ಮಿನಿ ಕತೆಗಳು


Team Udayavani, Jan 14, 2018, 4:53 PM IST

sap-sam-3.jpg

ಕೌದಿ
ಇಳಿಸಂಜೆಯ ಹೊತ್ತು. ಬೊಚ್ಚುಬಾಯಿಯ ಆ ಅಜ್ಜಿ ಮುಂದಿನ ಚಳಿಗಾಲಕ್ಕೆಂದು ಕೌದಿ ಹೊಲಿಯುತ್ತ ಕುಳಿತಿದ್ದಳು. ಬೆಳಕು ಕಡಿಮೆ ಇದ್ದದ್ದರಿಂದಲೋ, ವಯಸ್ಸಾದ ಪರಿಣಾಮವೋ ಕೆಲಸ ನಿಧಾನವಾಗಿ ಸಾಗುತ್ತಲಿತ್ತು. ಪಕ್ಕದಲ್ಲಿಯೇ ಅವಳ ಮೊಮ್ಮಗ ಕುಳಿತಿದ್ದ. ಅವನಿಗೆ ಹಳೆಯ ಬಟ್ಟೆಗಳನ್ನೆÇÉಾ ಸೇರಿಸಿ ಅಜ್ಜಿ ಏಕೆ ಹೊಲಿಯುತ್ತಿ¨ªಾಳೆಂದು ಅರ್ಥವಾಗಲಿಲ್ಲ.

“”ಅಜ್ಜಿ , ಏನು ಮಾಡ್ತಾ ಇದ್ದೀಯಾ?” ಕೇಳಿದ ಮೊಮ್ಮಗ.
“”ಕೌದಿ ಹೊಲಿಯುತ್ತಿದ್ದೇನೆ ಚಿನ್ನಾ, ಮುಂದಿನ ಚಳಿಗಾಲಕ್ಕೆ ಬೇಕಲ್ಲ” ಅಜ್ಜಿಯ ಈ ಮಾತು ಆತನನ್ನು ಮತ್ತಷ್ಟು ಗೊಂದಲಕ್ಕೆ ನೂಕಿತು.
“”ಚಳಿಗಾಲಕ್ಕೆ ಕಂಬಳಿಯನ್ನು ಅಂಗಡಿಯಿಂದ ತರಬಹುದಲ್ಲ?” ಕೊಳ್ಳುಬಾಕ ಸಂಸ್ಕೃತಿಯ ಕಾಲದ ಮೊಮ್ಮಗ ಮುಗ್ಧವಾಗಿ ಪ್ರಶ್ನಿಸಿದ.
“”ನನಗೆ ಮೊದಲಿನಿಂದಲೂ ಕೂಡ ಅಂಗಡಿಯಿಂದ ಕಂಬಳಿ ತಂದು ಗೊತ್ತೇ ಇಲ್ಲ ಪುಟ್ಟ , ಮನೆಯಲ್ಲಿ ಹೊಲಿದೇ ಅಭ್ಯಾಸ” ಕೆಲಸ ಮುಂದುವರಿಸುತ್ತಲೆ ನುಡಿದಿದ್ದಳು ಅಜ್ಜಿ.
“”ಅದು ಯಾಕೆ ಹಾಗೆ?” ಪ್ರಶ್ನಿಸಿದ ಮೊಮ್ಮಗ ಅಜ್ಜಿಯ ಉತ್ತರಕ್ಕೆಂದು ಕಾದು ಕುಳಿತ.
“”ಮೊದಲೆಲ್ಲ ಬಡತನ ಜಾಸ್ತಿ ಮಗೂ. ಅಂಗಡಿಗೆ ಹೋಗಿ ಕೊಳ್ಳುವಷ್ಟು ಹಣ ನಮ್ಮಲ್ಲಿರಲಿಲ್ಲ. ಅದಕ್ಕೇ ಹಳೆಬಟ್ಟೆಗಳನ್ನು ಸೇರಿಸಿ ಹೊಲಿದು ಕೌದಿ ತಯಾರಿಸಿಕೊಳ್ತಿದ್ವಿ” ಹೀಗೆ ನುಡಿದ ಅಜ್ಜಿಗೆ, ಇದ್ದರೂ ಇನ್ನೆಷ್ಟು ಚಳಿಗಾಲವಿರಬಹುದು !

ರಂಗೋಲಿ
ರಂಗೋಲಿ ಇಡುವುದೆಂದರೆ ಅವಳಿಗೆ ತುಂಬ ಇಷ್ಟ. ಹೊಸ ಹೊಸ ರಂಗೋಲಿಗಳನ್ನು ಕಲಿತುಕೊಂಡು ಮನೆ ಮುಂದೆ ರಚಿಸುವುದರಲ್ಲಿ ಅವಳಿಗೆ ಅದೇನೋ ಸಂತಸ. ಚುಕ್ಕಿಗಳ ಸೇರುವಿಕೆಯಲ್ಲಿ ಅದೆಂಥ‌ ಚಮತ್ಕಾರ ಅಡಗಿದೆ ಎನ್ನುವುದನ್ನು ಕಾಣಬೇಕಾದರೆ ಅವಳು ಬಿಡಿಸುವ ರಂಗೋಲಿಯನ್ನು ಕಾಣಬೇಕು. “ಅಡುಗೆ ಕಲಿ’ ಎಂದು ಅಮ್ಮ ಎಷ್ಟೇ ಹೇಳಿದರೂ ಅವಳಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಆದರೆ ರಂಗೋಲಿ ಬಿಡಿಸುವುದನ್ನು ಅವಳಾಗಿಯೇ ಕಲಿತುಕೊಂಡಿದ್ದಳು.  ಅವಳ ತುಂಟ ತಮ್ಮನಿಗೆ ಅವಳನ್ನು ರೇಗಿಸುವ ಖಯಾಲಿ. ಅವಳಿಟ್ಟ ರಂಗೋಲಿಯ ಮೇಲೆ ಕಾಲಿಟ್ಟು, ಓಡಿ ಹೋಗಿ, ರಂಗೋಲಿಯ ಗೆರೆಗಳನ್ನು ಆಚೀಚೆ ಎಳೆದು ಕಿತಾಪತಿ ಮಾಡಿ ಅದೆಷ್ಟು ಸಲ ಅವಳಿಂದ ಬೈಸಿಕೊಂಡಿದ್ದನೋ ಏನೋ! ಆ ದಿನ ಬೆಳಗ್ಗೆ ಅವಳು ರಂಗೋಲಿ ಬಿಡಿಸುವ ವೇಳೆಗಾಗಲೇ ನೆಲ ರಾತ್ರಿ ಸುರಿದ ಭಾರೀ ಮಳೆಗೆ ಮೆತ್ತಗಾಗಿತ್ತು. ಆದರೂ ರಂಗೋಲಿ ಬಿಡಿಸುವ ಕಾತುರ ಅವಳಿಗೆ. ಒ¨ªೆ ನೆಲದಲ್ಲಿಯೇ ಹೇಗೋ ಅನುವು ಮಾಡಿಕೊಂಡು ಚುಕ್ಕಿ ಸೇರಿಸಿ ರಂಗೋಲಿಯಿಟ್ಟಳು. ಹಸಿಮಣ್ಣಿನ ವಾಸನೆ ಮತ್ತು ರಂಗೋಲಿ ಚಿತ್ತಾರ-ಎರಡೂ ಕೂಡ ಸಂಗೀತ-ಸಾಹಿತ್ಯಗಳಂತೆ ಜೊತೆ ಸೇರಿದ್ದವು. 

ಒಂದು ಫೋಟೋ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದರೆ ಹೇಗೆ? ಎಂಬ ಯೋಚನೆ ಅವಳ ತಲೆಯಲ್ಲಿ ಮೂಡಿತು. ತತ್‌ಕ್ಷಣ ಮೊಬೈಲ್‌ ತೆಗೆದುಕೊಂಡು ಬರಲು ಮನೆಯೊಳಕ್ಕೆ ಹೋದವಳು ಹೊರಕ್ಕೆ ಬರುವಷ್ಟರಲ್ಲಿ ರಂಗೋಲಿಯ ಮೇಲೆ ಯಾರೋ ಕಾಲಿರಿಸಿ¨ªಾರೆ. ನೋಡಿದರೆ ರಂಗೋಲಿ ಕಂಗಳ ಹುಡುಗನೊಬ್ಬ ನಸುನಗುತ್ತಾ ನಿಂತುಕೊಂಡಿ¨ªಾನೆ. ಈಗ ಅವಳ ಹೃದಯದಲ್ಲಿಯೂ ಕೂಡಾ ರಂಗವಲ್ಲಿಯ ಚಿತ್ತಾರ.

ಅದ್ಭುತ
ಅವನೊಬ್ಬ ಪ್ರವಾಸಿ. ತಾಜ್‌ಮಹಲ್‌ ನೋಡಬೇಕೆಂಬ ಹಿರಿದಾಸೆ ಹೊತ್ತಿದ್ದ ಆತ ಈಗ ಅದರ ಮುಂದುಗಡೆಯೇ ನಿಂತುಕೊಂಡಿದ್ದಾನೆ. ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಕಿರುಚಬೇಕು ಎನಿಸುವಷ್ಟು ಉÇÉಾಸ ಅವನೊಳಗೆ. ತಾಜ್‌ಮಹಲ್‌ನ ಸುತ್ತಲೂ ಮನಸೋ ಇಚ್ಛೆ ಓಡಾಡಿದ. ಅವನಿಗೇನೋ ಅವ್ಯಕ್ತ ಪುಳಕ. ಕೆಮರಾ ಹೊರತೆಗೆದು ಒಂದರ ಹಿಂದೊಂದರಂತೆ ಪೋಟೋ ತೆಗೆದ. ಅವರಿವರಲ್ಲಿ ವಿನಂತಿಸಿಕೊಂಡು ತನ್ನ ಫೋಟೋವನ್ನೂ ಕ್ಲಿಕ್ಕಿಸಿಕೊಂಡ. ತನ್ನಷ್ಟು ಸಂತೋಷಿ ಇನ್ಯಾರೂ ಇಲ್ಲ  ಎಂಬಂತೆ ನಗುಮೋರೆ ಹೊತ್ತು ಎದೆ ಉಬ್ಬಿಸಿ ಓಡಾಡತೊಡಗಿದ.

ಅಷ್ಟರಲ್ಲಿ ಅಲ್ಲೇ ಆವರಣವನ್ನು ಸ್ವತ್ಛಗೊಳಿಸುತ್ತಿದ್ದ ಕಾರ್ಮಿಕನೊಬ್ಬನ ಕಡೆಗೆ ಇವನ ನೋಟ ಹರಿಯಿತು. ಮನಸ್ಸಿನಲ್ಲೇ ಅಂದುಕೊಂಡ  ಈ ವ್ಯಕ್ತಿ ಅದೆಷ್ಟು ಅದೃಷ್ಟ ಮಾಡಿ¨ªಾನೆ. ಜಗತ್ತಿನ ಅದ್ಭುತವನ್ನು ಪ್ರತಿದಿನ ಕಾಣುವ, ಅದರ ಒಡನಾಟದಲ್ಲಿಯೇ ಇರುವ ಈತನಿಗೆ ಅದೆಷ್ಟು ಸಂತಸ ಇರಬಹುದು! ಆ ಕಾರ್ಮಿಕನಲ್ಲಿ ಕೇಳಿಯೂಬಿಟ್ಟ-
“”ಜಗತ್ತಿನ ಅದ್ಭುತದ ಒಡನಾಟದಲ್ಲಿ ಪ್ರತಿದಿನ ಇರುವ ನೀನು ತುಂಬಾ ಅದೃಷ್ಟವಂತನೇ ಇರಬೇಕು. ನಿನಗೆ ಈ ಕೆಲಸದಲ್ಲಿ ತುಂಬಾ ಸಂತಸ ಇರಬೇಕಲ್ಲ?”

ಪ್ರವಾಸಿಯ ಈ ಮಾತಿಗೆ ಆ ಕಾರ್ಮಿಕ, “”ಅದ್ಭುತ? ನನಗೇನೂ ಹಾಗನ್ನಿಸುವುದಿಲ್ಲ. ಈ ಕಟ್ಟಡವನ್ನು ಯಾಕೆ ಅದ್ಭುತ ಎನ್ನುತ್ತಾರೋ ನನಗೆ ಇವತ್ತಿಗೂ ತಿಳಿದಿಲ್ಲ. ಕಳೆದ 25 ವರ್ಷಗಳಿಂದ ಇಲ್ಲಿ ಕೆಲಸಕ್ಕಿದ್ದೇನೆ. ನನಗೆ ಒಂದು ದಿನವೂ ಯಾವ ಅದ್ಭುತವೂ ಗೋಚರವಾಗಿಲ್ಲ” ಎಂದು ತನ್ನ ಕೆಲಸ ಮುಂದುವರಿಸಿದ. ಹಾಗಾದರೆ, ಅದ್ಭುತ ಇರುವುದು ಎಲ್ಲಿ ಎಂದು ಪ್ರವಾಸಿ ಸುತ್ತಮುತ್ತಲೆಲ್ಲ ಹುಡುಕಾಡಿ, ಎಲ್ಲಿಯೂ ಕಾಣಿಸದೆ, ತನ್ನ ಮನಸ್ಸಿನ ಮುಂದೆ ವಿರಮಿಸಿದ‌.

ಮೂವತ್ತು
ಅವನೊಬ್ಬ ಶ್ರೀಮಂತ ವ್ಯಕ್ತಿ. ಐಷಾರಾಮಿ ಕಾರಿನಿಂದ ಇಳಿದ ಆತ ಮಾಲ್‌ ಒಂದರ ಒಳಹೊಕ್ಕ. ತನಗೆ ಬೇಕಾದುದೆಲ್ಲವನ್ನೂ ತೆಗೆದುಕೊಂಡ ಆತ ಬಿಲ್ಲು ಪಾವತಿಸಲು ಕೌಂಟರಿನ ಕಡೆಗೆ ಹೊರಟ. ಬಿಲ್ಲು 470 ರೂಪಾಯಿ ಆಗಿತ್ತು. 500 ರೂಪಾಯಿ ನೋಟನ್ನು ನೀಡಿದ ಆತ ಸುತ್ತಲೂ ಇದ್ದವರ ಕಡೆಗೊಮ್ಮೆ ನೋಟ ಬೀರಿದ. ಎಲ್ಲರೂ ತನ್ನನ್ನೇ ಗಮನಿಸುತ್ತಿದ್ದಾರೆ ಎಂಬುದನ್ನು ಅರಿತ ಆತನ ಮೃದು ಮಾತುಗಳು ಹೊರಬಂದವು.

“”30 ರೂಪಾಯಿ ನೀವೇ ಇಟ್ಕೊಳ್ಳಿ ಪರ್ವಾಗಿಲ್ಲ” ಆತನ ಉದಾರತೆಯನ್ನು ಕಂಡು ಅಲ್ಲಿದ್ದ ಬಹುತೇಕರ ಕಣ್ಣುಗಳು ಅರಳಿದ್ದವು. ಮಾಲ್‌ನಿಂದ ಹೊರಬಂದು ಕಾರು ಹತ್ತಿ ಹೊರಡುತ್ತಿದ್ದಂತೆ ಆತನಿಗೆ ನೆನಪಾಯಿತು- ಹೆಂಡತಿ ತರಕಾರಿ ತರಹೇಳಿದ್ದಾಳೆ. ತಾನು ತೆಗೆದುಕೊಂಡಿಲ್ಲ. ಅಲ್ಲೇ ರಸ್ತೆ ಬದಿಯಲ್ಲಿ ಕಾರ್‌ ಪಾರ್ಕ್‌ ಮಾಡಿದ ಆತ ಸಂತೆ ಕಡೆಗೆ ಹೊರಟ. ಐವತ್ತು ದಾಟಿದ್ದ ವ್ಯಕ್ತಿಯೊಬ್ಬ ತರಕಾರಿ ಮಾರುತ್ತ ಕೂತಿದ್ದ. “”ಬೀಟ್‌ರೂಟ್‌ ಎಷ್ಟಪ್ಪಾ?” ಕೇಳಿದ ಈತ. “”ಕೆ.ಜಿ.ಗೆ 30 ಧಣಿ” ಎಂದ ಆ ವ್ಯಾಪಾರಿ ತೂಕ ಮಾಡುವುದಕ್ಕೆ ಸಿದ್ಧನಾದಂತೆ ಕಂಡುಬಂದ.

“”20 ಆದರೆ ಬೇಕಿತ್ತು, 30 ಜಾಸ್ತಿಯಾಯ್ತು” ಹೀಗೆಂದ ಆ ವ್ಯಕ್ತಿ ಬೇಡ ಎಂದು ದುರದುರನೆ ಹೆಜ್ಜೆ ಹಾಕತೊಡಗಿದ.
“”ಇಲ್ಲಿ ಬನ್ನಿ ಧಣಿ, ನೀವು ಹೇಳಿದ ರೇಟಿಗೆ ಕೊಡ್ತೇನೆ” ವ್ಯಾಪಾರಿಯ ಮಾತು ಕೇಳಿದ ಆ ವ್ಯಕ್ತಿ ಸಂತೋಷದಿಂದ ತರಕಾರಿ ಕೊಂಡುಕೊಂಡ. ಕಾರುಹತ್ತಿ ಹೊರಡುವಾಗಲೂ ಕೂಡಾ ಆತನಲ್ಲಿದ್ದ ವಿಚಿತ್ರ ಸಂತೋಷ ಹಾಗೆಯೇ ಇತ್ತು.

ನಗುವುದೊ!
ಅವನೊಬ್ಬ ಯಕ್ಷಗಾನದ ಹಾಸ್ಯ ಕಲಾವಿದ. ಒಳ್ಳೆಯ ಹಾಸ್ಯ ಕಲಾವಿದ ಎಂಬ ಹೆಸರು ಆತನಿಗಿತ್ತು. ಒಂದು ಪಟ್ಟಣದಲ್ಲಿ ಯಕ್ಷಗಾನ ನಿಗದಿಯಾಗಿತ್ತು. ಹಲವು ಜನ ಅಭಿಮಾನಿಗಳು ಅವನ ನಟನೆಯನ್ನು ನೋಡುವುದಕ್ಕಾಗಿಯೇ ದೂರದೂರಿನಿಂದ ಬಂದಿದ್ದರು. ಆ ದಿನ ಆತನ ನಟನೆ ಅದ್ಭುತವಾಗಿತ್ತು. ಆತನ ಹಾಸ್ಯದ ಮಾತುಗಳು ನೆರೆದವರ ಮನಗೆದ್ದವು.

ಪಾತ್ರವನ್ನು ಅಚ್ಚುಕಟ್ಟಾಗಿ ಮುಗಿಸಿದ ಆತ ಚೌಕಿಗೆ ಮರಳಿದವನೇ ಆತುರಾತುರವಾಗಿ ಬಣ್ಣ ತೆಗೆದು, ವೇಷ ಕಳಚಿದ. ಸೀದಾ ಮೇಳದ ಯಜಮಾನರ ಬಳಿಗೆ ಬಂದವನು ದುಃಖದಿಂದಲೇ ನುಡಿದ, “”ಧಣಿಗಳೇ, ಅರ್ಜೆಂಟಾಗಿ ಊರಿಗೆ ಹೋಗಬೇಕು. ನನ್ನ ಅಮ್ಮ ತೀರಿಹೋಗಿದ್ದಾರಂತೆ. ರಂಗ ಪ್ರವೇಶಿಸುವ ಅರ್ಧಗಂಟೆ  ಮೊದಲು ಕಾಲ್‌ ಬಂತು” ಹೀಗೆಂದವನು ಒಪ್ಪಿಗೆಗಾಗಿ ಅವರ ಮುಖವನ್ನೇ ನೋಡಿದ.

“”ಹೌದಾ! ನೀನು ವೇಷ ಮಾಡುವಾಗ ನೀನು ದುಃಖದಲ್ಲಿದ್ದಿ ಅಂತ ಗೊತ್ತಾಗಲೇ ಇಲ್ಲವಲ್ಲ” ಯಜಮಾನರಲ್ಲಿ ಕುತೂಹಲ ಇತ್ತು.  ಆತ ಕಣ್ಣಂಚಿನಲ್ಲಿ ನೀರು ತುಂಬಿಸಿಕೊಂಡು ನುಡಿದ, “”ನೀವು ನನಗೆ ದುಡ್ಡು ಕೊಡುವುದು ಜನರನ್ನು ನಗಿಸಲಿಕ್ಕಾಗಿಯೇ ಹೊರತು ಅಳಿಸುವುದಕ್ಕೆ ಅಲ್ಲವಲ್ಲ…”

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.