CONNECT WITH US  

ರಷ್ಯನ್‌ ಕತೆ: ನಾನೂ ಮದುವೆಯಾದೆ ಕಾನೂನಿನಂತೆ

ನಾವೆಲ್ಲರೂ ವೈನ್‌ ಕುಡಿದು ಮುಗಿಸಿದ ಮೇಲೆ ನಮ್ಮ ನಮ್ಮ ತಂದೆ-ತಾಯಿ ತಮ್ಮ ತಮ್ಮಲ್ಲೇ ಏನನ್ನೋ ಮಾತಾಡಿಕೊಂಡವರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಹೊರಟುಹೋದರು. ಆಮೇಲೆ, ಅರೆತೆರೆದ ಬಾಗಿಲಿನಿಂದ ಒಳ ತೂರಿದ ಕೈಯೊಂದು ಟೇಬಲಿನ ಮೇಲಿದ್ದ ಮೋಂಬತ್ತಿಯನ್ನು ಎತ್ತಿಕೊಂಡು ಹೋಯಿತು. ನಾವಿಬ್ಬರೇ ಕತ್ತಲಲ್ಲಿ ಕುಳಿತಿದ್ದೆವು.
    
ಇಲ್ಲ, ಈಗ ತಪ್ಪಿಸಿಕೊಳ್ಳುವಂತಿಲ್ಲ ಎಂದುಕೊಂಡ ನಾನು ತುಸು ಕೆಮ್ಮಿ, ಗಂಟಲು ಸರಿಮಾಡಿಕೊಂಡು ಸರಸರನೆ ಮಾತಾಡಿದೆ, ""ಅಂತೂ ನಂಗೊಂದು ಸುಸಂದರ್ಭ ಸಿಕ್ಕಂತಾಯಿತು ಜೋ ಆಂದ್ರೆಯೇವಾ°. ಈಗಿಲ್ಲಿ ನಾವಿಬ್ಬರೇ. ಈ ಕತ್ತಲು ಬೇರೆ ನಮ್ಮ ಸಂಕೋಚವನ್ನ, ನಾಚಿಕೆಯನ್ನ ಮರೆಮಾಚುತ್ತಿರುವ ಹಾಗಿದೆ''

    ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟೆ ನಾನು. ಜೋ ಆಂದ್ರೆಯೇವಾ°ಳ ಎದೆ ಡವಗುಟ್ಟುತ್ತಿದ್ದದ್ದೂ ಅವಳ ಹಲ್ಲು ಕಟಕಟಿಸುತ್ತಿದ್ದದ್ದೂ ನನಗೆ ಚೆನ್ನಾಗಿಯೇ ಕೇಳಿಸುತ್ತಿತ್ತು. ಪಾಪದ ಹುಡುಗಿ, ನನ್ನನ್ನೇನೂ ಪ್ರೀತಿಸುತ್ತಿಲ್ಲ. ನಾಯಿ ತನ್ನನ್ನು ಬಡಿದುಹಾಕುವ ದೊಣ್ಣೆಯನ್ನು ದ್ವೇಷಿಸುವ ಹಾಗೆ ನನ್ನನ್ನು ದ್ವೇಷಿಸುತ್ತಿದ್ದಾಳೆ. ಇದ್ದಕ್ಕಿದ್ದಂತೆ ನಾನೊಂದು ಮಂಗವಾಗಿಬಿಟ್ಟಂತೆ ಅನ್ನಿಸಿತು. ಊದಿಕೊಂಡ ಮುಖದ, ಸಿಡುಬು ಕಲೆಯ, ಕುರುಚಲು ಗಡ್ಡದ ನಾನು ಮೃಗಕ್ಕಿಂತ ಕಡೆಯಾಗಿಬಿಟ್ಟಂತೆ! ನನ್ನ ಮೂಗಂತೂ ಆಲ್ಕೋಹಾಲಿನಿಂದ, ವಾಸಿಯಾಗದ ಶೀತದಿಂದ ಕೆಂಪಗೆ ಊದಿಕೊಂಡುಬಿಟ್ಟಿತ್ತು. ಮಾತಾಡುತ್ತಿದ್ದವನು ಮಧ್ಯದಲ್ಲೇ ನಿಲ್ಲಿಸಿಬಿಟ್ಟದ್ದಕ್ಕೆ ಕಾರಣ ಇದ್ದಕ್ಕಿದ್ದಂತೆ ಅವಳ ಬಗ್ಗೆ ನನ್ನಲ್ಲಿ ಹುಟ್ಟಿದ ಅನುಕಂಪ. 

""ಪಕ್ಕದ ತೋಟಕ್ಕೆ ಹೋಗೋಣ. ಇಲ್ಲಿ ಉಸಿರು ಕಟ್ಟೋ ಹಾಗಿದೆ'' ಎಂದೆ.
    ಹೊರಗೆ ತೋಟದ ದಾರಿಯಲ್ಲಿ ನಡೆಯತೊಡಗಿದೆವು. ಮೊದಲು ಬಾಗಿಲ ಹಿಂದೆ ನಮ್ಮ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದ ನಮ್ಮ ತಂದೆ-ತಾಯಿಯರು ತಕ್ಷಣ ಒಂದು ಪೊದೆಯೊಳಗೆ ನುಸುಳಿಕೊಂಡರು. ಜೋವಿನ ಮುಖದ ಮೇಲೆ ಬೆಳದಿಂಗಳಾಡುತ್ತಿತ್ತು. ನಾನೊಬ್ಬ ದಡ್ಡ, ನಿಜ. ಆದರೂ ಅವಳ ಮುಖದಲ್ಲಿದ್ದ ನೋವನ್ನು ಗ್ರಹಿಸಿದೆನೆನ್ನಬೇಕು.

    ಲಜ್ಜೆಯಿಂದ ನೆಲ ನೋಡುತ್ತಿದ್ದ ಜೋ ತನ್ನ ಪಾತ್ರವನ್ನು ಸಮರ್ಥವಾಗಿಯೇ ಅಭಿನಯಿಸುತ್ತಿದ್ದಳೆನ್ನಿ. ನಾವಿಬ್ಬರೂ ಹೊಳೆಯ ಬದಿಯಲ್ಲಿದ್ದ ಒಂದು ಬೆಂಚಿನ ಮೇಲೆ ಕುಳಿತುಕೊಂಡೆವು. ಹೊಳೆಯಾಚೆಗೆ ಒಂದು ಚರ್ಚು ಬೆಳ್ಳಗೆ ಹೊಳೆಯುತ್ತಿತ್ತು. ಅದರ ಹಿಂದೆಯೇ ಕೌಂಟ್‌ ಕುಲ್ದಾರೋವ್‌ನ ಬಂಗಲೆ. ಜೋ ಪ್ರೀತಿಸುತ್ತಿದ್ದ ಕುಲ್ದಾರೋವ್‌ನ ಕಾರಕೂನ ಬೋಲಿ°ತ್ಸಿನ್‌ ಆ ಬಂಗಲೆಯಲ್ಲೇ ಇದ್ದ. ನಾವು ಬೆಂಚಿನ ಮೇಲೆ ಕೂರುತ್ತಿರುವಂತೆಯೇ ಅವಳ ದೃಷ್ಟಿ ಆ ಬಂಗಲೆಯತ್ತ ಹರಿಯಿತು. ನನ್ನ ಎದೆ ಅನುಕಂಪದಿಂದ ಕುಗ್ಗಿ ಮುರುಟಿಕೊಂಡಿತು. ದೇವರೇ ದೇವರೇ! ನಮ್ಮ ತಂದೆ-ತಾಯಿಗಳನ್ನು ನೋಡಿ ನಗು! ಅವರನ್ನು ಒಂದು ವಾರವಾದರೂ ನರಕಕ್ಕೆ ಕಳಿಸು!

""    ನನ್ನ ಮನಸ್ಸು ಒಬ್ಬಳ ಮೇಲಿದೆ. ಅವಳನ್ನು ಕಂಡರೆ ನನಗೆ ತುಂಬಾ ಪ್ರೀತಿ. ಅವಳು ನನ್ನನ್ನು ಪ್ರೀತಿಸದಿದ್ದರೆ ನಾನು ಸತ್ತಂತೆಯೇ. ಆಕೆ ಬೇರೆ ಯಾರೂ ಅಲ್ಲ, ನೀನೇ. ನನ್ನನ್ನ ಪ್ರೀತಿಸುತ್ತೀಯಾ ಜೋ ಆಂದ್ರೆಯೇವಾ°?'' ಎಂದು ಕೇಳಿದೆ.   

""ಹೂnಂ'' ಎಂದಳು ಮೆಲ್ಲಗೆ. 
ಅದನ್ನು ಕೇಳಿ ನಾನು ಹೆಚ್ಚು ಕಡಿಮೆ ಸತ್ತೇಹೋದೆನೆನ್ನಬೇಕು. ಅವಳೂ ನೆಲಕ್ಕೆ ಕುಸಿದುಬಿಡುತ್ತಾಳೆಂದುಕೊಂಡೆ. ಯಾಕೆಂದರೆ, ಅವಳು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಳಲ್ಲ. ಆದರೆ, ಎಲ್ಲ ತಿರುಗುಮುರುಗಾಯಿತು.
""ನಿನ್ನ ಪ್ರೀತಿಸ್ತೀನಿ'' ಎಂದು ಮತ್ತೂಮ್ಮೆ ಹೇಳಿದವಳೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು.
""ಇಲ್ಲ ಇಲ್ಲ, ಅದು ಹೇಗೆ ಸಾಧ್ಯ ಜೋ ಆಂದ್ರೆಯೇವಾ°? ನನ್ನ ಒಂದು ಮಾತನ್ನೂ ನಂಬಬೇಡ. ನಾನು ನಿನ್ನನ್ನು ಪ್ರೀತಿಸುವುದೇ ಹೌದಾದರೆ ನರಕಕ್ಕೆ ಹೋಗುತ್ತೀನಷ್ಟೆ. ನೀನೂ ನನ್ನನ್ನು ಪ್ರೀತಿಸುತ್ತಿಲ್ಲ. ಇದೆಲ್ಲ ಹುಚ್ಚು ಮಾತಷ್ಟೆ'' ಎಂದೆ, ಏನು ಹೇಳುತ್ತಿದ್ದೇನೆಂಬ ಪರಿವೆಯೇ ಇಲ್ಲದೆ. ಆಮೇಲೆ ಬೆಂಚಿನಿಂದ ಮೇಲೆದ್ದೆ.

""    ಇದೆಲ್ಲ ಬೇಡ ನಮಗೆ. ಅವರು ನಮ್ಮ ಮದುವೆಗೆ ಒತ್ತಾಯ ಮಾಡುತ್ತಿರುವುದು ಹಣಕ್ಕಾಗಿ. ನಮ್ಮ ಮಧ್ಯೆ ಪ್ರೀತಿಯಾದರೂ ಎಲ್ಲಿದೆ? ಹೀಗೆ ಒತ್ತಾಯಪಡಿಸಲು ಅವರಿಗೇನು ಅಧಿಕಾರ? ನಮ್ಮನ್ನು ಏನಂತ ತಿಳಿದಿ¨ªಾರೆ? ನಾವೇನು ಗುಲಾಮರೆ? ನಾಯಿಗಳೆ? ಇಲ್ಲ, ನಾವು ಮದುವೆಯಾಗೋಲ್ಲ. ಇಷ್ಟು ದಿನ ಅವರ ತಾಳಕ್ಕೆ ಕುಣಿದಿದ್ದು ಸಾಕು. ಈ ಕ್ಷಣವೇ ಹೋಗಿ, ನಾನು ನಿನ್ನನ್ನ ಮದುವೆಯಾಗೋಲ್ಲ ಅಂತ ಅವರಿಗೆ ಹೇಳಿಬಿಡ್ತೇನೆ''

    ಜೋ ತಕ್ಷಣ ಅಳುವುದನ್ನು ನಿಲ್ಲಿಸಿಬಿಟ್ಟಳು. ಮರುಕ್ಷಣ ಅವಳ ಕಣ್ಣೀರೂ ಇಂಗಿಹೋಯಿತು.  
""ಈಗಲೇ ಅವರಿಗೆ ಹೇಳಿಬಿಡ್ತೇನೆ'' ಎಂದು ಮಾತು ಮುಂದುವರೆಸಿದೆ. ""ನೀನೂ ಹೇಳಿಬಿಡು, ನೀನು ಪ್ರೀತಿಸೋದು ನನ್ನನ್ನಲ್ಲ, ಬೊಲಿತ್ಸಿನ್‌ನನ್ನು ಅಂತ. ಮೊದಲು ಬೊಲಿತ್ಸಿನ್ನನ ಕೈಕುಲುಕೋನು ನಾನೇ. ನೀನು ಅವನನ್ನೆಷ್ಟು ಪ್ರೀತಿಸ್ತೀಯಾ ಅಂತ ನಂಗೊತ್ತು''

ಜೋ ಖುಷಿಯಿಂದ ನಗುತ್ತ ನನ್ನ ಬಳಿಗೆ ಬಂದಳು.
""ನೀನೂ ಒಬ್ಬಳನ್ನ ಪ್ರೀತಿಸ್ತಿದೀಯ, ಅಲ್ಲವಾ?  ಮಾಮ್‌ಸೇ ದ ಬ್ಯೂಳನ್ನ?'' ಎಂದು ಕೇಳಿದಳು ಕೈಹೊಸೆಯುತ್ತ.
""    ಹೌದು, ಮಾಮ್‌ಸೇ ದ ಬ್ಯೂಳನ್ನ. ಅವಳು ರಷ್ಯನ್‌ ಆಥೊìಡಾಕ್ಸ್‌ ಚರ್ಚಿಗೆ ಸೇರಿದವಳಲ್ಲ, ಶ್ರೀಮಂತಳೂ ಅಲ್ಲ. ಆದರೂ ನಾನು ಅವಳನ್ನು ಪ್ರೀತಿಸುತ್ತಿರೋದು ಅವಳ ಒಳ್ಳೆಯ ಗುಣಕ್ಕಾಗಿ. ನಮ್ಮಪ್ಪ ಅಮ್ಮ ಬೇಕಾದರೆ ನನ್ನನ್ನ ನರಕಕ್ಕೇ ಕಳಿಸಲಿ. ನಾನು ಮಾತ್ರ ಅವಳನ್ನು ಮದುವೆಯಾಗೋದು ಗ್ಯಾರಂಟಿ. ಅವಳನ್ನ ಮದುವೆಯಾಗದಿದ್ದರೆ ನಾನು ಬದುಕಿದ್ದೂ ಸತ್ತಂತೆಯೇ. ನಾವಿಬ್ಬರೂ ಈಗಲೇ ಹೋಗಿ ಆ ದಡ್ಡ ಶಿಖಾಮಣಿಗಳಿಗೆ ಹೇಳಿಬಿಡೋಣ. ತುಂಬ ಧ್ಯಾಂಕ್ಸ್‌ ನಿಂಗೆ. ಅಬ್ಟಾ , ನಂಗೀಗ ಸಮಾಧಾನವಾಯಿತು!''

    ನನ್ನ ಮನಸ್ಸು ಸಂತೋಷದಿಂದ ಉಕ್ಕಿ ಹರಿಯಿತು. ಮತ್ತೂಮ್ಮೆ ಜೋ ಆಂದ್ರೆಯೇವಾ°ಗೆ ಥ್ಯಾಂಕ್ಸ್‌ ಹೇಳಿದೆ. ಇಬ್ಬರೂ ಅತೀವ ಆನಂದದಿಂದ ಪರಸ್ಪರ ಮು¨ªಾಡಿದೆವು. ನಾನು ಅವಳ ಕೈಯನ್ನು ಮುದ್ದಿಸಿದೆ. ಅವಳು ನನ್ನ ಹಣೆಯನ್ನು, ಕುರುಚಲು ಗಡ್ಡವನ್ನು ಮುದ್ದಿಸಿದಳು. ಅಷ್ಟೇಕೆ, ನಾನು ಔಚಿತ್ಯವನ್ನು ಮರೆತು ಅವಳನ್ನು ಅಪ್ಪಿಕೊಂಡುಬಿಟ್ಟೆ ಕೂಡ. ಹೀಗೆ ಪ್ರೀತಿಸುವುದಿಲ್ಲ ಎನ್ನುವುದು ಪ್ರೀತಿಸುವುದಕ್ಕಿಂತ ಎಷ್ಟು ಮಧುರ! ನಾವು ಹಗುರವಾದ ಮನಸ್ಸಿನಿಂದ, ಉಲ್ಲಾಸದಿಂದ ಮನೆಯೊಳಕ್ಕೆ ಹೋದೆವು- ನಮ್ಮ ತೀರ್ಮಾನ ತಿಳಿಸುವುದಕ್ಕಾಗಿ.

ನಾವು ಮನೆಯೊಳಗೆ ಕಾಲಿಟ್ಟದ್ದೇ ತಡ, ಬಾಗಿಲ ಹಿಂದೆಯೇ ಕಾದಿದ್ದ ನಮ್ಮ ನಮ್ಮ ತಂದೆ -ತಾಯಿ ನಾವು ಸಂತೋಷವಾಗಿರುವುದನ್ನು ಗಮನಿಸಿ, ತತ್‌ಕ್ಷಣ ಬಟ್ಲರನನ್ನು ಕರೆದರು. ಅವನು ಷಾಂಪೇನ್‌ ತಂದ. ನಾನು ಜೋರಾಗಿ ಕೈಬೀಸುತ್ತ, ಕಾಲನ್ನು ನೆಲಕ್ಕೆ ಅಪ್ಪಳಿಸುತ್ತ ಪ್ರತಿಭಟಿಸತೊಡಗಿದೆ. ಜೋ ಆಂದ್ರೆಯೇವಾ° ಜೋರಾಗಿ ಅಳತೊಡಗಿದಳು. ಆಮೇಲೆ ವಿಪರೀತ ಗಲಾಟೆ, ಗದ್ದಲ.

    ಆದರೂ ಅವರು ನಮ್ಮ ಮದುವೆಮಾಡಿಬಿಟ್ಟರು.
    ಇವತ್ತು ನಮ್ಮ ವಿವಾಹದ ರಜತ ಮಹೋತ್ಸವ.  ಕಳೆದ ಇಪ್ಪತ್ತೆçದು ವರ್ಷಗಳಿಂದ ನಾವು ಒಟ್ಟಿಗೆ ಬದುಕುತ್ತಿದ್ದೇವೆ. ಮೊದಮೊದಲು ನಮ್ಮ ಬದುಕು ತುಂಬ ಭಯಂಕರವಾಗಿತ್ತು. ನಾನು ಅವಳನ್ನು ಬೈಯುತ್ತಿ¨ªೆ, ಹೊಡೆಯುತ್ತಿ¨ªೆ. ಆಮೇಲೆ ಕೇವಲ ಅನುಕಂಪದಿಂದ ಅವಳನ್ನು ಪ್ರೀತಿಸತೊಡಗಿದೆ. ಅನುಕಂಪ ತನ್ನ ಜೊತೆಯಲ್ಲಿ ಮಕ್ಕಳನ್ನೂ ಕರೆತಂದಿತು. ಆಮೇಲೆ... ಆಮೇಲೇನು?  ನಾವು ಒಬ್ಬರಿಗೊಬ್ಬರು ಹೊಂದಿಕೊಂಡುಬಿಟ್ಟೆವು. ಇಗೋ, ಈ ಕ್ಷಣ ನನ್ನ ಪ್ರೀತಿಯ ಜೋ ಆಂದ್ರೆಯೇವಾ° ನನ್ನ ಹಿಂದೆಯೇ ನಿಂತಿದ್ದಾಳೆ, ತನ್ನ ಕೈಯನ್ನು ನನ್ನ ಭುಜದ ಮೇಲೂರಿ ನನ್ನ ಬೊಕ್ಕತಲೆಗೆ ಮುತ್ತಿಡುತ್ತ.

ಆಂತೋನ್‌ ಚೆಕಾಫ್

ಇಂಗ್ಲೆಂಡಿನ ಕತೆ ಒಂದು ಚಿತ್ರ
ಮಧ್ಯ ರಾತ್ರಿ ಹಳ್ಳಿಯಲ್ಲಿ ಜೋರಾದ ಅಳುವೊಂದು ಹೊಳಲಿಟ್ಟಿತು. ಆಮೇಲೆ ಏನೋ ಬಡಿದಾಟದ ಸದ್ದು; ನಂತರ ನಿಶ್ಚಲ ಮೌನ. ಕಿಟಕಿಯ ಮೂಲಕ ಕಾಣಿಸುತ್ತಿದ್ದದ್ದು ರಸ್ತೆಯಲ್ಲಿ ಏನೋ ಯೋಚಿಸುತ್ತಿದ್ದಂತಿದ್ದ, ಒಂದಿಷ್ಟೂ ಅಲುಗಾಡದಂತಿದ್ದ ಲೈಲಾಕ್‌ ಮರದ ಒಂದು ಭಾರವಾದ ಕೊಂಬೆಯಷ್ಟೆ. ತುಂಬಾ ಸೆಖೆಯಿದ್ದ ನೀರವ ರಾತ್ರಿ. ಚಂದ್ರನಿಲ್ಲ. ಎಲ್ಲದಕ್ಕೂ ಅಪಶಕುನದಂತಾಯಿತು ಆ ಅಳು. ಯಾರು ಅತ್ತದ್ದು? ಅವಳೇಕೆ ಅತ್ತಳು? ಅದೊಂದು ಹೆಣ್ಣಿನ ದನಿ - ಬಹುಮಟ್ಟಿಗೆ ಹೆಣ್ಣಿನದೋ ಗಂಡಿನದೋ ಹೇಳಲಾಗದಂಥ, ಬಹುಮಟ್ಟಿಗೆ ಮಾತಿಗೆ ಸಿಕ್ಕದಂಥ ಉತ್ಕಟ ಭಾವನೆಯೊಂದನ್ನು ಹೊಮ್ಮಿಸಿದ ಒಂದು ಹೆಣ್ಣಿನ ದನಿ. ಮನುಷ್ಯ ಸ್ವಭಾವ ಯಾವುದೋ ಅಸಮಾನತೆಯ ವಿರುದ್ಧ, ತೋಡಿಕೊಳ್ಳಲಾಗದ ಯಾವುದೋ ಭೀತಿಯ ವಿರುದ್ಧ ಕೂಗಿಕೊಂಡಿತೇನೋ ಎನ್ನುವಂತೆ. ನಿಶ್ಚಲ ಮೌನ. ನಕ್ಷತ್ರಗಳು ಸ್ಥಿರವಾಗಿ, ಪರಿಪೂರ್ಣವಾಗಿ ಮಿನುಗುತ್ತಿದ್ದವು. ಬಯಲು ಸ್ತಬ್ಧ. ಮರಗಳು ಅಲುಗಾಡುತ್ತಿರಲಿಲ್ಲ. ಆದರೂ ಎಲ್ಲವೂ ಅಪರಾಧಿಗಳಂತೆ, ತಪ್ಪಿತಸ್ಥರಂತೆ, ಯಾವುದೋ ಅಪಶಕುನದಂತೆ. ಏನಾದರೂ ಮಾಡಬೇಕೆನ್ನಿಸಿತು. ಯಾವುದಾದರೂ ಬೆಳಕು ಉದ್ವೇಗದಿಂದ ಹೊಯ್ದಾಡುವಂತೆ, ಚಲಿಸುವಂತೆ ಮೂಡಬೇಕು. ರಸ್ತೆಯಲ್ಲಿ ಯಾರಾದರೂ ಓಡುತ್ತ ಬರಬೇಕು. ಕಾಟೇಜಿನ ಕಿಟಕಿಗಳಲ್ಲಿ ದೀಪವಿರಬೇಕು. ಆಮೇಲೆ ಬಹುಶಃ ಹೆಣ್ಣಿನದೋ ಗಂಡಿನದೋ ಹೇಳಲಾಗದಂಥ, ಮಾತಿಗೆ ಸಿಕ್ಕದಂಥ, ಸಮಾಧಾನಗೊಂಡ, ಸಂತೈಸಲ್ಪಟ್ಟ ಇನ್ನೊಂದು ಅಳು. ಆದರೆ ಯಾವ ಬೆಳಕೂ ಬರಲಿಲ್ಲ. ಯಾವ ಹೆಜ್ಜೆ ಸದ್ದೂ ಕೇಳಿಸಲಿಲ್ಲ. ಎರಡನೆಯ ಅಳು ಇರಲಿಲ್ಲ. ಮೊದಲನೆಯ ಅಳು ಕರಗಿಹೋಗಿತ್ತು ಮತ್ತು ನಿಶ್ಚಲ ಮೌನವಷ್ಟೇ ಉಳಿದಿತ್ತು. 

    ಕತ್ತಲಲ್ಲಿ ಉದ್ದೇಶಪೂರ್ವಕವಾಗಿಯೇ ಆಲಿಸುತ್ತ ಮಲಗಿದ್ದೆ. ಅದೊಂದು ಬರೀ ದನಿ. ಅದರ ಜೊತೆ ಸಂಪರ್ಕಿಸಬಹುದಾದ್ದು ಯಾವುದೂ ಇರಲಿಲ್ಲ. ಮನಸ್ಸಿನಲ್ಲಿ ಅದನ್ನು ವ್ಯಾಖಾನಿಸಬಲ್ಲ, ಅರ್ಥಮಾಡಿಸಬಲ್ಲ ಯಾವುದೇ ಚಿತ್ರವೂ ಮೂಡಲಿಲ್ಲ. ಆದರೆ ಕತ್ತಲು ಮೇಲೇರಿದಂತೆ ಯಾವುದೋ ಮಿತಿಮೀರಿದ ಅಸಮಾನತೆಯ ವಿರುದ್ಧ ಭಾರಿ ಕೈಯೊಂದನ್ನು ಎತ್ತುತ್ತಿರುವ, ಹೆಚ್ಚುಕಡಿಮೆ ಆಕಾರವೇ ಇಲ್ಲದ, ತುಸು ಅಸ್ಪಷ್ಟವಾದ ಮನುಷ್ಯಾಕೃತಿಯೊಂದು ಕಾಣಿಸಿತು.

ವರ್ಜೀನಿಯಾ ವೂಲ್ಪ್

ಕನ್ನಡಕ್ಕೆ : ಎಸ್‌. ದಿವಾಕರ್‌

Trending videos

Back to Top