದು ಕೊಟ್ಟಿ¨ªೆ. ಹಾಡುವವರು ಯಾರು ಎಂದೂ ಗೊತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಒಂದು ವಾರವಿದೆ ಎನ್ನುವಾಗ, ಆ ಶಾಲೆಯ ಟ್ರಸ್ಟಿ ಹಾಗೂ ಸ್ಥಾಪಕರÇÉೋರ್ವರಾದ ಸುಮತಿ ಶಣೈ (ನಾನು ಆತ್ಮೀಯತೆಯಿಂದ ಸುಮತಿಯಕ್ಕ ಎನ್ನುವುದು) ಅವರು ಫೋನಾಯಿಸಿದ್ದರು.

 "ತೇಜು, ಒಮ್ಮೆ ನೀನು ಸ್ಕೂಲಿಗೆ ಬರಲಾಗುತ್ತಾ ನೋಡಮ್ಮಾ. ನೀನು ಬರೆದ ಕವಿತೆಗೆ ಚೆಂದದ ರಾಗವನ್ನು ಹಾಕಿ ಹಾಡಲಾಗುತ್ತಿದೆ. ಅವಳ ಹೆಸರು ಕಸ್ತೂರಿ. ಆಕೆಗೆ ಹಾಡುವ ಮುನ್ನ ನಿನ್ನನ್ನೊಮ್ಮೆ ನೋಡಬೇಕಂತೆ' ಎಂದಿದ್ದರು. ನನಗೆ ಬಲು ಅಚ್ಚರಿಯಾಗಿತ್ತು. ಆದರೂ ಅವರ ಕೋರಿಕೆಗೆ ಒಪ್ಪಿ ಕುತೂಹಲದಿಂದಲೇ ಮರು ದಿವಸ ಅಪ್ಪನೊಂದಿಗೆ ಚೇತನಾ ಸ್ಕೂಲಿಗೆ ಹೋಗಿ¨ªೆ. ಸುಮತಿಯಕ್ಕನ ಜೊತೆ ಮತ್ತೆ ನಾಲ್ವರಲ್ಲದೇ, ಕಪ್ಪು ಕನ್ನಡಕ ಧರಿಸಿದ ಓರ್ವ ಹುಡುಗಿಯೂ ಕುಳಿತಿದ್ದಳು. ನಾನು ಒಳ ಹೋಗಿ¨ªೆ, ಸುಮತಿಯಕ್ಕ ನನ್ನನ್ನು ಅವಳ ಪಕ್ಕದÇÉೇ ಕೂರಿಸಿ ನನ್ನ ಪರಿಚಯ ಮಾಡಿಕೊಟ್ಟಿದ್ದೇ... ಕಸ್ತೂರಿ ನನ್ನ ಕೈ, ಮೈ, ಮುಖಗಳನ್ನು ಮೃದುವಾಗಿ ಸವರಿ ನಸುನಗಲು, ವಿಷಯ ಸ್ಪಷ್ಟವಾಗಿ, ನನ್ನಲ್ಲೂ ಅಪ್ರಯತ್ನವಾಗಿ ಸ್ನೇಹದ ಮುಗುಳ್ನಗು ಮೂಡಿತ್ತು. ಅವಳ ಬಲಗೈಯನ್ನು ಭದ್ರವಾಗಿ ಹಿಡಿದು ಕುಳಿತಿ¨ªೆ. ಆಗ ಕಸ್ತೂರಿ ಹೇಳಿದ್ದು ಹೀಗೆ, "ಅಕ್ಕಾ, ನಿಮ್ಮ ಬಗ್ಗೆ ಸುಮತಿ ಮೇಡಮ್‌ ಹೇಳಿದ್ದರು.ಆದರೆ ನಾನು ನೋಡಲಾಗದು.  ಈ ಕವಿತೆ ಹಾಡುವ ಮುನ್ನ ಇದನ್ನು ಬರೆದವರ ಸ್ಪರ್ಶಿಸಿದರೆ ಹೆಚ್ಚು ಭಾವಸ್ಫೂರ್ತಿಯಾಗಿ ಹಾಡಬÇÉೆ ಎಂದೆನಿಸಿತು. ನಿಮ್ಮನ್ನು ಮುಟ್ಟಿದ ಮೇಲೆ ತುಂಬಾ ಖುಶಿಯಾಯಿತು. ಕವಿತೆಯ ಆಶಯವನ್ನು ಇನ್ನು ರಾಗದಲ್ಲಿ ತರಬÇÉೆ' ಎಂದಳು.

ಅದನ್ನು ಕೇಳಿದಾಗ ನನಗೆ ನನ್ನ ಆ ಕವಿತೆಯ ಮೇಲೇ ಧನ್ಯತಾಭಾವ ಹುಟ್ಟಿ ಬಿಟ್ಟಿತ್ತು. ನನ್ನ ಬರವಣಿಗೆಗೆ ಸಿಕ್ಕ ಅತ್ಯಂತ ಆಪ್ತ, ಬಹು ದೊಡ್ಡ ಗೌರವ ಅದಾಗಿತ್ತು. ವಾರ್ಷಿಕೋತ್ಸವದ ದಿನ ಕಸ್ತೂರಿಯ ಮಧುರ ಕಂಠದಲ್ಲಿ ನನ್ನ ಆಶಾಜ್ಯೋತಿ ಕವಿತೆಯನ್ನು ಕೇಳಿ, ನನ್ನ ಕವನದ ಘನತೆ ಹೆಚ್ಚಾದಂತೆನಿಸಿ ಧನ್ಯಳಾಗಿ¨ªೆ. ಅಂಧತ್ವದಲ್ಲೂ ಬ್ರೆçಲ್‌ ಲಿಪಿಯ ಮೂಲಕ ಹತ್ತನೆಯ ತರಗತಿಯನ್ನು ಕಲಿತು, ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದ ಅವಳ ಆ ಅತೀವ ಜೀವನೋತ್ಸಾಹವನ್ನು ನೆನೆದಾಗಲೆಲ್ಲ ಮನಸು ಅರಳಿ ನಿಲ್ಲುತ್ತದೆ. ತನ್ನ ಮಗಳ ಆಸಕ್ತಿ, ಆಶಯಗಳಿಗೆಲ್ಲ ಶಕ್ತಿ ಮೀರಿ ಬೆಂಬಲವನ್ನಿತ್ತು, ಕಸ್ತೂರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದ ಆಕೆಯ ತಾಯಿಯ ಸಪ್ರೇಮ ನಗುಮೊಗವೂ ಅಚ್ಚಳಿಯದಂತಿದೆ. ನನ್ನೊಳಗಿನ ಆ "ತನ್ನನ್ನು' ನನಗೆ ತೋರಿದ ಹಲವು ಬಗೆಗಳಲ್ಲಿ ಇದೂ ಒಂದು ! ನಿಜವಾಗಿಯೂ ಹೌದು. ಕೇಳುವ ಕಿವಿಯಿರಲು, ನೋಡುವ "ಒಳಗಣ್ಣಿರಲು...' ಎÇÉೆಲ್ಲೂ ಸಂಗೀತವೇ... ಎÇÉೆಲ್ಲೂ ಸೌಂದರ್ಯವೇ...
 
- ತೇಜಸ್ವಿನಿ ಹೆಗಡೆ

Trending videos

Back to Top