ಹೆಲ್ಸಿಂಕಿಯಲ್ಲಿ ಸೈಕಲ್‌ ಸವಾರಿ


Team Udayavani, Oct 7, 2018, 6:00 AM IST

2.jpg

ನನಗೆ ಫಿನ್‌ಲೇಂಡಿನ ರಾಜಧಾನಿ ಹೆಲ್ಸಿಂಕಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿದ್ದು ಅದೃಷ್ಟ ಎಂದೇ ಹೇಳಬಹುದು. ಹೆಲ್ಸಿಂಕಿಯಲ್ಲಿ ಬಂದಿಳಿದು ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ಹಿಡಿದ ನಂತರ ಮಾಡಿದ ಮೊದಲ ಕೆಲಸವೆಂದರೆ ಒಂದು ಸೈಕಲ್‌ ಅನ್ನು ಕೊಂಡುಕೊಂಡಿದ್ದು. ನಾನು ಮಾಡಿದ ಕೆಲವು ಒಳ್ಳೆಯ ನಿರ್ಧಾರಗಳಲ್ಲಿ ಇದೂ ಒಂದು. ಅದರ ಲಾಭವನ್ನು ಪ್ರತಿದಿನ ಅನುಭವಿಸುತ್ತಿದ್ದೇನೆ.

ಹೆಲ್ಸಿಂಕಿ ವೈವಿಧ್ಯಗಳಿಂದ ಕೂಡಿದ ನಗರ ಹಾಗೂ ಸೈಕಲ್‌ ಸವಾರರ ಕನಸಿನ ಭೂಮಿ. ಸುಂದರ ಉದ್ಯಾನವನಗಳು, ದಟ್ಟವಾದ ಮರಗಿಡಗಳು ಹಾಗು ಸಮುದ್ರದ ತಡಿಯಲ್ಲೇ ಸಾಗುವ ನೀಳವಾದ ರಸ್ತೆಗಳಿಂದ ಕೂಡಿದೆ. ಮುಖ್ಯವಾಗಿ ಸೈಕಲ್‌ ಸವಾರಿಗಾಗಿಯೇ ನಿರ್ಮಾಣ ಹೊಂದಿದೆಯೋ ಎನಿಸುವಂಥ ರಸ್ತೆಗಳು ಇಲ್ಲಿವೆ. 1200 ಕಿ.ಮೀ ಸೈಕಲ್‌ ದಾರಿಯಲ್ಲಿ 500 ಕಿ. ಮೀ. ದೂರ ಮನೋರಂಜನೆಗಾಗಿ ಇರುವ ಪ್ರದೇಶದÇÉೇ ಸಾಗುತ್ತದೆ. ಇಲ್ಲಿ ಬಗೆಬಗೆಯ ಜನರು ಸೈಕಲ್‌ ಮೇಲೆ ಓಡಾಡುವುದನ್ನು ನೋಡಬಹುದು. ಪ್ರವಾಸಿಗರು, ಕಚೇರಿಗೆ ಹೋಗುವವರು, ಶಾಲಾಮಕ್ಕಳು, ನವ ತರುಣ-ತರುಣಿಯರು, ದಂಪತಿಗಳು, ವ್ಯಾಯಾಮ ಮಾಡುವವರು ನಾನಾ ಬಗೆಯವರು ಇದ್ದಾರೆ. ಚಿಕ್ಕ ಸೀಟ್‌ ಅಳವಡಿಸಿಕೊಂಡು ಅದರಲ್ಲಿ ಪುಟಾಣಿಗಳನ್ನು ಕೂರಿಸಿಕೊಂಡು ಓಡಾಡುವವರಿದ್ದಾರೆ. ಪುಟ್ಟ ಸೈಕಲ್‌ಗ‌ಳಲ್ಲಿ ಹಿಂಬಾಲಿಸುವ ಕೊಂಚ ದೊಡ್ಡ ಮಕ್ಕಳ ಜೊತೆ ಸಾಗುವ ಪೋಷಕರಿದ್ದಾರೆ. ಇಲ್ಲಿ ಅಂಚೆ ಬಟವಾಡೆಗೂ ಸೈಕಲ್‌. ಆಹಾರ ಪದಾರ್ಥಗಳ ವಿತರಣೆಗೂ ಅದೇ.

ಗೂಗಲ್‌ ಮ್ಯಾಪ್‌ ಮಾರ್ಗದರ್ಶಿ
ನನಗಂತೂ ಈ ಸುಂದರ ನಗರವನ್ನು ಅನ್ವೇಷಿಸಲು ಸೈಕಲ್‌ ಒಂದು ಉತ್ತಮ ಸಂಗಾತಿ. ಗೂಗಲ್‌ ಮ್ಯಾಪಿನ ಸಹಾಯದಿಂದ ನಾನು ನೋಡಬೇಕೆಂದಿರುವ ಸ್ಥಳವನ್ನು ಆರಿಸಿಕೊಂಡು ನನ್ನ ಸೈಕಲ್‌ ಜೊತೆ ಪಯಣ ಆರಂಭಿಸುತ್ತೇನೆ. ಖಚಿತವಾದ ಮಾರ್ಗವನ್ನು ತೋರುವ ಗೂಗಲ್‌ ಮ್ಯಾಪ್‌ ನಂಬಿಕೆಗೆ ಅರ್ಹನಾದ ಸ್ನೇಹಿತ.

ನನ್ನ ಮೊತ್ತಮೊದಲ ಸೈಕಲ್‌ ಸವಾರಿ ಹೆಲ್ಸಿಂಕಿಯ ಹೃದಯ ಭಾಗದಲ್ಲಿರುವ ಪಾರ್ಕಿನ ಸುತ್ತಲೇ ಆಗಿತ್ತು. ಬಹಳ ಅಂದವಾದ ಉದ್ಯಾನವನ. ಪಾರ್ಕಿನಲ್ಲಿ ಸೈಕಲ್‌ ಸವಾರರ ಜೊತೆಗೇ ನಡಿಗೆಗೆ ಬಂದವರು, ಓಡುವವರು ಬೇಕಾದಷ್ಟು ಮಂದಿ ಕಾಣಿಸುತ್ತಾರೆ. ಈ ರಮ್ಯ ಉದ್ಯಾನವನದಲ್ಲಿ ನನಗೆ ಕವಿ ರಾಬರ್ಟ್‌ ಫ್ರಾಸ್ಟ್‌ನ ಕವಿತೆಯ ದ ವುಡ್ಸ್‌ ಆರ್‌ ಲವ್ಲೀ, ಡಾರ್ಕ್‌ ಅಂಡ್‌ ಡೀಪ್‌ ಎಂಬ ಸಾಲುಗಳು ನೆನಪಾಗುತ್ತವೆ. ಸೆಂಟ್ರಲ್‌ ಪಾರ್ಕ್‌ನಲ್ಲಿ ಸೈಕ್ಲಿಂಗ್‌ ಮಾಡುವಾಗ ನನಗೊಂದು ಹೊಸವಿಚಾರ ತಿಳಿಯಿತು. ಅಲ್ಲಿ ಸಾಮೂಹಿಕ ಒಡೆತನದಲ್ಲಿ ತೋಟಗಳನ್ನು ಬೆಳೆಸುವ ಪರಿಪಾಠವಿದೆ. ಒಂದೇ ತೋಟ, ಹಲವರು ಒಡೆಯರು. ನಗರಾಡಳಿತವು ಇಲ್ಲಿನ ನಾಗರಿಕರಿಗೆ ಬಾಡಿಗೆಯಲ್ಲಿ ಇಂಥ ಸ್ಥಳಗಳನ್ನು ಬಿಟ್ಟುಕೊಡುತ್ತದೆ. ಜನ ಬಿಡುವಿನ ವೇಳೆಯಲ್ಲಿ ತೋಟಗಾರಿಕೆಯ ಹವ್ಯಾಸಕ್ಕೆ ಹಚ್ಚಿಕೊಳ್ಳಲು ಇದು ಮುಕ್ತ ಅವಕಾಶ.

ಪ್ರತಿದಿನ ನಾನು ಸೈಕಲ್ಲಿನಲ್ಲೇ ಕಚೇರಿಗೆ ಹೋಗುತ್ತೇನೆ. ಕಚೇರಿಗೆ ಹೋಗುವ ಮಾರ್ಗ ಸೆಂಟ್ರಲ್‌ ಪಾರ್ಕಿನಿಂದಲೇ ಹಾದು ಹೋಗುವ ಕಾರಣ ನನಗೆ ಪ್ರಯಾಣ ತುಂಬಾ ಆಹ್ಲಾದಕರ ಅನುಭವವಾಗುತ್ತದೆ. ಪ್ರತಿದಿನ ಸೈಕಲ್‌ ಸವಾರಿಯಿಂದ ಒಳ್ಳೆಯ ಆರೋಗ್ಯ, ಮನಸ್ಸಿಗೆ ಉಲ್ಲಾಸ ಖಂಡಿತ ದೊರೆಯುತ್ತದೆ. ನನಗೇನೋ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದಕ್ಕಿಂತ ಬಯಲಿನಲ್ಲಿ ಸವಾರಿಗೆ ಹೊರಡುವುದೇ ಆರಾಮದಾಯಕ ಎಂದು ಅನ್ನಿಸುತ್ತದೆ.

ನಗ್ನ ಸೈಕಲ್‌ ಸವಾರರು
ಹೆಲ್ಸಿಂಕಿಯಲ್ಲಿ ನನಗೆ ಆದ ಒಂದು ಕುತೂಹಲಕರ ಅಷ್ಟೇ ಆಘಾತಕಾರಿ ಅನುಭವವೆಂದರೆ ನಗ್ನ ಸೈಕಲ್‌ ಸವಾರರ ನಗರ ಪ್ರದಕ್ಷಿಣೆ ! ಕೆಲವು ನಿಮಿಷ ಈ ದೃಶ್ಯ ನನ್ನನ್ನು ಮಂತ್ರಮುಗ್ಧಗೊಳಿಸಿತು. ಒಮ್ಮೆಯಂತೂ ಆ ನಗ್ನ ಸವಾರರ ಗುಂಪು ಜನಗಳ ಗಮನ ತಮ್ಮ ಕಡೆಗೆ ತಿರುಗಿದ್ದು ಕಂಡು ಬೇಗಬೇಗನೆ ಮುಂದಕ್ಕೆ ಸಾಗಿತು. ಇಲ್ಲಿಯೇ ಸಮೀಪದಲ್ಲಿ ಹೆಲ್ಸಿಂಕಿಯ ಸುಂದರ ಭವ್ಯ ಕೆಥೆಡ್ರಾಲ್‌ ಇದೆ.

ಹೆಲ್ಸಿಂಕಿಯಿಂದ 50 ಕಿ. ಮೀ. ದೂರದಲ್ಲಿ ರುವ ಐತಿಹಾಸಿಕ ನಗರ ಪೊವೂìಗೆ ಸವಾರಿ ಹೋದದ್ದು ಒಂದು ಅತ್ಯದ್ಭುತ ಅನುಭವ. ಸುಂದರ ಮುಂಜಾವಿನಲ್ಲಿ ಹಿತಕರ ವಾತಾವರಣದಲ್ಲಿ ಪ್ರಯಾಣ ಚೇತೋಹಾರಿ. ದಾರಿಯ ಇಕ್ಕೆಲಗಳಲ್ಲಿ ತೋಟಗಳಿದ್ದವು. ಅನೇಕ ಸೈಕಲ್‌ ಸವಾರರು ಮಾತಿಗೆ ಸಿಕ್ಕರು. ಹಾಗೆ, ಅರ್ಧದಾರಿಯಲ್ಲಿ ನನಗೆ ಜೊತೆಯಾದ ಸೈಕಲ್‌ ಸವಾರನೊಬ್ಬ ಜತೆಯಾದ. ಆತನ ಹೆಸರು ಪ್ಯಾಟ್ರಿಕ್‌. ನನ್ನ ಹಾಗೆ ಹೆಲ್ಸಿಂಕಿಯಿಂದ ಪೊವೂìಗೆ ಹೊರಟಿದ್ದ. ಪ್ಯಾಟ್ರಿಕ್‌ನ ದೀರ್ಘ‌ ಹಾದಿಯ ಸೈಕಲ್‌ ತುಳಿದೆ. ಜೀವನದ ಪಯಣದಲ್ಲಿ ಹೀಗೆ ಅಪರಿಚಿತರು ಅನಿರೀಕ್ಷಿತವಾಗಿ ಜೊತೆಯಾಗುತ್ತಾರೆ. ಹಳೆಯ ಯಾವುದೋ ಅನುಬಂಧದ ತಂತು ಅವರನ್ನು ನಮ್ಮ ಜೊತೆಯಾಗಿಸಿತು ಎಂದು ಭಾವಿಸಬೇಕಷ್ಟೆ.  ಒಂದು ಐ.ಟಿ. ಕಂಪನಿಯಲ್ಲಿ ಮಾರಾಟ ಪ್ರತಿನಿಧಿ ಆಗಿರುವ ಪ್ಯಾಟ್ರಿಕ್‌ ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾನಂತೆ. 

ಪೊವೂì ಪಟ್ಟಣ ಹತ್ತಿರ ಬಂದ ಹಾಗೆ ನಮ್ಮ ದಾರಿಗಳು ಬದಲಾದವು. ಅಲ್ಲೇಕೋ ಮಂಗಳೂರಿನ ರಸ್ತೆಗಳ ನೆನಪಾಯಿತು. ಆದರೆ, ವಾಹನ ದಟ್ಟಣೆ ಅತಿಯಾಗಿ ಇರಲಿಲ್ಲ. ಎರಡು ಗಂಟೆ ಮೂವತ್ತು ನಿಮಿಷದಲ್ಲಿ 50 ಕಿ. ಮೀ. ದೂರ ಕ್ರಮಿಸಿದ್ದೆವು. ಪೊವೂì ಸೊಗಸಾದ ಪುರಾತನ ನಗರ. ಬಹುತೇಕ ಎಲ್ಲಾ ಪುರಾತನ ಯೂರೋಪ್‌ ನಗರಗಳಲ್ಲಿರುವ ಹಾಗೆ ಅಂದವಾದ ಹಳೆಯ ಕಾಲದ ಇಗರ್ಜಿ, ಭವ್ಯವಾದ ಚೌಕ ಮತ್ತು ಬಂದರು ಕಟ್ಟೆ ಇದೆ. 

ಅಲ್ಲೆಲ್ಲ ನೋಡಿದ ಬಳಿಕ ಹೆಲ್ಸಿಂಕಿಗೆ ಮರಳುವಾಗ ಸೈಕಲನ್ನು ಫೆರಿಯ ಮೇಲೆ ಹೇರಿಕೊಂಡು ಬಂದೆ. ಫೆರಿ ಎಂದರೆ ಪ್ರಯಾಣಿಕರನ್ನು ಮತ್ತು ಸರಂಜಾಮುಗಳನ್ನು ಸಾಗಿಸುವ ನೌಕೆ. ನೂರಕ್ಕೂ ಹೆಚ್ಚು ಸೈಕಲ್‌ಗ‌ಳನ್ನು ತುಂಬಿಕೊಂಡು ಫೆರಿ ಹೊರಟಿತು. ಫೆರಿಯ ಮೇಲ್ಛಾವಣಿಯಲ್ಲಿ ಸೈಕಲ್‌ಗ‌ಳನ್ನು ಇಟ್ಟಿದ್ದರು. ಸುಮಾರು ಮೂರು ಗಂಟೆ ಪಯಣದಲ್ಲಿ ಸಣ್ಣ ದ್ವೀಪಗಳ ಸುಂದರ ನೋಟ ನೋಡಲು ಚೆನ್ನಾಗಿತ್ತು. ಫೆರಿಯಲ್ಲಿದ್ದ  ಕೆಫೆಯೊಂದು ಸೈಕಲ್‌ ಸವಾರರಿಗೆ ಅಗತ್ಯವಾಗಿ ಬೇಕಾಗಿದ್ದ ಉಪಹಾರ ಒದಗಿಸಿತ್ತು. ಸಂಜೆಯ ಚಳಿಗೆ ಬಿಸಿ ಬಿಸಿ ಕಾಫಿ ತುಂಬ ಚೇತೋಹಾರಿಯಾಗಿತ್ತು. ಮಧ್ಯೆ ಇಸ್ಪೂ ನಗರ ಸಿಗುತ್ತದೆ. ಅಲ್ಲಿನ ಅತಿ ದೊಡ್ಡ ಸರೋವರ ಬೋಡೊಮ್‌ ಇದೆ. ಪ್ರಸಿದ್ಧ ಗೇಮ್‌ ಶೋ ಆಂಗ್ರಿ ಬರ್ಡ್‌ ಮತ್ತು ನೋಕಿಯಾದ ಪ್ರಧಾನ ಕಛೇರಿಗಳಿರುವ ರೋವಿಯೋ ಪಟ್ಟಣ ಅಲ್ಲಿಯೇ ಸಮೀಪದಲ್ಲಿದೆ. ಇಸ್ಪೂದಲ್ಲಿನ ನೀರಿನ ಹಾದಿಗುಂಟದ ಪ್ರಯಾಣ ಮರೆಯಲಾರದ ಅನುಭವ. ಹೆಲ್ಸಿಂಕಿಯ ಇರುವಷ್ಟು ಕಾಲ ಹೊಸ ಪ್ರದೇಶಗಳ ಅನ್ವೇಷಣೆ ನನ್ನ ಕನಸು. ಚಳಿಗಾಲದಲ್ಲಿ ಸೈಕಲ್‌ ಸವಾರಿ ಹಿತಕರ. ಹಿಮದಲ್ಲಿ ದಪ್ಪ ಚಕ್ರದ ಸೈಕಲ್‌ ಸವಾರಿ ಇಲ್ಲಿ ಜನಪ್ರಿಯ. ಸೈಕಲ್‌ ನಿರಂತರವಾಗಿ ಚಲಿಸುತ್ತಿದ್ದರೆ ಮಾತ್ರ ಸಮತೋಲನದಲ್ಲಿರುತ್ತದೆ. ಬದುಕು ಕೂಡ ಹಾಗೆಯೇ. 

ರಮೇಶಬಾಬು ಪಿ. ವಿ.

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.