ಪುರುಷಪ್ರಯತ್ನವಿಲ್ಲದ ಪುರುಷಾರ್ಥ, ಪುರುಷಾರ್ಥವೆ? 


Team Udayavani, Jul 22, 2018, 6:00 AM IST

10.jpg

ಇಲ್ಲಿಯವರೆಗೆ…
ಹೌದು, ತಾನು ಹುಟ್ಟುವುದಕ್ಕೂ ಮೊದಲಿನ ಅಯೋಧ್ಯೆಯ ಚಿತ್ರಣವಿದು! ಕೇಳಲಿಕ್ಕೆ ಚ‌ಂದ ನಗರಗಳ ವರ್ಣನೆ, ನಿರ್ವಹಿಸಲಿಕ್ಕೆ ಮಾತ್ರ ಕಷ್ಟ ಅನ್ನಿಸಿತು ರಾಮನಿಗೆ. ಅದೇಕೋ ದೂರದ ಮತ್ತೂಂದು ಮಹಾನಗರಿ ಲಂಕೆಯ ನೆನಪಾಯಿತು, ರಾಕ್ಷಸನಗರಿ, ಆದರೆ ಅದೂ ಚಂದ ಇತ್ತಲ್ಲವೇ? 

ಅಲ್ಲಿಯೂ ಉದ್ಯಾನಗಳು ಇದ್ದುವಲ್ಲವೇ? ಸಹಜತೆಯ ನಕಲು ಮಾಡುತ್ತ ಅವು ಅಲ್ಲಿಯೂ ನಿಂತಿದ್ದುವಲ್ಲವೇ? ಅರಮನೆಗಳು ಗುರುಮನೆಗಳು ಮಠಮಾನ್ಯಗಳು… ಎಲ್ಲವೂ ಒಳಿತನ್ನು ಉಳಿಸಲು ಹೆಣಗುತ್ತಿದ್ದುವಲ್ಲವೇ ಅಲ್ಲಿಯೂ? ವಿಧವಿಧವಾದ ಸುಲಭಜೀವಿಗಳು ಅಲ್ಲಿಯೂ ಸುಲಭವಾಗಿ ಬದುಕುತ್ತಿದ್ದರಲ್ಲವೇ? ವಾಹನಗಳು, ಪಲ್ಲಕ್ಕಿಗಳು, ಆನೆಕುದುರೆಗಳು ಹಗಲಿರುಳೂ ಓಡಾಡುತ್ತಿದ್ದುವಲ್ಲವೇ ಅಲ್ಲಿಯೂ? ಹಾಗಿದ್ದಲ್ಲಿ ರಾಕ್ಷಸತನ ಇರುವುದಾದರೂ ಎಲ್ಲಿ? ಕೇವಲ ರಾವಣನಲ್ಲಿಯೆ? ಅಥವಾ ಅತಿಯಾಗಿ ಕಟ್ಟಿದ ಸಭ್ಯತೆಗಳೇ ರಾಕ್ಷಸವಾಗಬಲ್ಲುವೆ?

ಕಾವ್ಯವಾಚನ ಈಗ ದಶರಥನ ವರ್ಣನೆ ನಡೆಸಿದೆ; ದಶರಥ ಒಳ್ಳೆಯ ರಾಜ, ಒಳಿತು ಉಳಿದು ಬರಲಿ ಎಂಬ ಆಕಾಂಕ್ಷೆಯುಳ್ಳ ರಾಜ, ಅವನಿಗೆ ಎಂಟು ಜನ ಮಂತ್ರಿಗಳು, ವಸಿಷ್ಟ- ವಾಮದೇವ ಎಂಬ ಇಬ್ಬರು ರಾಜಪುರೋಹಿತರು, ನೂರಾರು ಸಭಾಸದರು ಹಾಗೂ, ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ದಶರಥನದ್ದು ಸುಪ್ರಸಿದ್ಧªವಾದ ಇಕ್ಷ್ವಾಕು ವಂಶ. ಈ ವಂಶವು ಪ್ರಜಾಪತಿ ಮನುವಿನಿಂದ ಆರಂಭವಾಯಿತು. ನಾಗರೀಕತೆ ಆರಂಭವಾದ ದಿನದಿಂದಲೇ ಆಳುವಿಕೆ ಆರಂಭಿಸಿತು ಇಕ್ಷ್ವಾಕುವಂಶ ಇತ್ಯಾದಿ.

ಆಗಿ ಹೋದ ಇಕ್ಷ್ವಾಕು ವಂಶದ ವಿವಿಧ ರಾಜರುಗಳ ಕತೆ ಹೇಳುತ್ತಿದ್ದಾರೆ ಈಗ ಮಕ್ಕಳು. ಮಕ್ಕಳಕತೆಯಂತೆಯೆ ತನ್ನ ವಂಶಜರ ಕತೆ. ಸಗರ ಚಕ್ರವರ್ತಿ ಅಶ್ವಮೇಧದ ಯಜ್ಞಾಶ್ವವನ್ನು ಹುಡುಕಲೆಂದು ಸಾವಿರ ಗಂಡುಮಕ್ಕಳನ್ನು ಕಳುಹಿಸಿದ್ದು. ಅವರು ಇಡೀ ಆರ್ಯಾವರ್ತವ‌ನ್ನು ಅಗೆದು ಪಾತಾಳ ತಲುಪಿದ್ದು, ಶಾಪಗ್ರಸ್ತರಾದದ್ದು, ಸತ್ತು ಬೂದಿಯಾದದ್ದು, ಭಗೀರಥ ಮಹಾರಾಜ ದೇವಲೋಕದ ಗಂಗೆಯನ್ನು ಭೂಮಿಗೆ ತರಿಸಿದ್ದು, ಆಕಾಶದಿಂದ ಧುಮ್ಮಿಕ್ಕುವ ಆಕೆಯ ರಭಸವನ್ನು ತಾಳಲಾರದ ಭೂಮಿಯ ಸಲುವಾಗಿ ಶಿವ ಜಟೆ ಬಿಚ್ಚಿ ನಿಂತು ಗಂಗೆಯ ರಭಸವನ್ನು ತಡೆದದ್ದು, ಗಂಗೆಯನ್ನು ತಣ್ಣಗಾಗಿಸಿ ಜಟೆಯಲ್ಲಿ ಬಂಧಿಸಿ ಹಿಡಿದದ್ದು, ಕೊನೆಗೊಮ್ಮೆ, ಅಹಂಕಾರ ಕಳೆದುಕೊಂಡ ಗಂಗೆಯನ್ನು ಸೌಮ್ಯ ರೂಪದಲ್ಲಿ ಜಟೆಯಿಂದ ಹೊರ ಬಿಟ್ಟಿದ್ದು, ಗಂಗೆ ಸಾಗರಗಳನ್ನು ತುಂಬಿಸಿದ್ದು, ಎಲ್ಲ ಹೇಳುತ್ತ ಹೋದವು ಮಕ್ಕಳು.

ರಾಮನಿಗೆ ನಗು ಬಂತು, ಮಾನವ ನಿರ್ಮಿತಿಯೊಳಗೆ ಅಗಾಧ ನಂಬಿಕೆಯುಳ್ಳವರು ನಾವು ಅನ್ನಿಸಿತು, ಸಾಗರಗಳು-ಅರಣ್ಯಗಳು- ಗಾಳಿ-ಬೆಳಕು-ಬೆಂಕಿ ಎಲ್ಲವೂ ತನ್ನದೇ ಸೃಷ್ಟಿ ಎಂದು ತಿಳಿಯುತ್ತೇವೆ ನಾವು, ಉದ್ದುದ್ದ ಕತೆ ಕಟ್ಟುತ್ತೇವೆ ಅನ್ನಿಸಿತು. ಸಣ್ಣದೊಂದು ರಾಜ್ಯವನ್ನು ಆಳಲಿಕ್ಕೆ ಅದೂ ಈಗಾಗಲೇ ಸಮರ್ಥವಾಗಿ ಆಳಿಕೊಂಡು  ಬಂದಿರುವ ರಾಜ್ಯವನ್ನು ಆಳಲಿಕ್ಕೆ ಇಷ್ಟೆಲ್ಲ ಹೆಣಗುತ್ತಿದ್ದೇನೆ ನಾನು, ಸಣ್ಣಪುಟ್ಟ ಬದಲಾವಣೆ ತರಲಿಕ್ಕೆ ಕೂಡ ಇಷ್ಟೆಲ್ಲ ಹೆಣಗುತ್ತಿದ್ದೇನೆ. ರಾಮ ನಿಡುಸುಯ್ದು. ಇಲ್ಲ… ಇಲ್ಲ. ಸುಲಭದಲ್ಲಿ ಬದಲಾವಣೆ ಒಪ್ಪಿಕೊಳ್ಳಲಾರದು ಈ ಮಾನವ ಪ್ರಾಣಿ. ಆದರೂ ಸುಲಭತೆಯನ್ನು ಬಯಸುತ್ತದೆ. ಸುಲಭದಲ್ಲಿ ಸಂಪತ್ತು ಸಿಗಬೇಕು, ಸದ್ಗತಿ ಸಿಗಬೇಕು, ಮಕ್ಕಳಾಗಬೇಕು ಎಂದು ಬಯಸುತ್ತದೆ, ಆಗುವ ಮಕ್ಕಳೆಲ್ಲವೂ ಒಳ್ಳೆಯವರೇ ಆಗಿರಬೇಕು ಎಂದು ಬಯಸುತ್ತದೆ. ಪುರುಷ ಪ್ರಯತ್ನದಲ್ಲಿ ನಂಬಿಕೆ ತರುವುದಾದರೂ ಹೇಗೆ ಇವರಲ್ಲಿ? ಪ್ರಯತ್ನವಿಲ್ಲದ ಪುರುಷಾರ್ಥ, ಪುರುಷಾರ್ಥವೇ?

ಮಕ್ಕಳು ಈಗ ಜನಸ್ಥಾನವನ್ನು ತಲುಪಿವೆ, ರಾಮನಿಗೆ ನಗುಬಂತು: ಅದು ಗೋದಾವರಿ ತಟವಿರಬೇಕು, ಲಕ್ಷ್ಮಣ ಕಟ್ಟಿದ ಆಶ್ರಮವಲ್ಲವೆ,  ಅದು! ಕಂದಮೂಲಗಳನ್ನು ಸಂಗ್ರಹಿಸಿ ತರಲೆಂದು ಹೋಗಿದ್ದೆ. ಹಿಂದೆ ಬರುವಷ್ಟರಲ್ಲಿ ಆಶ್ರಮದ ತುಂಬ ಹೊಗೆ ತುಂಬಿಕೊಂಡಿದೆ. ಗಾಬರಿಗೊಂಡಿದ್ದೆ. ಒಳಹೋಗಿ ನೋಡುತ್ತೇನೆ. ಹಸಿಕಟ್ಟಿಗೆ ಉರಿಸಿ ಅಡುಗೆ ಬೇಯಿಸುವ ಯತ್ನದಲ್ಲಿ ಸೋತು ಹತಾಶಳಾಗಿದ್ದಾಳೆ ಸೀತೆ. “”ಥೂ… ಈ ಲಕ್ಷ್ಮಣನಿಗೆ ಇಷ್ಟೂ ತಿಳಿಯಬೇಡವೆ?” ಎಂದು ಗೊಣಗುತ್ತ, ಕಣ್ಣಿಗೆ ಅಡ್ಡ ಬರುತ್ತಿದ್ದ ಮುಂಗುರುಳನ್ನು ಮುಂಗೈಗಳ ಹಿಂಬದಿಯಿಂದ ಹಿಂದಕ್ಕೆ ತಳ್ಳುತ್ತ, ಸಾಹಸ ಪಡುತ್ತಿದ್ದಾಳೆ. ಅವಳ ಪರಿಶುದ್ಧ ಹಣೆಯ ತುಂಬ ಮಸಿ ಮೆತ್ತಿಕೊಂಡಿದೆ. ನಾನು ಘೊಳ್ಳನೆ ನಕ್ಕಿದ್ದೆ. ಸೀತೆ ಸಿಡುಕಿದ್ದಳು. ಹತ್ತಿರ ನಡೆದು, ಗದ್ದವನ್ನು ಕೈಗಳಲ್ಲಿ ಹಿಡಿದು, ಹೊದೆದ ಚಾದರದ ತುದಿಯಿಂದ ಅವಳ ಮುಖವನ್ನು ಒರೆಸಿದ್ದೆ. ಲಕ್ಷ್ಮಣ ಅದೇ ವೇಳೆಗೆ ಒಣ ಕಟ್ಟಿಗೆ ಹೊತ್ತು ದಡಬಡಿಸಿ ಒಳಬಂದಿದ್ದ. ನನ್ನ ಕೈಗಳು ಕಮಲದಂತಹ ಅವಳ ಮುಖವನ್ನು ಹಿಡಿದೇ ಇದ್ದವು. ಲಕ್ಷ್ಮಣ ನಾಚಿದ್ದ. “ನೋಡು, ನಿನ್ನ ಅತ್ತಿಗೆಯ ಅವತಾರ’ ಎಂದು ಹಾಸ್ಯಮಾಡಿ ನಕ್ಕು ಅಲ್ಲಿಂದ ಎದ್ದಿದ್ದೆ.

ಕಥಾವಾಚನ ಮುಂದೆ ಜಾರಿಬಿಟ್ಟಿದೆ. ಮಕ್ಕಳು ಆಗಲೇ ಶೂರ್ಪನಖೀಯನ್ನು ಕರೆತಂದು ನಿಲ್ಲಿಸಿದ್ದಾವೆ. ಎಲ್ಲರೂ ನಗುತ್ತಿದ್ದಾರೆ. ಮಕ್ಕಳು ತಾವೇ ರಾಕ್ಷಸಿಯಂತಾಡುತ್ತಿದ್ದಾವೆ. ಹೂಂಕರಿಸುತ್ತ, ಚಿತ್ರವಿಚಿತ್ರವಾಗಿ ಕಾಲುಹಾಕುತ್ತ ಕುಣಿಯುತ್ತಿವೆ. ಪಾಪ! ಇವುಗಳಿಗೇನು ಗೊತ್ತು ರಾಕ್ಷಸತನವೆಂದರೇನೆಂದು! ಸೀತೆ ಕಂಗಾಲಾಗಿದ್ದಳು. ನನ್ನನ್ನು ಬಿಗಿಹಿಡಿದು ನಡುಗುತ್ತ ನಿಂತಿದ್ದಳು. ರಾಕ್ಷಸಿ ನನ್ನ ಮತ್ತೂಂದು ಕೈ ಹಿಡಿದು ಜಗ್ಗುತ್ತಿದ್ದಳು. “ಬಂದು ಬಿಡು ನನ್ನೊಟ್ಟಿಗೆ’ ಎನ್ನುತ್ತಿದ್ದಳು. ನನ್ನಲ್ಲಿ ಅಂದು ಅದಾವ ರಾಕ್ಷಸತನ ಇಣುಕಿತ್ತೋ ಕಾಣೆ, ಆ ಹೆಂಗಸಿಗೆ ಹಾಸ್ಯ ಮಾಡಿದ್ದೆ, ಮಾಡಬಾರದಿತ್ತು.

ಮಕ್ಕಳು ರಾಕ್ಷಸಿಯ ಮೂಗುಕೊಯ್ದವು. ರಾಕ್ಷಸಿಯ ನೋವನ್ನು ತಮ್ಮದಾಗಿಸಿಕೊಂಡು ಹುಯಿಲಿಟ್ಟವು. ನೋಡುತ್ತಿರುವವರು ನಕ್ಕು ಚಪ್ಪಾಳೆಯಿಕ್ಕಿದರು. ಮಕ್ಕಳು ಏನು ಮಾಡಿದರೂ ಚಂದ.

“ಸೀತೆ… ಸೀತೆ… ನಾನೇನು ಮಾಡಲಿ ಹೇಳು? ನಮಗೆ, ಗಂಡಸರಿಗೆ, ಕೆಲವೊಮ್ಮೆ ನಾವು ನಿಜವೇ ನಾವು ಧರಿಸಿರುವ ಪಾತ್ರ ನಿಜವೇ ಎಂಬುದು ಕೂಡಾ ತಿಳಿಯುವುದಿಲ್ಲ. ರಾಜಾರಾಮನ ಪಾತ್ರ ಧರಿಸಿದ್ದೇನೆ ನಾನು. ಹುಟ್ಟುವುದಕ್ಕೂ ಮೊದಲೇ ತೊಡಿಸಲಾಗಿದೆ ನನಗೀ ಪಾತ್ರ ಸೀತೆ. ನನಗೀಗ ಅಳಬೇಕು ಅನ್ನಿಸುತ್ತಿದೆ. ಆದರೆ, ಅಳಲಾರೆ, ಸುತ್ತ ಜನಕುಳಿತಿದ್ದಾರೆ. ಮಕ್ಕಳನ್ನು ತಬ್ಬಿ ಕಣ್ಣೀರಿಡಬೇಕು ಅನ್ನಿಸುತ್ತಿದೆ ನನಗೆ. ಆದರೆ, ಅಂತಹುದೇನನ್ನೂ ಮಾಡಲಾರೆ ನಾನು. ಮರ್ಯಾದಾ ಪುರುಷೋತ್ತಮ! ಗರಬಡಿದವನಂತೆ ಕುಳಿತಿದ್ದೇನೆ ಇಲ್ಲಿ, ಪಾತ್ರಪೋಷಣೆ ಮಾಡುತ್ತ. ಹೌದು ಸೀತೆ! ಹೌದು ಸೀತೆ! ನಾವು ಗಂಡಸರು, ಹೆಚ್ಚಿನ ವೇಳೆ ಪಾತ್ರಧಾರಿಗಳು. ತಲೆಯ ಮೇಲೆ ಹೆಣಭಾರದ ಕಿರೀಟ ಹೊತ್ತು ತಿರುಗುವವರು’

“ರಾವಣ ನಿನ್ನನ್ನು ಹೊತ್ತೂಯ್ದದ್ದು ಪ್ರತಿಷ್ಠೆಗಾಗಿ. ನಾನು ನಿನ್ನನ್ನು ಬಿಡಿಸಿ ತಂದದ್ದು ಪ್ರತಿಷ್ಠೆಗಾಗಿ. ಆದರೆ, ಆದರೆ, ಈಗ ! ನೀನು ಪ್ರತಿಷ್ಠೆಯಲ್ಲ ಸೀತೆ. ನನಗಿರುವುದು ನೀನೊಬ್ಬಳೇ. ಹಲವರು ಇದ್ದಿದ್ದರೆ, ಪ್ರತಿಷ್ಠೆ ಹಂಚಿಕೆಯಾಗಿದ್ದಿದ್ದರೆ, ಬೇರೆಯಾಗಿರುತ್ತಿತ್ತೇನೋ, ತಿಳಿಯೆ! ಆದರೆ ನಾನು ಹಂಚಿಕೊಳ್ಳಲಾರೆ. ನನ್ನನ್ನೇ ಆಗಲಿ ಅಥವಾ ನಿನ್ನನ್ನೇ ಆಗಲಿ ಹಂಚಿಕೊಳ್ಳಲಾರೆ ಸೀತೆ. ನಿನ್ನ ಹಂಚಿಕೆಯಾಯಿತು ಎಂಬ ಸಣ್ಣ ಮಾತು ಬಂದರೂ ಸಾಕು, ಹಾಳು ಪ್ರತಿಷ್ಠೆ ಕೆರಳಿ ಬಿಡುತ್ತದೆ. ಮಾತು ಸಣ್ಣದೆಂದು ತಿಳಿದಿದ್ದರೂ ಸಹ ಕೆರಳಿ ಬಿಡುತ್ತದೆ. ರಾಜಾರಾಮನ ಮುಖವಾಡ ಮುಖಕ್ಕೇರಿ ಬಿಡುತ್ತದೆ. ಕ್ಷಮಿಸು. ಸೀತೆ, ಕ್ಷಮಿಸು’

ಕರತಾಡನದ ಸದ್ದು ರಾಮನನ್ನು ವಾಸ್ತವ ಪ್ರಪಂಚಕ್ಕೆ ಮರಳಿಸುತ್ತದೆ. ಕಾವ್ಯವಾಚನ ಮುಗಿದಿದೆ ಎಂಬ ಸಂಗತಿ ಗಮನಕ್ಕೆ ಬರುತ್ತದೆ. ಎಲ್ಲರೂ ಮಕ್ಕಳತ್ತ ಮುಗಿಬಿದ್ದಿದ್ದಾರೆ. ಭಾರದ್ವಾಜ ಮಾತ್ರ, ಜನರ ನಡುವೆ ದಾರಿಮಾಡಿಕೊಂಡು ರಾಮನತ್ತ ಬರುತ್ತಿದ್ದಾನೆ. ರಾಮ ಕೈಮುಗಿಯುತ್ತಾನೆ, 

“ವಾಲ್ಮೀಕಿ ಮುನಿಗಳು ತಮಗೆ ಶುಭಹಾರೈಕೆ ಕಳುಹಿಸಿದ್ದಾರೆ’
“ಕಾರ್ಯಕ್ರಮ ಅದ್ಭುತವಾಗಿತು’¤
“ಕಾವ್ಯ ಸಂಕ್ಷಿಪ್ತಗೊಳಿಸಲಾಗಿತ್ತು’
“ಮಕ್ಕಳು ತುಂಬ ಪ್ರತಿಭಾವಂತರು’
“ಆಶ್ರಮದಲ್ಲಿ ಗಮಕದ ತರಬೇತಿ ನಡೆಯುತ್ತದೆ’
“ಬನ್ನಿ. ಮಕ್ಕಳಿಗೆ ಅಭಿನಂದನೆ ಹೇಳಿ ಬರುತ್ತೇನೆ’
ಮಕ್ಕಳತ್ತ ನಡೆದ ರಾಮ. ಪ್ರಹರಿ, ದಾರಿ ಬಿಡಿಸುತ್ತ ಮುಂದೆ ಮುಂದೆ ನಡೆದ. ಭಾರದ್ವಾಜ ರಾಮನ ಹಿಂದೆ ನಡೆದ. ರಾಮನ ನಡಿಗೆ ಗಮನಿಸುತ್ತಿದ್ದಾನೆ ಅವನು. ಯೋಚಿಸುತ್ತಾನೆ,

ಆಹಾ! ಇದೇನು ಗಾಂಭೀರ್ಯ ಈತನದ್ದು. ಒಂದು ಮಾತು ಹೆಚ್ಚಿಲ್ಲ, ಒಂದು ಮಾತು ಕಡಿಮೆಯಿಲ್ಲ. ಮಕ್ಕಳು ತನ್ನವು ಎಂದು ತಿಳಿದಿರಲೇಬೇಕು, ಈ ವೇಳೆಗೆ. ಆದರೂ ತೋರುಗೊಡುತ್ತಿಲ್ಲ. ಅರಮನೆಗಳ ತರಬೇತಿ. ಎಲ್ಲರೊಟ್ಟಿಗೆ ಬೆರೆಯಬಲ್ಲ ಈತನ ಗುಣ ಅಸಾಧಾರಣವಾದದ್ದು. 
ಇತರರು ಅಭಿನಂದನೆ ಸಲ್ಲಿಸಿ ಮುಗಿಸಲೆಂದು ರಾಮಕಾರ್ಯ. ಪ್ರಭುಗಳು ಕಾಯುತ್ತಿದ್ದಾರೆ ಎಂದರಿತ ಇತರರು ಗಡಬಡಿಸಿ ಅತ್ತಿತ್ತ ಸರಿದರು. ಆದರೆ, ಅಲ್ಲಿಂದ ಚದುರಲಿಲ್ಲ. ಮುಗುಳುನಗೆಯೊಡನೆ ಮುಂದುವರೆಯುತ್ತಾನೆ ರಾಮ. ಮಕ್ಕಳನ್ನು ತಬ್ಬಿ ಬೆನ್ನು ತಟ್ಟುತ್ತಾನೆ. ಲವ ಅದೇನೋ ಪ್ರಶ್ನೆ ಮಾಡುತ್ತಾನೆ. ರಾಮ ಬಗ್ಗಿ ಕೇಳಿಸಿಕೊಳ್ಳುತ್ತಾನೆ, ಹೌದೆಂದು ತಲೆಯಾಡಿಸಿ ಮುಗುಳುನಕ್ಕು, ಸಭಾಮರ್ಯಾದೆಗೆ ತಕ್ಕುದಾದ ಎರಡು ಮಾತುಗಳನ್ನಾಡಿ, ಭಾರದ್ವಾಜನತ್ತ ತಿರುಗುತ್ತಾನೆ.

“ಹಿಂದಿರುಗಲಿಕ್ಕೆ ವ್ಯವಸ್ಥೆ ಇದೆಯೆ? ವಾಹನ ಕಳುಹಿಸಲೆ?’
“ಬೇಡ, ನಾಳೆ ಮತ್ತೂಂದು ವಾಚನವಿದೆ. ಆಶ್ರಮಕ್ಕೆ ಹೋಗುತ್ತಿಲ್ಲ’
“ವಾಸ್ತವ್ಯಕ್ಕೆ ಅರಮನೆಯಲ್ಲಿ ವ್ಯವಸ್ಥೆ ಮಾಡಲೆ?’
“ಬೇಡ. ಗುರುಮಠದಲ್ಲಿ ವ್ಯವಸ್ಥೆಯಾಗಿದೆ’
“ಮತ್ತೆ ಬನ್ನಿ’ ಮತ್ತೂಮ್ಮೆ ಮಕ್ಕಳ ಬೆನ್ನು ತಟ್ಟಿ, ನಸು ನಕ್ಕು ಹೊರಡುತ್ತಾನೆ ರಾಮ. ಆತ ಮರೆಯಾಗುವವರೆಗೂ, ಬೆಕ್ಕಸ ಬೆರಗಾಗಿ ಆತನನ್ನೇ ನೋಡುತ್ತ ನಿಂತಿದ್ದವು ಎರಡೂ ಮಕ್ಕಳು.
..
ಇಡೀ ದಿನ ಬಿಸಿಲು ಕಾದು ಈಗಷ್ಟೆ ತಂಪಾಗತೊಡಗಿದೆ. ಬೇಸಿಗೆಯ ಮಳೆ, ಇಲ್ಲಿ ಬೀಳದೆ ಮತ್ತೆಲ್ಲಿಯೋ ಬಿದ್ದಿರಬೇಕು, ಇಲ್ಲಿ ತಂಗಾಳಿ ಬೀಸುತ್ತಿದೆ. ಆಶ್ರಮದ ಹೊರಗೆ ಒಟ್ಟಲಾಗಿದ್ದ ಕಟ್ಟಿಗೆಯನ್ನು ತುರಾತುರಿಯಲ್ಲಿ ತಂದು ಕೊಟ್ಟಿಗೆಯಲ್ಲಿ ಜೋಡಿಸಿಡಲಾಗುತ್ತಿದೆ. ವಟುಗಳನ್ನು ಹುಡುಕಿಕೊಂಡು ವಾಲ್ಮೀಕಿಗಳು ಕಟ್ಟಿಗೆ ಜೋಡಿಸುತ್ತಿರು ವಲ್ಲಿಗೆ ಬಂದರು. ಕಟ್ಟಿಗೆ ಜೋಡಿಸುತ್ತಿರುವ ವಟುಗಳ ನಡುವೆ ಲವ ಅವರ ಕಣ್ಣಿಗೆ ಬಿದ್ದ.
“ಮಾಣಿ!’
“ಗುರುಗಳೇ’ ಕಟ್ಟಿಗೆಯನ್ನು ಕೆಳಗಿಟ್ಟು ನಿಂತ ಲವ.
“ಹೇಗಿತ್ತು ಕಾವ್ಯವಾಚನ, ರಾಜಸಭೆಯಲ್ಲಿ?’
“ತುಂಬ ಯಶಸ್ವಿಯಾಯಿತು ಗುರುಗಳೇ’
ಕೊಂಚ ದೂರದಲ್ಲಿ ಕಟ್ಟಿಗೆ ಆಯುತ್ತಿದ್ದ ಕುಶ ವಾಲ್ಮೀಕಿಗಳನ್ನು ಕಂಡು ಓಡಿ ಬರುತ್ತಾನೆ. ಭಾರದ್ವಾಜನೂ ಬರುತ್ತಾನೆ. ಮಿಕ್ಕ ವಟುಗಳೂ ಕೆಲಸ ನಿಲ್ಲಿಸಿ ಸುತ್ತುವರಿದು ನಿಲ್ಲುತ್ತಾರೆ. ಕುಶನಿಗೆ ಏನನ್ನೋ ಹೇಳಬೇಕೆಂಬ ತವಕ. ತನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೋರಿಸುತ್ತ, ಬೀಗುತ್ತ, ನುಡಿಯುತ್ತಾನೆ,
“ಇದನ್ನು ಕೊಟ್ಟರು ಗುರುಗಳೇ, ಅವನಿಗೂ ಕೊಟ್ಟರು.’ ಅವನತ್ತ ಬೊಟ್ಟು ಮಾಡುತ್ತಾನೆ.
“ನಾನು, ಭಾರದ್ವಾಜನಿಗೆ ಕೊಟ್ಟುಬಿಟ್ಟೆ’ ಲವ ನುಡಿಯುತ್ತಾನೆ.
“ಒಳ್ಳೆಯದು ಮಾಡಿದೆ. ಆಶ್ರಮವಾಸಿಗಳಿಗೆ ಶೋಭಿಸುವುದಿಲ್ಲ ಚಿನ್ನದ ಸರ.’
ಕುಶ ಪೆಚ್ಚಾಗುತ್ತಾನೆ. ಕತ್ತಿನಿಂದ ಸರವನ್ನು ತೆಗೆದು ವಾಲ್ಮೀಕಿಗಳತ್ತ ಚಾಚುತ್ತಾನೆ. ವಾಲ್ಮೀಕಿಗಳು ನಗುನಗುತ್ತ, “ಈಗ ಹಾಕಿಕೊಂಡಿರು. ಅದು ಪಾರಿತೋಷಕ ತಾನೆ. ನಾಳೆ ಕೊಟ್ಟುಬಿಡು ಬಾರದ್ವಾಜನಿಗೆ’ ಎನ್ನುತ್ತಾರೆ. ಲವನಿಗೆ ಮತ್ತೇನೋ ನೆನೆಪಾಗುತ್ತದೆ. ಹೇಳಲೋ ಬೇಡವೋ ಎಂದು ಅನುಮಾನಿಸಿ, ಹೇಳುತ್ತಾನೆ.

“ಗುರುಗಳೇ! ಒಬ್ಬರು-ಅವರು ಬ್ರಾಹ್ಮಣರಂತಿದ್ದರು, ಅಯೋಧ್ಯೆಗೆ ಬಂದುಬಿಡಿ ಅಂದರು’
“ನನಗೂ ಅಂದರು ಗುರುಗಳೇ, ನೀವು ರಾಜಕುವರರು’ ಅಂದರು.
ವಾಲ್ಮೀಕಿಗಳು ಭಾರದ್ವಾಜನತ್ತ ನೋಡುತ್ತಾರೆ.
“ಹೌದು! ಅಯೋಧ್ಯೆಯ ಜನರಿಗೆ ಈಗ ತಿಳಿದಿದೆ, ಇವರು ರಾಜಕುವರರೆಂದು’
“ಮಹಾರಾಜರು ಏನಂದರು?’
ಭಾರದ್ವಾಜ ನಕ್ಕ.
“ಮರ್ಯಾದೆ ಮೀರದಂತೆ ನಡೆದುಕೊಂಡರು’
“ಇವರನ್ನು ಒಳಗೆ ಕರೆ ತಾ, ಎಲ್ಲವನ್ನೂ ವಿವರಿಸಿ ಹೇಳುವ ಕಾಲ ಬಂದಿದೆ’
ವಾಲ್ಮೀಕಿಗಳು ಆಶ್ರಮಕ್ಕೆ ಮರಳಿದರು. ಕಟ್ಟಿಗೆ ಒಟ್ಟುವ ಕೆಲಸವನ್ನು ಇತರೆ ವಟುಗಳಿಗೆ ಒಪ್ಪಿಸಿ, ಭಾರದ್ವಾಜ, ಲವಕುಶರೊಟ್ಟಿಗೆ ಮುನಿಗಳನ್ನು ಹಿಂಬಾಲಿಸಿದ.

ಪ್ರಸನ್ನ ಹೆಗ್ಗೋಡು             

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.