ಲೆವನ್‌ವರ್ತ್‌ ಎಂಬ ಜಾನಪದ ಜಹಜು!


Team Udayavani, Sep 2, 2018, 6:00 AM IST

3.jpg

ಸಿಯಾಟಲ್‌ ಅಮೆರಿಕದ ವಾಯುವ್ಯ ಭಾಗದಲ್ಲಿರುವ ವಾಷಿಂಗ್ಟನ್‌ ಪ್ರಾಂತ್ಯದ ಅತಿ ದೊಡ್ಡ ನಗರ. ಜಗತ್ತನ್ನೇ ಗಣಕಯಂತ್ರವಾಗಿಸಿರುವ ವಿಶ್ವಖ್ಯಾತಿಯ ಮೈಕ್ರೋಸಾಫ್ಟ್ನ ತವರು. ಕಣ್ಣು ಹಾಯಿಸಿದೆಡೆ ಎಲ್ಲೆಲ್ಲೂ ಹಸಿರ ಕೋಟೆ. ಝರಿ, ಜಲಪಾತಗಳದ್ದೇ ಕಾರುಬಾರು. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ, ಕನ್ನಡ, ಕನ್ನಡತನವಿದೆ. ನಾವು ಹೋದ ಸಂದರ್ಭ ಅದೇನೋ ವಿಪರೀತ ಬಿಸಿಲು. ಆಗಸ್ಟ್‌ನಲ್ಲಿ 33 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು ನಾವು ನೋಡಿದ್ದಿಲ್ಲ ಎಂದಳು ಮಗಳು ದಿವ್ಯಾ.  ಒಂದು ಭಾನುವಾರ, “”ಅಂಕಲ್‌, ಆಂಟಿ ಇಲ್ಲೇ ನಿಮಗೆ ಇಷ್ಟವಾಗುವ ಹಳೇ ಊರಿದೆ. ಎಲ್ರು ಹೋಗಿ ಬರೋಣ” ಎಂದ ಅಳಿಯ ರಂಜನ್‌. “”ಅಲ್ಲಪ್ಪ ದೊಡೂರಿಗೆ ಬಂದ್ರೆ ಸಣ್ಣೂರಿಗಾ?” ಅಂತ ನನ್ನಾಕೆ ಪ್ರಶ್ನಿಸಿದಾಗ ಮಗಳು, “”ಅಮ್ಮ, ಅಲ್ಲಿಗೋದ್ಮೇಲೆ ಹೇಳು ಹೇಗಿದೆ ಎಂದು” ಎಂದು ಸರಸರನೆ ಹೊರಡಿಸಿದಳು. 

ಚಿತ್ರಾನ್ನ, ಮೊಸರು ಬಜ್ಜಿ, ದೋನಟ್‌, ಕುರುಕು ತಿನಿಸು ಕಾರಿನ ಡಿಕ್ಕಿ ಸೇರಿದ್ದವು. ಮೊಮ್ಮಗಳು ಅಹನಾಗೆ ವಿಶೇಷ ಬುತ್ತಿ. ರಸ್ತೆಯ ಇಬ್ಬದಿಗಳಲ್ಲೂ ಕೋಟೆ ಕಟ್ಟಿಕೊಂಡ ಗಿಡ ಮರಗಳು. ಬೆದರಿ ಪರಾರಿಯಾಗುವ ಜಿಂಕೆ, ಮೊಲಗಳು. ಬೆಳಗ್ಗೆ ಎಂಟು ಗಂಟೆಗೆ ರೆಡ್‌ಮಂಡ್‌ನ‌ಲ್ಲಿರುವ ಮನೆಯಿಂದ ಹೊರಟವರು ಎರಡೂವರೆ ತಾಸು ಪ್ರಯಾಣಿಸಿ 135 ಕಿ. ಮೀ. ಕ್ರಮಿಸಿದೆವು. “”ಅಗೋ ಅದೇ ಲೆವನ್‌ವರ್ತ್‌” ಎಂದ ಕಾರು ಚಲಾಯಿಸುತ್ತಿದ್ದ ಅಳಿಯ. ಪಾರ್ಕಿಂಗಿಗೆ ಹುಡುಕಾಡುವುದೇ ಸವಾಲಾಯಿತು. ಕೊನೆಗೆ ಒಂದೆಡೆ ಹೊರಟಿದ್ದ ಕಾರೊಂದನ್ನು ಗಮನಿಸಿ ಪರಿಹಾರ ದೊರಕಿತು. ಹಿರಿಯರು ತಮ್ಮ ಕಾಲದ ಹಿರಿಮೆ-ಗರಿಮೆಗಳನ್ನು ಬಣ್ಣಿಸುವುದನ್ನು ಕೇಳಿದರೆ ಈಗಲೇ ನಾವು ಆ ಕಾಲಕ್ಕೆ ಸರಿಯುವಂತಿದ್ದರೆ ಎನ್ನಿಸುತ್ತದೆ. ಲೆವನ್‌ವರ್ತ್‌ ಅಂತಹ ಅನುಭವ ಕಟ್ಟಿಕೊಡುತ್ತದೆ! 

ಮರದ ಬಹು ಉಪ್ಪರಿಗೆ ಕಟ್ಟಡಗಳು, ಮರದ್ದೇ ಗಣ್ಯರ ಬೃಹತ್‌ ಪುತ್ಥಳಿಗಳು, ಮುಂಗಟ್ಟುಗಳು, ಮಳಿಗೆಗಳು, ಪ್ರದರ್ಶನ- ಮಾರಾಟಕ್ಕಿಟ್ಟಿರುವ ವಸ್ತು ವೈವಿಧ್ಯಗಳು. ಶತಪಥ ಸಾಗುವ ಕುದುರೆ ಸಾರೋಟುಗಳು- ಎಲ್ಲವೂ ನಮ್ಮನ್ನು 150-250 ವರ್ಷಗಳ ಹಿಂದಕ್ಕೆ ಒಯ್ದಿರುತ್ತವೆ. 1.25 ಚದರ ಕಿ.ಮೀ. ವಿಸ್ತಾರದ ಈ ಪುಟ್ಟ ನಗರಿಯ ಜನಸಂಖ್ಯೆ ಕೇವಲ 2000. ಕಾಫಿ, ಚಹಾ, ಐಸ್‌ಕ್ರೀಮ್‌, ಜ್ಯೂಸ್‌ ಪಾರ್ಲರುಗಳಿಗೆ, ಬೇಕರಿಗಳಿಗೆ ಬರವಿಲ್ಲ. 

ವಾಸ್ತವವಾಗಿ ಲೆವನ್‌ವರ್ತ್‌ ಅಮೆರಿಕದ ಮೂಲ ನಿವಾಸಿಗಳ ಊರು. ಅದು ಆಗ್ನೇಯ ಜರ್ಮನಿಯ ದೊಡ್ಡ ಪ್ರಾಂತ್ಯವಾದ ಬವೇರಿಯಾವನ್ನೇ ಹೋಲುತ್ತದೆ. ಸುಮಾರು ಒಂದೂವರೆ ಕೋಟಿಯಷ್ಟು ಜನ ಸಂಖ್ಯೆಯುಳ್ಳ ಬವೇರಿಯಾ ನಾನಾ ದಾಖಲೆಗಳಿಗೆ ಪ್ರಖ್ಯಾತಿ. ಔದ್ಯೋಗಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಯಶಸ್ಸು ಸಾಧಿಸಿದೆ. ಅತಿ ದೊಡ್ಡ ತಂತ್ರಜ್ಞಾನ ವಸ್ತು ಪ್ರದರ್ಶನಾಲಯ, “ಫ‌ುಸ್ಸೆನ್‌’ ಎಂಬ ಬೃಹತ್‌ ಪಿಟೀಲು ಉತ್ಪಾದನಾ ಉದ್ಯಮ, ಬೃಹತ್‌ ಸೌರಶಕ್ತಿ ಸ್ಥಾವರವನ್ನು ಈ ಪ್ರಾಂತ್ಯ ಹೊಂದಿದೆ. ಅದರ ರಾಜಧಾನಿ ಮ್ಯೂನಿಚ್‌ ವೈವಿಧ್ಯಮಯ ವಸ್ತು ಪ್ರದರ್ಶನಾಲಯಗಳ ಬೀಡು. ಗಮನ ಸೂರೆಗೊಳ್ಳುವ ಅಲಂಕಾರ ಭೂಯಿಷ್ಟ ನಿಂಫೆನ್‌ಬರ್ಗ್‌ ಅರಮನೆ. ಪ್ರತೀವರ್ಷ ಇಲ್ಲಿ ನೆರವೇರುವ “ಬಿಯರ್‌ ಜಾತ್ರೆ’ ಜಗತøಸಿದ್ಧ. ಕುಗ್ರಾಮಗಳು, ಜೊತೆಗೇ ಮಧ್ಯಯುಗದ ಪಟ್ಟಣಗಳು. ಹಿಂಬದಿಗೆ ಮನಮೋಹಕ ಯೂರೋಪಿನಾದ್ಯಂತ (1200 ಕಿ.ಮೀ.) ಪಸರಿಸಿರುವ ಅತಿ ಎತ್ತರದ (ಗರಿಷ್ಠ 4808 ಮೀ.) ಆಲ್ಪಸ್‌ ಪರ್ವತಶೇಣಿ. ಲೆವನ್‌ವರ್ತ್‌ ಸ್ವರೂಪವನ್ನೂ ಬವೇರಿಯಾದಂತೆ ಏಕೆ ಮಾರ್ಪಡಿಸಿ ಸುಂದರವಾಗಿಸಬಾರದೆನ್ನಿಸಿತು ಮುಂದಾಳುಗಳಿಗೆ, ಯೋಜಕರಿಗೆ. ಹೇಗೂ ಹಿನ್ನೆಲೆಯಲ್ಲಿ ಕ್ಯಾಸ್ಕೇಡ್‌ ಪರ್ವತ ಶ್ರೇಣಿ ಉಂಟಲ್ಲ ಎನ್ನುವುದಕ್ಕಿಂತ ಪ್ರೇರಣೆ ಬೇಕೆ? 1906 ರಲ್ಲಿ ನಕ್ಷೆ ಕಾರ್ಯರೂಪ ತಳೆಯಿತು. ಇದರ ಫ‌ಲವೇ, “ಬವೇರಿಯನ್‌ ವಿಲೇಜ್‌’ ಲೆವನ್‌ವರ್ತ್‌. ಒಂದೊಂದು ಅಂಗಡಿ, ಮುಂಗಟ್ಟಿನಲ್ಲೂ ಶತಮಾನಕ್ಕೂ ಕಡಿಮೆ ಹಿಂದಿನ ಸರಕುಗಳು, ಗಡಿಯಾರಗಳು, ಲೋಹದ ಸಂದೂಕಗಳು,  ಬೊಂಬೆಗಳು, ಸೌಟುಗಳು, ಕಸೂತಿಗಳು, ಮುಖವಾಡಗಳು, ಪಾತ್ರೆ-ಪಡಗಗಳು, ಅಲಂಕರಣ ವಸ್ತುಗಳು, ಮಕ್ಕಳ ಆಟಿಕೆಗಳು, ದೀಪದ ಕಂಬಗಳು. ಹಾಗಾಗಿ, ಆ ಒಂದೊಂದು ಮಳಿಗೆಯೂ ಕಿರಾಣಿ ಜಾನಪದ ಲೋಕವೇ. ಹೊಟೇಲುಗಳಲ್ಲಿ ತಿನಿಸು, ಪೇಯ ದುಬಾರಿಯೆನ್ನಿಸಿದರೂ ಅಪ್ಪಟ ಗ್ರಾಮೀಣ ಪರಿಸರ ಅದನ್ನು ಗೌಣವಾಗಿಸುವುದು. ಉಳಿದುಕೊಳ್ಳಲು ಹೊಟೇಲುಗಳಿವೆ. ಧಗೆ ಏರಿದಾಗ ತಂಪೆರೆಯುವ ಸಲುವಾಗಿ ಅವುಗಳ ಕಿಟಕಿಗಳ ಮೂಲಕ ತಣ್ಣೀರಿನ‌ ಸಿಂಚನ ಹೊರಬಂದಿರುತ್ತದೆ. ಪರ್ವತಶ್ರೇಣಿ ಸಿಂಚನ ಸೃಷ್ಟಿಸುವ ಹಬೆಗೆ ವಿಶಿಷ್ಟ ಸಾಥ್‌ ನೀಡಿರುತ್ತದೆ. ದೂರದಲ್ಲಿ ನಿಂತು ಲೆವನ್‌ವರ್ತ್‌ ಶಹರನ್ನು ವೀಕ್ಷಿಸಿದರೆ ಜಹಜೊಂದು ತೇಲುತ್ತಿದೆಯೋ ಎಂದು ಭಾಸವಾಗುತ್ತದೆ. ಇವಳು ಮೊಮ್ಮಗಳಿಗೆ ಚೆನ್ನಮಣೆ ಕೊಡಿಸಿದಳು. 

“ಹಳೆ ಬೇರು, ಹೊಸ ಚಿಗುರು’ ನುಡಿಯನ್ನು ಲೆವನ್‌ವರ್ತ್‌  ಸಾಕಾರಗೊಳಿಸಿದೆ. ಯಾವುದೇ ಪರಿಕರವನ್ನು “ಇನ್ನಾಯಿತು ಇದರ ಕಥೆ’ ಎಂಬ ಅಂಬೋಣ ತಳೆಯುವ ಮುನ್ನ ಮತ್ತೆ ಮತ್ತೆ ಪರಿಶೀಲಿಸಬೇಕು. ಮತ್ತಷ್ಟು ದಿನಗಳವರೆಗೆ ಬಳಸಲಾದೀತೆ ಪ್ರಶ್ನಿಸಿಕೊಳ್ಳಬೇಕು. ಅದರ ಉತ್ಪಾದನೆಗೆ ಸಂದ ಪರಿಶ್ರಮ, ವೆಚ್ಚವಾದ ಸಂಪನ್ಮೂಲ, ಸಾಗಾಣಿಕೆ ಖರ್ಚು ಎಲ್ಲವನ್ನೂ ಆಲೋಚಿಸಬೇಕು. ಸಾರಾಂಶವಿಷ್ಟೆ , ಪುನರ್‌ಬಳಕೆ ಮನುಷ್ಯನ ಬದುಕಿನ ಶೈಲಿಯ ಒಂದು ಭಾಗವಾಗಬೇಕು. ಇರುವುದೊಂದೇ ಪರಿಸರ. ಪ್ರಕೃತಿಯನ್ನು ವೃಥಾ ಸೊರಗಿಸಬಾರದು. ಬವೇರಿಯ ಪ್ರಾಂತ್ಯ, ಅದರ ತದ್ರೂಪವೆನ್ನಬಹುದಾದ ಲೆವನ್‌ವರ್ತ್‌ ಜಗತ್ತಿಗೇ ಕೊಡುವ ಸಂದೇಶ ಅದೇ ತಾನೇ? ಇಂಧನ ತೈಲ ಹಿತಮಿತವಾಗಿ ಉಪಯೋಗಿಸಿ ಎನ್ನುವುದನ್ನು ಪ್ರಚುರಪಡಿಸಲು ಈ ಜಾಹೀರಾತು ಉಕ್ತಿ ಅದೆಷ್ಟು ಮೊನಚು ನೋಡಿ; “ತೈಲವನ್ನು ಸೊರಗಿಸಿ, ಯಂತ್ರವನ್ನಲ್ಲ!’. ಅಂದ ಹಾಗೆ ಲೆವನ್‌ವರ್ತ್‌ಗೆ ಹೋಗುವ ಹಾದಿಯಲ್ಲಿ ಅಂದರೆ  50 ಮೈಲಿಗಳು ಪಯಣಿಸಿದಾಗ ಮನಮೋಹಕ ಡಿಸೆಪ್ಷ‌ನ್‌ ಜಲಪಾತ ಸಿಗುತ್ತದೆ. ಕಲ್ಲು ಬಂಡೆಗಳನ್ನು ಅತ್ಯವಸರದಿಂದ ದಾಟುತ್ತ ನೀರು ನಮ್ಮ ಮೇಲೆರಗುವಂತೆ ತೋರುವುದು. ಸಂಜೆ ಐದೂವರೆಗೆ ನಮ್ಮ ಕಾರು ರೆಡ್ಮಂಡ್‌ನ‌ತ್ತ ಮುಖ ಮಾಡಿತು. ಮೌನ ಆವರಿಸಿತ್ತು. ಅದು ಅಗಲಿಕೆಯ ವೇದನೆಯ ಜೊತೆಗೆ  ಇನ್ನು ಮುಂದೆ ನಮ್ಮ ನಿಘಂಟಿನಲ್ಲಿ ಪ್ರಾಚೀನಾವಶೇಷ ಎಂಬ ಶಬ್ದವೇ ಇರದು ಎಂಬ ಸಂಕಲ್ಪವನ್ನೂ ಸೂಚಿಸಿತ್ತು. 

ಹೋಗುವುದು ಹೇಗೆ: ಅಮೆರಿಕ ಪ್ರವಾಸ ಕೈಗೊಂಡಾಗ ವೀಕ್ಷಿಸಬೇಕಾದ‌ ಸ್ಥಳಗಳ ಪಟ್ಟಿಯಲ್ಲಿ ಸಿಯಾಟಲ್‌ ನಗರ ಮರೆಯಬಾರದು. ಏಕೆಂದರೆ, ಅಲ್ಲೇ ಸ್ಪೇಸ್‌ ನೀಡಲ್‌, ಗಾಜಿನ ಮ್ಯೂಸಿಯಂ, ವಿಮಾನ ಕಾರ್ಖಾನೆಯಂತಹ ಮುಖ್ಯ ತಾಣಗಳಿವೆ.  ಬೆಂಗಳೂರಿನಿಂದ ಲಂಡನ್‌, ಚಿಕಾಗೋಗಿಂತ  ದುಬೈ ಮಾರ್ಗವಾಗಿ ಸಿಯಾಟಲ್‌ ತಲುಪುವುದು ಸರಾಗ. ಈ ಹತ್ತಿರದ ವಾಯುಮಾರ್ಗ ಕ್ರಮಿಸಲು ಒಟ್ಟು ಹದಿನೆಂಟು ತಾಸುಗಳು ಸಾಕು. 
                                       
 ಬಿಂಡಿಗನವಿಲೆ ಭಗವಾನ್‌

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.