ಶಿಕ್ಷಕರ ದಿನ


Team Udayavani, Sep 3, 2017, 6:40 AM IST

shikshakara.jpg

ಅರವತ್ತರ ದಶಕದ ಮಧ್ಯಭಾಗದಲ್ಲಿ ಗ್ರಾಮೀಣ ಪ್ರದೇಶ ಕಮ್ಮರಡಿಯಲ್ಲಿ ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿ¨ªಾಗ ಮುಖ್ಯೋಪಾಧ್ಯಾಯರಾಗಿದ್ದ ನಾಗೇಂದ್ರ ಮಾಷ್ಟ್ರು ಇದ್ದಲ್ಲಿ ಶಿಸ್ತಿನ ವಾತಾವರಣ ತಾನೇ ತಾನಾಗಿ ನೆಲೆಗೊಳ್ಳುತ್ತಿತ್ತು. ಕನ್ನಡ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಲು ಕಲಿಸಿದ್ದರು. ಸಂಜೆ ಶಾಲೆ ಬಿಟ್ಟ ನಂತರ ಇಡೀ ಶಾಲೆಯ ನೂರಾರು ವಿದ್ಯಾರ್ಥಿಗಳೂ ಸಾಲಾಗಿ ಒಬ್ಬರ ಹಿಂದೆ ಒಬ್ಬರಂತೆ ರಸ್ತೆಯ ಬದಿಯಲ್ಲಿ ನಡೆದು ಮನೆ ಸೇರಬೇಕಿತ್ತು. ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ವೆಂಕಟರಮಣಯ್ಯನವರಾಗಲಿ, ಇನ್ನಿತರ ಸಹಶಿಕ್ಷಕರಾಗಲಿ ಶಾಲೆಗೆ ಸ್ವಂತ ಕಟ್ಟಡ, ಪಾಠ ಮತ್ತು ಪೀಠೊಪಕರಣಗಳಿಲ್ಲದಾಗಲೂ ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸಿದ್ದರು. ಕಾಲೇಜು ಮೆಟ್ಟಿಲೇರಿದಾಗ ವಿದ್ಯಾರ್ಥಿಗಳೊಂದಿಗೆ ಆದ್ರì ಅಂತಃಕರಣದಿಂದ ಸ್ಪಂದಿಸುವ ಉಪನ್ಯಾಸಕರು ದೊರೆತಿದ್ದರು. ಇಂಥ ಗುರುಗಳ ಒಡನಾಟದಲ್ಲಿ ಭೌತಿಕ ಸೌಲಭ್ಯಗಳ ಕೊರತೆ ನಮಗೆ ಗಮನಕ್ಕೇ ಬಂದಿರಲಿಲ್ಲ. ಮುಂದೆ ನಾನು ಅಧ್ಯಾಪಕಿಯಾದೆ. ಮೂವತ್ತೂಂಬತ್ತು ವರ್ಷಗಳ ಕಾಲ ಇದೇ ವೃತ್ತಿಯಲ್ಲಿ ನಿರತಳಾಗಿದ್ದೆ. ಆಗ ಈ ಎಲ್ಲ ಆದರ್ಶ ಅಧ್ಯಾಪಕರ ಆದರ್ಶದ ನೆನಪು ನನ್ನನ್ನು ಪ್ರೇರೇಪಿಸಿತ್ತು.

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಆದ್ರì ಸಂಬಂಧವಿದ್ದ ದಿನಗಳವು. ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕಿಯರು ವರ್ಗಾವಣೆಗೊಂಡಾಗ ಇಡೀ ಶಾಲೆಯ ಮಕ್ಕಳು ಪ್ರತಿಭಟಿಸಿದ್ದನ್ನು ನಾನು ಕೇಳಿದ್ದೇನೆ. ಆ ಶಿಕ್ಷಕಿಯನ್ನು ಅಗಲುವುದು ತಮ್ಮಿಂದಾಗದು ಎನ್ನುತ್ತ ಕೈವಾರದಿಂದ, ಬಳೆಚೂರಿನಿಂದ ತಮ್ಮ ಕೈಗಳಿಗೆ ಗೀರಿ ಗಾಯ ಮಾಡಿಕೊಂಡು ಕಣ್ಣೀರು ಸುರಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು.  ಗ್ರಾಮೀಣ ಭಾಗದಲ್ಲಿ ಬಡತನದ ಬವಣೆಯ ಬದುಕು.  ಹೆಚ್ಚಿನ ಪೋಷಕರು ಹೊಟ್ಟೆಪಾಡಿನ ಹೋರಾಟದಲ್ಲಿ ಹೈರಾಣಾಗಿರುತ್ತಾರೆ. ಹಾಗಾಗಿ, ಮಕ್ಕಳಿಗೆ ಪೋಷಕರ ಪ್ರೀತಿ ಶಾಲೆಯಲ್ಲಿಯೇ ಸಿಗುತ್ತದೆ. ವಿದ್ಯಾರ್ಥಿಗಳ ಶ್ರೇಯವನ್ನೇ ಮುಡಿಪಾಗಿಟ್ಟ ಉದಾರ ಮನೋಭಾವದ ಉತ್ಸಾಹಿ ಶಿಕ್ಷಕರಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರು, ಸ್ನೇಹಿತರು ಎಲ್ಲರನ್ನೂ ಕಾಣುತ್ತಾರೆ.

ಇಲ್ಲಿ ಇನ್ನೊಂದು ಆದರ್ಶ ಶಿಕ್ಷಕಿಯ ಉದಾಹರಣೆ ಇದೆ. ಹೈದರಾಬಾದ್‌ ಕರ್ನಾಟಕದ ಹಳ್ಳಿಯೊಂದಕ್ಕೆ ಶಿಕ್ಷಕಿಯಾಗಿ ನೇಮಕಗೊಂಡವರು ಕರ್ತವ್ಯದ ಮೇಲೆ ಹಾಜರಾಗಲು ಬಂದರು. ಅಲ್ಲಿ ಶಾಲಾ ಕಟ್ಟಡ, ಮಕ್ಕಳ ಹಾಜರಾತಿ ಏನೊಂದೂ ಇರಲಿಲ್ಲ. ಆ ಒಂಟಿ ಶಿಕ್ಷಕಿ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳಿಸಲು ಮನವೊಲಿಸಿದರು. ಮರದಡಿ ಪಾಠ ಪ್ರಾರಂಭಿಸಿದರು. ಗ್ರಾಮಸ್ಥರ ನೆರವಿನಿಂದ, ಸ್ವತಃ ತಮ್ಮ ಹಣದಿಂದ ಗುಡಿಸಲೊಂದನ್ನು ಶಾಲೆಗಾಗಿ ನಿರ್ಮಿಸಿಕೊಂಡರು. ಕೊನೆಗೆ ಸಮೀಪದ ಮತ್ತೂಂದು ಶಾಲೆಯಿಂದ ಸೈಕಲ್‌ ಮೇಲೆ ಬಿಸಿಯೂಟ ತರಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು.

ಇಂಥ ಆದರ್ಶ ಶಿಕ್ಷಕರ ಸ್ಥಿತಿ ಇಂದು ಬದಲಾಗಿದೆ. ಶಿಕ್ಷಕ ವೃತ್ತಿಯ ಬಗ್ಗೆ ಇಂದಿನ ಸಮಾಜದಲ್ಲಿ ಬೇರೆಯೇ ದೃಷ್ಟಿಕೋನವಿದೆ. ನಾನು ಅಧ್ಯಾಪಕಿ/ಕ ಎಂದು ಹೇಳಿಕೊಳ್ಳುವಾಗ ಹಲವರಲ್ಲಿ ಸೋತ ಭಾವ ಇರುತ್ತದೆ. ಐಟಿಬಿಟಿ, ಎಂಬಿಎ, ಡಾಕ್ಟರ್‌ ಇತ್ಯಾದಿ ವೃತ್ತಿಗಳಿಗಿರುವ ಮಿನುಗು ಮಿಂಚಿನ ಹೊಳಪು ಈ ವೃತ್ತಿಗಿಲ್ಲ, ಇಲ್ಲಿ ಗಿಂಬಳವಿಲ್ಲ ಎಂದು ಕೆಲವರು ಹಲುಬುತ್ತಾರೆ. ಶಿಕ್ಷಕ ವೃತ್ತಿಗೆ ಒಮ್ಮೆ ಬಂದ ಮೇಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಟ್ಟಿ ಮುಂದೆ ಮುಂದೆ ಹೋಗುವುದು ಹೇಗೆ ಎಂಬ ಸ್ವಹಿತಾಸಕ್ತಿಯÇÉೇ ಮಗ್ನರಾಗಿಬಿಡುತ್ತಾರೆ. ಅವರಿಗೆ ವಿದ್ಯಾರ್ಥಿಗಳ ಹಿತಾಸಕ್ತಿಯು ಒಂದು ರೀತಿಯಲ್ಲಿ ಉಪದ್ರವದಂತೆ ಭಾಸವಾಗುತ್ತದೆ. ಇಂಥ ಮನೋಭಾವಕ್ಕೆ ಪರಿಸ್ಥಿತಿಯದೂ ಕೊಡುಗೆ ಇದೆ. ಗಣತಿ, ಚುನಾವಣೆ, ಸಮೀಕ್ಷೆ, ಹಲವಾರು ಬೇಕಾದ ಬೇಡವಾದ ವರದಿ ತಖೆ¤ಗಳನ್ನು ಸಿದ್ಧಪಡಿಸುವುದು, ಬಿಸಿಯೂಟ ಹೀಗೆ ಅಧ್ಯಾಪಕರಿಗೆ ಹತ್ತು ಹಲವು ಹೊಣೆಗಾರಿಕೆಗಳಲ್ಲಿ “ಕೋದಂಡರಾಮನ ಚಿತ್ರದಲ್ಲಿ ಕೋದಂಡವನ್ನೇ ಕೈಬಿಟ್ಟರಂತೆ’ ಎಂಬಂತೆ ಕೊನೆಗೆ ಅಧ್ಯಾಪನಕ್ಕೇ ಸಮಯವಾಗಲಿ ಸ್ಫೂರ್ತಿಯಾಗಲಿ ಇರುವುದಿಲ್ಲ.

ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರವರು ಗಹನವಾದ ತತ್ವಶಾಸ್ತ್ರದಲ್ಲಿ ಪಾರಂಗತರಾಗಿದ್ದವರು. ಗ್ರಂಥಗಳೇ ನನ್ನ ಮಿತ್ರರು ಎನ್ನುತ್ತಿದ್ದ ರಾಧಾಕೃಷ್ಣನ್‌ರವರಿಗೆ ಬೋಧನಾ ವಿಷಯದ ಮೇಲಿನ ಪಾಂಡಿತ್ಯ, ಹಿಡಿತ, ಶ್ರದ್ಧೆ, ಉತ್ಸಾಹ ಎಷ್ಟಿತ್ತೆಂದರೆ ಅವರು ತರಗತಿ ಪ್ರವೇಶ ಮಾಡುವಾಗ ಪುಸ್ತಕಗಳಾಗಲಿ, ಟಿಪ್ಪಣಿಗಳಾಗಲಿ ಅವರ ಕೈಯಲ್ಲಿರುತ್ತಿರಲಿಲ್ಲ. ಇವರ ಶಿಷ್ಯರಾದ ಎ. ಎನ್‌. ಮೂರ್ತಿರಾಯರು ಅಂದಿನ ಬೋಧನಕ್ರಮವನ್ನು ನೆನಪಿಸಿಕೊಳ್ಳುತ್ತ “ಪಾಠ ಪ್ರಾರಂಭಿಸುವುದಕ್ಕೂ ಮುನ್ನ ರಾಧಾಕೃಷ್ಣನ್‌ರವರು ಸ್ವಲ್ಪ ಹೊತ್ತು ವಿದ್ಯಾರ್ಥಿಗಳನ್ನು ಮಾತನಾಡಿಸಿ, ಕೀಟಲೆಮಾಡಿ ನಗಿಸುತ್ತಿದ್ದರು; ಆಗ ಗುರು, ಶಿಷ್ಯರು-ಕಾಫಿ ಒಳ್ಳೆಯದೋ ಟೀ ಒಳ್ಳೆಯದೋ; ತೃಪ್ತಿ ಮೇಲೋ ಮಹತ್ವಾಕಾಂಕ್ಷೆ ಮೇಲೋ ಇಂಥ ಲಘು ವಿಚಾರಗಳ ಕುರಿತು ಚರ್ಚಿಸುತ್ತಿದ್ದರು’ ಎಂದಿ¨ªಾರೆ. ಹೀಗೆ ಸ್ನೇಹ-ಸೇತು ನಿರ್ಮಿಸಿ ನಂತರವೇ ಪ್ರಾರಂಭಿಸುತ್ತಿದ್ದ ಅವರ ಪಾಠ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಮನಮುಟ್ಟುತ್ತಿತ್ತು.

ವಿದ್ಯುನ್ಮಾನ ಮಾಧ್ಯಮಗಳಿಂದ ಯಾವುದೇ ಮಾಹಿತಿಯನ್ನೂ ಬೆರಳ ತುದಿಯಲ್ಲಿ ಪಡೆಯಲು ಸಾಧ್ಯವಿರುವ ಕಾಲವಿದು. ಸಂವಹನ ಅತೀ ಸುಲಭ. ಇಂಥ ದಿನಗಳಲ್ಲಿ “ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ನಿಕಟವಾಗಬೇಕೆ?’ ಎಂಬ ಪ್ರಶ್ನೆಯನ್ನು ಇಂಗ್ಲಿಶ್‌ ಪತ್ರಿಕೆಯೊಂದು ಸಾವಿರಾರು ವಿದ್ಯಾರ್ಥಿಗಳಿಗೆ ಕೇಳಿತ್ತು. ಎಲ್ಲ ವಿದ್ಯಾರ್ಥಿಗಳೂ ಒಮ್ಮತದಿಂದ, “ತೀರಾ ಅಗತ್ಯ’ ಎಂದೇ ಉತ್ತರಿಸಿದ್ದರು.

ಇದೊಂದು ಕೇಳಬೇಕಾದ ಪ್ರಶ್ನೆಯಲ್ಲ ! ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧ ಏರ್ಪಡಬೇಕಾದುದು, ನಿಕಟವಾಗಬೇಕಾದುದು ಹೊಸತೇನೂ ಅಲ್ಲ. ವಾಟ್ಸಾಪ್‌ ಮೂಲಕ ದೂರದ ಊರಿನ ಗೆಳೆಯರನ್ನು ನಾವು ಪ್ರತಿದಿನ ಸಂಧಿಸುತ್ತಲೇ ಇರುತ್ತೇವೆ, ಆದರೆ, ನಮ್ಮ ಮುಂದೆ ಇರುವ ಮೇಷ್ಟ್ರು ಮಾತ್ರ ನಮ್ಮಿಂದ ದೂರ ಉಳಿಯುತ್ತಾರೆ ! ಎಂಥ ವಿಪರ್ಯಾಸ !

– ಕೆ. ಆರ್‌. ಉಮಾದೇವಿ ಉರಾಳ್‌ (ನಿವೃತ್ತ ಶಿಕ್ಷಕಿ)

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.