ಸೌರ ಮಾನ ಫೊಟೊ ಸಂಮಾನ


Team Udayavani, Feb 26, 2017, 3:50 AM IST

25SAP-8.jpg

ಶಿವರಾತ್ರಿ ಕಳೆಯಿತು. ಶಿಶಿರ ಮೆಲ್ಲನೆ ಹಿಂದೆ ಸರಿಯುತ್ತಿದ್ದಾನೆ. ವಸಂತ ರಂಗಪ್ರವೇಶಿಸಲು ಬಣ್ಣದ ಮನೆಯಲ್ಲಿ ಸಿದ್ಧಗೊಳ್ಳುತ್ತಿದ್ದಾನೆ. ಸೂರ್ಯ ಪ್ರ-ತಾಪವನ್ನು ಹೆಚ್ಚಿಸುತ್ತಿದ್ದಾನೆ. ಇನ್ನು ಸೂರ್ಯನದ್ದೇ ಸಾಮ್ರಾಜ್ಯ. ಆಕಾಶದಲ್ಲಿನ ಸೂರ್ಯನ ಒಡ್ಡೋಲಗಕ್ಕೆ ಭೂಮಿಯ ಮೇಲೆ ನಿಂತು ಪರಾಕು ಹೇಳುವಂಥ ಛಾಯಾಕಥನ ಇಲ್ಲಿದೆ… ಬಿಸಿಲ ಹೊತ್ತಿಗೆ ಇದು ಮುನ್ನುಡಿ. 

ಬಾ ಹೋಗೋಣ’ ಎಂದರು . ಅವನಿಗೋ ಇನ್ನೂ ಕಣ್ಣ ತುಂಬಾ ನಿದ್ದೆ. ರೆಪ್ಪೆ ಒಂದಿನಿತೂ ಅಲುಗಾಡಲಿಲ್ಲ. ಇವರೇನು ಸುಮ್ಮನಿರಲಿಲ್ಲ. ಅನಾಮತ್ತಾಗಿ ಅವನನ್ನು ಎತ್ತಿಕೊಂಡವರೇ ಜೇಬಿಗೆ ಸೇರಿಸಿದರು. ನಂತರ ಚುಮು ಚುಮು ಚಳಿಯಲ್ಲಿ, ಆಗ ತಾನೇ ಹಕ್ಕಿ ಕುಕಿಲು ಮೂಡುತ್ತಿದ್ದ ಸಮಯದಲ್ಲಿ..  ಸಿಕ್ಕ ಸಿಕ್ಕ ಕಡೆಯೆಲ್ಲ ಅವನನ್ನು ನೇತು ಹಾಕಿದರು. ಕ್ಲಿಕ್‌… ಕ್ಲಿಕ್‌… ಬೆಳ್ಳಂ ಬೆಳಗ್ಗೆಯಿಂದ ಸಂಜೆಯವರೆಗೂ ಇದೇ ಆಟ. ಅವರು ಶಿವಶಂಕರ ಬಣಗಾರ್‌, ಛಾಯಾಗ್ರಾಹಕ. ಅವರ ಜೇಬಿನಲ್ಲಿ ಸದಾ ಇರುವವನ ಹೆಸರು – ಸೂರ್ಯ !

ಆಂಧ್ರದ ಅಧೋನಿಯಲ್ಲಿದ್ದ ಬಣ್ಣಗಾರರ ಕುಟುಂಬ ಬಡತನ ತಮ್ಮನ್ನು ಸುತ್ತಿ ಎಸೆಯುತ್ತದೆ ಎಂದು ಗೊತ್ತಾದಾಗ ತಮ್ಮ ಮಕ್ಕಳು ಮರಿ ಸಮೇತ ಹೊಸ ದಿಕ್ಕಿನತ್ತ ಹೆಜ್ಜೆ ಹಾಕಿತು. ಹಾಗೆ ಬಂದು ನೆಲೆಗೊಂಡದ್ದು ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ. ಬಣ್ಣಗಾರರ ಕುಟುಂಬ ಹಾಗೆ ಸೇರಿಕೊಂಡದ್ದು ಇನ್ನೊಂದು ರೀತಿಯ ಬಣ್ಣಗಾರರ ಹಳ್ಳಿಯನ್ನ. ನಾಟಕಕ್ಕೆ ರಂಗು ತುಂಬುವವರ ಲೋಕವನ್ನ. ಹಾಗೆ ಬಾಲ್ಯದಲ್ಲಿ ಶಿವಶಂಕರ ಬಣಗಾರ್‌ ಅವರಿಗೆ ಮನೆಯಲ್ಲೂ ಬಣ್ಣ, ಹೊರಗೆ ಹಳ್ಳಿಯಲ್ಲೂ ಬಣ್ಣ ಬಣ್ಣದ ವಾತಾವರಣ. ಹೀಗಿರುವಾಗ ಒಮ್ಮೆ ಎದ್ದು ಮನೆ ಆಚೆ ಬಂದು ಕಣ್ಣು ಬಿಡುತ್ತಾರೆ ಎದುರಿಗೆ ವಾಹವ್ವಾ.. ಅಷ್ಟು ದುಂಡನೆ ಸೂರ್ಯ. ಕೆಂಡದುಂಡೆಯಂತೆ ನಿಂತಿದ್ದ ಸೂರ್ಯ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ಶಿವಶಂಕರ ಎನ್ನುವ ಪುಟ್ಟ ಹುಡುಗನಿಗೆ ಅದೇನು ಸಿಟ್ಟು ಬಂತೋ ನಿನಗಿಂತ ನಾನೇನು ಕಡಿಮೆ ಎನ್ನುವಂತೆ ಅವರೂ ಆತನನ್ನು ದಿಟ್ಟಿಸಿ ನೋಡಿದರು. ರೆಪ್ಪೆ ಮುಚ್ಚದೆ. ಮಾರನೆಯ ದಿನ, ಅದರ ಮಾರನೆಯ ದಿನ ಹೀಗೆ ಸೂರ್ಯನಿಗೂ ಇವರಿಗೋ ದೃಷ್ಟಿ ಯುದ್ಧವೇ ನಡೆದು ಹೋಯಿತು. ಮರಿಯಮ್ಮನಹಳ್ಳಿಯ ಇವರ ಮನೆಯ ಎದುರಿಗಿರುವದೇ ರಾಮದೇವರ ಗುಡ್ಡ. ಆ ಗುಡ್ಡದಿಂದ ಗತ್ತಿನಲ್ಲಿ ಇಣುಕುತ್ತ, ಮೇಲೇರುತ್ತ ಸಾಗುತ್ತಿದ್ದವನು ಆ ಸೂರ್ಯದೇವ ಅಥವಾ ಶಿವಶಂಕರ್‌ ಅವರ ಮಾತಿನಲ್ಲೆ ಹೇಳಬೇಕೆಂದರೆ “ಸೂರಪ್ಪ’.  ವರ್ಷಗಟ್ಟಲೆ ಹೀಗೆ ಸೂರ್ಯನ ಆ ಕಿರಣಗಳನ್ನು ಕಣ್ಣೊಳಗೆ ಎಳೆದುಕೊಂಡದ್ದಕ್ಕೋ ಏನೋ ಅವರಿಗೆ ಅತಿ ಬೇಗ ದೃಷ್ಟಿ ಮಂಕಾಗತೊಡಗಿತು. ಸೂರ್ಯ ಪಾಠ ಕಲಿಸಿಬಿಟ್ಟಿದ್ದ.

ಆದರೆ, ಶಿವಶಂಕರ್‌ ಮಣಿಯುವವರಲ್ಲ. ಬದುಕು ಅವರನ್ನು ಮರಿಯಮ್ಮನಹಳ್ಳಿಯಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ, ಅಲ್ಲಿಂದ ಹೊಸಪೇಟೆಗೆ ದಾಟಿಸಿದಾಗ ಅವರು ಸೂರ್ಯನ ಮೇಲೆ ಒಂದು ಕಣ್ಣು ನೆಟ್ಟೇ ಇದ್ದರು. ಯಾವಾಗ ಹೊಸಪೇಟೆ ಸೇರಿಕೊಂಡರೋ ಮತ್ತೆ ಶುರುವಾಯಿತು ಇವರಿಗೂ ಸೂರ್ಯನಿಗೂ ದೃಷ್ಟಿ ಯುದ್ಧ. ಆದರೆ ಈ ಬಾರಿ ಅವರು ಸೂರ್ಯನೆಡೆಗೆ ನೆಟ್ಟಿದ್ದು ತಮ್ಮ ಕಣ್ಣನ್ನಲ್ಲ.. ಕ್ಯಾಮೆರಾ ಕಣ್ಣನ್ನು. ಸೂರ್ಯನನ್ನು ಬೇಕೆಂದ ಹಾಗೆ ಬಾಗಿಸಿದರು, ಮಣಿಸಿದರು.

ಸೂರ್ಯ ಮಣಿಯಲೇಬೇಕಾಯಿತು.ಇವರೋ ಆತನನ್ನು ಬೇಕೆಂದೆಡೆ ನೇತು ಹಾಕಿದರು. ಹಂಪಿಗೆ ಬಂದ ವಿದೇಶಿ ಪ್ರೇಮಿಗಳ ಪ್ರಣಯದಾಟದ ಮಧ್ಯೆ, ಆಡಲು ಮೈದಾನಕ್ಕಿಳಿದ ಹುಡುಗರ ಕಾಲಿನ ನಡುವೆ, ಕ್ಯಾಮೆರಾ ಹಿಡಿದು ಕೂತವರ ಲೆನ್ಸ್‌ಗೆ ತಾಕುವಂತೆ, ವಿರೂಪಾಕ್ಷನ ಗೋಪುರಕ್ಕೆ ಇನ್ನೊಂದು ಕಳಶವೆಂಬಂತೆ, ಅಷ್ಟೂ ಸಾಲದು ಎಂದು ಮನೆಗೆ ತೆರಳುತ್ತಿರುವ ಎತ್ತಿನ ಗಾಡಿಯಲ್ಲಿ ಒಂದು ಕುಂಬಳಕಾಯಿಯೇನೋ ಎನ್ನುವಂತೆ, ಹೀಗೆ.. ಶಿವಶಂಕರ ಬಣಗಾರ್‌ “ಸೂರ್ಯ’ ಶಂಕರ ಬಣಗಾರ್‌ ಆಗಿ ಬಿಟ್ಟರು.

ಬರಹ : ಜಿ. ಎನ್‌. ಮೋಹನ್‌
ಫೊಟೊಗಳು : ಶಿವಶಂಕರ್‌ ಬಣಗಾರ್‌

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.