ಗಡಿರೇಖೆಯಿಲ್ಲದ ದೇಶಕಾಲ 


Team Udayavani, Nov 25, 2018, 6:00 AM IST

d-8.jpg

ರಷ್ಯಾ ಮತ್ತು ಭಾರತಗಳ ನಡುವೆ ರಾಜಕೀಯವಾಗಿ ಎಂಥ ಭೇದವೇ ಇರಲಿ, ಸಾಂಸ್ಕೃತಿಕವಾಗಿ ಅವು ಎಲ್ಲಿಯೋ ಒಂದೆಡೆ ಸಂಧಿಸುತ್ತವೆ ಎಂಬುದು ಅಚ್ಚರಿಯಾದರೂ ನಿಜವೇ.

ಮೂರು ದಶಕಗಳ ಹಿಂದಿನ ಮಾತು. ಕಂಚಿ ಪರಮಾಚಾರ್ಯರಾದ ಶ್ರೀ ಚಂದ್ರಶೇಖರೇಂದ್ರ ಸರಸ್ವತಿಗಳನ್ನು ನೋಡಲೆಂದು ಒಂದು ರಷ್ಯನ್‌ ನಿಯೋಗ ಬಂದಿತ್ತು. ನಿಯೋಗದ ಮುಂದಾಳುತ್ವ ವಹಿಸಿದ್ದ ಪ್ರೊ. ರಿಬಕೋವ್‌ರಿಗೆ ತನ್ನ ಒಂದಷ್ಟು ಸಂಶಯಗಳನ್ನು ಕಂಚಿ ಶ್ರೀಗಳಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕಿತ್ತು. ಆದರೆ, ನಿಯೋಗ ಶ್ರೀಮಠಕ್ಕೆ ಬರುವಷ್ಟರಲ್ಲಿ ಸ್ವಾಮೀಜಿಗೆ ತೀವ್ರ ಅನಾರೋಗ್ಯವಿದ್ದುದರಿಂದ ಭೇಟಿಯನ್ನು ನಿರಾಕರಿಸಲಾಯಿತು. ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ರಷ್ಯನ್ನರು ಇನ್ನೇನು ವಾಪಸು ಹೊರಡಬೇಕು ಎನ್ನುವಷ್ಟರಲ್ಲಿ ಮಠದ ಶಿಷ್ಯನೊಬ್ಬ ಬಂದು, “”ಆಚಾರ್ಯರು ನಿಮ್ಮನ್ನು ಬರಹೇಳುತ್ತಿದ್ದಾರೆ. ಅವರಿಗೆ ನಿಮ್ಮನ್ನು ಕಾಣಬೇಕಂತೆ” – ಎಂದು ಒಸಗೆ ಒಪ್ಪಿಸಿದ. ತೀವ್ರ ಜ್ವರದ ಬಾಧೆಯಿಂದ ನರಳುತ್ತಿದ್ದ ಶ್ರೀಗಳು, ರಷ್ಯನ್‌ ಪಂಡಿತರ ತಂಡ ಬಂದಿದೆ ಎಂಬುದನ್ನು ಕೇಳಿದೊಡನೆ, ಅವರನ್ನು ಮಾತಾಡಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ರಷ್ಯನ್ನರು ಖುಷಿಯಿಂದ ಶ್ರೀಗಳಿದ್ದಲ್ಲಿಗೆ ಹೋದರು. ಪ್ರೊ. ರಿಬಕೋವ್‌ ಸ್ವಾಮೀಜಿಗಳಿಗೆ ತೀರ ಹತ್ತಿರದಲ್ಲಿ ಪಾದದ ಬಳಿ ಕೂತರು. ಇಬ್ಬರ ಕಣ್ಣುಗಳೂ ಪರಸ್ಪರರನ್ನು ಬಹಳ ಹೊತ್ತು ನೋಡಿದವು. ಅಷ್ಟರಲ್ಲಿ, ರಷ್ಯನ್‌ ನಿಯೋಗದ ಜೊತೆಗಿದ್ದ ಭರತನಾಟ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ, “”ರಿಬಕೋವ್‌ ಅವರೇ, ನಿಮಗೆ ಅನೇಕ ಸಂಶಯಗಳಿದ್ದವು ಎಂದಿದ್ದೀರಲ್ಲ? ಅವನ್ನೆಲ್ಲ ಒಂದೊಂದಾಗಿ ಶ್ರೀಗಳ ಬಳಿ ಕೇಳಿ” ಎಂದರು. ರಿಬಕೋವ್‌ ಪದ್ಮಾ ಅವರತ್ತ ತಿರುಗಿ, “”ನನ್ನ ಸಂಶಯಗಳಿಗೆಲ್ಲ ಶ್ರೀಗಳು ಉತ್ತರ ಕೊಟ್ಟಾಯಿತು!” ಎಂದರು. 

ಮೌನದ ಸಂಭಾಷಣೆಯ ನಂತರ ಕಂಚಿ ಪರಮಾಚಾರ್ಯರು ಪ್ರೊ. ರಿಬಕೋವ್‌ರಲ್ಲಿ ರಷ್ಯನ್‌ ಭಾಷೆಯಲ್ಲಿ ಮಾತಿಗಿಳಿದು, “”ನಿಮ್ಮ ದೇಶದ ಉತ್ತರ ಭಾಗದಲ್ಲಿ ಇನ್ನೂ ಜನ ಸಂಸ್ಕೃತಭೂಯಿಷ್ಠವಾದ ರಷ್ಯನ್‌ ಭಾಷೆಯನ್ನೇ ಮಾತಾಡುತ್ತಿದ್ದಾರಲ್ಲ?” ಎಂದು ಕೇಳಿದಾಗ, ರಿಬಕೋವ್‌ ಆನಂದಾಶ್ಚರ್ಯಗಳಿಂದ ಹೌದೆಂದು ತಲೆಯಾಡಿಸಿದರು. “”ನಮ್ಮ ಋಷಿ ಯಾಜ್ಞವಲ್ಕ ಬಂದದ್ದು ನಿಮ್ಮ ನಾಡಿನಿಂದ. ಇಂದಿಗೂ ನಿಮ್ಮ ಉತ್ತರ ರಷ್ಯಾದಲ್ಲಿ ಹೆಣ್ಣು ಮಕ್ಕಳಿಗೆ “ಲೋಪಾಮುದ್ರೋವಾ’ ಎಂದು ಹೆಸರಿಡುವ ಕ್ರಮವಿದೆ. ಲೋಪಮುದ್ರಾ, ಅಗಸ್ತ್ಯ ಋಷಿಗಳ ಪತ್ನಿ ಅಲ್ಲವೆ? ನಿಮ್ಮ ದೇಶಕ್ಕೆ ವೇದಕಾಲೀನರು ಇಟ್ಟಿದ್ದ ಹೆಸರೇನು ಗೊತ್ತೆ? ಋಷಿವರ್ಷ ಎಂದು. ಅದು ಋಷಿಗಳ ನಾಡು” ಎಂದರು ಶ್ರೀಗಳು. ರಿಬಕೋವ್‌ ಅವರ ಕಣ್ಣುಗಳಿಂದ ಆನಂದಾಶ್ರುಗಳು ಇಳಿದುಬಂದು ಕಪೋಲಗಳನ್ನು ತೋಯಿಸಿದವು. 
.
.
ಬಲ್ಗೇರಿಯನ್‌ ಭಾಷಾಶಾಸ್ತ್ರಜ್ಞರಾದ ವ್ಲಾದಿಮಿರ್‌ ಜಾರ್ಜೀವ್‌ ತನ್ನದೊಂದು ಕೃತಿಯಲ್ಲಿ ಒಂದು ವಿಚಿತ್ರ ಸಂಗತಿಯನ್ನು ದಾಖಲಿಸಿ¨ªಾರೆ. ಅವರು ಹೇಳುವಂತೆ, ಯಾವುದೇ ದೇಶದ ಅಥವಾ ಭೌಗೋಳಿಕ ಪ್ರದೇಶದ ಪ್ರಾಚೀನತೆಯನ್ನು ಅತ್ಯಂತ ಗಟ್ಟಿಯಾಗಿ ಹಿಡಿದಿಡುವುದು ಅಲ್ಲಿನ ಸ್ಥಳನಾಮಗಳು, ಅದರಲ್ಲೂ ನದಿಗಳ ಹೆಸರು ಹೆಚ್ಚಾಗಿ ಬದಲಾಗುವುದಿಲ್ಲ. ಹೊಸ ಸರಕಾರಗಳು ಬಂದು ಹಳೆನದಿಗಳ ಹೆಸರುಗಳನ್ನು ಬಲವಂತವಾಗಿ ಬದಲಿಸಿಹಾಕುವ ನಿರ್ಧಾರ ಮಾಡಿದರೂ ಹಳೆಯ ಹೆಸರುಗಳು ಜನಪದ ಕತೆಗಳಲ್ಲಿ, ಲಾವಣಿಗಳಲ್ಲಿ, ಮೌಖೀಕ ಕಾವ್ಯಗಳಲ್ಲಿ ಉಳಿದೇ ಉಳಿಯುತ್ತವೆ. ಹಾಗಾಗಿ, ಒಂದು ನದಿಯನ್ನು ಬತ್ತಿಸಿ ಬರಡಾಗಿಸುವುದು ಎಷ್ಟು ಕಷ್ಟವೋ ಅಷ್ಟೇ ಕಠಿಣ ಕೆಲಸ ಅದರ ಹೆಸರನ್ನು ಅಳಿಸಿಹಾಕುವುದು ಕೂಡ. ಹಾಗೆಯೇ ಪರ್ವತಗಳಿಗಿರುವ ಹೆಸರುಗಳು ಕೂಡ ಬಹುಕಾಲ ನಿಲ್ಲುತ್ತವೆ. 1927ರಲ್ಲಿ ರಷ್ಯಾ ಮತ್ತು ಬಲ್ಗೇರಿಯದ ಪ್ರಾಚ್ಯವಸ್ತು ಸಂಶೋಧಕರು ರಷ್ಯಾದ ಉತ್ತರ ಭಾಗದಲ್ಲಿ ರೀಸರ್ಚ್‌ ಕೆಲಸ ನಡೆಸುತ್ತಿದ್ದಾಗ, ಉರಾಲ್‌ ಪರ್ವತಶ್ರೇಣಿಯ ಅತಿ ದೊಡ್ಡ ಪರ್ವತವನ್ನು ಕಂಡುಹಿಡಿದರು. ಅವರಿಗದು ಅನ್ವೇಷಣೆ ಆಗಿದ್ದರೂ ಆ ಪರ್ವತದ ಬಗ್ಗೆ ಸ್ಥಳೀಯರಿಗೆ ಶತಮಾನಗಳಿಂದ ತಿಳಿದೇ ಇತ್ತು. ಆ ಪರ್ವತವನ್ನು ಸ್ಥಳೀಯರು ಕರೆಯುತ್ತಿದ್ದದ್ದು “ನಾರದ’ ಎಂದು. ಆ ಹೆಸರು ಯಾಕೆ ಬಂತು? ಯಾರಿಟ್ಟರು? ಎಂಬುದೆಲ್ಲ ಅಲ್ಲಿನ ಜನರಿಗೆ ಗೊತ್ತಿರಲಿಲ್ಲ. ಆದರೆ, ಹಲವು ದೇಶಭಾಷೆಗಳ ತೌಲನಿಕ ಅಧ್ಯಯನ ಮಾಡಿದ್ದ ವಿದ್ವಾಂಸರಿಗೆ ಮಾತ್ರ ಆ ಹೆಸರು ಕೇಳಿದೊಡನೆ ಆಶ್ಚರ್ಯವಾಯಿತು. ಇದು ಭಾರತೀಯ ಪರಂಪರೆಯ ಒಬ್ಬ ಋಷಿಯ ಹೆಸರಲ್ಲವೆ? ಭಾರತದಲ್ಲಿ, ಆತನನ್ನು ಉತ್ತರದಿಂದ ಬಂದ ಋಷಿ ಎಂದೇ ಹೇಳುತ್ತಾರಲ್ಲವೆ? ಜಿಜ್ಞಾಸೆ ಎದ್ದಿತು. ಉರಾಲ್‌ ಶ್ರೇಣಿಯ ಅತ್ಯುನ್ನತ ಪರ್ವತವೆಂದು “ನಾರದ’ ಗುರುತಿಸಲ್ಪಟ್ಟ ಮೇಲೆ, ರಷ್ಯನ್‌ ಸರಕಾರ, ಬೊಲೆವಿಕ್‌ ಕ್ರಾಂತಿಯ ದಶಮಾನೋತ್ಸವದ ನೆನಪಿಗೆ ಆ ಹೆಸರನ್ನು ಬದಲಿಸಿ ನರೋದ್‌ನಾಯ ಎಂದು ಕರೆಯಿತು. ಹಾಗೆಂದರೆ ಜನ ಎಂದು ಅರ್ಥ, ರಷ್ಯನ್‌ ಭಾಷೆಯಲ್ಲಿ.
.
.
ಸಂಸ್ಕೃತ ಮತ್ತು ರಷ್ಯನ್‌ ಎರಡೂ ಒಂದೇ ಭಾಷೆಯಿಂದ ಕವಲೊಡೆದವು ಎಂಬುದನ್ನು ತಿಳಿಸುವ ನೂರಾರು ಅಲ್ಲ, ಸಾವಿರಾರು ದೃಷ್ಟಾಂತಗಳು ನಮಗೆ ಈ ಎರಡೂ ಭಾಷೆಗಳಲ್ಲಿ ಸಿಗುತ್ತವೆ. ಇಂಗ್ಲಿಶ್‌ನ “ಡೋರ್‌’ ಎಂಬ ಶಬ್ದ ಬಂದದ್ದು ಸಂಸ್ಕೃತದ ದ್ವಾರದಿಂದ. ರಷ್ಯನ್‌ನಲ್ಲಿ ಇದನ್ನು ಕರೆಯುವುದು “ದ್ವೆರ್‌’ ಎಂದು. ದ್ವೆರ್‌ ಮತ್ತು ದ್ವಾರ ಎಂಬವು ಜ್ಞಾತಿಪದಗಳು; ಅವುಗಳಿಂದ ಮುಂದೆ “ಡೋರ್‌’ ಎಂಬ ಪದ ಹುಟ್ಟಿತು ಎಂದು ಸಂಶೋಧಕರು ಹೇಳುತ್ತಾರೆ. ಹಾಗೆಯೇ ಅಗ್ನಿ, ರಷ್ಯನ್‌ ಭಾಷೆಯಲ್ಲಿ ಒಗೊನ್‌ (ಬೆಂಕಿ) ಆಗಿದೆ. ಸಂಸ್ಕೃತದ ಪೂಜನಕ್ಕೆ ಸಂವಾದಿಯಾದ ರಷ್ಯನ್‌ ಪದ: ಪೊಚಿತಾನಿಯೋ ಎಂದು. ಪರ್ವತಕ್ಕೆ ಸಂಸ್ಕೃತದಲ್ಲಿ “ಗಿರಿ’ ಎಂದರೆ, ರಷ್ಯನ್ನರು “ಗೋರಾ’ ಎನ್ನುತ್ತಾರೆ. ಆಕಾಶಕ್ಕೆ ನಾವು “ನಭಸ್‌’ ಎಂದು ಕರೆದರೆ, ರಷ್ಯನರು ಹೇಳುವುದು “ನೆಬೋ’ ಎಂದು. “ಮಾಂಸ’ ಸಂಸ್ಕೃತವಾದರೆ, “ಮ್ಯಾಸೊ’ ರಷ್ಯನ್‌. ಸ್ವ (ಸ್ವಂತದ್ದು ಎಂಬರ್ಥದಲ್ಲಿ) ಸಂಸ್ಕೃತವಾದರೆ, ಸೊÌಯ್‌ ರಷ್ಯನ್‌ ಪದ. ತಮಾಷೆಯೆಂದರೆ, ಎರಡೂ ಭಾಷೆಗಳಲ್ಲಿ ಕೊರಳಿಗೆ ಇರುವ ಹೆಸರು “ಗ್ರೀವ’ ಎಂದೇ! ಹಾಗೆಯೇ ಮೈದುನನಿಗೆ ಸಂಸ್ಕೃತದಲ್ಲಿ ಇರುವ ಸಂಬಂಧಸೂಚಕ ಪದ “ದೀವರ’ ಎಂದು. ಇದರ ನೇರಾರ್ಥ ಎರಡನೆಯ ಗಂಡ ಎಂದೇ! ಗಂಡ ಸತ್ತರೆ, ಹೆಣ್ಣು, ಆತನ ತಮ್ಮನನ್ನು (ಅರ್ಥಾತ್‌ ಮೈದುನನನ್ನು) ಮದುವೆಯಾಗಬೇಕು ಎಂಬ ಸಂಪ್ರದಾಯವಿದ್ದ ಪ್ರಾಚೀನ ಕಾಲದಲ್ಲಿ ಆ ಶಬ್ದ ಹುಟ್ಟಿಕೊಂಡಿದ್ದಿರಬೇಕು. ರಷ್ಯನ್‌ ಭಾಷೆಯಲ್ಲಿ ಕೂಡ ಮೈದುನನ್ನು ದೀವರ್‌/ದೀವ್‌ ಎಂದೇ ಕರೆಯುವುದು ಅಚ್ಚರಿ ಹುಟ್ಟಿಸುವ ಸಾಮ್ಯಾಂಶ. ಇನ್ನು , ರಷ್ಯನ್ನರು ಹಗಲಿರುಳುಗಳ ಭೇದವಿಲ್ಲದೆ ಹೊಟ್ಟೆಗಿಳಿಸುವ ಪ್ರಿಯ ಪೇಯ ವೋಡ್ಕದ ಮೂಲ ಸಂಸ್ಕೃತದ ಉದಕ (ನೀರು) ಎಂದರೆ ಮೂಗಿನ ಮೇಲೆ ಬೆರಳಿಡುತ್ತೀರೋ ಏನೋ!

ರಷ್ಯಾದ ಭಾಷಾವಿದ್ವಾಂಸ ಮತ್ತು ಶಿಕ್ಷಣತಜ್ಞ ಅಲ್‌ ಸೊಬೊಲೆವಿÕ$R , ಉತ್ತರ ರಷ್ಯಾದ ನದಿ ಮತ್ತು ಸರೋವರಗಳ ಹೆಸರುಗಳು ಎಂಬ ತನ್ನ ಲೇಖನದಲ್ಲಿ, ರಷ್ಯಾದಲ್ಲಿ ವಜ, ವಲ್ಗ, ಇರಾ, ಪದ್ಮ, ಪಂಕ, ಸಾಗರ, ಹರಿಣ- ಮುಂತಾದ ಹೆಸರಿನ ನದಿ, ಕೆರೆ, ಸರಸಿಗಳಿವೆ ಎಂಬುದನ್ನು ಹೇಳುತ್ತಾರೆ. ನದಿ-ಕೆರೆಗಳ ಹೆಸರುಗಳು ಮಾತ್ರವಲ್ಲ, ಲೆನಿನ್‌ಗಾÅಡ್‌ನ‌ಂಥ ಆಧುನಿಕ ನಗರಗಳ ಹೆಸರಿನಲ್ಲೂ ಭಾರತೀಯತೆಯ ಛಾಯೆ ಇದೆ ಎಂದರೆ ನಂಬುತ್ತೀರಾ? ಪ್ರಾಕೃತದಲ್ಲಿ ಕೋಟೆಗೆ “ಗಢ’ ಎಂದು ಹೆಸರು. ಹಿಂದಿನ ಕಾಲದಲ್ಲಿ ನಗರಗಳೆಲ್ಲವೂ ಕೋಟೆಗಳ ಒಳಗೇ ಇದ್ದುದರಿಂದ, ಅಥವಾ ನಗರಗಳ ಸುತ್ತ ಕೋಟೆಯ ನಿರ್ಮಾಣ ಅನಿವಾರ್ಯವಾಗಿದ್ದುದರಿಂದ ನಗರಗಳ ಹೆಸರಿನಲ್ಲಿ ಕೋಟೆ ಎಂಬ ಪ್ರತ್ಯಯ ತಾನಾಗಿ ಸೇರಿಕೊಂಡುಬಿಡುತ್ತಿತ್ತು. ಮಹೇಂದ್ರಗಢ, ಚಿತ್ತೂರುಗಢ- ಇವುಗಳಂತೆ. ಹೀಗೆ ಕೋಟೆಯೊಳಗೆ ನಗರ ಕಟ್ಟುವ ಪದ್ಧತಿ ನಮ್ಮಲ್ಲಿದ್ದಂತೆ ರಷ್ಯದಲ್ಲೂ ಇತ್ತು ಎನ್ನುವುದಕ್ಕೆ ಭಾಷೆ ಸಾಕ್ಷಿ ನುಡಿಯುತ್ತದೆ. ಹಳೆ ರಷ್ಯನ್‌/ಸ್ಲಾವೋನಿಕ್‌ ಭಾಷೆಯಲ್ಲಿ ಗೊರೋಡ್‌ ಅಥವಾ ಗ್ರಾಡ್‌ ಎಂದರೆ ಕೋಟೆ ಎಂದೇ ಅರ್ಥ. ಆದರೆ, ಕಾಲಕ್ರಮೇಣ ಕೋಟೆಯೆಂಬ ಹಳೆ ಅರ್ಥ ನಷ್ಟವಾಗಿ ನಗರ/ಪಟ್ಟಣ ಎಂಬ ಅರ್ಥ ಆ ಪದಕ್ಕೆ ಉಳಿದುಕೊಂಡಿತು. ಪೀಟರೋಗ್ರಾಡ್‌, ಲೆನಿನ್‌ಗಾಡ್‌ ಎಂಬ ಪದಗಳಲ್ಲಿ ಹೀಗೆ ಹಳೆಯ ಕೋಟೆ ಹೊಸ ನಗರವಾಗಿ ಸೇರ್ಪಡೆಗೊಂಡಿತು. 
.
.
ಯಾವುದೇ ಜನಾಂಗದಲ್ಲಿ ಉಪನಾಮಗಳು ಹೇಗೆ ಹುಟ್ಟುತ್ತವೆ ಎಂದು ನಿಖರವಾಗಿ ಹೇಳಬರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ತೆಂಗಿನಕಾಯಿ, ಮೆಣಸಿನಕಾಯಿ ಎಂದೆಲ್ಲ ಉಪನಾಮಗಳುಂಟು. ಯಾರು ಯಾವ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದರೋ ಅವರು ಆಯಾ ಬೆಳೆಯ ಹೆಸರನ್ನೇ ತಮ್ಮ ಉಪನಾಮಗಳಾಗಿ ಇಟ್ಟುಕೊಂಡರು. ಇನ್ನು ಕೆಲವರು ತಮ್ಮ ಉದ್ಯೋಗಕ್ಕೆ ತಕ್ಕಂತೆ ವಸ್ತ್ರದ, ಬೆಲ್ಲದ ಮುಂತಾದ ನಾಮಗಳನ್ನು ಅಂಟಿಸಿಕೊಂಡರು. ಮುಂಬೈ ಭಾಗಕ್ಕೆ ಹೋದರೆ ಅಲ್ಲಿ ಸೂðವಾಲಾ, ದಾರುವಾಲಾಗಳು ಸಿಗುವುದು ಕೂಡ ಹೀಗೆಯೇ. ರಷ್ಯದ ಉತ್ತರ ಭಾಗದಲ್ಲಿ – ಮುಖ್ಯವಾಗಿ ಸೈಬೀರಿಯಾದಂಥ ಹಿಮನಾಡಿನಲ್ಲಿ ಹಿಮಕರಡಿಗಳ ಕಾಟ ಒಂದಾನೊಂದು ಕಾಲದಲ್ಲಿ ವಿಪರೀತವಾಗಿತ್ತು. ಕರಡಿಗಳ ಬಾಹುಳ್ಯದ ಮಧ್ಯೆಯೇ ಮನೆಕಟ್ಟಿ ಬದುಕು ಸಾಗಿಸುತ್ತಿದ್ದ ಕುಟುಂಬಗಳು ತಮ್ಮ ಕುಲನಾಮಗಳಲ್ಲೂ ಕರಡಿಗಳನ್ನು ಬಳಸಿಕೊಂಡವು. ಕರಡಿಯನ್ನು ನೇರಾನೇರ ಕರಡಿ ಎಂದು ಕರೆಯಬಾರದು ಎಂಬ ನಂಬಿಕೆ- ಅದ್ಯಾವ ಕಾರಣಕ್ಕೋ ಬಲವಾಗಿ ಬೇರೂರಿದ ಮೇಲೆ ರಷ್ಯನ್ನರು ಕರಡಿಯನ್ನು ಮೆದ್‌ವೆದ್‌ ಎಂದು ಕರೆಯತೊಡಗಿದರು. ಕಾಲಾಂತರದಲ್ಲಿ ಮೆದ್‌ವೆದ್‌ ಎಂಬುದೇ ಕರಡಿಯ ಹೆಸರಾಗಿಬಿಟ್ಟಿತು. ಕರಡಿಯ ಕುಲನಾಮ ಅಂಟಿಸಿಕೊಂಡವರು ಮೆದ್ವೆದೇವ್‌ ಆದರು. ರಷ್ಯದ ಈಗಿನ ಪ್ರಧಾನಮಂತ್ರಿಯ ಹೆಸರು ದ್ಮಿತ್ರಿ ಮೆದ್ವೆದೇವ್‌. 

ಅದು ಸರಿ, ಆದರೆ ಇದಕ್ಕೂ ಸಂಸ್ಕೃತಕ್ಕೂ ಏನು ಸಂಬಂಧ ಎಂದಿರಾ? ಇದೆ, ಇದೆ! ರಷ್ಯನ್ನರು ಕರಡಿಗೆ ಮೆದ್‌ವೆದ್‌ ಎಂದು ಕರೆಯತೊಡಗಿದರು ಎಂದೆನಲ್ಲ? ಆ ಶಬ್ದ ಅವರಿಗೆ ಸಿಕ್ಕಿದ್ದೆಲ್ಲಿಂದ? ಸಂಸ್ಕೃತದ ಮಧುವೇದಿಯಿಂದ! ಮಧುವೇದಿ ಎಂದರೆ ಜೇನಿನ ಹುಟ್ಟು/ಗೂಡು ಎಲ್ಲಿದೆ ಎಂಬುದನ್ನು ತಿಳಿದಾತ ಎಂದು ಅರ್ಥ. ಕರಡಿಗಿಂತ ಸಮರ್ಪಕವಾಗಿ ಈ ಶಬ್ದ ಯಾರಿಗೆ ಹೊಂದೀತು? ಹಾಗಾಗಿ, ಕರಡಿಯ ಹೆಸರು ಮಧುವೇದಿ ಆಯಿತು, ಅಪಭ್ರಂಶವಾಗಿ ರಷ್ಯನ್‌ನಲ್ಲಿ ಮೆದ್‌ವೆದ್‌ ಆಯಿತು. ಕರಡಿವಂಶಜರು ಮೆದ್ವೆದೇವ್‌ ಆದರು!
.
.
ಒಂದಾನೊಂದು ಕಾಲದಲ್ಲಿ, ರಷ್ಯ ಮತ್ತು ಭಾರತಗಳ ನಡುವೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಸಾಮಾನ್ಯವಾಗಿತ್ತು. ಜನರ ಓಡಾಟ ನಿರಂತರವಾಗಿತ್ತು. ಸಂಸ್ಕೃತ ಅಥವಾ ಅದಕ್ಕೆ ಹತ್ತಿರದ ಭಾಷೆಗಳನ್ನೇ ಈ ಭೂಭಾಗದ ಜನ ಮಾತಾಡುತ್ತಿದ್ದರು ಎಂಬೆಲ್ಲ ಥಿಯರಿಗಳುಂಟು. ಸ್ವಾರಸ್ಯವೆಂದರೆ, ಪ್ರಬಲ ಹಿಂದುತ್ವವಾದಿಗಳಾಗಿದ್ದ ಬಾಲಗಂಗಾಧರ ತಿಲಕ್‌ ಮತ್ತು ಪ್ರಬಲ ಕಮ್ಯುನಿಸ್ಟ್‌ವಾದಿಗಳಾಗಿದ್ದ ರಾಹುಲ ಸಾಂಕೃತ್ಯಾಯನ- ಇಬ್ಬರೂ ಈ ವಿಷಯದಲ್ಲಿ ಒಮ್ಮತಕ್ಕೆ ಬರುತ್ತಾರೆ. ಕಂಚಿ ಪರಮಾಚಾರ್ಯರು ರಷ್ಯಾದ ವಿದ್ವಾಂಸರ ಬಳಿ ಚರ್ಚಿಸುತ್ತಿದ್ದಾಗ ಹೇಳಿದರಂತೆ: ಜಂಬೂದ್ವೀಪ ಎಂದರೆ ಈಗಿನ ಭಾರತವನ್ನೂ ಒಳಗೊಂಡಂತೆ ಸಮಸ್ತ ಏಷ್ಯಾ ಮತ್ತು ಯುರೋಪ್‌ ಭೂಖಂಡ. ಜಂಬೂದ್ವೀಪದ ದಕ್ಷಿಣಾವರ್ತ ಎಂದರೆ ಭಾರತ. 

ಭಾರತೀಯರು ಪ್ರತಿದಿನ ಪೂಜೆ/ಸಂಧ್ಯಾವಂದನೆ ಮಾಡುವ ಸಂದರ್ಭದಲ್ಲಿ ಸಂಕಲ್ಪ ಮಾಡುತ್ತ ಜಂಬೂದ್ವೀಪೇ ಭರತಖಂಡೇ ಮೇರೋರ್ದಕ್ಷಿಣಪಾಶ್ವೇì ಎಂದೆಲ್ಲ ಹೇಳುತ್ತ ಖಂಡ, ದೇಶ, ಪ್ರಾಂತ್ಯಗಳನ್ನು ಪ್ರಸ್ತಾಪಿಸುವ ಕ್ರಮ ಇದೆ. ರಷ್ಯಾದಲ್ಲಿ ಇಂದಿಗೂ ಅಂಚೆ ವಿಳಾಸ ಬರೆಯುವಾಗ ಖಂಡ, ದೇಶ, ರಾಜ್ಯ, ಪ್ರಾಂತ್ಯ, ರಸ್ತೆ ಎಂಬ ಅನುಕ್ರಮದಲ್ಲೇ ಬರೆಯುತ್ತಾರೆ !

ಆರ್‌. ಸಿ. ಭಟ್‌

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.