ಸರ್ವರಿಗೂ ಸಂಸ್ಕೃತ


Team Udayavani, Jan 8, 2017, 3:45 AM IST

SAP-2.jpg

ಸಂಸ್ಕೃತ ಭಾಷೆಯ ಪುನರುಜ್ಜೀವನಕ್ಕೆ ಕಂಕಣಬದ್ಧವಾಗಿರುವ ಸಂಸ್ಕೃತ ಭಾರತಿಯ ಅಖೀಲ ಭಾರತೀಯ ಅಧಿವೇಶನ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆಯುತ್ತಿದ್ದು ಮೂರನೆಯ ದಿನವಾದ ಇಂದು ಸಮಾಪನ ಸಮಾರಂಭವಿದೆ. ಪ್ರಕಾಂಡ ಪಂಡಿತರಿಂದ ಹಿಡಿದು ಅಕ್ಷರಾಭ್ಯಾಸ ಪಡೆಯದ  ಸಾಮಾನ್ಯ ಜನರವರೆಗೆ ಎಲ್ಲರೂ ಈ ಸಮ್ಮೇಳನದಲ್ಲಿ ಸಡಗರದಿಂದ ಭಾಗವಹಿಸುತ್ತಿದ್ದಾರೆ. 

ಸುಮಾರು 20-25 ವರ್ಷಗಳ ಹಿಂದೆ ಸಂಸತ್ತಿನಲ್ಲಿ, ಮಹಾನಗರಗಳ ಬಸ್‌ ನಿಲ್ದಾಣಗಳಲ್ಲಿ ಅಚಾನಕ್ಕಾಗಿ ಕಂಡುಬಂದ ಸಂಸ್ಕೃತ ಸಂಭಾಷಣೆಯ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು. ಇದರ ಹಿಂದಿದ್ದ ಶಕ್ತಿ ಸಂಸ್ಕೃತವನ್ನು ಜನಪ್ರಿಯ ಗೊಳಿಸಲು ಕಂಕಣಬದ್ಧರಾದ ಕಾರ್ಯಕರ್ತರು. 

ಒಂದು ಕಾಲದಲ್ಲಿ ಜನಪ್ರಿಯವಾಗಿ ಮತ್ತೆ ಜನಪ್ರಿಯತೆ ಕಳೆದುಕೊಂಡಿದ್ದ ಸಂಸ್ಕೃತ ಭಾಷೆಗೆ ಜನಪ್ರಿಯತೆಯ ಮರುಜನ್ಮ ತೊಡಿಸಲು ಟೊಂಕಕಟ್ಟಿದ ಸಂಸ್ಕೃತಭಾರತೀ ಸಂಘಟನೆಯ ಅಖೀಲ ಭಾರತೀಯ ಅಧಿವೇಶನ ಉಡುಪಿ ಶ್ರೀಕೃಷ್ಣಮಠದಲ್ಲಿ “ಸಂಸ್ಕೃತ ಭಾರತಮ್‌ ಸಮರ್ಥ ಭಾರತಮ್‌’ ಘೋಷವಾಕ್ಯದಡಿ ಸಂಪನ್ನಗೊಂಡಿದೆ. 

1981ರಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಜನ್ಮತಳೆದು ಅದರ ಒಂದು ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಕೃತ ವಿಭಾಗ 1995ರಲ್ಲಿ ಸಂಸ್ಕೃತ ಭಾರತಿಯಾಗಿ ಸ್ಥಾಪನೆಗೊಂಡಿತು. ಪೂರ್ಣ ಸಂಸ್ಕೃತ ಭಾಷೆಯಲ್ಲಿಯೇ ಇರುವ ಡೀಡ್‌ ಸಂಸ್ಕೃತ ಭಾರತಿಯದ್ದು ಎಂಬ ಹೆಗ್ಗಳಿಕೆಯೂ ಇದೆ. ಇಂದು ದೇಶದ ಎಲ್ಲ ರಾಜ್ಯಗಳು, 549 ಜಿಲ್ಲೆಗಳ 4,600 ಸ್ಥಳಗಳಲ್ಲಿ ಸಂಸ್ಕೃತದ ಕೆಲಸ ನಿರಂತರ ನಡೆಯುತ್ತಿದೆ. 1.35 ಲಕ್ಷ ಸಂಭಾಷಣಾ ಶಿಬಿರಗಳ ಮೂಲಕ 95 ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡಲು ಕಲಿಸಿದೆ.  114 ಪೂರ್ಣಕಾಲೀನ ಕಾರ್ಯಕರ್ತರನ್ನು ಹೊಂದಿದೆ. ಅಮೆರಿಕ, ಕೆನಡ, ಇಸ್ರೇಲ್‌, ಕೆರೆಬಿಯನ್‌, ಗಯಾನ, ಟ್ರಿನಿಡಾಡ್‌, ಮಾರಿಶಸ್‌, ಆಸ್ಟ್ರೇಲಿಯ, ನ್ಯೂಜಿಲಂಡ್‌, ಕೊಲ್ಲಿ ರಾಷ್ಟ್ರ ಹೀಗೆ 39 ದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆದಿವೆ. ದುಬೈ ಮೊದಲಾದ 13 ದೇಶಗಳಲ್ಲಿ ನಿರಂತರ ಶಿಬಿರಗಳು ನಡೆಯುತ್ತಿವೆಯಲ್ಲದೆ ಪೂರ್ಣಾವಧಿ ಕಾರ್ಯಕರ್ತರು ಮೂಡಿಬಂದಿದ್ದಾರೆ.  

 ಭಗವದ್ಗೀತೆ ಮೂಲಕ ಸಂಸ್ಕೃತ ಸಂಭಾಷಣೆ ನಡೆಸುವ ಗೀತಾ ಶಿಕ್ಷಣ ಕೇಂದ್ರ ವಿವಿಧೆಡೆ ನಡೆಯುತ್ತಿದ್ದರೆ ಮುಂದೆ ಸಂಸ್ಕೃತ ಮೂಲಕ ಯೋಗ, ಸಂಸ್ಕೃತ ಮೂಲಕ ಆಯುರ್ವೇದ-ಹೀಗೆ ವಿವಿಧ ವಿಷಯಗಳ ಜ್ಞಾನವನ್ನು ಸಂಸ್ಕೃತ ಮೂಲಕ ಪಸರಿಸುವ ಯೋಜನೆ ಸಂಸ್ಕೃತ ಭಾರತಿಗೆ ಇದೆ. ಈ ಮೂಲಕ ಒಂದು ವಿಷಯದೊಂದಿಗೆ ಭಾಷೆಯ ವಿಕಾಸ ಸಾಧ್ಯವಾಗುತ್ತದೆ.

ಭಾಷೆ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ಖಗೋಳ ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಹರಿದುಬಂದ ಜ್ಞಾನಪರಂಪರೆಯನ್ನು ಈಗಿನ ಜನಾಂಗಕ್ಕೆ ತೋರಿಸುವ ಅದ್ಭುತವಾದ “ಪರಂಪರಾ’ ಪ್ರದರ್ಶಿನಿಯನ್ನು ಸಾವಿರಾರು ಜನರು ನೋಡಿ ಆನಂದಿಸಿದ್ದಾರೆ. ಇದರಲ್ಲಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯವರು ಭಾಸ್ಕರಾಚಾರ್ಯರಿಂದ ಹಿಡಿದು ಈಗಿನ ಮಂಗಳಯಾನದವರೆಗಿನ ಖಗೋಳವಿಜ್ಞಾನದ ಸ್ಟಾಲ್‌ ಕೂಡ ಒಂದಾಗಿದೆ. 

ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್‌, ಮಣಿಪುರ, ತ್ರಿಪುರ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಸುಮಾರು 2,000 ಪ್ರಮುಖ ಕಾರ್ಯಕರ್ತರು ಅಧಿವೇಶನದಲ್ಲಿ ಪಾಲ್ಗೊಂಡು ಚಿಂತನ ಮಂಥನ ನಡೆಸಿದ್ದಾರೆ. 
ಮುಂದಿನ ಹತ್ತು ವರ್ಷಗಳಲ್ಲಿ ಸಂಘಟನೆಯ ಮುನ್ನೋಟ ಹೇಗಿರಬೇಕು? ಶಾಲಾ ಕಾಲೇಜುಗಳ ಶಿಕ್ಷಣ, ಸಂಸ್ಕೃತೇತರ ಜನರಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸುವ ದಾರಿ, ಸಂಸ್ಕೃತ ಭಾರತೀ ತೆಲುಗು, ಕನ್ನಡ, ತಮಿಳು, ಗುಜರಾತಿ, ಮರಾಠಿ, ಹಿಂದಿ, ಅಸ್ಸಾಮಿ, ಒಡಿಯ, ಬಂಗಾಲಿ, ಮಲಯಾಳ, ಇಂಗ್ಲಿಷ್‌ ಈ 11 ಭಾಷೆಗಳಲ್ಲಿ ಕಲಿಸುತ್ತಿರುವ ಅಂಚೆ ಮೂಲಕ ಸಂಸ್ಕೃತ ಶಿಕ್ಷಣದ ವಿಸ್ತಾರ,  ಮಾಸ ಪತ್ರಿಕೆ “ಸಂಭಾಷಣಾ ಸಂದೇಶ’ಕ್ಕೆ 14 ದೇಶಗಳಲ್ಲಿರುವ ಲಕ್ಷ ಚಂದಾದಾರರ ವಿಸ್ತರಣೆ, ಮಹಿಳೆಯರ ಸಹಭಾಗಿತ್ವ ಇತ್ಯಾದಿ ವಿಷಯಗಳ ಬಗೆಗೆ ಮುಂದಿನ ಮೂರು ವರ್ಷಗಳಲ್ಲಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಗೆ ಚರ್ಚೆಗಳು ನಡೆದಿದ್ದು ಇಂದು ನಿರ್ಣಯಗಳ ಮೂಲಕ ಕಾರ್ಯರೂಪಕ್ಕೆ ನಾಂದಿಹಾಡಲಿದೆ. 

ಪರಿಶಿಷ್ಟ ಪಂಗಡದ ಗುಂಪಿನಲ್ಲಿ ಬರುವ ಕೊರಗ ಸಮುದಾಯ ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗ. ಸಂಸ್ಕೃತ ಭಾರತೀ ರಾಷ್ಟ್ರೀಯ ಅಧಿವೇಶನಕ್ಕೆ ಪೂರ್ವಭಾವಿಯಾಗಿ ನಿರೀಕ್ಷೆಗೆ ಮಿಗಿಲಾಗಿ 174 ಶಿಬಿರಗಳು ನಡೆದವು. ಇವುಗಳಲ್ಲಿ ಹಿರಿಯಡಕ ಗುಡ್ಡೆಯಂಗಡಿ ಮತ್ತು ಕುಂಭಾಶಿಯ ಎರಡು ಶಿಬಿರಗಳು ಕೊರಗರ ಕಾಲನಿಗಳಲ್ಲಿ ನಡೆದದ್ದು. ಹಿರಿಯಡಕ ಕಾಲನಿಯಲ್ಲಿ ನಡೆದ ಶಿಬಿರದಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ 102 ವರ್ಷದ ಶತಾಯುಷಿ ಗೊರವ ಅವರು ಪಾಲ್ಗೊಂಡಿದ್ದಾರೆ. ಶಿಬಿರದ ಸಮಾರೋಪದಲ್ಲಿ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಬಳಿ ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿ ಪುರಸ್ಕೃತರಾದರು. ಇದಕ್ಕೆ ಸಾಕ್ಷಿಯಾದ ಬೈಲೂರು ರಾಮಕೃಷ್ಣಾಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ ಅವರ ಜೊತೆಯಲ್ಲಿಯೇ ಗೊರವರು ಕುಳಿತು ಭೋಜನ ಸ್ವೀಕರಿಸಿದರು. ಗೊರವ ಅವರ ಸಾಧನೆ ನೋಡಿ ಉತ್ತೇಜಿತರಾದವರು ತಮ್ಮ ಕಾಲನಿಯಲ್ಲಿ ಇನ್ನೊಂದು ಶಿಬಿರ ಆಯೋಜಿಸಲು ಸಂಘಟಕರಿಗೆ ಮನವಿ ಮಾಡಿದರು. ಕಾಕತಾಳೀಯವೆಂಬಂತೆ ಈ ಶಿಬಿರದ ಅವಧಿಯಲ್ಲಿಯೇ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂರೂರು ಗ್ರಾಮದ ಕೊರಗರ ಕಾಲನಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿ ಊಟ ಮಾಡಿದರೆ, ಮರುದಿನ ಶ್ರೀಕೃಷ್ಣಮಠದಲ್ಲಿ ಊಟ ಮಾಡುವಾಗ ಶ್ರೀಪೇಜಾವರ ಶ್ರೀಪಾದರು ಸಿಹಿ ಬಡಿಸಿದರು ಮತ್ತು ಇದಕ್ಕೆ ಒಂದು ವಾರದ ಹಿಂದೆ ಶ್ರೀಕೃಷ್ಣಮಠದಲ್ಲಿ ಕೊರಗರು, ಸಿದ್ದಿಗಳು, ಜೇನುಕುರುಬರೇ ಮೊದಲಾದ 50 ಬುಡಕಟ್ಟು ಜನಾಂಗಗಳ ವನವಾಸಿಗಳ ರಾಜ್ಯ ಸಮ್ಮೇಳನ ನಡೆದಿರುವುದು ಉಲ್ಲೇಖಾರ್ಹ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.