ಮನುಸ್ಮೃತಿಯ ಸಂಗತಿಗಳು ಸ್ಮೃತಿಯಲ್ಲಿವೆಯೆ?


Team Udayavani, Dec 10, 2017, 7:20 AM IST

lead.jpg

ರಾಮಾಯಣ, ಮಹಾಭಾರತ, ಭಾಗವತ, ವೇದಗಳು, ಪುರಾಣ, ಉಪನಿಷತ್ತು ಹಾಗೂ ಭಗವದ್ಗೀತೆ- ಈ ಪ್ರಾಚೀನ ಕೃತಿಗಳು ಈಗಲೂ ಜೀವಂತ ಪಠ್ಯಗಳು. ಅವುಗಳ ಜೊತೆ ನಮ್ಮ ಸಮಾಜ ಸಹ ಸಜೀವ ಸಂಬಂಧವಿರಿಸಿಕೊಂಡಿದೆ. ರಾಮಾಯಣ, ಮಹಾಭಾರತಗಳಂತೂ ಮರು ಓದು, ಪರಿಷ್ಕರಣ, ಅನುವಾದ, ಭಾವಾನುವಾದ, ಪಾಠಾಂತರ, ರೂಪಾಂತರ- ಹೀಗೆ ಬಗೆಬಗೆಯ ಅಭಿವ್ಯಕ್ತಿಗಳನ್ನು ಪಡೆದುಕೊಂಡಿವೆ. ಮನುಸ್ಮತಿ, ಭಾರತದಲ್ಲಿ ಎಂದೂ ಆ ಬಗೆಯ ಜೀವಂತ ಪಠ್ಯವಾಗಿರಲಿಲ್ಲವೇಕೆ?

1927ರ ಡಿಸೆಂಬರ್‌ 25ರಂದು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಾರ್ವಜನಿಕವಾಗಿ ಸುಟ್ಟ ಬಳಿಕ ಅತ್ಯಂತ ಹೆಚ್ಚು ಬಾರಿ ಸುಡಲ್ಪಟ್ಟ ಮತ್ತು ಭಾರತದಲ್ಲಿ ದಲಿತ ಚಳವಳಿ ಬಲಿಷ್ಠಗೊಂಡ ನಂತರ ಕಳೆದ ಮೂರು ದಶಕಗಳಲ್ಲಿ ಅತ್ಯಂತ ಹೆಚ್ಚು ವಾಗ್ಧಾಳಿಗೊಳಗಾದ ಒಂದು ಗ್ರಂಥ, ಮನುಸ್ಮತಿ. ಮನುವಾದಿಗಳನ್ನು ಖಂಡಿಸುವಷ್ಟೇ ತೀವ್ರವಾಗಿ ಖಂಡಿಸಲ್ಪಟ್ಟ ಈ ಗ್ರಂಥದಲ್ಲಿ ಹತ್ತುಹಲವು ವೈದೃಶ್ಯಗಳಿವೆ; ವಿರೋಧಾಭಾಸ, ಸಾರ್ವಕಾಲಿಕ ಸತ್ಯಗಳಿವೆ. ಮನುಷ್ಯ ಸ್ವಭಾವದ ಸಾತತ್ಯ, ಅಸಾಂಗತ್ಯ, ಅದ್ಭುತ ಪ್ರತಿಮೆಗಳು (images) ಮತ್ತು ಗಂಭೀರವಾದ ತಾತ್ತಿ$Ìಕ ಪ್ರಶ್ನೆಗಳಿವೆ. ಸದ್ಯದ ಸಮಾಜಕ್ಕೆ ಹಾಸ್ಯಾಸ್ಪದ ಅನ್ನಿಸುವ ಹಲವು ನಿಲುವುಗಳು, ಅಚ್ಚರಿ ಹುಟ್ಟಿಸುವ ಮನೋವೈಜ್ಞಾನಿಕ ಆಯಾಮಗಳೂ ಇವೆ. ಒಂದು ಪ್ರಜಾಪ್ರಭುತ್ವದಲ್ಲಿ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದ ಹಲವು ರೀತಿ-ರಿವಾಜುಗಳು, ನೀತಿ-ನಿಯಮಗಳೂ ಇವೆ.

ಇವೆಲ್ಲ ಇರುವ ಒಂದು ವಿಚಿತ್ರ ವಿಶ್ವಕೋಶ, ಪ್ರಾಕ್ತನ ಕೈಪಿಡಿ, ಪುರಾತನ ನಿಘಂಟು ಮನುಸ್ಮತಿ. ಈ ಧಾರ್ಮಿಕ-ಸಾಮಾಜಿಕ-ರಾಜಕೀಯ ಹಾಗೂ ಕೌಟುಂಬಿಕ-ಆರ್ಥಿಕ ಅಭಿಜಾತ (classical)  ಕೃತಿಯ ಬಗ್ಗೆ ಮಾತಾಡುವುದು, ಬರೆಯುವುದು ಹಾಗಿರಲಿ; ಸಮಕಾಲೀನ ಭಾರತದಲ್ಲಿ ಇದರ ಉಲ್ಲೇಖ ಮಾಡುವುದೆಂದರೆ ವಿವಾದಕ್ಕೆ ಆಹ್ವಾನ ನೀಡಿದಂತೆ. ತೀವ್ರ ಒಂದಕ್ಕೊಂದು ವಿರುದ್ಧವಾದ ಅಭಿಪ್ರಾಯಗಳಿಗೆ ಒಡ್ಡಿಕೊಳ್ಳುವ ಒಂದು ಪ್ರಾಚೀನ ಗ್ರಂಥಕ್ಕೆ ಇಂತಹ “ಗೌರವ’ ದೊರಕುವುದು ಸಹಜ.

ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ (ಕ್ರಿ.ಪೂ. 1500-ಕ್ರಿ.ಶ. 500?) ಯಾವುದೋ ಒಂದು ವರ್ಗ ಅಥವಾ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ (ಮೊದಲು ಮೌಖೀಕವಾಗಿ, ಬಳಿಕ ಲಿಖೀತವಾಗಿ) ಶತಶತಮಾನಗಳ ಅವಧಿಯಲ್ಲಿ ಹಲವರಿಂದ ಹಂತ ಹಂತವಾಗಿ ರಚಿಸಲ್ಪಟ್ಟಿರಬಹುದಾದ ಗ್ರಂಥ ಇದು. ಇದನ್ನು ವಸ್ತುನಿಷ್ಠವಾಗಿ ಧೀಮಂತ ಕುತೂಹಲದಿಂದ ಒಂದು ಕ್ಲಾಸಿಕಲ್‌ ಪಠ್ಯವಾಗಿ ಭಾಷಾ ವಿಜ್ಞಾನದ ದೃಷ್ಟಿಯಿಂದ ಒಂದು text ಆಗಿ ಪರಿಗಣಿಸುವುದು, ಓದುವುದು ಮತ್ತು ವಿಶ್ಲೇಷಿಸುವುದು ನನ್ನ ಉದ್ದೇಶ.

ಹೀಗೆ ವಿಶ್ಲೇಷಿಸುವಾಗ ಕಂಡುಬಂದ ಪಠ್ಯದ ಮತ್ತು ಪಠ್ಯದ ಆಳದಲ್ಲಿರುವ ಸುಪ್ತ-ಪಠ್ಯ (sub-text) ಗಳ ಮನೋವೈಜ್ಞಾನಿಕ ಆಯಾಮಗಳನ್ನು ಗುರುತಿಸಲು ಪ್ರಯತ್ನಿಸಿದ್ದೇನೆ. ಸಾರ್ವಜನಿಕ ಆಡಳಿತ, ಸಮಾಜ, ಕುಟುಂಬಕ್ಕೆ ಸಂಬಂಧಿಸಿ ಪಠ್ಯದಿಂದ ಹೊಮ್ಮುವ ಒಳನೋಟಗಳನ್ನು ದಾಖಲಿಸುವುದು ನನ್ನ ಅಧ್ಯಯನದ ವ್ಯಾಪ್ತಿ.

ಇಂತಹ ಅಧ್ಯಯನದ ಆರಂಭದಲ್ಲೇ ಹೇಳಬೇಕಾದ ಮಾತೊಂದಿದೆ: ಮನುಸ್ಮತಿಯ ಸಮರ್ಥನೆ ಅಥವಾ ಖಂಡನೆ ನನ್ನ ಉದ್ದೇಶವಲ್ಲ. ಜಾಗತೀಕರಣದ ಈ ಯುಗದಲ್ಲಿ, ಮೊಬೈಲ್‌ ಫೋನಿನ ಬಟನ್‌ಗಳನ್ನು ಒತ್ತಿ ಫ್ಲಶ್‌ ಮಾಡಬಹುದಾದ ಟಾçಲೆಟ್‌ಗಳು ಹಾಗೂ ಮನೆಗೆಲಸಕ್ಕೆ ಯಂತ್ರಮಾನವರು ಬರುತ್ತಿರುವ ಒಂದು ಕಾಲಘಟ್ಟದಲ್ಲಿ ಮನುಸ್ಮತಿಯನ್ನು ಎದುರಿಗಿಟ್ಟುಕೊಂಡು ವೈದಿಕ ಅಥವಾ ನವವೈದಿಕ (neo-brahmin) ಸಮುದಾಯವನ್ನು ಅಥವಾ ಪುರೋಹಿತಶಾಹಿಯನ್ನು ಟೀಕಿಸುವುದಾಗಲಿ, ಬೆಯ್ಯುವುದಾಗಲಿ ಅರ್ಥಹೀನ. ವೈದಿಕ ಅಥವಾ ಪುರೋಹಿತಶಾಹಿ ತನ್ನನ್ನು ಸಮರ್ಥಿಸಿಕೊಳ್ಳುವುದಾಗಲಿ ಅಷ್ಟೇ ಅರ್ಥಹೀನ. ಯಾಕೆಂದರೆ, ಇತಿಹಾಸದ ವಿಭಿನ್ನ ಯುಗ (period) ಗಳಲ್ಲಿ ಪ್ರತಿಯೊಂದು ಪ್ರಭುತ್ವವೂ ತನ್ನ ಹಿತಾಸಕ್ತಿ ಮತ್ತು ಆಳ್ವಿಕೆಯ ಸಮರ್ಥನೆಗಾಗಿ, ಯಜಮಾನಿಕೆ (hegemony) ಗಾಗಿ ಧರ್ಮ ಮತ್ತು ಧರ್ಮ ಸಂಬಂಧಿಯಾದ ಕೃತಿಗಳನ್ನು, ಗ್ರಂಥಗಳನ್ನು ಬಳಸಿಕೊಂಡಿದೆ. ಪುರುಷ ಸೂಕ್ತ ಹೇಳುವ (ಬ್ರಾಹ್ಮಣೋಸ್ಯ ಮುಖ ಮಾಸೀತ್‌ ಬಾಹೂರಾಜನ್ಯಕೃತಃ) ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಸಮಾಜದ ವರ್ಗೀಕರಣಕ್ಕೂ, ಗ್ರೀಕ್‌ ತಣ್ತೀಜ್ಞಾನಿ ಪ್ಲೇಟೊ (ಕ್ರಿ.ಪೂ. 427-347) ತನ್ನ “ದ ರಿಪಬ್ಲಿಕ್‌’ನಲ್ಲಿ ಚಿನ್ನ, ಬೆಳ್ಳಿ, ಕಂಚು ಮತ್ತು ಕಬ್ಬಿಣದ ನೆಲೆಯಲ್ಲಿ ಮಾಡುವ ಸಾಮಾಜಿಕ ವರ್ಗ ಶ್ರೇಣೀಕರಣಕ್ಕೂ ಇರುವ ಹೋಲಿಕೆಯನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ. ಎಲ್ಲ ಕಾಲಘಟ್ಟದಲ್ಲೂ ಸಮಾಜವನ್ನು ಆಳಲು ಪ್ರಭುತ್ವ ಅಥವಾ ಒಂದು ಬಲಾಡ್ಯ ಗುಂಪು ಹೆಚ್ಚುಕಡಿಮೆ ಒಂದೇ ರೀತಿಯ ಮಾರ್ಗವನ್ನು ಬಳಸಿಕೊಂಡಿದೆ. ತಂತ್ರಗಾರಿಕೆ (strategy) ಯನ್ನು, ತುಷ್ಟೀಕರಣ ನೀತಿಯನ್ನು , ಜನರನ್ನು ಹದ್ದುಬಸ್ತಿನಲ್ಲಿಡಲು ಭಯ ಹುಟ್ಟಿಸುವ “ಮಿಥ್‌’ಗಳನ್ನು ಬಳಸಿಕೊಂಡಿದೆ. (ಕರ್ನಾಟಕದಲ್ಲಿ ಈಗ ಎರಡು ಪ್ರಬಲ ಸಮುದಾಯಗಳು ತಮ್ಮ ಪ್ರಾಬಲ್ಯ ಮೆರೆಯಲು, ಅಧಿಕಾರಕ್ಕೆ ಬರಲು ನಡೆಸುತ್ತಿರುವ ತಂತ್ರಗಾರಿಕೆಗಳನ್ನು ಜ್ಞಾಪಿಸಿಕೊಳ್ಳಿ).

ಈ ನಿಟ್ಟಿನಲ್ಲಿ ಯೋಚಿಸುವಾಗ ಆಧುನಿಕ ಜಗತ್ತಿನ ಸಿವಿಲ್‌ ಕೋಡ್‌ ಹಾಗೂ ಕ್ರಿಮಿನಲ್‌ ಕೋಡ್‌ನ‌ ಜತೆಗೆ ಅಪರಾಧ ಮತ್ತು ಶಿಕ್ಷೆಗೆ ಸಂಬಂಧಿಸಿ ಮನುಸ್ಮತಿಯೊಂದಿಗೆ ಹೋಲಿಸಬಹುದಾದ ಗ್ರಂಥಗಳ ಸಾಲಿನಲ್ಲಿ ಗರುಡ ಪುರಾಣ, ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಜಾನ್‌ಹಾಬ್ಸ್ನ ಲವಾçಯತನ್‌ (17ನೇ ಶತಮಾನ) ಕೃತಿಗಳನ್ನು ಉದಾಹರಿಸಬಹುದು.

ಮನುಸ್ಮತಿಯ ನೀತಿಗಳು
ಕೊಲ್ಕತಾದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶನಾಗಿದ್ದ ಹಾಗೂ 28 ಭಾಷೆಗಳನ್ನು ಬಲ್ಲವನಾಗಿದ್ದ ಅಸಾಮಾನ್ಯ ಪೌರಸ್ತ Â ವಿದ್ವಾಂಸ (orientalist) ಸರ್‌ ವಿಲಿಯಮ್‌ ಜೋನ್ಸ್‌ (1746-1794)ರಿಂದ ಮೊತ್ತಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡ ಮನುಸ್ಮತಿಯಲ್ಲಿ ಹನ್ನೆರಡು ಅಧ್ಯಾಯಗಳಿದ್ದು ಸುಮಾರು 2,685 ಶ್ಲೋಕಗಳಿವೆ. ಒಡೆದು ಆಳುವ ನೀತಿಯ ಬ್ರಿಟಿಷರಿಗೆ ವರ್ಣ, ವರ್ಗ, ಅಸ್ಪೃಶ್ಯತೆ ಹಾಗೂ ಜಾತಿಗಳಿಂದ ಛಿದ್ರವಾಗಿದ್ದ ಭಾರತವನ್ನು ಆಳಲು, ಯಜಮಾನಿಕೆ ನಡೆಸಲು ಮನುಸ್ಮತಿ ತುಂಬ ಉಪಯೋಗಿ ಅನ್ನಿಸಿತು. ಬ್ರಿಟಿಷರಿಗೆ ಇದು ಎಷ್ಟೊಂದು ಉಪಯೋಗಿ ಅನ್ನಿಸಿತೆಂದರೆ, ಜೋನ್ಸ್‌ ನ ಮರಣಾನಂತರ ಲಂಡನ್‌ನ ಸೈಂಟ್‌ಪಾಲ್ಸ್‌ ಕೆಥಡ್ರಲ್‌ನಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ ತನ್ನ ಕೈಯಲ್ಲಿ ಮನುಸ್ಮತಿಯ ಪ್ರತಿಯೊಂದನ್ನು ಹಿಡಿದುಕೊಂಡಿರುವ ಜೋನ್ಸ್‌ನ ಪ್ರತಿಮೆಯನ್ನು ಪ್ರತಿಷ್ಠಾಪಿಸಿತು!

ಹೀಗೆ ಆಡಳಿತ, ಕರ ವಸೂಲಾತಿ, ನ್ಯಾಯಾಂಗ ವ್ಯವಸ್ಥೆ, ಅಪರಾಧ-ಶಿಕ್ಷೆ, ಧರ್ಮ ಜಿಜ್ಞಾಸೆ, ಕುಟುಂಬ, ಸ್ತ್ರೀ ಸ್ವಭಾವ, ಸ್ತ್ರೀ ಸಂರಕ್ಷಣೆ, ಸಾಮಾಜಿಕ ಸಂರಚನೆ, ರಾಜಪ್ರಭುತ್ವ, ಆಹಾರ ಪದ್ಧತಿ ಇತ್ಯಾದಿ ಹತ್ತುಹಲವು ವಿಷಯಗಳ ಬಗ್ಗೆ ಈ ಪಠ್ಯ ಶತಮಾನಗಳ ಕಾಲ ಇಂದಿನ “ಸಂವಿಧಾನ’ಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿತ್ತು. ಇಂತಹ ಮನುಸ್ಮತಿಯಲ್ಲಿ ನನ್ನ ಕುತೂಹಲ ಕೆರಳಿಸಿದ ಕೆಲವು ವಿಷಯಗಳನ್ನು ಮಾತ್ರ ಇಲ್ಲಿ ದಾಖಲಿಸುತ್ತಿದ್ದೇನೆ.

ಹೆಣ್ಣು ಗಂಡಿಗೆ ಸಮಾನವಲ್ಲ, ಆಕೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ (9:3), ಆಕೆ ಸಂತಾನೋತ್ಪತ್ತಿಗಾಗಿಯೇ ಇರುವವಳು (9:26), ಆಕೆಯ ಗಂಡ ಎಷ್ಟೇ ದುಷ್ಟನಾದರೂ ಆತನನ್ನು “ಪತಿದೇವ’ ಎಂದು ಕಾಣಬೇಕು… ಇತ್ಯಾದಿ ಇತ್ಯಾದಿ ನೂರಾರು ಮಹಿಳಾ ವಿರೋಧಿ ಮಾತುಗಳನ್ನು ಹೇಳುತ್ತಲೇ, ಈ ಸ್ಮತಿ ವರದಕ್ಷಿಣೆಯನ್ನು ವಿರೋಧಿಸಬೇಕು, ಸ್ತ್ರೀಧನ (ವಾಹನ, ವಸ್ತ್ರ ಇತ್ಯಾದಿ) ಉಪಯೋಗಿಸುವವ ನರಕಕ್ಕೆ ಹೋಗುತ್ತಾನೆ, ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಬೇಕು, ಯಾವ ಕುಲದಲ್ಲಿ ಹೆಂಗಸರು ದುಃಖೀತರಾಗಿರುತ್ತಾರೋ ಆ ಕುಲ ನಿರ್ವಂಶವಾಗುತ್ತದೆ, ಯಾವ ಕುಲದಲ್ಲಿ ಹೆಣ್ಣುಗಳು ಸಂತೋಷವಾಗಿರುತ್ತಾರೋ ಆ ವಂಶ ಸದಾ ಅಭಿವೃದ್ಧಿ ಹೊಂದುತ್ತದೆ ಎಂದು ಪ್ರತಿಪಾದಿಸುತ್ತದೆ. ಗರ್ಭಿಣಿಯರಿಗೆ ಅತಿಥಿಗಳಿಗಿಂತ ಮೊದಲೇ ಊಟ ಬಡಿಸಬೇಕು ಎಂದು ಹೇಳುತ್ತದೆ. ನಗ್ನ ಹೆಣ್ಣನ್ನು ನೋಡಬಾರದು ಎಂದಷ್ಟೇ ಸಲೀಸಾಗಿ ಕಾಮನಬಿಲ್ಲನ್ನೂ ನೋಡಬಾರದು ಮಾತ್ರವಲ್ಲ, ಬೇರೆಯವರಿಗೆ ಕರೆದು ತೋರಿಸಬಾರದು ಎಂದು ಹೇಳುತ್ತದೆ (ಅ. 4-59)! ನಮ್ಮ ಇಂದಿನ ಜಾಹೀರಾತು ಜಗತ್ತೇ ಕುಸಿದುಬೀಳುವ ಹಾಗೆ ನಗ್ನ ಹೆಣ್ಣನ್ನು ನೋಡಬಾರದು (ನ್ನಂ ನೇಕ್ಷೇತ್ರ ಸ್ತ್ರೀಯಂ), ಬತ್ತಲೆ ಮಲಗಬಾರದು (ನ ಚ ನಗ್ನಃ ಶಯೀತ) (4-75) ಎಂದು ಸಹ ತಾಕೀತು ಮಾಡುತ್ತದೆ. ಪರಸ್ತ್ರೀಸಂಗವನ್ನೂ ಅದು ನಿಷೇಧಿಸುತ್ತದೆ.

ತಾಯಿ, ಸಹೋದರಿ ಮೊದಲಾದವರೊಡನೆ ಏಕಾಂತದಲ್ಲಿರಕೂಡದು ಎನ್ನುತ್ತ ಹೆಣ್ಣಿಗೆ ಸಂಬಂಧಿಸಿ ಗಂಡು ಮಾಡಬಾರದ ವಿಷಯಗಳ ಒಂದು ಉದ್ದವಾದ ಪಟ್ಟಿಯನ್ನೇ ನೀಡುತ್ತದೆ. ಅವಳು ಮುಟ್ಟಿನ ಸ್ಥಿತಿಯಲ್ಲಿರುವಾಗ ಅವಳ ಸಂಗ ಮಾಡುವ ಮಾತಿರಲಿ, ಅವಳ ಜತೆ ಒಂದೇ ಹಾಸಿಗೆಯಲ್ಲಿ ಕೂಡ ಹಾಗೆಯೇ (ಸುಮ್ಮನೆ!) ಮಲಗಿಕೊಳ್ಳಬಾರದು, ಅವಳ ಜತೆ ಒಂದೇ ತಟ್ಟೆಯಲ್ಲಿ ಉಣ್ಣಬಾರದು; ಅವಳು ಊಟ ಮಾಡುತ್ತಿರುವಾಗ, ಸೀನುವಾಗ, ಆಕಳಿಸುವಾಗ, ಹಾಯಾಗಿ ಬೇಕಾದಂತೆ (ಈಗಿನ ಟಿವಿ ಮಾಡೆಲ್‌ಗ‌ಳ ಹಾಗೆ?) ಕೂತಿರುವಾಗ, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವಾಗ, ನೀರೆರೆದುಕೊಳ್ಳುವಾಗ, ಎದೆಯ ಮೇಲಿನ ಸೆರಗನ್ನು ತೆಗೆದಿರುವಾಗ, ಅವಳು ಪ್ರಸವಿಸುವಾಗ ಅವಳನ್ನು ಅಪ್ಪಿತಪ್ಪಿ ನೋಡಲೂಬಾರದು!

ಹನ್ನೊಂದನೆಯ ಇಂದ್ರಿಯ!
ನಾವು ಇಂದ್ರಿಯಗಳು ಐದು ಎಂದರೆ ಈ ಸ್ಮತಿ ಇಂದ್ರಿಯಗಳು ಹತ್ತು ಎನ್ನುತ್ತದೆ. ಕಿವಿ, ಚರ್ಮ, ಕಣ್ಣುಗಳು, ನಾಲಗೆ ಮತ್ತು ಮೂಗು- ಐದು ಜ್ಞಾನೇಂದ್ರಿಯಗಳು; ಗುದಸ್ಥಾನ, ಉಪಸ್ಥಿ (ಮೂತ್ರದ್ವಾರ), ಕೈ, ಕಾಲು ಮತ್ತು ಬಾಯಿ-ಐದು ಕರ್ಮೇಂದ್ರಿಯಗಳು. ಇಷ್ಟೇ ಅಲ್ಲ, ಹನ್ನೊಂದನೆಯ ಒಂದು ಇಂದ್ರಿಯವೂ ಇದೆ, ಅದು ಮನಸ್ಸು. ಮನುಷ್ಯ ಈ ಮನಸ್ಸನ್ನು ಗೆದ್ದರೆ ಮೇಲಿನ ಹತ್ತು ಇಂದ್ರಿಯಗಳನ್ನು ಗೆದ್ದಂತೆ. ಯಾಕೆಂದರೆ ಮನಸ್ಸೇ ಎಲ್ಲಕ್ಕೂ ಮೂಲವಾಗಿದೆ. (ಅ. 2:90-92). ಮನಸ್ಸನ್ನೆ ಆಧರಿಸಿ, ವಿಸ್ತರಿಸಿ ಆಧುನಿಕ ಮನೋವಿಜ್ಞಾನ ನಿಂತಿದೆ. ಸಿಗ¾ಂಡ್‌ ಫ್ರಾಯಿಡ್‌ನ‌ನ್ನು ಓದಿದವರಿಗೆ ಈ ಮಾತಿನ ಮನೋವೈಜ್ಞಾನಿಕ ಮಹತ್ವ ತಿಳಿದೀತು.

ಈ ಪಠ್ಯ ಹನ್ನೆರಡನೆ ಅಧ್ಯಾಯದಲ್ಲಿ ಕರ್ಮಗಳ ಫ‌ಲಗಳನ್ನು ವಿವರಿಸುವಾಗ ಕರ್ಮ (ಕ್ರಿಯೆ)ಗಳಿಗೆ ಮನಸ್ಸೇ ಕಾರಣ ಎಂದು ಹೇಳಿ ಮನಸ್ಸು-ವಚನ (ಮಾತು) ಮತ್ತು ಕಾರ್ಯ (ದೇಹ)ದಿಂದ ಮಾಡುವ ಮೂರು ರೀತಿಯ ಮಾನಸ ಕರ್ಮಗಳ ಪಟ್ಟಿ ಮಾಡುತ್ತದೆ. 

ಈ ಮೂರರಿಂದ ಉಂಟಾಗುವ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ರೀತಿಯ ಕ್ರಿಯೆಗಳಿಗೆ ಮನಸ್ಸೇ ಮೂಲ ಕಾರಣ ಎನ್ನುತ್ತದೆ. ಇನ್ನೊಬ್ಬರ ಸಂಪತ್ತಿಗೆ ಆಸೆ ಪಡುವುದು, ಮನಸ್ಸಿನಲ್ಲೆ ಇತರರಿಗೆ ಕೇಡು ಬಯಸುವುದು ಹಾಗೂ ಅಸತ್ಯದಲ್ಲಿ ಆಸಕ್ತಿ- ಇವು ಮೂರು ರೀತಿಯ ಮಾನಸ ಕರ್ಮಗಳಾದರೆ, ಕೆಟ್ಟ ಮಾತುಗಳನ್ನಾಡುವುದು, ಸುಳ್ಳು ಹೇಳುವುದು, ಚಾಡಿ ಹೇಳುವುದು ಮತ್ತು ಅಸಂಬದ್ಧ ಪ್ರಲಾಪ ಮಾಡುವುದು- ಇವು ನಾಲ್ಕು ವಿಧದ ವಾಚನಿಕ (ಮಾತಿನ) ಕ್ರಿಯೆಗಳಾಗಿವೆ ಎಂದು ವರ್ಗೀಕರಣ ಮಾಡಲಾಗಿದೆ. ಬಲಾತ್ಕಾರದಿಂದ ಬೇರೆಯವರ ಸಂಪತ್ತು ಕಸಿದುಕೊಳ್ಳುವುದು (extortion), ಹಿಂಸೆ ಮತ್ತು ಹಾದರ ಇವು ಮೂರು ರೀತಿಯ ಶಾರೀರಿಕ ಕ್ರಿಯೆಗಳು. ಆದರೆ ಈ ಮನಸ್ಸು-ಮಾತು-ದೇಹ- ಈ ಮೂರನ್ನೂ ದಂಡಿಸಿ, ನಿಗ್ರಹಿಸಿ, ಪಳಗಿಸಿ ಸ್ವಾಧೀನಪಡಿಸಿಕೊಂಡವ “ತ್ರಿದಂಡಿ’. ಹೀಗೆ ತ್ರಿದಂಡಿಯಾಗಿ ಕಾಮ-ಕ್ರೋಧಗಳನ್ನು ಗೆದ್ದು ಎಲ್ಲ ಪ್ರಾಣಿಗಳಲ್ಲಿ ಸಮಭಾವ ಸಾಧಿಸುವಾತ ಆತ್ಮಸಿದ್ಧಿ ಹೊಂದುತ್ತಾನೆ.

2600 ವರ್ಷಗಳ ಹಿಂದೆ ಮನಸ್ಸಿನ ಇಷ್ಟೆಲ್ಲ ಆಯಾಮಗಳ ಬಗ್ಗೆ ಯೋಚಿಸಿದಾತ ಇವತ್ತು ಕಾರ್ಪೊರೇಟ್‌ ಜಗತ್ತು ತನ್ನ ಸಿಬ್ಬಂದಿಗಳ ಕ್ರೋಧಾಡಳಿತ (Anger Management) ಮಾನಸಿಕ ಒತ್ತಡ ಆಡಳಿತ (stress management) ದ ಮೇಲೆ ಬಿಲಿಯಗಟ್ಟಲೆ ಡಾಲರ್‌ ಸುರಿಯಬೇಕಾದ ಸ್ಥಿತಿ ಬರಬಹುದೆಂದು ಊಹಿಸಿರಲಾರ! ಬುದ್ಧ ಹೇಳುವ ಹಾಗೆ ಎಲ್ಲಕ್ಕೂ, ಎಲ್ಲ ಭ್ರಮೆಗಳಿಗೂ ಮನಸ್ಸೇ ಮೂಲ; ಮನೋನಿಗ್ರಹ, ನಿಯಂತ್ರಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಹೇಳುವ ಆಧುನಿಕ ಮನೋವಿಜ್ಞಾನದ ಪ್ರಾಥಮಿಕ ಪಾಠಗಳು ಮನುವಿನದೆಂದು ಹೇಳಲಾಗುವ ಪಠ್ಯದಲ್ಲಿವೆ.

ಗರುಡ ಪುರಾಣದ ಭಾಗ್ಯ ಇದಕ್ಕಿಲ್ಲ !
ಇಷ್ಟೇ ಅಲ್ಲ, ಗಿಡ, ಮರ, ಬಳ್ಳಿಗಳಿಗೆ ಅಂತಃಸಂಜ್ಞೆ ಇದೆ, ಅವುಗಳೂ ಕೂಡ ಸುಖ-ದುಃಖಗಳಿಂದ ಕೂಡಿವೆ (ಅಂತಃ ಸಂಜ್ಞಾ ಭವಂತ್ಯೇತೇ ಸುಖ ದುಃಖ ಸಮನ್ವಿತಾಃ||- 1:49) ಎನ್ನುವ ಒಂದು ಒಳನೋಟವೂ ಅಲ್ಲಿದೆ. ಇದನ್ನೆಲ್ಲ ಈ ದೇಶ ಗಮನಿಸದೆ ಇರಲು, ನನ್ನ ವಿಮರ್ಶಕ ಮಿತ್ರರೊಬ್ಬರು ಹೇಳುವಂತೆ, ಕಾರಣ ಹೀಗಿರಬಹುದು: “”ರಾಮಾಯಣ, ಮಹಾಭಾರತ, ಭಾಗವತ, ವೇದಗಳು, ಪುರಾಣ, ಉಪನಿಷತ್ತು ಹಾಗೂ ಭಗವದ್ಗೀತೆ- ಈ ಪ್ರಾಚೀನ ಕೃತಿಗಳು ಈಗಲೂ ಜೀವಂತ ಪಠ್ಯಗಳು. ಅವುಗಳ ಜೊತೆ ನಮ್ಮ ಸಮಾಜ ಸಹ ಸಜೀವ ಸಂಬಂಧವಿರಿಸಿಕೊಂಡಿದೆ. ರಾಮಾಯಣ, ಮಹಾಭಾರತಗಳಂತೂ ಮರು ಓದು, ಪರಿಷ್ಕರಣ, ಅನುವಾದ, ಭಾವಾನುವಾದ, ಪಾಠಾಂತರ, ರೂಪಾಂತರ- ಹೀಗೆ ಬಗೆಬಗೆಯ ಅಭಿವ್ಯಕ್ತಿಗಳನ್ನು ಪಡೆದುಕೊಂಡಿವೆ. ಮನುಸ್ಮತಿ, ಭಾರತದಲ್ಲಿ ಎಂದೂ ಆ ಬಗೆಯ ಜೀವಂತ ಪಠ್ಯವಾಗಿರಲಿಲ್ಲ.

ಗರುಡ ಪುರಾಣವನ್ನು ಸಾವು ಸಂಭವಿಸಿದ ಬ್ರಾಹ್ಮಣರ ಮನೆಗಳಲ್ಲಿ ಓದುವ ಕ್ರಮವಿದೆ. ಮನುಸ್ಮತಿಗೆ ಅಂತಹ ಓದಿನ ಭಾಗ್ಯವೂ ಇಲ್ಲ. ಮನುಸ್ಮತಿ orientalist, ಪೌರ್ವಾತ್ಯ ಮನೋಧರ್ಮದ ವಸಾಹತುಶಾಹಿ ಆಸ್ಥಾನ ವಿದ್ವಾಂಸರುಗಳು ಭಾರತೀಯ ಸಂಸ್ಕೃತಿಗೆ ಆರೋಪಿಸಿದ/ಲಗತ್ತಿಸಿದ ಒಂದು ಪಠ್ಯವೇ ಹೊರತು ನಮ್ಮ ಸಂಸ್ಕೃತಿ ಪರಂಪರೆಗಳ ಜೊತೆ ಅದಕ್ಕೆ ಜೈವಿಕ ಸಂಬಂಧವೇ ಇಲ್ಲ. ಆದರೂ ನಮ್ಮ ಸಮಕಾಲೀನ ಅನಿಷ್ಟಗಳಿಗೆಲ್ಲ ಅದನ್ನು ಹೊಣೆಗಾರನಾಗಿ ಮಾಡಲಾಗಿದೆ!”

ಈ ಪಠ್ಯ ಸಾರ್ವಕಾಲಿಕವಾದ ಕೆಲವು ಸತ್ಯಗಳನ್ನು ಹೇಳುತ್ತಲೆ, ಕೆಲವು ಸಂದೇಹಗಳನ್ನು, ಪ್ರಶ್ನೆಗಳನ್ನು ಮುಂದಿಡು ತ್ತದೆ. ಆಚಾರವೇ ಬಹಳ ದೊಡ್ಡ ಧರ್ಮ (ಆಚಾರಃ ಪರಮೋ ಧರ್ಮಃ); (ಪ್ರಿಯವಾದ) ಸತ್ಯವನ್ನೇ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು; ಪ್ರಿಯವಾಗಿದೆ ಅಂತ ಸುಳ್ಳನ್ನೂ ಹೇಳಬಾರದು, ಇದೇ ಸನಾತನ ಧರ್ಮ (ಸತ್ಯಂ ಬ್ರೂಯತ್‌ ಪ್ರಿಯಂ ಬ್ರೂಯಾನ್ನಬ್ರೂತ್ಸತ್ಯಮಪ್ರಿಯಂ); ಪರಾಧೀನವಾದ ಎಲ್ಲವೂ ನಮಗೆ ದುಃಖಮಯ, ಎಲ್ಲವೂ ನಮ್ಮ ಅಧೀನದಲ್ಲಿದ್ದಾಗ ಸುಖ (4:160); ಯಾರನ್ನೂ ಅವಮಾನಿಸಬಾರದು (4:141) ಇವತ್ತಿನ “ದ್ವೇಷ ವ್ಯಾಪಾರಿ’ಗಳ ಹಾಗೆ ಯಾರೊಂದಿಗೂ ಜಗಳ ಮಾಡಬಾರದು (4:139) ಇತ್ಯಾದಿ ಇತ್ಯಾದಿ.

ನಮ್ಮನ್ನು ಸದಾ ಕಾಡುವ ಒಂದು ಮೂಲಭೂತವಾದ ಪ್ರಶ್ನೆ: ಮನುಷ್ಯ ಯಾಕೆ ಸಾಯುತ್ತಾನೆ? ಸಾವನ್ನು ಗೆಲ್ಲುವುದು ಹೇಗೆ? ಇಷ್ಟೆಲ್ಲ ಧರ್ಮವನ್ನು ಪಾಲಿಸಿದರೂ ಆ ವೇದ ವಿದ್ವಾಂಸರು ಯಾಕೆ ಸಾಯುತ್ತಾರೆ? ಅವರು ಹೇಗೆ ಮೃತ್ಯುವಿಗೆ ಈಡಾಗುತ್ತಾರೆ (5:2), ಇಷ್ಟೊಂದು ಗಂಭೀರವಾದ ಪ್ರಶ್ನೆಗೆ ಈ ಸ್ಮತಿ ನೀಡುವ ಉತ್ತರ ಬಾಲಿಶ ಅನ್ನಿಸುತ್ತದೆ, ವೇದಾಭ್ಯಾಸ ಮಾಡದಿದ್ದರೆ, ಸ್ವಧರ್ಮ ಪಾಲಿಸದಿದ್ದರೆ, ಆಲಸ್ಯದಿಂದ ಇದ್ದರೆ ಅಥವಾ ದೋಷಯುಕ್ತ ಅನ್ನ ತಿಂದರೆ ಮೃತ್ಯುವು ಆ ವಿದ್ವಾಂಸರನ್ನು ಕೊಲ್ಲುತ್ತದೆ! (5:4) ಮುಂದಿನ ಶ್ಲೋಕದಲ್ಲಿ ಬೆಳ್ಳುಳ್ಳಿ , ಕೆಂಪು ಬೆಳ್ಳುಳ್ಳಿ, ನೀರುಳ್ಳಿ ಮತ್ತು ಅಣಬೆಯನ್ನು ತಿನ್ನಬಾರದು ಎಂಬ ಸಮಜಾಯಿಷಿ ಬೇರೆ ಇದೆ! ಮುಂದಿನ ಹನ್ನೊಂದು ಶ್ಲೋಕಗಳಲ್ಲಿ ಏನೇನನ್ನು, ಯಾವ್ಯಾವ ಮಾಂಸವನ್ನು ತಿನ್ನಬಾರದು ಎಂಬ ಒಂದು ಉದ್ದನೆಯ ಮೆನುಕಾರ್ಡ್‌ ಬರುತ್ತದೆ. ಇವೆಲ್ಲವುಗಳಿಂದ, ಮನುಷ್ಯ ಯಾಕೆ ಸಾಯುತ್ತಾನೆ? ಎಂಬ ಪ್ರಶ್ನೆಗೆ ಉತ್ತರವನ್ನು ಪ್ರಾಯಶಃ ಊಹಿಸಿಕೊಳ್ಳಬೇಕು.

ಯಾರು ಯಾರು ಯಾವ ಯಾವ ಮಾಂಸವನ್ನು ತಿನ್ನಬಾರದು, ತಿನ್ನಬೇಕು ಎಂಬ ಬಗ್ಗೆಯೇ ಈಗ ಈ ದೇಶದಲ್ಲಿ ಗದ್ದಲ ಮಾಡುತ್ತಿರುವವರು, ಸವರ್ಣೀಯರ ಮಾಂಸಾಹಾರದ ಬಗ್ಗೆ ಮನು ಹೇಳುವುದನ್ನು ಓದಿದರೆ ಕೆಂಡಾಮಂಡಲವಾದಾರು! ಸರ್ವಂ ಪ್ರಾಣಸ್ಯ ಭೋಜನಂ (5:28), ಈ ಜಗತ್ತಿನಲ್ಲಿರುವ ಎಲ್ಲ ಜೀವಜಂತುಗಳು ತಿನ್ನಲಿಕ್ಕೆಂದೇ ಇದ್ದಾವೆ ಎಂದ ಮೇಲೆ ಅಲ್ಲಿ ಯಾವುದೇ ಒಂದು ನಿರ್ದಿಷ್ಟ ಪ್ರಾಣಿಯ ಮಾಂಸ ನಿಷೇಧಕ್ಕೆ ಅವಕಾಶವೇ ಇಲ್ಲ ಎಂದ ಹಾಗಾಯಿತು. “ಮನುವಾದಿಗಳು’ ಎಂದು ಯಾರ್ಯಾರನ್ನೋ ಟೀಕಿಸುವವರನ್ನು ಹೊರತುಪಡಿಸಿ, ಬೇರೆ ಯಾರ ಸೃಷ್ಟಿಯಲ್ಲೂ ಮನುಸ್ಮತಿ ಇಲ್ಲವಾದ್ದರಿಂದಲೆ ಇಂತಹ ಗದ್ದಲಕ್ಕೆ ಅವಕಾಶವಾಗಿರಬಹುದು.

ಮನುಷ್ಯ ಒಬ್ಬನೇ ಹುಟ್ಟಿ , ಒಬ್ಬನೇ ಸಾಯುವ, ಸಾಯುವಾಗ ತನ್ನೊಂದಿಗೆ ಯಾರನ್ನೂ ಯಾವುದನ್ನೂ ಕೊಂಡೊಯ್ಯಲಾಗದ ಮಹಾ ದುಃಖ ವಿಶ್ವದ ಎಲ್ಲ ಅಭಿಜಾತ ಧಾರ್ಮಿಕ ಪಠ್ಯಗಳಲ್ಲೂ ವ್ಯಕ್ತವಾಗಿದೆ. ಸತ್ತ ನಂತರ ನೆರವಿಗೆ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಬಂಧುಗಳು ಯಾರೂ ಬರುವುದಿಲ್ಲ ; ಕೇವಲ ಧರ್ಮ (ತಾನು ಮಾಡಿದ ಒಳ್ಳೆಯ ಕೆಲಸ)ವೊಂದೇ ಸಹಾಯಕ್ಕೆ ಬರುತ್ತದೆ (ಧರ್ಮಸ್ತಿಷ್ಠತಿ ಕೇವಲಃ- 4:239), ಎನ್ನುವ ಈ ಸ್ಮತಿ ಮನುಷ್ಯನೊಬ್ಬ ಸತ್ತಾಗ ಆತನ ಬಂಧುಗಳು ಆತನ ಶವವನ್ನು ಕಟ್ಟಿಗೆ-ಕಲ್ಲು-ಮಣ್ಣಿನಂತೆ ಎಸೆದು ಹೋಗುತ್ತಾರೆ ಎನ್ನುವ ನಿಷ್ಠುರ ಪ್ರತಿಮೆಯಲ್ಲಿ ಬದುಕಿನ ಅಸಾಂಗತ್ಯವನ್ನು ಕಟ್ಟಿಕೊಡುತ್ತದೆ (ಕಾಷ್ಠಲೋಷ್ಠ ಸಮಂ ಕ್ಷಿತಾ- 4:241).

ಜತೆಗೆ, ಟಾçಲೆಟ್‌ ಮ್ಯಾನರ್ (ಎಲ್ಲೆಲ್ಲಿ ಮೂತ್ರ ಮಾಡಬಾರದು/ಮಾಡಬಹುದು), ಹೆಲ್ತ್‌ ಟಿಪ್ಸ್‌ (ದೇಹದ ಯಾವ್ಯಾವ ಇಂದ್ರಿಯಗಳನ್ನು ಯಾಕೆ ಮುಟ್ಟುತ್ತ ಇರಬಾರದು?), ಕಳ್ಳರಲ್ಲಿ ಎಷ್ಟು ವಿಧದ ಕಳ್ಳರು? ಅತಿಥಿ ಸತ್ಕಾರ, ಯಾರು ಯಾವ್ಯಾವ ರೀತಿಯ ಅನ್ನವನ್ನು ತಿನ್ನಬಾರದು? ಗರ್ಭಧಾರಣೆ, ಯಾವ್ಯಾವ ರಾತ್ರಿ ಕೂಡಿದರೆ ಗಂಡು/ಹೆಣ್ಣು ಮಗು ಹುಟ್ಟುತ್ತದೆ? ಯಾವ್ಯಾವ ದಾನದಿಂದ ಏನೇನು ಫ‌ಲ? ಇತ್ಯಾದಿ ಇತ್ಯಾದಿ ಒಂದು ಸಾಮಾಜಿಕ ಸಂರಚನೆಯಲ್ಲಿ ಬದುಕುವ ಜನ ಯೋಚಿಸಬಹುದಾದ, ಕೇಳಬಹುದಾದ ನೂರಾರು ವಿಷಯಗಳ ಬಗ್ಗೆ ಮಾಹಿತಿ, ಸಲಹೆ, ಸೂಚನೆ, ಆದೇಶ, ಆಪ್ತ ಸಮಾಲೋಚನೆ- ಎಲ್ಲವನ್ನೂ ನೀಡುತ್ತದೆ.

ಇಂತಹ ಒಂದು ಪಠ್ಯವನ್ನು ಯಾರು, ಎಲ್ಲಿ, ಹೇಗೆ, ಯಾವ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯನೆಲೆಯಿಂದ ನಿಂತು, ಯಾವ ಕಾಲಘಟ್ಟದಲ್ಲಿ ಓದುತ್ತಾರೆ? ಎಂಬುದನ್ನವಲಂಬಿಸಿ ಪಠ್ಯದ ಅರ್ಥ ವಿವರಣೆಗಳು ಹುಟ್ಟಿಕೊಳ್ಳುತ್ತವೆ- ಭಗವದ್ಗೀತೆಯ, ಬೈಬಲ್‌ನ ಅರ್ಥ ವಿವರಣೆಗಳ ಹಾಗೆ. ಯಾವುದೇ ಒಂದು ಪಠ್ಯವನ್ನು ಯಾವುದೇ ಒಂದು ಕಾಲಘಟ್ಟದಲ್ಲಿ ಯಾವುದೇ ಕಾರಣಗಳಿಗಾಗಿ ಎಷ್ಟೇ ಬಾರಿ ಸುಟ್ಟರೂ, ಅದು ಮತ್ತೆ ಮತ್ತೆ ಆಳುವ ವರ್ಗದ ಯಜಮಾನಿಕೆಯ (hegemony) ಮರ್ಜಿಗನುಗುಣವಾಗಿ ಎದ್ದು ಬರಬಹುದು- ಪುನಃ ಸುಡಲ್ಪಡುವುದಕ್ಕಾಗಿ ಅಥವಾ ಗತಕಾಲದ ಅಕ್ಷರ ಪಳೆಯುಳಿಕೆಗಾಗಿ ಗ್ರಂಥಾಲಯಗಳಲ್ಲಿ ನಿದ್ದೆಗೆ ಜಾರಬಹುದು. 

– ಬಿ. ಭಾಸ್ಕರ ರಾವ್‌

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.