ಪಾಕ ಸ್ಥಾನ 


Team Udayavani, Oct 22, 2017, 10:55 AM IST

pakistana.jpg

ಅಜ್ಜಿಗೆ ಮೊಮ್ಮಗಳು ಕೆಮ್ಮೊàದು ಕಲಿಸಿದಳಂತೆ’ ಅನ್ನುವುದು ಎಲ್ಲರೂ ಬಲ್ಲ ಗಾದೆ ಮಾತು. ಅಜ್ಜಿಯ ಅನುಭವದ ಮುಂದೆ ನಿನ್ನೆ ಮೊನ್ನೆಯ ಮೊಮ್ಮಗಳ ಲೋಕಜ್ಞಾನ ಯಾವ ತೊಪ್ಪಲು ಅನ್ನುವುದು ಗೂಡಾರ್ಥ. ಸುಖಾಸುಮ್ಮನೆ ಈ ಗಾದೆಮಾತು ನೆನಪಾಗಿದ್ದೇನಲ್ಲ. ಇತ್ತೀಚೆಗೆ ಮಗಳ ಮದುವೆ ಮಾಡಿ ಗಂಡನ ಮನೆಗೆ ಕಳಿಸಿಕೊಟ್ಟ ಗೆಳತಿ ನನ್ನೆದುರು ಅವಲತ್ತು, ಕ್ಷಮಿಸಿ, ಅಲವತ್ತುಕೊಂಡಿದ್ದಳು “”ಅಡುಗೆಮನೆ ಅಂದ್ರೆ ಅಲರ್ಜಿ ಅನ್ನೋ ಹಾಗಿದುÉ. ಈಗ ಗಂಡನ ಮನೇಲಿ ಅದೇನು ಅಡಿಗೆ ಮಾಡ್ತಾಳ್ಳೋ? ಹೇಳಿಕೊಡೋಕೆ ಜೊತೇಲಿ ಅತ್ತೇನೂ ಇಲ್ಲ…” ಅವಳು ಇಷ್ಟೆÇÉಾ ತಲೆಬಿಸಿ ಮಾಡಿಕೊಳ್ಳಬೇಕಾದ್ದೇನಿರಲಿಲ್ಲ. ಅವಳ ಮಗಳೇನು ಬೆರಳು ಚೀಪುವ ಮಗುವಲ್ಲ. ಇಂಜಿನಿಯರಿಂಗ್‌ ಓದಿ ಎರಡು ವರ್ಷ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸ ಮಾಡಿ ಇದೀಗ ಮದುವೆಯಾಗಿ ಹೊರಟು ಹೋದವಳು. ಎಷ್ಟಾದರೂ ಅಮ್ಮ ಅಮ್ಮನೇ. ಅವಳಿಗೆ ಆತಂಕ ಆಗುವುದು ಸಹಜ ಅಂದುಕೊಳ್ಳುವಾಗ ನನ್ನ ಮದುವೆಯಾದ ಹೊಸದರಲ್ಲಿನ ಒಂದು ಘಟನೆ ನೆನಪಾಗಿ ನಗು ಬಂತು. ನಮ್ಮ ಹಳ್ಳಿಮನೆಯಲ್ಲಿ ಸುಮಾರಾಗಿ ಎÇÉಾ ತರಕಾರಿಗಳನ್ನೂ ನೋಡಿದವಳು ನಾನು. ತೀರಾ ಪರಿಣಿತೆ ಅಂತಲ್ಲದಿದ್ದರೂ ಅಡುಗೆಯ ವಿಷಯದಲ್ಲಿ ಪ್ರಾಥಮಿಕ ಮಟ್ಟದ ಜ್ಞಾನ ಇತ್ತು. ಮಲೆ‌ನಾಡಿನ ಹಳ್ಳಿಮನೆಯಿಂದ ಶಿವಮೊಗ್ಗ ಪಟ್ಟಣಕ್ಕೆ ಬಂದು ಸೇರಿದ ಮೇಲೆ ಒಂದು ದಿನ ಯಜಮಾನರು ಸೊಗಡು ಅವರೇಕಾಯಿಯನ್ನು ಖಾಯಿಷುÒ ಪಟ್ಟುಕೊಂಡು ತಂದರು. ಆಗ ಸೀಜ‚ನ್ನಿನಲ್ಲಿ ಮಾತ್ರಾ ಬರುತ್ತಿದ್ದ ಅವರೇಕಾಯಿ ಅಂದರೆ ಪೇಟೆ ಜನ ಅದೆಷ್ಟು ಪ್ರಾಣ ಬಿಡುತ್ತಿದ್ದರು ಎನ್ನುವುದನ್ನು ನಂತರದ ದಿನಗಳಲ್ಲಿ ಕಂಡುಕೊಂಡ ನನಗೆ ಬೆಟ್ಟು ಕಚ್ಚುವಷ್ಟು ಆಶ್ಚರ್ಯ.  ಸಾರು, ಹುಳಿ, ಕೂಟು, ಪಲ್ಯ, ರೊಟ್ಟಿ, ಉಸುಳಿ, ಉಪ್ಪಿಟ್ಟು, ಹುರಿಗಾಳು ಇತ್ಯಾದಿತ್ಯಾದಿಗಳೆಲ್ಲವೂ ಅವರೇಕಾಯಿಮಯ ಎಂದು ಪರಿಚಯಸ್ಥರು ನನಗೆ ಮನವರಿಕೆ ಮಾಡಿಸಿದ್ದರು. ದಶಕಗಳ ಹಿಂದಿನ ಆ ಕಾಲದ ಮಾತು ಬಿಡಿ, ಈಗ ಟೀವಿ ಅನ್ನುವುದು ಮನೆಮನೆಗಳಲ್ಲಿ ರಾರಾಜಿಸುತ್ತಿರುವ ಕಾಲದಲ್ಲಿ ಅದರಲ್ಲಿ ಅಡುಗೆ ಮಾಡಲು ಬರುವ ಪಾಕಪ್ರವೀಣೆಯರು ಅವರೇಕಾಳಿನ ಹೋಳಿಗೆಯಿಂದ ಹಲ್ವದವರೆಗೆ ಏನೇನೆÇÉಾ ಪಾಕ ಇಳಿಸಬಹುದೆಂದು ಟೀವಿ ಎದುರು ಬಾಯಿ ಕಳೆದುಕೊಂಡು ಕೂರುವ ನನ್ನಂಥವರಿಗೆ ಪಾಠಹೇಳಿ ಕೊಡುತ್ತಾರೆ.

ಬೆಂಗಳೂರಿನಲ್ಲಿ ಪ್ರತಿವರ್ಷ ಅವರೇಕಾಯಿ ಮೇಳ ನಡೆಯುವುದನ್ನೂ, ಅಲ್ಲಿ ಏನೇನೆÇÉಾ ಪಾಕಪ್ರಬೇಧಗಳು ಕೊಳ್ಳುಗರ ಬಾಯಲ್ಲಿ ನೀರೂರಿಸುವಂತೆ ತಯಾರಾಗುತ್ತವೆಂಬುದನ್ನೂ ದೂರದರ್ಶನ ಎಲ್ಲರ ಮನೆಗೆ ತಂದು ತಲುಪಿಸುವುದು ಇತ್ತೀಚಿನ ಕೆಲವರ್ಷಗಳಿಂದ ಮಾಮೂಲಾಗಿಬಿಟ್ಟಿದೆ. ಸೊಗಡವರೇಕಾಯಿ ವಿಜೃಂಭಿಸುವ ಕಾಲದಲ್ಲಿ ಎಲ್ಲರ ಮನೆಯ ರಸ್ತೆಯ ಎದುರಿನಲ್ಲೂ ಸಣ್ಣ ಗುಡ್ಡದಷ್ಟು ಅವರೇಕಾಯಿ ಸಿಪ್ಪೆಗಳ ರಾಶಿ. ಹಿಚುಕಿದ ಬೇಳೆಗಳ ಮೇಲ್ಪದರದ ಅವಶೇಷ. ಈ ಸಿಪ್ಪೆರಾಶಿಯನ್ನು ಜಗಿದು ಸಂಭ್ರಮಿಸುವ ಜಾನುವಾರುಗಳು. ಇವೆಲ್ಲಕ್ಕೂ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಅದೇಕೋ ನನಗೂ, ಅವರೇಕಾಯಿಗೂ ಎಣ್ಣೆ, ಸೀಗೆ. ರುಚಿ ಅನ್ನುವುದು ಚಿಕ್ಕಂದಿನಿಂದ ರೂಢಿಸಿಕೊಂಡು ಬಂದ ಅಭ್ಯಾಸಬಲದ ಕಾರಣದಿಂದಲೂ ಇರಬಹುದು. ಹತ್ತೆಂಟು ಕೆ.ಜಿ.ಯಷ್ಟು ಕೊಂಡು ಚೀಲ ತುಂಬಿಸಿಕೊಂಡು ಹೋಗುವವರನ್ನು ತರಕಾರಿ ಅಂಗಡಿಗಳಲ್ಲಿ, ಬೀದಿ ಬದಿ ರಾಶಿ ಹುಯ್ದುಕೊಂಡಲ್ಲಿ, ಕಣ್ಣಾರೆ ಕಾಣುವ ಯಜಮಾನರಿಗೆ ನಮ್ಮ ಮನೆಯೂ ಇದರ ಪಾಕವೈವಿಧ್ಯದಿಂದ ಘಮಗುಡಬೇಕು ಎನ್ನುವ ಬಯಕೆ. ಮನೆಗೆ ಬರುವ ಇಂತಹ ತರಕಾರಿಗಳು ಹೆಂಗಸರ‌ನ್ನು ಅಡುಗೆಕೋಣೆಯಲ್ಲಿ ಕಟ್ಟಿ ಹಾಕಲು ಇರುವಂಥ ಹುನ್ನಾರಗಳು ಎಂದು ನನ್ನ ಅನಿಸಿಕೆ. ಹೆಣ್ಣುಮಕ್ಕಳು ಇಂಥವನ್ನೆÇÉಾ ಸೈರಣೆಯಿಂದ ಸಂಸ್ಕರಿಸಿ ಅಡುಗೆ ಮಾಡುತ್ತಾರಲ್ಲ, ಅವರಿಗೆ ದೊಡ್ಡ ಸಲಾಮು. ಇದ್ಯಾವ ಘನಂದಾರಿ ಕೆಲಸ ಎಂದು ಇಷ್ಟೆÇÉಾ ಮಾತಾಡಬೇಕು? ಟೀವಿ ಎದುರು ಕೂತು ಸುಲಿದರೆ ಗೊತ್ತೇ ಆಗದಷ್ಟು ಸಲೀಸು ಅನ್ನುವವರು ಬೇಕೆಂದೇ ನಾನು ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದೇನೆಂದೂ, ಸುಲಿಯಲು ಕೈಲಾಗದಿದ್ದರೆ ಸುಲಿದು ಶೇಖರಿಸಿಟ್ಟ ಕಾಳುಗಳು ಎÇÉೆಂದರಲ್ಲಿ ಲಭ್ಯವಾಗುತ್ತದೆಯೆಂದೂ ಹದ ಹೇಳುತ್ತಾರೆನ್ನುವುದು ನನಗೆ ಗೊತ್ತಿದೆ. ಆದರೆ ವೃಥಾ ಒಂದಕ್ಕೆರಡು ದುಡ್ಡು ಕೊಟ್ಟು ತರಲು ಮಧ್ಯಮವರ್ಗದ ಮನೋಧರ್ಮ ಅಡ್ಡ ಬಂದು ಬಿಡುತ್ತದೆ. ಈಗಿನ ಯುವಪೀಳಿಗೆಗೂ, ನಮಗೂ ಈ ಕುರಿತು ಎಂದೂ ಮುಗಿಯದ ಒಂದು ಅಭಿಪ್ರಾಯ ಬೇಧ ನೆಲೆಯೂರಿಬಿಟ್ಟಿದೆ. ನಡೆದು ಹೋಗಬಹುದಾದ ದೂರಕ್ಕೆ ಬಸ್ಸು, ಬಸ್ಸಿನಲ್ಲಿ ಹೋಗಿ ಇಳಿಯಬಹುದಾದಲ್ಲಿಗೆ ಆಟೋ, ರೈಲಿನಲ್ಲಿ ಹೋಗುವಲ್ಲಿಗೆ ಕಾರು, ಇವೆÇÉಾ ನಮ್ಮಂಥವರಿಗೆ ಪಥ್ಯವಾಗುವುದಿಲ್ಲ.

ಅಷ್ಟರಮಟ್ಟಿನ ದುಡ್ಡು ಉಳಿಸಿ ಏನಾಗಬೇಕಿದೆ? ದುಡ್ಡಿರುವುದೇ ನಮ್ಮ ಅನುಕೂಲಕ್ಕೆ, ಸುಖಕ್ಕೆ… ಎಂದು ಮಕ್ಕಳು ಎಷ್ಟೇ ಬೋಧನೆ ಮಾಡಿದರೂ ಅದು ನಮ್ಮ ತಲೆಗೆ ಇಳಿಯುವುದಕ್ಕೆ ಒÇÉೆ ಅನ್ನುತ್ತದೆ. ನಾವು ಬೆಳೆದುಬಂದ ರೀತಿ ಅನ್ನುವುದು ಆ ಮಟ್ಟಕ್ಕೆ ಮೈಯುಂಡು ಹೋಗಿರುತ್ತದೆ. ಸುಲಿದ ಅವರೇಕಾಳನ್ನು ಕೊಂಡು ತರುವಂಥ ಕ್ಷುಲ್ಲಕ ವಿಷಯದಲ್ಲೂ ಈ ಮನೋಧರ್ಮ ಕೆಲಸ ಮಾಡುವುದರಿಂದ ಸುಲಿಯಲ್ಪಡದ ಕಾಯಿಗಳೇ ಯಾವಾಗಲೂ ಮನೆಗೆ ಬರುತ್ತವೆ, ಅವರೇಕಾಯಿ ಸುಲಿದು ಕೊಡುವ ಜವಾಬ್ದಾರಿಯನ್ನು ರಾಯರು ತಾವು ವಹಿಸಿಕೊಳ್ಳುವ ಕರಾರಿನೊಡನೆ. ಹಾಗೆಂದ ಮಾತ್ರಕ್ಕೆ ನಾನು ತೀರಾ ಕರಾರಿಗೆ ಬದ್ಧಳಾಗಿ ನಡೆದುಕೊಳ್ಳುವ ಕಠಿಣಹೃದಯಿ ಎಂದು ಅರ್ಥೈಸಿಕೊಳ್ಳಬೇಡಿ. ಮನಸ್ಸು ಬಂದರೆ ರಾಯರಿಗೆ ನೆರವಾಗಲು ನಾನು ಹಿಂಜರಿಯುವುದಿಲ್ಲ. 

ಇದೀಗ ಮೊದಲಿಗೆ ಹೇಳಿದ ವಿಷಯಕ್ಕೆ ಬರುತ್ತೇನೆ. ನಮ್ಮ ಮದುವೆಯಾದ ಹೊಸದರಲ್ಲಿ ರಾಯರು ಒಂದು ದಿನ ಅವರೇಕಾಯಿಯನ್ನು ಮನೆಗೆ ತಂದ ವಿಷಯ ಪ್ರಸ್ತಾಪಿಸಿದ್ದೇನೆಂಬುದು ನೆನಪಿದೆಯಷ್ಟೇ? ದೇವರಾಣೆ ಮಾಡಿ ಹೇಳುತ್ತೇನೆ, ಅದುವರೆಗೆ ನಾನು ಅವರೇಕಾಯಿ ಎನ್ನುವ ಪೇಟೆ ಕಡೆಯ ಈ ತರಕಾರಿಯನ್ನು ಕಂಡಿರಲಿಲ್ಲ. ಹೆಸರು ಕೇಳಿರಲಿಲ್ಲ. ಚಪ್ಪರದವರೆ, ತಿಂಗಳವರೆ ಅರ್ಥಾತ್‌ ಪೇಟೆ ಕಡೆಯ ಹುರುಳೀಕಾಯಿಯಂಥವುಗಳನ್ನು ಅಟ್ಟು ಗೊತ್ತಿದ್ದವಳು. ಕಾಯಿ ಸ್ವಲ್ಪ ಬಲಿತಂತೆ ಕಂಡರೂ ಬೆಂದ ಮೇಲೆ ಮೆತ್ತಗಾಗಬಹುದೆಂಬ ತರ್ಕದೊಂದಿಗೆ ತುದಿತುದಿಯ ತೊಟ್ಟಿನ ಕಡೆ ಹುರುಳೀಕಾಯಿಯ ನಾರು ತೆಗೆಯುವಂತೆ ಒಂದಿಷ್ಟು ಚೂಟಿ ತೆಗೆದು ಇಡಿಇಡೀ ಕಾಯಿಗಳನ್ನು ಬೇಳೆಯೊಂದಿಗೆ ಬೇಯಿಸಿ, ಮಸಾಲೆ ಅರೆದು ಹುಳಿ ಕುದಿಸಿಟ್ಟೆ. ಯಾವತ್ತಿನ ಹಾಗೆ ಮಧ್ಯಾಹ್ನದ ಊಟಕ್ಕೆ ಹಸಿದ ರಾಯರು ಮನೆಗೆ ಬಂದರು ಅಂತಾಯ್ತು. ತಟ್ಟೆಯಲ್ಲಿದ್ದ ಅನ್ನದ ಮೇಲೆ ಬಿದ್ದ ಮೇಲೋಗರ ನೋಡಿ ಅವರು ದಿಗ್ಭ್ರಮಿತರಾದರು. ನನಗೆ ಇದರ ಬಗ್ಗೆ ಗೊತ್ತಿಲ್ಲದಿರುವುದನ್ನು ಅರ್ಥ ಮಾಡಿಕೊಂಡು ನನ್ನ ಅಜ್ಞಾನವನ್ನು ಕ್ಷಮಿಸುವಷ್ಟು ಔದಾರ್ಯ ಮೆರೆದರು. ನಂತರದ ದಿನಮಾನಗಳಲ್ಲಿ ಅವರೇಕಾಯಿ ಬಿಡಿಸುವಾಗ ತುಪುಕ್ಕನೆ ಅದರೊಳಗಿಂದ ಉದುರಿ ಬೀಳುವ ಹುಳುಗಳನ್ನು ಕಂಡರೆ ಮೈ ಚುಂಗರಿಸಿ ಅವತ್ತು ನಾನು ಅದಿನ್ನೆಷ್ಟು ಹುಳುಗಳನ್ನು ಸಜೀವವಾಗಿ ಬೇಯಿಸಿ ಪಾಪ, ಶಾಪ ಕಟ್ಟಿಕೊಂಡೆನೋ ಅನಿಸಿದರೂ ಅವೆÇÉಾ ತಾತ್ಕಾಲಿಕ. ಅಜ್ಞಾನಕ್ಕೆ ಕ್ಷಮೆಯುಂಟಷ್ಟೇ? 

ಹಿಂದೊಂದು ಕಾಲದಲ್ಲಿ, ತೀರಾ ಹಿಂದೇನೂ ಅಲ್ಲ, ಮದುವೆ, ಮುಂಜಿ ಮುಂತಾದ ವಿಶೇಷಕಟ್ಲೆಗಳನ್ನು ಮನೆಯÇÉೇ ನಡೆಸುವ ವಾಡಿಕೆ ಹಳ್ಳಿಮನೆಗಳಲ್ಲಿತ್ತು. ದೊಡ್ಡ ಅಂಗಳದಲ್ಲಿ ಸೋಸಿದ ಬೆಳಕಿನ ಚಿತ್ತಾರ ಬಿಡಿಸುವ ಅಡಿಕೆ ಒಣಗಿಸುವ ಚಪ್ಪರಕ್ಕೆ ಸುತ್ತ ತಟ್ಟಿ ಕಟ್ಟಿ ಮರೆಮಾಡಿ, ಕನ್ನೀರು ಅಂದರೆ ಸಗಣಿನೀರು ಹೊಡೆದು, ಸಾಲಿಗೆ ಹಾಕಿದ ಬಾಳೆಲೆಗಳ ಮೇಲೆ ಬಂದವರಿಗೆ ಭೋಜನದ ವ್ಯವಸ್ಥೆ. ಈ ವ್ಯವಸ್ಥೆಯನ್ನು ಚ್ಯುತಿ ಬಾರದಂತೆ ನಡೆಸಿಕೊಡುವ ಹೊಣೆ ಹೊತ್ತ ಅಡುಗೆಭಟ್ಟರ ಪಟಾಲಂ ಬಂದಿಳಿಯಿತು ಅಂದರೆ ಮನೆಗೆ ನಿಜಕ್ಕೂ ಹಬ್ಬದ ಕಳೆ. ಹುರಿಯುವ, ತುರಿಯುವ, ಕರಿಯುವ, ಕೊಚ್ಚುವ, ಹೆಚ್ಚುವ, ಪ್ರತಿಯೊಂದು ಕೆಲಸವೂ ಮನೆಮಕ್ಕಳ ಕಣ್ಣೆದುರೇ ಅನಾವರಣಗೊಳ್ಳುತ್ತಾ, ವಿಶೇಷದ ಭಕ್ಷÂ ತಯಾರಿಸುವಲ್ಲಿ ಮಕ್ಕಳಿಗೆ ಹೆಚ್ಚಿನ ಆಕರ್ಷಣೆ. ಮನೆಯಲ್ಲಿ ಎಷ್ಟೇ ಮೆಹನತ್ತು ಮಾಡಿ ಪಾಕ ಇಳಿಸಿದರೂ ಭಟ್ಟರ ಸಾರಿನ ರುಚಿ ಇದಕ್ಕಿಲ್ಲ ಎನ್ನುವ ಗಂಡಸರ ವಿಮರ್ಶೆಗೆ ತುತ್ತಾದ ಹೆಮ್ಮಕ್ಕಳಿಗೆ ಭಟ್ಟರು ಅಂತಾದ್ದೇನು ಹಾಕಿ ಸಾರು ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ. ಬಾಯ್ಬಿಟ್ಟು ಕೇಳಿದರೆ ಅವರು ಗುಟ್ಟು ಬಿಟ್ಟುಕೊಡುವುದಿಲ್ಲ ಎನ್ನುವ ಅನುಮಾನ. ಭಟ್ಟರು ಮಸಾಲೆ ಹುರಿಯುವಲ್ಲಿಯೇ ಸುತ್ತಾಡುತ್ತಾ, ಕೆಲವರಿಗೆ ಈ ಪತ್ತೇದಾರಿಕೆ ಪಥ್ಯವಾಗದೆ ಒಲೆಯÇÉೊಂದು ಮೆಣಸಿನಕಾಯಿ ಹಾಕಿ ಘಾಟು ಎಬ್ಬಿಸಿ ತಮ್ಮ ಪಾಕ ಪ್ರಾವೀಣ್ಯತೆಗೆ ದೃಷ್ಟಿ ತಾಗದ ಹಾಗೆ ಮನೆಯವರನ್ನು ಆ ವಲಯದಿಂದ ಆಚೆ ಅಟ್ಟುತ್ತಿದ್ದರು. ಜಿಲೇಬಿ ಮುಂತಾದ್ದಕ್ಕೆ ಹಿಟ್ಟು ಕಲೆಸುವವರು ಹೀಗೆ ಕಲೆಸಿದ ಹಿಟ್ಟಿಗೆ ಮನೆಯವರ ಕಣ್ಣೆದುರೇ ಮುಲಾಜಿಲ್ಲದೆ ಉಪ್ಪು, ಮೆಣಸಿನಕಾಯಿ ನೀವಳಿಸಿ ಒಲೆಗೆ ಹಾಕಿ ಚಟಪಟಗುಟ್ಟಿಸುತ್ತಿದ್ದುದೂ ಇತ್ತು.

ಮನೆಯೊಳಗೆ ಬಲಗಾಲಿಟ್ಟು ಪ್ರವೇಶಿಸುತ್ತಿದ್ದ ಅಡುಗೆಭಟ್ಟರ ಆಗಮನಕ್ಕೆ ಸಂಭ್ರಮಿಸುತ್ತಾ ಸಾಕ್ಷಿಯಾಗುವ ದೃಶ್ಯ ಈಗೆಲ್ಲಿದೆ? ಕಲ್ಯಾಣಮಂದಿರಗಳಲ್ಲಿ ನಡೆಯುವ ಸಂತರ್ಪಣೆಗೆ ಹಾಜರಿ ಹಾಕಿ ಉಂಡು ಬರುವುದಕ್ಕಷ್ಟೇ ಅನುಭವ ಸೀಮಿತ, ಆತಿಥೇಯರಿಗೂ ಕೂಡಾ. “ಮದುವೆ ಮಾಡ್ಕೊಂಡ್ರೆ ಅಡುಗೆಭಟ್ರನ್ನೇ ಮಾಡ್ಕಂಬೇಕು. ದಿವಸಾ ಅಡಿಗೆ ಮಾಡೋ ರಗಳೆ ತಪ್ಪುತ್ತೆ’ ಎಂದು ಅಕ್ಕತಂಗಿಯರ ನಡುವೆ ಚಲಾವಣೆಯಾಗುತ್ತಿದ್ದ ಗುಸುಪಿಸು, ತಮ್ಮನ್ನೇ ನೋಡಿ ಅವರು ನಗುತ್ತಿ¨ªಾರೆಂಬ ಭಟ್ಟರ ಪಾಳೆಯದ ಗುಮಾನಿ, “ಎಂತ ಬೇಕಾಗಿತ್ತು?’ ಎಂದು ಮನೆಯವರನ್ನೇ ಆಚೆಗಟ್ಟಲು ನೋಡುವ ಅವರ ಹುನ್ನಾರ, ಕಚಕುಳಿ ಕೊಡುವ ನೆನಪುಗಳು.

ಕೆಲ ಹೆಮ್ಮಕ್ಕಳಿರುತ್ತಾರೆ, ಅಡುಗೆ, ತಿಂಡಿಗಳ ತಯಾರಿಕೆಯಲ್ಲಿ ನಿಸ್ಸೀಮರು. ಅವರು ಮಾಡಿದ್ದನ್ನು ತಿಂದು ನೀವು ಹೊಗಳಿಕೆ ಹಾಕುವುದನ್ನು ಸಗರ್ವದಿಂದ ಸ್ವೀಕರಿಸುವಂಥವರು. ಆದರೆ ಆ ಖಾದ್ಯದ ತಯಾರಿಕೆಯ ಕುರಿತು ಕುತೂಹಲದಿಂದ ಕೇಳಿದರೆ ಪೂರ್ತಿಯಾಗಿ ಗುಟ್ಟು ಬಿಟ್ಟುಕೊಡದೆ ಏನೋ ಒಂದನ್ನು ಮರೆಮಾಚುವುದು ಅವರ ಸ್ವಭಾವ. ಟೀವಿಯಲ್ಲಿ ಅಡುಗೆ ಮಾಡಲು ಬರುವವರು ಈ ಕುರಿತು ಮುಚ್ಚುಮರೆ ಮಾಡದೆ ಯಾವ್ಯಾವುದನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಬೇಕು ಎನ್ನುವ ಸಣ್ಣಪುಟ್ಟ ವಿವರಗಳವರೆಗೆ ಪ್ರತಿಯೊಂದರ ಮಾಹಿತಿ ಕೊಡುತ್ತಾರೆ. ಆದರೆ ಅವರು ಮಾಡುವಾಗ ಎಷ್ಟು ಸುಲಭ, ಸಲೀಸು ಅನ್ನಿಸುವಂಥಾದ್ದು ಸ್ವತಃ ನಾವು ತಯಾರಿಕೆಗೆ ಹೊರಟಾಗ ಅಂದುಕೊಂಡಷ್ಟು ಸುಲಭ ಅಲ್ಲ ಅನಿಸುವುದು ಅಡುಗೆಯ ಕುರಿತಾದ ಧೋರಣೆ ಸ್ವಭಾವದ ಫ‌ಲಶ್ರುತಿಯೇ? ಇರಬಹುದೇನೋ.

ಅಡುಗೆ ಮಾಡುವುದು ದೊಡ್ಡ ಯಜ್ಞ ಅಲ್ಲ ಎನ್ನುವ ಹಗುರ ಮನೋಭಾವನೆ ಈಗಾಗಲೇ ಬಂದುಬಿಟ್ಟಿದೆ. ಯಾವ ಪುಡಿ ಬೇಕೋ ಆ ಪುಡಿ ಕೈಯಳವಿನಲ್ಲಿ ಸಿಕ್ಕುತ್ತದೆ. ದೋಸೆ, ಇಡ್ಲಿಗಳ ಹಿಟ್ಟು ಕೂಡಾ ಪ್ಯಾಕೆಟ್ಟುಗಳಲ್ಲಿ ಸಿಗತೊಡಗಿ ಆ ಕಡೆಯಿಂದ ತಂದು ಈ ಕಡೆಯಲ್ಲಿ ಫ‌ಟಾಫ‌ಟ್‌ ತಯಾರಿಸಿದರಾಯ್ತು ಎನ್ನುವಲ್ಲಿಗೆ ಕಾಲ ಬಂದು ನಿಂತಿದೆ. ಸೂಪುಗಳಿಂದ ತೊಡಗಿ ವಿವಿಧ ವ್ಯಂಜನಗಳವರೆಗೆ ಏನೆಲ್ಲವೂ ರೆಡಿಮೇಡ್‌. ಬೇಕಾಗಿ¨ªೊಂದೇ, ದುಡ್ಡು. “ಅಪ್ಪ, ಅಮ್ಮನ್ನ ಬಿಟ್ಟು ಮತ್ತೆÇÉಾ ಕೊಂಡ್ಕೊಳ್ಳೋಕೆ ಸಿಗುತ್ತೆ’ ಎನ್ನುವುದು ಸವಕಲಾಗಿರುವ ಒಂದು ಹಳಸಲು ಮಾತು. ಮನೆಗೆ ನೆಂಟರು ಬರುತ್ತಾರಾ? ಮಾರಿಗೊಂದು ಸ್ವೀಟ್‌ ಸ್ಟಾಲ್‌ ಇದೆ. ಬೇಕಾದ್ದು ಕೊಂಡು ತರಬಹುದು. ಎಲ್ಲವನ್ನೂ ಕ್ಯಾಲೊರಿ ಲೆಕ್ಕದಲ್ಲಿ ಅಳೆಯುವವರಿಗೆ ಗ್ರಾಮ್‌ಗಳ ಲೆಕ್ಕದಲ್ಲಿ ನಾಲಿಗೆ ಚಪಲ ತೀರಿಸಿಕೊಳ್ಳಲು ಕೊಂಡು ತರುವುದೇ ಸಲೀಸು. ಒಟ್ಟಿನಲ್ಲಿ ಮನಸೋ ಇಚ್ಛೆ ತಿನ್ನುವ, ಮೈಮುರಿದು ದುಡಿಯುವ, ತನ್ಮೂಲಕ ತಿಂದಿದ್ದನ್ನು ರಕ್ತಗತವಾಗಿಸಿಕೊಳ್ಳುವ ಜಮಾನಾ ಹೊರಟು ಹೋಗಿದೆ. ಹೀಗಿರುವಾಗ ಮಗಳಿಗೆ ಅಡುಗೆ ಬರುವುದಿಲ್ಲ ಎನ್ನುವ ಗೆಳತಿಯ ಚಿಂತೆ ಅರ್ಥವಿಲ್ಲದ್ದು ಅನಿಸಿದರೆ ಆಶ್ಚರ್ಯವೇನು?

ಅದೊಂದು ದಿನ ಲಕಲಕ ಹೊಳೆಯುವ ಮುಖ ಹೊತ್ತು ಬಂದಳು ಗೆಳತಿ. 
“”ಒಂದು ತಿಂಗಳು ಬೆನ್ನುಕೋಲು ಮುರೊRಂಡು ಅಡುಗೆ ಪುಸ್ತಕ ಬರೊRಟ್ಟಿ¨ªೆ ಕಣೇ. ದಂಡ ಆಯ್ತು. ನಂಗೆ ಬುದ್ಧಿ ಇಲ್ಲ” ತನ್ನನ್ನೇ ಬೈದುಕೊಂಡಳು. ಅಲ್ಪಾವಧಿಯÇÉೇ ಮಗಳು ಅಡುಗೆ, ತಿಂಡಿ ಮಾಡುವುದರಲ್ಲಿ ಪರಿಣಿತಳಾಗಿ¨ªಾಳೆ ಎನ್ನುವುದು ಅವಳ ಹೆಮ್ಮೆ. ಪಾಕವೈವಿಧ್ಯದ ನಾನಾ ವಿಧಾನಗಳು ಬೆರಳ ತುದಿಯಲ್ಲಿ ತೆರೆದುಕೊಳ್ಳುವಾಗ ಕಲಿಯಲು ಆಸಕ್ತಿ ಇದ್ದವರಿಗೆ ಕಲಿಕೆಗೆ ಎಷ್ಟು ಹೊತ್ತು? “”ಅಮ್ಮಾ, ಅದು ಮಾಡೋದು ಹೇಗೆ? ಇದು ಮಾಡೋದು ಹೇಗೆ?” ಹೊತ್ತಲ್ಲದ ಹೊತ್ತಲ್ಲೂ ಅಮ್ಮನಿಗೆ ಫೋನಾಯಿಸಿ ವಿವರ ತಿಳಿದುಕೊಳ್ಳಬೇಕಾದ ರಗಳೆ ಇಲ್ಲ. ಯೂಟ್ಯೂಬ್‌ನಲ್ಲಿ, ನೆಟ್‌ನಲ್ಲಿ ವಿವಿಧ ಹಂತಗಳ ಪ್ರಾತ್ಯಕ್ಷಿಕೆಯೊಂದಿಗೆ ಯಾವ ಅಡುಗೆ, ತಿಂಡಿ ನೆನೆದರೂ ಸ್ವತಃ ತಯಾರಿಸಿಕೊಳ್ಳಬಹುದಾದ ಸಂಭ್ರಮ.

“ಅಜ್ಜಿಗೆ ಮೊಮ್ಮಗಳು ಕೆಮ್ಮೊàದು ಕಲಿಸಿದಳಂತೆ’ ಎನ್ನುವ ವ್ಯಂಗ್ಯಾರ್ಥದ ಗಾದೆಮಾತಿನ ವ್ಯಂಗ್ಯ ಬದಿಗಿಟ್ಟು ಅದನ್ನು ಸಹಜವಾಗಿ ಸ್ವೀಕರಿಸಬೇಕಾದ ಕಾಲ ಬಂದಿದೆ ಅನಿಸುವುದಿಲ್ಲವೇ?     

– ವಸುಮತಿ ಉಡುಪ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.