ಸುಬ್ಬು-ಶಾಲಿನಿ ಪ್ರಕರಣಂ-7


Team Udayavani, May 13, 2018, 6:00 AM IST

x-4.jpg

ನನ್ನ ಚಡ್ಡಿ ದೋಸ್ತ್ ಸುಬ್ಬು ಚಂದಮಾಮದ ಬೇತಾಳನ ಹಾಗೆ ! ಚಂದಮಾಮ ಮಕ್ಕಳ ಮಾಸಪತ್ರಿಕೆ ಓದಿಲ್ಲದವರಿಗಾಗಿ ಅದರ ಒಂದು ಪ್ಯಾರಾ: 
ಹಠಬಿಡದ ವಿಕ್ರಮ ವಟವೃಕ್ಷದಲ್ಲಿ ಕೊಂಬೆಯಲ್ಲಿ ನೇತಾಡುತ್ತಿದ್ದ  ಬೇತಾಳನನ್ನು ಇಳಿಸಿ, ಹೆಗಲಿಗೇರಿಸಿ ನಗರದ ಕಡೆಗೆ ಹೋಗುವಾಗ ಮಾರ್ಗ ಸವೆಸಲು ಒಂದು ಕತೆಯನ್ನು ಹೇಳುತ್ತೇನೆ ಕೇಳು ಎಂದು ಕತೆ ಹೇಳುತ್ತದೆ. ಕತೆಯ ಬಗೆಗೆ ಒಂದು ಪ್ರಶ್ನೆ ಕೇಳಿ ಅದಕ್ಕೆ ಪರಿಹಾರ ಸೂಚಿಸಲು ವಿಕ್ರಮನನ್ನು ಕೇಳುತ್ತದೆ ಬೇತಾಳ. ಈ ಸಮಸ್ಯೆಗೆ ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ ಎಂದು ಎಚ್ಚರಿಸುತ್ತದೆ. ವಿಕ್ರಮ ಪರಿಹಾರ ಹೇಳಿದ ತಕ್ಷಣ ಬೇತಾಳ ಹಾರಿ ಹೋಗಿ ಮತ್ತೆ ವಟವೃಕ್ಷದಲ್ಲಿ ನೇತಾಡುತ್ತದೆ. ಇದೇ ತರ ಸುಬ್ಬು ಕಾಲಕಾಲಕ್ಕೆ ನನ್ನ ಮುಂದೊಂದು ಸಮಸ್ಯೆ ಒಡ್ಡಿ, ಥರಗುಟ್ಟಿಸಿ, ತಲೆಯನ್ನು ಗೊಬ್ಬರ ಮಾಡಿ ಪರಿಹಾರ ಡಿಮ್ಯಾಂಡ್‌ ಮಾಡುತ್ತಾನೆ-ಚಂದಮಾಮದ ಬೇತಾಳನಂತೆ.

ಇಂದೂ ಹೀಗೇ ಆಯಿತು. ಬೆಳಿಗ್ಗೆ ಫ್ಯಾಕ್ಟ್ರಿಯ ಕಾಫಿ ಸಮಯ ದಲ್ಲಿ ಸುಬ್ಬು ವಕ್ಕರಿಸಿ, ಎದುರು ಕುಕ್ಕರಿಸಿದ. ಸುಬ್ಬು ಬಂದರೆ ಕೆಲಸ ಗ್ಯಾರಂಟಿ ತೋಪು. “”ನೆನ್ನೆ ಏನಾಯ್ತು ಗೊತ್ತಾ?” ಮಾತು ತೆಗೆದ.
“”ಗೊತ್ತಿಲ್ಲ. ಗೊತ್ತು ಮಾಡ್ಕೊಳ್ಳೋ ಆವಶ್ಯಕತೆ ಇಲ್ಲ” ನಾನು ನನ್ನ ಕೆಲಸದಲ್ಲಿ ಗಂಭೀರನಾಗಿದ್ದೆ.
“”ನೀನು ಯಾವುದೋ ಜನ್ಮದಲ್ಲಿ ನನ್ನ ಶತ್ರುವಾಗಿದ್ದೆ” 
“”ಹತ್ತು ನಿಮಿಷ ಟೈಮು! ಡಿಪಾರ್ಟ್‌ಮೆಂಟ್‌ ಮೀಟಿಂಗು ಕರೆದಿದ್ದೇನೆ. ಅಷ್ಟರಲ್ಲಿ…”
“”ತೊಲಗು ಅಂತೀಯಾ?” ಸುಬ್ಬು ತಾನಾಗೇ ಹೇಳಿದ.
ನಾನು ಮೌನವಾಗಿದ್ದೆ. “”ನಿನ್ನೆ ಹೊಟೇಲಲ್ಲಿ ಊಟ ಮಾಡಿದೊ. ಬಿಲ್ಲು ಎಷ್ಟಾಯಿತು ಗೊತ್ತಾ?” ಎಂದು ಮತ್ತೆ ಕೇಳಿದ ಸುಬ್ಬು.

“”ಯಾರ್ಯಾರು ಹೋಗಿದ್ರಿ?”
“”ಇನ್ಯಾರು ನಾನು ಮತ್ತು ಸಂಸಾರ”
“”ಯಾರ ಸಂಸಾರ?” ಗಂಭೀರನಾಗಿ ಕೇಳಿದೆ ಕಂಪ್ಯೂಟರಿನಿಂದ ತಲೆ ಎತ್ತದೆ.
“”ಕೆಟ್ಟವನೇ, ಡಬ್ಬಲ್‌ ಮೀನಿಂಗ್‌ ಮಾತಾಡ್ತೀಯ. ನನ್ನ ಸಂಸಾರ… ಅಂದೆನಲ್ಲ”
“”ಎ-ಕ್ಲಾಸ್‌ ಹೊಟೇಲಾಗಿದ್ರೆ ನೂರರ ಲೆಕ್ಕ, ಸ್ಟಾರ್‌ ಹೊಟೇಲಾದರೆ ಕೆಲವು ಸಾವಿರಗಳು”
“”ಎ-ಕ್ಲಾಸ್‌ ಹೊಟೇಲು. ಬಿಲ್ಲು ಎಂಟುನೂರು. ನಾರ್ತ್‌ ಊಟ, ಐಸ್‌ಕ್ರೀಮು, ಬೀಡಾ ಎಲ್ಲಾ”
“”ಇವೆಲ್ಲ ಯಾಕೆ ಹೇಳ್ತಿದ್ದೀಯಾ?”
“”ಅಷ್ಟಕ್ಕೆ ಹೊಟ್ಟೆ ತುಂಬಲೇ ಇಲ್ಲ. ಮನೆಗೆ ಬಂದು ಮತ್ತೆ ಊಟ ಮಾಡಿದೆ, ನನ್ನ ಹೊಟ್ಟೇಲಿ ಭೂತ ಸೇರಿಕೊಂಡಿದೆ ಅನ್ನಿಸ್ತಾ ಇದೆ. ಬೆಳಿಗ್ಗೆ ಮನೇಲಿ ತಿಂಡಿ ತಿಂದು ಬಂದು ಇಲ್ಲಿ ಫ್ಯಾಕ್ಟ್ರಿ ಕ್ಯಾಂಟೀನಲ್ಲಿ ಮತ್ತೆ ತಿಂದೆ. ಒಂದು ತಿಂಗಳಿಂದ ಹೀಗಾಗ್ತಿದೆ”
“”ಮೂರಿಂಚು ಹೊಟ್ಟೆ ಮುಂದೆ ಬಂದಿದೆ. ಅದನ್ನ ನೋಡಿದ್ರೇ ಗೊತ್ತಾಗುತ್ತೆ.”
“”ಇಷ್ಟಾದ್ರೂ ಹೊಟ್ಟೆ ತುಂಬಿದೆ ಅನ್ನಿಸ್ತಾನೇ ಇಲ್ಲ. ಸಂಜೆ ಹೋಗ್ತಾ ಹೊಟೇಲಲ್ಲಿ ಬೋಂಡಾ-ಸೂಪು, ಬೆಣ್ಣೆ ಮಸಾಲೆ ತಿಂದು, ಮನೇಲಿ ಶಾಲಿನಿ ಕೊಡೋ ತಿಂಡೀನೂ ತಿನ್ತೀನಿ…ಆದ್ರೂ…”
“”ಹೊಟ್ಟೆ ತುಂಬಿದೆ ಅನ್ನಿಸೋಲ್ಲ ಅಲ್ಲವಾ?”
“”ಹೌದು… ಅದಕ್ಕೇ…”
“”ಸಾರ್‌, ಮೀಟಿಂಗಿಗೆ ಎಲ್ಲಾ ಬಂದಿದಾರೆ. ಸುಬ್ಬು ಸಾರು…” ಸುಬ್ಬುವಿನ ಮಾತಿನ ನಡುವೆ ನನ್ನ ಪಿಎ ಮಣಿ ಬಂದು ಹೇಳಿದಳು.

“”ಆಯ್ತಮ್ಮ… ತೊಲಗ್ತಿàನಿ” ಎಂದ ಸುಬ್ಬು ನನ್ನನ್ನು ನೋಡಿ, “”ಲಂಚ್‌ ಟೈಮಲ್ಲಿ ಸಿಗು ನಿನ್ನ ಜನ್ಮ ಜಾಲಾಡಿಸ್ತೀನಿ. ನೀನೊಬ್ಬನೇ ಫ್ಯಾಕ್ಟ್ರಿ ತಲೆಮೇಲೆ ಹೊತ್ತಿರೋನು ಅಂದ್ಕೊಂಬೇಡ. ಬಾಸುಗಳ ತಲೆ ಸವರಿ ನನಗಿಂತ ಮೊದಲೇ ಎರಡು ಪ್ರಮೋಶನ್ನು ಗಿಟ್ಟಿಸಿದ ಮಾತ್ರಕ್ಕೆ ನೀನು ಬೃಹಸ್ಪತಿ ಅಲ್ಲ. ತಿಳ್ಕೊ” ಎಂದು ಸಿಡಿಮಿಡಿ ಮಾಡುತ್ತ  ಸುಬ್ಬು ಎದ್ದು ಹೋದ.
ಮೀಟಿಂಗು ಶುರುವಾಯಿತು. ಸುಬ್ಬುಗೆ ನನ್ನ ತಲೆಯಲ್ಲಿ ಜಾಗ ಇರಲಿಲ್ಲ. ಲಂಚ್‌ ಟೈಮು. ಕ್ಯಾಂಟೀನಲ್ಲಿ¨ªೆ. ಊರಿಗೆ ಬಂದವಳು ನೀರಿಗೆ ಬರಲೇಬೇಕು ಅಣಕಿಸುತ್ತ ಸುಬ್ಬು ವಕ್ಕರಿಸಿ, ನನ್ನತ್ತ ಕೆಕ್ಕರಿಸಿದ. 
“”ಈಗಲಾದರೂ ನನ್ನ ಮಾತಿಗೆ ಸಮಯ ಇದೆಯೋ?” 
“”ಆಯ್ತು ಏನದು ಹೇಳು?” ಲಕ್ಷ್ಮೀಪುತ್ರ ಸುಬ್ಬುವನ್ನು ಉಪೇಕ್ಷೆ ಮಾಡುವಂತಿರಲಿಲ್ಲ. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಹೇಳಿದೆ. 

“”ಎಷ್ಟು ತಿಂದ್ರೂ ಹೊಟ್ಟೆ ತುಂಬಿದ ತೃಪ್ತಿನೇ ಇರೋಲ್ಲ. ಹೊಟೇಲಲ್ಲಿ ನಾಲ್ಕು ಇಡ್ಲಿ, ವಡೆ, ಕೇಸರೀಬಾತು, ದೋಸೆ ಜೊತೆಗೆ ಪೂರಿ ಇವಿಷ್ಟು ತಿಂದರೂ ಇನ್ನೂ ತಿನ್ನಬೇಕು ಅನ್ನಿಸುತ್ತೆ. ಏನಾಗಿದೆ ನನಗೆ ಗೊತ್ತಾಗ್ತಿಲ್ಲ. ಒಂದೊಂದ್ಸಲ ನಿನ್ನ ಕಂತ್ರೀ ಐಡಿಯಾಗಳು ವರ್ಕಾಗುತ್ತವೆ. ಈ ನನ್ನ ಸಮಸ್ಯೆಗೆ ಒಂದು ಉಪಾಯ ಹೇಳು”
ಚಂದಮಾಮದ ಬೇತಾಳನಂತೆ ಕಂಡ ಸುಬ್ಬು! ಸುಬ್ಬುವಿನಿಂದ ನನಗೆ ಮುಕ್ತಿಯಿಲ್ಲ ಎನಿಸಿತು. “”ಬಾಯಿಯೂ ನಿನ್ನದೇ… ಹೊಟ್ಟೆಯೂ ನಿನ್ನದೇ” ಎಂದೆ ನಗುತ್ತ. 
“”ಈ ವಿಷಯ ಎಲಿಗೂ ಗೊತ್ತಾದೆ ನಗ್ತಾರೆ! ಈಗಾಗ್ಲೆ ಶಾಲಿನಿ ನಿಮಗೆ ಇನ್ಮುಂದೆ ಹಂಡೇಲಿ ಬೇಯಿಸಬೇಕಾಗುತ್ತೆ ಅಂತಿದ್ದಾಳೆ.ಮುಂದೊಂದು ದಿನ, ನನ್ನ ಕೈಲಿ ಬೇಯಿಸೋಕಾಗೋಲ್ಲ ಅಂತಾಳೆ.ಇದಕ್ಕೆ ಏನಾದ್ರೂ ಉಪಾಯ ಹೇಳಿಕೊಡೋ ಪ್ಲೀಸ್‌”
“”ಇದಕ್ಕೇನು ಉಪಾಯ ಹೇಳಿ? ನೀನು ತಿನ್ನೋ ಪ್ರಮಾಣ ನಿಂಗೇ ಅಪಾಯ” ನಾನು ಮಾತು ಮುಗಿಸುವುದರಲ್ಲಿ ಮೊಬೈಲು ರಿಂಗಾಯಿತು. 
“”ಅದು ಬಾಸ್‌ದ್ದೇ ಇರಬೇಕು. ನೆಮ್ಮದಿಯಾಗಿ ಊಟ ಮಾಡೋಕೂ ಬಿಡೋಲ್ಲವಲ್ಲೋ, ನಿನ್ನ ಬಾಸು” ಸುಬ್ಬು ಕೆರಳಿ ನುಡಿದ.

ನಿಜ, ಅದು ಬಾಸ್‌ ಫೋನಾಗಿತ್ತು. “ಅರ್ಧಗಂಟೇಲಿ ಎಂ.ಡಿ. ಬರ್ತಾರೆ, ಅದಕ್ಕೇ ಅರ್ಜೆಂಟು ಕೆಲವು ಮಾಹಿತಿ ಬೇಕು, ಅರ್ಜೆಂಟು ಎಲ್ಲಿದ್ದರೂ ಹೇಗಿದ್ದರೂ ಬಾ’ ಎಂದು ಫೋನಾಯಿಸಿದ್ದರು. 
“”ಸಾರಿ ಸುಬ್ಬು, ಎಂಡಿ ಹೋಗಲಿ. ಆಮೇಲೆ ನೋಡೋಣ”
ಅಲ್ಲೀವರೆಗೆ ನಾನು ಬೊಮ್ಮಡಿ ಹೊಡೀತಿರ್ಲಾ?” ಸುಬ್ಬು ಪಿತ್ತ ನೆತ್ತಿಗೇರಿತ್ತು!
“”ಸಾರಿ ಸುಬ್ಬು. ಫ್ಯಾಕ್ಟ್ರೀಲಿ ಪರ್ಸನಲ್‌ ವಿಷಯಕ್ಕೆ ಸಮಯ ಸಿಗೋಲ್ಲ”
“”ನಿನಗೆ ಸಾಯೋಕೂ ಪುರುಸೊತ್ತು ಸಿಗೋಲ್ಲ” ಸುಬ್ಬುವಿನ ಸಿನಿಕತನಕ್ಕೆ ಸಿಟ್ಟಾಗದೆ ಪಟ್ಟೆಂದು ಕೈತೊಳೆದು ಹೊರಟಾಗ ಸುಬ್ಬು ಮೂರನೆಯ ಸಲ ಸಾಂಬಾರು ಅನ್ನ ಕಲೆಸುತ್ತಿದ್ದ. ದೂರದಲ್ಲಿ ಕ್ಯಾಂಟೀನು ಹುಡುಗರು ಸುಬ್ಬುವನ್ನು ನೋಡಿ ನಗುತ್ತಿದ್ದರು.
ಎಂ.ಡಿ ಸಾಹೇಬರ ಕಾರು ಇನ್ನೂ ಗೇಟಾಚೆ ಹೋಗಿರಲೇ ಇಲ್ಲ, ಸುಬ್ಬು ಪ್ರತ್ಯಕ್ಷನಾದ. “”ಎಂ.ಡಿ ಜೊತೆ ಬಾಲ್ಡಿ ಬಾಸು ಎÇÉಾ ಹೋದ್ರು! ಈಗ್ಲಾದ್ರೂ ನಿನ್ನ ಸಮಸ್ಯೆ ಮಾತಾಡಬಹುದಾ?” ಸುಬ್ಬು ಅಣಕಿಸಿದ.
“”ನನ್ನ ಸಮಸ್ಯೆ? ಬೆಳಿಗ್ಗೆ ನಿನ್ನ ಸಮಸ್ಯೆ ಅಂತಿ¨ªೆ” ಬೆರಗಾಗಿ ಕೇಳಿದೆ.
“”ನನ್ನ ಸಮಸ್ಯೆàನೆ ನಿನ್ನ ಸಮಸ್ಯೆ. ಕಡಿಮೆ ತಿಂದರೂ ಹೊಟ್ಟೆ ತುಂಬಿದ ತೃಪ್ತಿಯಾಗಬೇಕು. ಶಾಲಿನಿ ಅಣಕಿಸಬಾರದು. ಕ್ಯಾಂಟೀನ್‌ ಹುಡುಗರು ಕಿಸಿಯಬಾರದು. ಅದಕ್ಕೊಂದು ಐಡಿಯಾ ಕೊಡು” 
“”ಆದ್ರೆ ನನಗೆ ಟೈಮಿಲ್ಲ”
“”ಸುಬ್ಬು, ನಿಂತೇಟಿಗೆ ತಲೆ ಓಡೋಲ್ಲ. ಹಲುಬಿದೆ.”

“”ಆಯ್ತು. ಸಂಜೆ ಮನೆಗೆ ಹೋಗೋದೊಳಗೆ ಐಡಿಯಾ ಕೊಡಬೇಕು. ಇಲ್ದಿದ್ರೆ ಗೊತ್ತಲ್ಲ ? ನಿನ್ನ ಕೈಸಾಲಕ್ಕೆ ಕೊಕ್ಕೆ” ಬೆದರಿಸಿದ ಸುಬ್ಬು.
ಸುಬ್ಬು ಆಚೆ ಹೋಗುತ್ತಲೇ ಅವನ ಸಮಸ್ಯೆಯೂ ನೆನಪಿಂದ ಆಚೆ ಹೋಯಿತು.
ಸಂಜೆ ಐದು. ವರ್ಕ್‌ಶಾಪು ಖಾಲಿಯಾಗಿತ್ತು. ಮೆಷಿನ್ನುಗಳು ಸ್ತಬ್ಧವಾಗಿದ್ದವು. ನಿಶ್ಯಬ್ದ ವಾತಾವರಣದಲ್ಲಿ ಮುಂದಿನ ತಿಂಗಳಿನ ಪ್ರೊಡಕ್ಷನ್ನಿಗೆ ಕಚ್ಚಾ ವಸ್ತುಗಳನ್ನು ಲೆಕ್ಕ ಹಾಕುತ್ತಿ¨ªೆ.
“”ಸಿಕ್ತಾ?” ನೀರವ ವಾತಾವರಣದಲ್ಲಿ ಬಂದ ಅಶರೀರವಾಣಿಗೆ ಬೆಚ್ಚಿ, ಶಬ್ದ ಬಂದೆಡೆ ನೋಡಿದರೆ ಸುಬ್ಬು.  ಬಾಗಿಲಲ್ಲಿ ನಿಂತು ಕೈಯಲ್ಲಿ ಕೀಚೈನು ತಿರುಗಿಸುತ್ತಿದ್ದ.
“”ಇಲ್ಲಾ, ಟಾರ್ಗೆಟ್ಟಿಗೆ ಇನ್ನೂ ಇಪ್ಪತ್ತು ಪರ್ಸೆಂಟ್‌ ಮೆಟೀರಿಯಲ್‌ ಷಾರ್ಟೆಜ್‌”
“”ಬರೀ ಇಷ್ಟರಲ್ಲೇ ನಿನ್ನ ಜೀವನ!  ಸಮಸ್ಯೆಗೆ ಪರಿಹಾರ ಹೇಳು”  ಸುಬ್ಬು ಕನಲಿ ಹೇಳಿದ.
“”ಯಾವ ಸಮಸ್ಯೆ?” ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ.
ರಾತ್ರಿಯೆಲ್ಲ ರಾಮಾಯಣ ಕೇಳಿ, ಬೆಳಿಗ್ಗೆ ರಾಮ-ಸೀತೆಯರ ಸಂಬಂಧ ಕೇಳಿದನಂತೆ ಒಬ್ಬ! ಹಾಗಾಗಿದ್ದೀಯ ನೀನು”
“”ಕೋಪ ಬೇಡ ಬಾ ಒಳಗೆ. ಮಣಿ ಫ್ಲಾಸ್ಕಲ್ಲಿ ಟೀ ಇಟ್ಟಿದಾಳೆ. ಎರಡು ಕಪ್ಪಿಗೆ ಬಗ್ಗಿಸು. ನಿನ್ನ ಸಮಸ್ಯೆಗೆ ಐಡಿಯಾ ಕೊಡ್ತೀನಿ”
“”ಏನಾದ್ರೂ ಯೋಚಿಸಿದ್ದೀಯಾ?” ಟೀ ಬಗ್ಗಿಸುತ್ತ ಸುಬ್ಬು ಕೇಳಿದ.
“”ಯೋಚಿಸ್ತಾ ಇದ್ದೀನಿ. ಎಷ್ಟು ತಿಂದರೂ ಹೊಟ್ಟೆ ತುಂಬಿದ ಹಾಗಾಗ್ತಿಲ್ಲ. ಅತ್ತಿಗೆ ಹಂಗಿಸ್ತಾ ಇ¨ªಾಳೆ. ಅಲ್ವಾ?” ಟೀ ಸವಿಯುತ್ತ ಸುಬ್ಬು ಸಮಸ್ಯೆ ಬಗ್ಗೆ ತೀವ್ರವಾಗಿ ಯೋಚಿಸಿದೆ. ತಲೆಯಲ್ಲಿ ಮಿಂಚೊಂದು ಫ‌ಳ್ಳೆಂದಿತು “”ಸಿಕೂ¤… ಸುಬ್ಬು… ಸಿಕೂ¤…” ಮೈ ಕಂಪಿಸಿತು. ಮೆಲ್ಲನೆ ಅವನ ಕಿವಿಯಲ್ಲಿ ಹೇಳಿ, “”ಇವತ್ತು ಈ ಪ್ರಯೋಗ ಮಾಡಿ ನಾಳೆ ರಿಸಲ್ಟ್ ಹೇಳು”
“”ಇದೇನಾದ್ರೂ ವರ್ಕಾಗದಿದ್ರೆ…” ಎನ್ನುತ್ತ ಸುಬ್ಬು ಆಚೆ ಹೋದ. ಬೇತಾಳನಿಂದ ಮುಕ್ತಿ ಸಿಕ್ಕಿತೆಂದು ಆನಂದಪಟ್ಟೆ.
ಮಾರನೆಯ ದಿನ ಬೆಳಿಗ್ಗೆ ಸುಬ್ಬು ಫ್ಯಾಕ್ಟ್ರಿಗೆ ಬಂದಿರಲಿಲ್ಲ.  ಏನಾಗಿರಬಹುದು? ಯೋಚಿಸುತ್ತಿರುವಾಗಲೇ ಸುಬ್ಬು ಕಾಣಿಸಿದ.

“”ಪರ್ವಾಗಿಲ್ಲ ಕಣೋ. ನಿನಗೂ ತಲೆ ಇದೆ”
“”ಏನಾಯ್ತು?”
“”ಬಿಲ್‌ ಅನ್ನು ಮೊದಲೇ ತೆಗೆದುಕೊಂಡೆ. ಅದನ್ನು ಎದುರಿಗಿ ಟ್ಕೊಂಡು ತಿನ್ನಲು ಶುರುಮಾಡಿದೆ. ಅಬ್ಟಾ ! ಇಷ್ಟೊಂದು. ತಿನಿ¤ದ್ದೀನಲ್ಲಾ ಅಂತ ಹೆದ್ರಿಕೆಯಾಯ್ತು. ಅರ್ಧ ಐಟಮ್ಸ್‌ ತಿನ್ನೋ ದ್ರಲ್ಲೇ ಹೊಟ್ಟೆ ತುಂಬಿತ್ತು. ಮನೆಯಲ್ಲಿಯೂ ತಿಂಗಳ ಬಿಲ್‌ನ್ನು ಎಡಗೈಯಲ್ಲಿ ಹಿಡಿದುಕೊಂಡು ಓದುತ್ತ ಊಟ ಮಾಡುವ ಅಭ್ಯಾಸ ಶುರುಮಾಡಿದ್ದೀನಿ. ಸ್ವಲ್ಪ ಕೂಳು ಹೋಗುವಷ್ಟರಲ್ಲಿಯೇ ಹೊಟ್ಟೆ ಫ‌ುಲ್‌!”
“”ಇಷ್ಟೇ ಅಲ್ಲಾ ಸುಬ್ಬು, ಬೇಗ ಕಾಯಿಲೆ ವಾಸಿಯಾಗಬೇಕಾದ್ರೆ ಮೊದಲೇ ಡಾಕ್ಟರ್‌ ಬಿಲ್ಲು ಕೇಳ್ಬೇಕು”
“”ಥ್ಯಾಂಕ್ಸ್‌ ಕಣೊ, ಏನಾದರೂ ಕೈಸಾಲ ಬೇಕಿತ್ತಾ?” ಎಂಬ ಆಫ‌ರ್‌ ಕೊಟ್ಟು ಸುಬ್ಬು ತೊಲಗಿದ. ನಾನು ಉಸ್ಸೆಂದು ನಿಟ್ಟುಸಿರಿಟ್ಟೆ.  

ಎಸ್‌. ಜಿ. ಶಿವಶಂಕರ್‌

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.